Spandana Vijay: ಸ್ಪಂದನಾ, ಒಬ್ಬರಲ್ಲ ಇಬ್ಬರು ಮಕ್ಕಳನ್ನು ಅಗಲಿದ್ದಾರೆ, ಚಿತ್ರರಂಗಕ್ಕೆ ಯಾರದ್ದೋ ದೃಷ್ಟಿಯಾಗಿದೆ; ನಿರ್ದೇಶಕ ತರುಣ್‌ ಸುಧೀರ್
ಕನ್ನಡ ಸುದ್ದಿ  /  ಮನರಂಜನೆ  /  Spandana Vijay: ಸ್ಪಂದನಾ, ಒಬ್ಬರಲ್ಲ ಇಬ್ಬರು ಮಕ್ಕಳನ್ನು ಅಗಲಿದ್ದಾರೆ, ಚಿತ್ರರಂಗಕ್ಕೆ ಯಾರದ್ದೋ ದೃಷ್ಟಿಯಾಗಿದೆ; ನಿರ್ದೇಶಕ ತರುಣ್‌ ಸುಧೀರ್

Spandana Vijay: ಸ್ಪಂದನಾ, ಒಬ್ಬರಲ್ಲ ಇಬ್ಬರು ಮಕ್ಕಳನ್ನು ಅಗಲಿದ್ದಾರೆ, ಚಿತ್ರರಂಗಕ್ಕೆ ಯಾರದ್ದೋ ದೃಷ್ಟಿಯಾಗಿದೆ; ನಿರ್ದೇಶಕ ತರುಣ್‌ ಸುಧೀರ್

ಒಳ್ಳೆಯ ಮನಸ್ಸಿರುವ ಈ ಮನಸ್ಸುಗಳಿಗೆ ಹೀಗಾಗಬಾರದಿತ್ತು. ಸ್ಪಂದನಾ ಅವರ ಸಾವನ್ನು ನಮಗೇ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇನ್ನು ರಾಘು ಹೇಗೆ ತಡೆದುಕೊಳ್ಳುತ್ತಾನೆ ಎಂದು ನಿರ್ದೇಶಕ ತರುಣ್‌ ಸುಧೀರ್‌ ಕಂಬನಿ ಮಿಡಿದಿದ್ದಾರೆ.

Spandana Vijay: ಸ್ಪಂದನಾ, ಒಬ್ಬರಲ್ಲ ಇಬ್ಬರು ಮಕ್ಕಳನ್ನು ಅಗಲಿದ್ದಾರೆ; ಚಿತ್ರರಂಗಕ್ಕೆ ಯಾರದ್ದೋ ದೃಷ್ಟಿಯಾಗಿದೆ ಎಂದ ನಿರ್ದೇಶಕ ತರುಣ್‌ ಸುಧೀರ್‌
Spandana Vijay: ಸ್ಪಂದನಾ, ಒಬ್ಬರಲ್ಲ ಇಬ್ಬರು ಮಕ್ಕಳನ್ನು ಅಗಲಿದ್ದಾರೆ; ಚಿತ್ರರಂಗಕ್ಕೆ ಯಾರದ್ದೋ ದೃಷ್ಟಿಯಾಗಿದೆ ಎಂದ ನಿರ್ದೇಶಕ ತರುಣ್‌ ಸುಧೀರ್‌

Spandana Vijay: ಪ್ರೀತಿಸಿ ಮದುವೆಯಾದ ವಿಜಯ್‌ ರಾಘವೇಂದ್ರ ಮತ್ತು ಸ್ಪಂದನಾ, ಇನ್ನೇನು ಕೆಲವೇ ದಿನಗಳಲ್ಲಿ 16ನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳಲಿದ್ದರು. ಆದರೆ ವಿಧಿ ಮಾತ್ರ ಅದಕ್ಕೆ ಆಸ್ಪದ ನೀಡಲಿಲ್ಲ. ಹೃದಯಾಘಾತದ ನೆಪದಲ್ಲಿ ಸ್ಪಂದನಾ ಅವರನ್ನು ಕರೆದುಕೊಂಡಿದ್ದಾನೆ. ಈ ನೋವು ಕೇವಲ ಆ ಎರಡು ಕುಟುಂಬಕ್ಕೆ ತಟ್ಟಿಲ್ಲ. ಇಡೀ ರಾಜ್ಯ ಈ ಸಾವಿಗೆ ಕಂಬನಿ ಮಿಡಿಯುತ್ತ ಧಿಕ್ಕಾರ ಹಾಕುತ್ತಿದೆ.

ಪತ್ನಿಯನ್ನು ಪಂಚಪ್ರಾಣದಂತೆ ಪ್ರೀತಿಸುತ್ತಿದ್ದ ಪತಿ ವಿಜಯ್‌ ರಾಘವೇಂದ್ರ ಅಕ್ಷರಶಃ ಕುಗ್ಗಿದ್ದಾರೆ. ಅವರ ಬಾಯಿಂದ ಯಾವ ಮಾತೂ ಹೊರಡುತ್ತಿಲ್ಲ. ಬಂದವರೆಲ್ಲ ಆಗಮಿಸಿ ಧೈರ್ಯ ತುಂಬುತ್ತಿದ್ದಾರಾದರೂ, ಅವರ ಮನಸು ಮಾತ್ರ ಇಲ್ಲಿಲ್ಲ. ಕಣ್ಣೀರಿನಲ್ಲಿಯೇ ಹೆಂಡತಿಯ ಜತೆಗೆ ಮೂರು ದಿನವನ್ನು ಕಳೆದಿದ್ದಾರವರು. ಈ ನಡುವೆ, ಈ ಸಾವಿಗೆ ಇಡೀ ಸ್ಯಾಂಡಲ್‌ವುಡ್‌ ಕಂಬನಿ ಮಿಡಿದಿದ್ದಾರೆ. ಆ ಪೈಕಿ ನಿರ್ದೇಶಕ ತರುಣ್‌ ಸುಧೀರ್‌ ಮರುಕ ವ್ಯಕ್ತಪಡಿಸಿದ್ದಾರೆ.

ಸ್ಪಂದನಾ ನಮ್ಮೆಲ್ಲರಿಗೂ ಅನ್ನಪೂರ್ಣೇಶ್ವರಿ

ವಿಜಯ್‌ ರಾಘವೇಂದ್ರ ನನಗೆ ಅಣ್ಣನ ಥರ. ಅವರ ಮನೆಯಲ್ಲಿ ಏನೇ ಕಾರ್ಯಕ್ರಮ ನಡೆದರೂ ಹೋಗಿರುತ್ತಿದ್ದೆವು. ಸ್ಪಂದನಾ ಸಹ ಬಂದಾಗೆಲ್ಲ ಅಡುಗೆ ಮಾಡಿ ಕೊಡೋರು. ಶೂಟಿಂಗ್‌ ಸೆಟ್‌ಗೆ ಅದೆಷ್ಟು ಸಲ ಊಟ ತಂದಿದ್ರು. ನಮಗೇ ಈ ಶಾಕ್‌ ತಡೆದುಕೊಳ್ಳಲು ಆಗುತ್ತಿಲ್ಲ. ರಾಘು ಇದನ್ನು ಹೇಗೆ ತೆಗೆದುಕೊಳ್ಳುತ್ತಾನೆ ಗೊತ್ತಾಗ್ತಿಲ್ಲ. ರಾಘು ಮತ್ತು ಶೌರ್ಯ ಇಬ್ಬರೂ ಸ್ಪಂದನಾ ಮೇಲೆ ಡಿಪೆಂಡ್‌ ಆಗಿದ್ದರು. ಇಡೀ ಕುಟುಂಬವನ್ನು ಹತ್ತಿರದಿಂದ ನೋಡಿದ್ದೇನೆ. ಸ್ಪಂದನಾ ಒಬ್ಬರನ್ನಲ್ಲ ಇಬ್ಬರು ಮಕ್ಕಳನ್ನು ಬಿಟ್ಟು ಹೋಗಿದ್ದಾರೆ.

ಶೌರ್ಯ ಮತ್ತು ವಿಜಯ್‌ ಇಬ್ಬರದ್ದೂ ಮಗುವಿನ ಮನಸ್ಸು. ಅಷ್ಟು ಒಳ್ಳೆಯವರಿಗೆ ಈ ರೀತಿ ಆಗಬಾರದಿತ್ತು. ನಿಜಕ್ಕೂ ಚಿತ್ರರಂಗಕ್ಕೆ ಯಾರದ್ದಾದ್ರೂ ಶಾಪ ಆಗಿದೆಯೇ, ದೃಷ್ಟಿ ಆಗಿದೆಯಾ? ಇಂತ ಒಳ್ಳೆ ಮನಸ್ಸುಗಳಗೆ ಹೀಗೆಕೆ ಆಗ್ತಿದೆ? ಹೆಚ್ಚೆನೂ ಹೇಳಲ್ಲ ಮಗನ ನೋಡಿಕೊಳ್ಳುವ ಶಕ್ತಿ ರಾಘುಗೆ ಕೊಡಲಿ ಎಂದಷ್ಟೇ ನಾನು ಆ ದೇವರಲ್ಲಿ ಕೇಳಿಕೊಳ್ಳುವೆ" ಎಂದಿದ್ದಾರೆ ತರುಣ್‌ ಸುಧೀರ್‌.

ಹರಿಶ್ಚಂದ್ರ ಘಾಟ್‌ನತ್ತ ಸ್ಪಂದನಾ ಪಾರ್ಥೀವ ಶರೀರ

ಈಗಾಗಲೇ ಕಳೆದ ಕೆಲ ಗಂಟೆಗಳ ಕಾಲ ಮಲ್ಲೇಶ್ವರದ ಅಪ್ಪನ ಮನೆಯಲ್ಲಿ ಪಾರ್ಥೀವ ಶರೀರ ದರ್ಶನದ ಬಳಿಕ ಅಂತಿಮ ಯಾತ್ರೆ ಆರಂಭವಾಗಿದೆ. ಮಾರ್ಗೋಸಾ ರಸ್ತೆ, ಕೆಸಿ ಜನರಲ್‌ ಆಸ್ಪತ್ರೆ ಮೂಲಕ ಶ್ರೀರಾಮಪುರದ ಹರಿಶ್ಚಂದ್ರ ಘಾಟ್‌ನತ್ತ ತೆರೆದ ವಾಹನದಲ್ಲಿ ಅಂತಿಮ ಯಾತ್ರೆ ಹೊರಟಿದೆ. ಅಪಾರ ಪ್ರಮಾಣದ ಜನ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

ಮನರಂಜನೆ ಕುರಿತ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Whats_app_banner