ವಿನಯ್‌ ರಾಜ್‌ಕುಮಾರ್‌ ಪೆಪೆ ಸಿನಿಮಾದ ಜೇನು ಕುರುಬ ಹಾಡು ಟ್ರೆಂಡಿಂಗ್‌, ಬಾರಲೋ ಕುರುಮಾಂಜಿ, ಬಾರಲೋ ಮಲ್ಲಿಗೆ ಸಾಂಗ್‌ ಕೇಳಿದ್ರ?-sandalwood news vinay rajkumar kannada pepe movie song trending in youtube baralo kurumanji baralo mallige song ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ವಿನಯ್‌ ರಾಜ್‌ಕುಮಾರ್‌ ಪೆಪೆ ಸಿನಿಮಾದ ಜೇನು ಕುರುಬ ಹಾಡು ಟ್ರೆಂಡಿಂಗ್‌, ಬಾರಲೋ ಕುರುಮಾಂಜಿ, ಬಾರಲೋ ಮಲ್ಲಿಗೆ ಸಾಂಗ್‌ ಕೇಳಿದ್ರ?

ವಿನಯ್‌ ರಾಜ್‌ಕುಮಾರ್‌ ಪೆಪೆ ಸಿನಿಮಾದ ಜೇನು ಕುರುಬ ಹಾಡು ಟ್ರೆಂಡಿಂಗ್‌, ಬಾರಲೋ ಕುರುಮಾಂಜಿ, ಬಾರಲೋ ಮಲ್ಲಿಗೆ ಸಾಂಗ್‌ ಕೇಳಿದ್ರ?

Kannada Pepe Movie Song Trending: ವಿನಯ್‌ ರಾಜ್‌ಕುಮಾರ್‌ ನಟನೆಯ ಮುಂಬರುವ ಸಿನಿಮಾ "ಪೆಪೆ"ಯ ಹಾಡೊಂದು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ ಆಗುತ್ತಿದೆ. "ಬಾರಲೋ ಕುರುಮಾಂಜಿ ಬಾರೋಲೋ ಮಲ್ಲಿಗೆ, ಬಾರಲವ್ವ ಕುರುಮಾಂಜಿ ಬಾರೋಲೋ ಮಲ್ಲಿಗೆ" ಹಾಡಿನ ಮೋಡಿಗೆ ಎಲ್ಲರೂ ತಲೆದೂಗುತ್ತಿದ್ದಾರೆ.

ವಿನಯ್‌ ರಾಜ್‌ಕುಮಾರ್‌ ಪೆಪೆ ಸಿನಿಮಾದ ಜೇನು ಕುರುಬ ಹಾಡು ಟ್ರೆಂಡಿಂಗ್‌
ವಿನಯ್‌ ರಾಜ್‌ಕುಮಾರ್‌ ಪೆಪೆ ಸಿನಿಮಾದ ಜೇನು ಕುರುಬ ಹಾಡು ಟ್ರೆಂಡಿಂಗ್‌

ಬೆಂಗಳೂರು: ಹೊಸ ಬಗೆಯ ಸಿನಿಮಾಗಳು, ಹೊಸ ಬಗೆಯ ಹಾಡುಗಳಿಗೆ ಸ್ಯಾಂಡಲ್‌ವುಡ್‌ ಸಾಕ್ಷಿಯಾಗುತ್ತಿದೆ. ಇತ್ತೀಚೆಗೆ ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ಕಾಯುತ್ತ ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿತ್ತು. ಇದೀಗ ಇನ್ನೊಂದು ಕನ್ನಡದ ಹಾಡು ಯೂಟ್ಯೂಬ್‌ನಲ್ಲಿ ಮೆಲ್ಲಮೆಲ್ಲನೆ ಟ್ರೆಂಡಿಂಗ್‌ ಆಗುತ್ತಿದೆ. ಅದ್ಯಾವುದು ಆ ಹಾಡು ಎಂಬ ಕುತೂಹಲ ನಿಮ್ಮಲ್ಲಿರಬಹುದು. ಅದು ದೊಡ್ಮನೆ ಕುಡಿ ವಿನಯ್‌ ರಾಜ್‌ಕುಮಾರ್‌ ನಟನೆಯ ಪೆಪೆ ಸಿನಿಮಾದ " ಬಾರಲೋ ಕುರುಮಾಂಜಿ ಬಾರೋಲೋ ಮಲ್ಲಿಗೆ ಬಾರಲವ್ವ ಕುರುಮಾಂಜಿ ಬಾರೋಲೋ ಮಲ್ಲಿಗೆ" ಎಂಬ ಹಾಡು.

ಟ್ರೆಂಡಿಂಗ್‌ನಲ್ಲಿದೆ ಪೆಪೆ ಸಿನಿಮಾದ ಹಾಡು

ಜೇನು ಕುರುಬ ಬುಡಗಟ್ಟು ಜನಾಂಗದ ಆಚಾರ ವಿಚಾರ ತೆರೆದಿಡುವ ಗೀತೆ ಬಲು ಸುಂದರವಾಗಿ ಮೂಡಿ ಬಂದಿದೆ. ಈ ಹಾಡನ್ನು ಯೂಟ್ಯೂಬ್‌ನಲ್ಲಿ ಜನರು ಮತ್ತೆಮತ್ತೆ ಕೇಳುತ್ತಿದ್ದಾರೆ. ಆ ಹಾಡಿನ ಕೆಲವು ಲಿರಿಕ್ಸ್‌ ಸಾಲನ್ನು ಈ ಮುಂದೆ ನೀಡಲಾಗಿದೆ.

ಬಾರಲೋ ಕುರುಮಾಂಜಿ

ಬಾರೋಲೋ ಮಲ್ಲಿಗೆ

ಬಾರಲವ್ವ ಕುರುಮಾಂಜಿ

ಬಾರೋಲೋ ಮಲ್ಲಿಗೆ

ಬಾರಲೋ ಕುರುಮಾಂಜಿ ಹಾಡು ಕೇಳಿ

ಪ್ರತಿ ಸಿನಿಮಾದಲ್ಲಿಯೂ ತಾನೊಬ್ಬ ಕ್ಲಾಸ್ ಆಕ್ಟರ್ ಅನ್ನೋದನ್ನು ಸಾಬೀತುಪಡಿಸಿಕೊಂಡು ಬಂದಿರುವ ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಪೆಪೆ ಸಿನಿಮಾ ಮೂಲಕ ಮಾಸ್ ಅವತಾರ ತಾಳಿದಿದ್ದಾರೆ. ಪೆಪೆ ಚಿತ್ರದ ಟೀಸರ್ ಈಗಾಗಲೇ ಹಿಟ್ ಲೀಸ್ಟ್ ಸೇರಿದ್ದು, ಇದೀಗ ಬಿಡುಗಡೆಯಾಗಿರುವ ಹಾಡು ಭಾರೀ ಸದ್ದು ಮಾಡುತ್ತಿದೆ.

ಪೆಪೆ ಚಿತ್ರತಂಡ ಪ್ರಿಸೆಟ್ ಎಂಬ ಟ್ಯಾಗ್ ಲೈನ್ ಅಡಿ ಚಿತ್ರ ಹಾಡೊಂದನ್ನು ಅನಾವರಣ ಮಾಡಿದೆ. ಪಿಆರ್ ಕೆ ಆಡಿಯೋದಲ್ಲಿ ರಿಲೀಸ್ ಆಗಿರುವ ಗಾನಬಜಾನ ವಿಭಿನ್ನತೆಯಿಂದ ಕೂಡಿದೆ. ಜೇನು ಕುರುಬ ಬುಡಗಟ್ಟು ಜನಾಂಗದ ಆಚಾರ ವಿಚಾರ ತೆರೆದಿಡುವ ಗೀತೆಗೆ ಗಿರಿಜನ ಸಮಗ್ರ ಅಭಿವೃದ್ದಿ ಕಲಾ ಸಂಸ್ಥೆ ಹಾಗೂ ಜೆ.ಜಿ.ಕುಮಾರ ಧ್ವನಿಯಾಗಿದ್ದು, ಪೂರ್ಣಚಂದ್ರ ತೇಜಸ್ವಿ ಟ್ಯೂನ್ ಹಾಕಿದ್ದಾರೆ. ಇನ್ನೂ ಚಿತ್ರತಂಡ ಖುದ್ದು ಹೇಳಿಕೊಂಡಂತೆ ಇಡೀ ಚಿತ್ರದ ಸೌಂಡ್ ಡಿಸೈನ್ ಬೇರೆ ರೀತಿ ಇದೆ ಅನ್ನೋದಕ್ಕೆ ಬಿಡುಗಡೆಯಾಗಿರುವ ಈ ಹಾಡು ಸೂಕ್ತ ಉದಾಹರಣೆ.

ಶ್ರೀಲೇಶ್ ಎಸ್ ನಾಯರ್ ನಿರ್ದೇಶನ ಮೂಡಿ ಬರ್ತಿರುವ ಪೆಪೆ ಒಂದು ರೀತಿ ಪರಿಪೂರ್ಣ ವಿಭಿನ್ನ ಸಿನಿಮಾ. ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದು, ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್‌, ನವೀನ್‌ ಡಿ. ಪಡೀಲ್‌ರನ್ನು ಒಳಗೊಂಡ ತಾರಾಬಳಗವಿದೆ. ‘ಪೆಪೆ’ ಚಿತ್ರಕ್ಕೆ ಅಭಿಷೇಕ್‌ ಜಿ. ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನವಿದೆ.

ಡಾ. ರವಿವರ್ಮ, ಚೇತನ್‌ ಡಿಸೋಜಾ, ಡಿಫ್ರೆಂಟ್‌ ಡ್ಯಾನಿ, ನರಸಿಂಹ ಅವರ ತಂಡ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರಗಳಲ್ಲಿ‘ಪೆಪೆ’ ಸಿನಿಮಾವನ್ನು ಸೆರೆಹಿಡಿಯಲಾಗಿದೆ. ಉದಯ್‌ ಸಿನಿ ವೆಂಚರ್‌, ದೀಪ ಫಿಲ್ಮ್ಸ್ ಬ್ಯಾನರ್‌ನಡಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದು ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ.

ಪೆಪೆ ಹಾಡಿಗೆ ನೆಟ್ಟಿಗರು ಫಿದಾ

ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ ಆಗುತ್ತಿರುವ ಪೆಪೆ ಸಿನಿಮಾದ ಹಾಡಿಗೆ ಸಾಕಷ್ಟು ಮೆಚ್ಚುಗೆಯ ಕಾಮೆಂಟ್‌ಗಳು ಬಂದಿವೆ. "ವಿನಯ್ ರಾಜಕುಮಾರ್ ಒಬ್ಬ ಅದ್ಭುತ ನಟನಾಗುವುದರಲ್ಲಿ ಯಾವ ಅನುಮಾನವೂ ಇಲ್ಲಾ... ಇಂತಹ ಸಿನಿಮಾ ಮಾಡಲು ತಾಕತ್ತು ಬೇಕು. ಚಿತ್ರ ತಂಡಕ್ಕೆ ಶುಭವಾಗಲಿ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. "ವಿನಯ್ ರಾಜಕುಮಾರ್ ಅವರ ಕಥೆ ಆಯ್ದುಕೊಳ್ಳುವಿಕೆ ಮಾತ್ರ ಅದ್ಭುತ . ಈ ಹಾಡು ನೋಡಿದರೆ ಸಾಕು ಈ ಸಿನಿಮಾ ಯಾವ ತರಾ ಇದೆ ಗೊತ್ತಾಗುತ್ತೆ. ಪೆಪೆ ವಿನಯ್ ಸರ್ ಅವರಿಗೆ ಮತ್ತೊಂದು ಹಿಟ್ ಸಿನಿಮಾ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ . ಒಳ್ಳೆಯದಾಗಲಿ" ಎಂದು ಇನ್ನೊಬ್ಬರು ಶುಭಹಾರೈಸಿದ್ದಾರೆ. ಈ ಹಾಡು ಮೆಚ್ಚಿ ಇಂತಹ ನೂರಾರು ಕಾಮೆಂಟ್‌ಗಳು ಬರುತ್ತಿವೆ.