Vinay Rajkumar: ಪೆಪೆ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ; ವಿನಯ್‌ ರಾಜ್‌ಕುಮಾರ್‌ ನಟನೆಯ ಆಕ್ಷನ್‌ ಥ್ರಿಲ್ಲರ್‌ ಚಿತ್ರ ಇದೇ ತಿಂಗಳು ರಿಲೀಸ್‌-sandalwood news vinay rajkumar pepe movie release date august 30 announced by auto drivers of bangaluru pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Vinay Rajkumar: ಪೆಪೆ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ; ವಿನಯ್‌ ರಾಜ್‌ಕುಮಾರ್‌ ನಟನೆಯ ಆಕ್ಷನ್‌ ಥ್ರಿಲ್ಲರ್‌ ಚಿತ್ರ ಇದೇ ತಿಂಗಳು ರಿಲೀಸ್‌

Vinay Rajkumar: ಪೆಪೆ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ; ವಿನಯ್‌ ರಾಜ್‌ಕುಮಾರ್‌ ನಟನೆಯ ಆಕ್ಷನ್‌ ಥ್ರಿಲ್ಲರ್‌ ಚಿತ್ರ ಇದೇ ತಿಂಗಳು ರಿಲೀಸ್‌

Vinay Rajkumar PEPE Movie Release Date: ವಿನಯ್‌ ರಾಜ್‌ಕುಮಾರ್‌ ನಟನೆಯ ಪೆಪೆ ಸಿನಿಮಾದ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಪೆಪೆ ಸಿನಿಮಾದ ಜೇನು ಕುರುಬ ಹಾಡು ಇತ್ತೀಚೆಗೆ ಜನಪ್ರಿಯವಾಗಿತ್ತು. ಪೆಪೆ ಸಿನಿಮಾ ಇದೇ ಆಗಸ್ಟ್‌ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಪೆಪೆ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ
ಪೆಪೆ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ

PEPE Kannada Movie Release Date: ವಿನಯ್‌ ರಾಜ್‌ಕುಮಾರ್‌ ನಟನೆಯ ಪೆಪೆ ಸಿನಿಮಾದ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಪೆಪೆ ಸಿನಿಮಾದ ಜೇನು ಕುರುಬ ಹಾಡು ಇತ್ತೀಚೆಗೆ ಜನಪ್ರಿಯವಾಗಿತ್ತು. ಪೆಪೆ ಸಿನಿಮಾ ಇದೇ ಆಗಸ್ಟ್‌ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ‘ಪೆಪೆ’.. ಈ ಚಿತ್ರದ ಮೇಲೆ ದೊಡ್ಮನೆ ಅಭಿಮಾನಿಗಳು ಮತ್ತು ಕನ್ನಡ ಪ್ರೇಕ್ಷಕರು ವಿಶೇಷವಾದ ನಿಗಾವನ್ನು ಇಟ್ಟಿದ್ದಾರೆ. ಕಾರಣ ‘ಒಂದು ಸರಳ ಪ್ರೇಮ ಕಥೆ‘ ಸಿನಿಮಾ ಹಿಟ್ ಆದ ನಂತರ ವಿನಯ್ ರಾಜ್ ಕುಮಾರ್ ಮುಂದಿನ ಸಿನಿಮಾ ನಡೆಯ ಮೇಲೆ ಒಂದು ಕುತೂಹಲ ಮೂಡಿಸಿದೆ.

ಪೆಪೆ ಸಿನಿಮಾದ ಪೋಸ್ಟರ್‌ಗಳು, ಟೀಸರ್‌ಗಳು ಕೂಡ ಸಿನಿಮಾದ ಕುರಿತು ಕುತೂಹಲ ಹೆಚ್ಚಿಸಿದೆ. ಈಗ ಅಂತು ಇಂತು ಪೆಪೆ ಪ್ರೇಕ್ಷಕ ಮಹಾ ಪ್ರಭುಗಳ ಮುಂದೆ ಬಂದು ತನ್ನ ಗತ್ತು ಗಮ್ಮತ್ತನ ತೋರಿಸೋ ದಿನಾಂಕ ನಿಗದಿಯಾಗಿದೆ. ಚಿತ್ರತಂಡ ಇದೀಗ ತನ್ನ ಸಿನಿಮಾದ ಬಿಡುಗಡೆ ದಿನಾಂಕವನ್ನು ವಿನೂತನವಾಗಿ ಪ್ರಕಟಿಸಿದೆ.

ಆಟೋ ಚಾಲಕರ ಮೂಲಕ ಸಿನಿಮಾ ರಿಲೀಸ್‌ ಡೇಟ್‌ ಪ್ರಕಟ

ವಿಶೇಷವೇನೆಂದ್ರೆ ಪೆಪೆ ಸಿನಿಮಾದ ರಿಲೀಸ್ ಡೇಟ್ ಅನ್ನ ಅಭಿಮಾನಿ ದೇವರುಗಳು ಅದ್ರಲ್ಲೂ ಕನ್ನಡವನ್ನ ಕನ್ನಡ ಸಿನಿಮಾವನ್ನ ಹೊತ್ತು ಮೆರೆಸುವ ಆಟೋ ಸಾರಥಿಗಳಿಂದ ಪೆಪೆ ಬಿಡುಗಡೆ ದಿನಾಂಕ ಬಹಿರಂಗಗೊಳಿಸಿದೆ. ಈ ತಿಂಗಳ ಕೊನೆ ಶುಕ್ರವಾರ ಆಗಸ್ಟ್ 30ರಂದು ರಾಜ್ಯಾದ್ಯಂತ ಪೆಪೆ ಸಿನಿಮಾ ಬಿಡುಗಡೆಯಾಗಲಿದೆ.

ಇತ್ತೀಚೆಗೆ ಬೆಂಗಳೂರಿನ ಸದಾಶಿವ ನಗರದ ಗ್ರೌಂಡ್ನಲ್ಲಿ ಪೆಪೆ ಸಿನಿಮಾದ ಪೋಸ್ಟರ್‌ಗಳನ್ನು ಆಟೋ ರಿಕ್ಷದ ಮೇಲೆ ಅಂಟಿಸಿ ರಿಲೀಸ್ ಡೇಟ್ ಅನೌನ್ಸ್ ಮಾಡಲಾಯ್ತು. ಅಭಿಮಾನಿ ಆಟೋ ಡ್ರೈವರ್‌ಗಳು ಭವರವಸೆಯ ನಾಯಕ ನಟ ವಿನಯ್ ರಾಜ್ ಕುಮಾರ್ ಸಮ್ಮುಖದಲ್ಲಿ ಪೆಪೆ ರಿಲೀಸ್ ಪೋಸ್ಟರ್‌ಗಳನ್ನು ಅನಾವರಣ ಮಾಡಿದ್ದಾರೆ.

ಈ ಸಿನಿಮಾದ ಮೂಲಕ ಸಿದ್ಧಾರ್ಥನಾಗಿ ಸ್ಯಾಂಡಲ್‌ವುಡ್‌ಗೆ ಬಲಗಾಲಿಟ್ಟ ದೊಡ್ಮನೆಯ ಮೂರನೇ ತಲೆಮಾರಿನ ಭರವಸೆಯ ನಟ ವಿನಯ್ ರಾಜ್‌ಕುಮಾರ್ ಈಗ ಮೆಗಾ ಮಾಸ್ ಹೀರೋ ಆಗೋ ಸೂಚನೆ ಕೊಡ್ತಿದ್ದಾರೆ. ತನ್ನ ದೊಡ್ಡಪ್ಪ ಚಿಕ್ಕಪ್ಪನ ರೀತಿ ಕ್ಲಾಸ್ಗೂ ಸೈ ಮಾಸ್‌ ಸಿನಿಮಾಗಳಿಗೂ ಜೈ ಎಂದು ಸಾಬೀತುಪಡಿಸಿದ್ದಾರೆ. ಒಂದು ಸರಳ ಪ್ರೇಮ ಕಥೆ ಸಿನಿಮಾದ ಮೂಲಕ ತಾನೆಂಥ ಕ್ಲಾಸ್ ಹೀರೋ ಅನ್ನೋದನ್ನ ಚೆಂದವಾಗಿ ಚಂದನವನದ ಅಭಿಮಾನಿ ದೇವರುಗಳಿಗೆ ತೋರಿಸಿದ ವಿನಯ್ ಈ ಬಾರಿ ಮಾಸ್ ಅವತಾರವನ್ನ ‘ಪೆಪೆ‘ ಚಿತ್ರದ ಮೂಲಕ ಸಾಬೀತು ಮಾಡಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

ಯುವ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ಕಲ್ಪನೆಯಲ್ಲಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಖರ್ಚಿನಲ್ಲಿ ‘ಪೆಪೆ’ ಅದ್ಧೂರಿಯಾಗಿ ಮೂಡಿಬಂದಿದೆ. ಕ್ಲಾಸ್ ಸಿನಿಮಾಗಳಿಗೆ ಮ್ಯೂಸಿಕ್ ಕೊಟ್ಟು ಹೆಸರು ಮಾಡಿರುವ ಪೂರ್ಣ ಚಂದ್ರ ತೇಜಸ್ವಿ ಈ ಬಾರಿ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವೊಂದನ್ನ ಮ್ಯೂಸಿಕ್ ಮಾಡಿರೋದು ವಿಶೇಷ.