Pepe Twitter Review: ವಿನಯ್ ರಾಜ್‌ಕುಮಾರ್ ಮೈಗಂಟಿದ ರಕ್ತ! ಪೆಪೆ ಸಿನಿಮಾ ನೋಡಿದ ಪ್ರೇಕ್ಷಕ ಏನಂದ, ನೆಟ್ಟಿಗರ ಕಾಮೆಂಟ್ಸ್ ಹೇಗಿವೆ?
ಈ ವರೆಗೂ ನಟ ವಿನಯ್ ರಾಜ್‌ಕುಮಾರ್ ಮಾಸ್ ಆಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಲವರ್ ಬಾಯ್, ಪಕ್ಕದ್ಮನೆ ಹುಡುಗನಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಇದೀಗ ಕೈಯಲ್ಲಿ ಕತ್ತಿ ಹಿಡಿದು, ಮೈಗೆ ರಕ್ತ ಅಂಟಿಸಿಕೊಂಡಿದ್ದಾರೆ. ಪೆಪೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ರಕ್ತಚರಿತ್ರೆಗೆ ಮುನ್ನುಡಿ ಬರೆದಿದ್ದಾರೆ.
Pepe Twitter Review: ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ಬಾಲನಟನಾಗಿ ಎಂಟ್ರಿಕೊಟ್ಟರೂ, ಬೆರಳೆಣಿಕೆ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಅದಾದ ಬಳಿಕ 2015ರಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ ಸಿದ್ಧಾರ್ಥ್ ಚಿತ್ರದ ಮೂಲಕ ನಾಯಕನಾಗಿ ಪದಾರ್ಪಣೆ ಮಾಡಿದ್ದರು. ಡಾ. ರಾಜ್‌ಕುಮಾರ್ ಕುಟುಂಬದ ಕುಡಿ ಎಂಬ ಕಾರಣಕ್ಕೆ ಹೈಪ್ ಸೃಷ್ಟಿಯಾದರೂ, ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ. ಅದಾದ ಮೇಲೆ ಹಲವು ಸಿನಿಮಾಗಳಲ್ಲಿ ನಟಿಸಿದರೂ, ಗೆಲುವು ದಕ್ಕಿರಲಿಲ್ಲ. ಇದೀಗ ಇಂದು (ಆಗಸ್ಟ್ 30) ಬಿಡುಗಡೆಯಾದ ಪೆಪೆ ಸಿನಿಮಾ ಆ ಎಲ್ಲ ಸೋಲುಗಳನ್ನು ಮರೆಸುವ ಲಕ್ಷಣಗಳು ಗೋಚರಿಸಿವೆ.
ಈ ವರೆಗೂ ನಟ ವಿನಯ್ ರಾಜ್‌ಕುಮಾರ್ ಮಾಸ್ ಆಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಲವರ್ ಬಾಯ್, ಪಕ್ಕದ್ಮನೆ ಹುಡುಗನಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಇದೀಗ ಕೈಯಲ್ಲಿ ಕತ್ತಿ ಹಿಡಿದು, ಮೈಗೆ ರಕ್ತ ಅಂಟಿಸಿಕೊಂಡಿದ್ದಾರೆ. ಪೆಪೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ರಕ್ತಚರಿತ್ರೆಗೆ ಮುನ್ನುಡಿ ಬರೆದಿದ್ದಾರೆ. ಹಿಂದೆಂದೂ ಕಾಣದ ವಿನಯ್ ಅವರನ್ನು ನೋಡಿದ ಚಿತ್ರರಸಿಕರು, ಹೊಸ ಅವತಾರಕ್ಕೆ ಮಾರು ಹೋಗಿದ್ದಾರೆ. ವಿನಯ್ ಹೀಗೂ ಕಾಣ್ತಾರಾ? ಈ ರೀತಿಯಲ್ಲಿಯೂ ನಟಿಸ್ತಾರಾ? ಎಂದು ಹುಬ್ಬೇರಿಸಿದ್ದಾರೆ. ಈ ನಡುವೆ ಕಿಚ್ಚ ಸುದೀಪ್ ಸಹ ಚಿತ್ರದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
ಪೆಪೆ ಸಿನಿಮಾ ನೋಡಿ ಕಿಚ್ಚ ಸುದೀಪ್ ಏನಂದ್ರು?
ಪೆಪೆ ಸಿನಿಮಾದ ಟ್ರೇಲರ್ ಅನಾವರಣಗೊಳಿಸಿ, ಅದಾದ ಮೇಲೆ ಸಿನಿಮಾ ನೋಡುವ ಉತ್ಸಾಹ ತೋರಿಸಿದ್ದ ಕಿಚ್ಚ ಸುದೀಪ್, ಇದೀಗ ಪೆಪೆ ಸಿನಿಮಾ ನೋಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಬರಹ ಪೋಸ್ಟ್ ಮಾಡಿದ್ದಾರೆ. ಹೀಗಿವೆ ಸುದೀಪ್ ಮೆಚ್ಚುಗೆಯ ಮಾತುಗಳು..
"ಮನಸ್ಸಿಗೆ ಮುದ ನೀಡುವ ಪ್ರಯತ್ನ ಮತ್ತು ಹೊಸ ನಿರೂಪಣೆಯ ಮಾದರಿಯು #PEPE ಸಿನಿಮಾ ಇಂಟ್ರೆಸ್ಟಿಂಗ್ ಆಗಿದೆ. ಪ್ರತಿಯೊಬ್ಬ ನಟರು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ವಿನಯರಾಜ್‌ಕುಮಾರ್ ಪರದೆಯ ಮೇಲೆ ಕಮಾಲ್ ಮಾಡಿದ್ದಾರೆ. ಮಾಸ್ ಪಾತ್ರಕ್ಕೆ ಸರಿಹೊಂದುವಂತೆ ತಮ್ಮನ್ನು ಚೆನ್ನಾಗಿ ರೂಪಿಸಿಕೊಂಡಿದ್ದಾರೆ. ಶುಭಾಶಯಗಳು ಚಾಂಪ್"
"ಕಾಜಲ್ ಕುಂದರ್ ಮಿಂಚಿದ್ದಾರೆ. ಅವರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅದ್ಭುತ ಸಂಗೀತ ಮತ್ತು ಸಂಕಲನ, ಒಟ್ಟಾರೆ ಸಿನಿಮಾವನ್ನು ಮೇಲಕ್ಕೆತ್ತಿದೆ. ನಿರ್ದೇಶಕ ಶ್ರೀಲೇಶ್ ನಾಯರ್ ಗಟ್ಟಿ ಕಥೆಯೊಂದಿಗೆ ದಿಟ್ಟತನ ತೋರಿದ್ದಾರೆ. ಚಿತ್ರದ ಸನ್ನಿವೇಶಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಇಡೀ ತಂಡಕ್ಕೆ ನನ್ನ ಶುಭಾಶಯಗಳು" ಎಂದು ಸಿನಿಮಾ ನೋಡಿದ ಸುದೀಪ್ ಮೆಚ್ಚುಗೆಯ ಪೋಸ್ಟ್ ಹಂಚಿಕೊಂಡಿದ್ದಾರೆ.
ಪೆಪೆ ಸಿನಿಮಾ ನೋಡಿದ ಪ್ರೇಕ್ಷಕ ಸೋಷಿಯಲ್ ಮೀಡಿಯಾ ಟ್ವಿಟ್ಟರ್‌ನಲ್ಲಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನುಹಂಚಿಕೊಳ್ಳುತ್ತಿದ್ದಾರೆ. ಚಿತ್ರದ ಮೊದಲಾರ್ಧ ಬೆಂಕಿ ಗುರೂ ಎಂದರೆ, ಇನ್ನು ಕೆಲವರು ವಿನಯ್ ರಾಜ್‌ಕುಮಾರ್ ಅವರನ್ನು ಈ ಮೊದಲು ಈ ರೀತಿ ನೋಡಿಲ್ಲ ಎಂದು ಹುಬ್ಬೇರಿಸಿದ್ದಾರೆ. ಚಿತ್ರದುದ್ದಕ್ಕೂ ಹಿನ್ನೆಲೆ ಸಂಗೀತ ತುಂಬ ಕಾಡುತ್ತದೆ ಎಂಬ ಅಭಿಪ್ರಾಯಗಳೂ ಪ್ರೇಕ್ಷಕ ವಲಯದಿಂದ ಬಂದಿವೆ. ಜತೆಗೆ ವಿನಯ್ ಸಿನಿಮಾ ಕೆರಿಯರ್‌ಗೆ ಇದು ದೊಡ್ಡ ಗೆಲುವಾಗಲಿದೆ ಎಂದೂ ಹೇಳುತ್ತಿದ್ದಾರೆ.