ಕೆಂಡಸಂಪಿಗೆ ಹುಡುಗ, ದೊಡ್ಮನೆ ಹುಡುಗಿಯ ಸೌಂಡ್ಸ್‌ ಆಫ್‌ ಕಾಲಾಪತ್ಥರ್‌ ಹಾಡಿನ ಝಲಕ್ ರಿಲೀಸ್‌
ಕನ್ನಡ ಸುದ್ದಿ  /  ಮನರಂಜನೆ  /  ಕೆಂಡಸಂಪಿಗೆ ಹುಡುಗ, ದೊಡ್ಮನೆ ಹುಡುಗಿಯ ಸೌಂಡ್ಸ್‌ ಆಫ್‌ ಕಾಲಾಪತ್ಥರ್‌ ಹಾಡಿನ ಝಲಕ್ ರಿಲೀಸ್‌

ಕೆಂಡಸಂಪಿಗೆ ಹುಡುಗ, ದೊಡ್ಮನೆ ಹುಡುಗಿಯ ಸೌಂಡ್ಸ್‌ ಆಫ್‌ ಕಾಲಾಪತ್ಥರ್‌ ಹಾಡಿನ ಝಲಕ್ ರಿಲೀಸ್‌

ನಟ ವಿಕ್ಕಿ ವರುಣ್‌ ಈಗ ಕಾಲಾಪತ್ಥರ್‌ ಸಿನಿಮಾ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ. ಚಿತ್ರದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಹಾಡುಗಳ ಸಣ್ಣ ಝಲಕ್‌ ಬಿಡುಗಡೆ ಆಗಿದೆ.

ಕೆಂಡಸಂಪಿಗೆ ಹುಡುಗ, ದೊಡ್ಮನೆ ಹುಡುಗಿಯ ಸೌಂಡ್ಸ್‌ ಆಫ್‌ ಕಾಲಾಪತ್ಥರ್‌ ಹಾಡಿನ ಝಲಕ್ ರಿಲೀಸ್‌
ಕೆಂಡಸಂಪಿಗೆ ಹುಡುಗ, ದೊಡ್ಮನೆ ಹುಡುಗಿಯ ಸೌಂಡ್ಸ್‌ ಆಫ್‌ ಕಾಲಾಪತ್ಥರ್‌ ಹಾಡಿನ ಝಲಕ್ ರಿಲೀಸ್‌

Kaalapatthar Song: ಸ್ಯಾಂಡಲ್‌ವುಡ್‌ನಲ್ಲಿ ಕೆಂಡಸಂಪಿಗೆ ಸಿನಿಮಾ ಮೂಲಕ ದುನಿಯಾ ಸೂರಿ ಅಂಗಳದಿಂದ ಬಂದ ನಟ ವಿಕ್ಕಿ ವರುಣ್‌, ಇದೀಗ ಕಾಲಾಪತ್ಥರ್‌ ಚಿತ್ರದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಎಲ್ಲ ಹಾಡುಗಳನ್ನು ತೋರಿಸುವ ಕಿರು ವಿಡಿಯೋ ಝಲಕ್‌ ಬಿಡುಗಡೆಯಾಗಿದೆ. ವಿಶೇಷ ಏನೆಂದರೆ, ಈ ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜತೆಗೆ ಕಾಲಾಪತ್ಥರ್‌ಗೆ ನಿರ್ದೇಶನವನ್ನೂ ಮಾಡಿದ್ದಾರೆ. ಈ ಚಿತ್ರದ ಬಗ್ಗೆಯೇ ಇಡೀ ತಂಡ ಮಾಹಿತಿ ಹಂಚಿಕೊಂಡಿದೆ.

ಭುವನ್ ಮೂವೀಸ್ ಬ್ಯಾನರ್‌ನಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ಕಾಲಾಪತ್ಥರ್‌ ಸಿನಿಮಾವನ್ನು ನಿರ್ಮಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಿರುವ ಈ ಚಿತ್ರದ ಐದು ಹಾಡುಗಳನ್ನು ಸೇರಿಸಿ ಸೌಂಡ್ಸ್ ಆಫ್ ಕಾಲಾಪತ್ಥರ್ ಎಂಬ ಹಾಡುಗಳ ಗುಚ್ಛವನ್ನು ಕೆಲವೇ ನಿಮಿಷಗಳಲ್ಲಿ ತೋರಿಸುವ ವಿಭಿನ್ನ ಪ್ರಯತ್ನಕ್ಕೆ ಚಿತ್ರತಂಡ ಮುಂದಾಯಿತು.

ಹಾಡಿನ ಕಾರ್ಯಕ್ರಮ ಆಗಿದ್ದರಿಂದ ಚಿತ್ರದ ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌ ಸಿನಿಮಾ ಹಾಡುಗಳ ಬಗ್ಗೆ ಮಾತನಾಡಿದರು. ಚಿತ್ರದಲ್ಲಿ ಐದು ಹಾಡುಗಳಿವೆ. ಡಾ. ವಿ.ನಾಗೇಂದ್ರ ಪ್ರಸಾದ್ ಹಾಗೂ ಪ್ರಮೋದ್ ಮರವಂತೆ ಗೀತರಚನೆ ಮಾಡಿದ್ದಾರೆ. ವಿಜಯ್ ಪ್ರಕಾಶ್, ಸಾಯಿ ವಿಘ್ನೇಶ್, ಅಭಿಷೇಕ್, ಐಶ್ವರ್ಯ ರಂಗರಾಜನ್, ಶಿವಾನಿ ಹಾಗೂ ಸಿದ್ದಾರ್ಥ್ ಬೆಳ್ಮಣ್ಣು ಹಾಡುಗಳನ್ನು ಹಾಡಿದ್ದಾರೆ. ಇದೀಗ ಬಿಡುಗಡೆಯಾದ "ಸೌಂಡ್ಸ್ ಆಫ್ ಕಾಲಾಪತ್ಥರ್" ವಿಕ್ಕಿ ವರುಣ್ ಅವರ ಕಾನ್ಸೆಪ್ಟ್ ಎಂದು ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ತಿಳಿಸಿದರು.

ನಿರ್ದೇಶನ ನನ್ನ ಕನಸು. ಆ ಕನಸನ್ನು ನನಸು ಮಾಡಿದ ನಿರ್ಮಾಪಕರಿಗೆ ನಾನು ಆಭಾರಿ ಎನ್ನುತ್ತಲೇ ಮಾತು ಆರಂಭಿಸಿದ ವಿಕ್ಕಿ ವರುಣ್‌, "ಸೂರಿ ಅವರ ಬಳಿ ಹತ್ತು ವರ್ಷ ಕೆಲಸ ಮಾಡಿರುವ ಅನುಭವದಿಂದ ನಿರ್ದೇಶನ ನನಗೆ ಅಷ್ಟು ಕಷ್ಟವಾಗಲಿಲ್ಲ. ನಿರ್ದೇಶನ ಹಾಗೂ ನಟನೆ ಎರಡು ಒಟ್ಟಿಗೆ ಮಾಡುವುದು ಸ್ವಲ್ಪ ಕಷ್ಟ. ಆದರೆ ನಮ್ಮ ಚಿತ್ರತಂಡದ ಸಹಕಾರದಿಂದ ಕಾಲಾಪತ್ಥರ್ ನಾವು ಅಂದುಕೊಂಡ ಹಾಗೆ ಅದ್ಭುತವಾಗಿ ಮೂಡಿಬಂದಿದೆ. ಏನಾದರೂ ಹೊಸತು ಮಾಡಬೇಕು ಎಂದೆನಿಸಿ ಸೌಂಡ್ಸ್ ಆಫ್ ಕಾಲಾಪತ್ಥರ್ ವಿಡಿಯೋವನ್ನು ಬಿಡುಗಡೆ ಮಾಡಿದ್ದೇವೆ ಎನ್ನುತ್ತಾರೆ ವಿಕ್ಕಿ ವರುಣ್.

ಇನ್ನು ಈ ಚಿತ್ರದಲ್ಲಿ ವಿಕ್ಕಿಗೆ ಜೋಡಿಯಾಗಿ ದೊಡ್ಮನೆ ಹುಡುಗಿ ಧನ್ಯಾ ರಾಮ್‌ಕುಮಾರ್‌ ನಟಿಸಿದ್ದಾರೆ. ಅವರದ್ದಿಲ್ಲಿ ಶಿಕ್ಷಕಿ ಪಾತ್ರ. ನಾನು ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಗಂಗಾ ಎಂಬ ಹೆಸರಿನ ಶಿಕ್ಷಕಿ ಪಾತ್ರ ನನ್ನದು ಎಂದು ಹೇಳಿಕೊಂಡರು.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner