ಕನ್ನಡ ಸುದ್ದಿ  /  Entertainment  /  Sandalwood News Vinay Rajkumar Starrer Ondu Sarala Premakathe 25day Celebration And Ott Release Update Mnk

ನಾಲ್ಕು ಭಾಷೆಗಳಿಗೆ ವಿನಯ್‌ ರಾಜ್‌ಕುಮಾರ್‌ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಡಬ್; ಒಟಿಟಿ ರಿಲೀಸ್ ಯಾವಾಗ?

ಸಿಂಪಲ್‌ ಸುನಿ ಮತ್ತು ವಿನಯ್‌ ರಾಜ್‌ಕುಮಾರ್‌ ಕಾಂಬಿನೇಷನ್‌ನ ಮೊದಲ ಸಿನಿಮಾ ಒಂದು ಸರಳ ಪ್ರೇಮಕಥೆ ಚಿತ್ರ 25 ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಈ ನಡುವೆ ಇದೀಗ ಈ ಚಿತ್ರದ ಒಟಿಟಿಗೂ ಬೇಡಿಕೆ ಬಂದಿದೆ.

ನಾಲ್ಕು ಭಾಷೆಗಳಿಗೆ ವಿನಯ್‌ ರಾಜ್‌ಕುಮಾರ್‌ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಡಬ್; ಒಟಿಟಿ ರಿಲೀಸ್ ಯಾವಾಗ?
ನಾಲ್ಕು ಭಾಷೆಗಳಿಗೆ ವಿನಯ್‌ ರಾಜ್‌ಕುಮಾರ್‌ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಡಬ್; ಒಟಿಟಿ ರಿಲೀಸ್ ಯಾವಾಗ?

Ondu sarala Premakathe OTT: ಡಾ. ರಾಜ್‌ ಕುಟುಂಬದ ಕುಡಿ ವಿನಯ್‌ ರಾಜ್‌ಕುಮಾರ್‌ (Vinay Rajkumar) ಮತ್ತು ನಿರ್ದೇಶಕ ಸಿಂಪಲ್‌ ಸುನಿ (Simple Suni) ಕಾಂಬಿನೇಷನ್‌ನ ಒಂದು ಸರಳ ಪ್ರೇಮಕಥೆ ಸಿನಿಮಾ ಬಿಡುಗಡೆಯಾಗಿ ಬರೋಬ್ಬರಿ 25 ದಿನ ಪೂರೈಸಿದೆ. ನೋಡುಗರಿಂದ ಮೆಚ್ಚುಗೆ ಪಡೆದ ಈ ಸಿನಿಮಾ, ಈಗ ಒಟಿಟಿಯತ್ತ ಹೆಜ್ಜೆ ಇರಿಸಿದೆ. ಈ ವಿಚಾರವನ್ನು ಹೇಳಿಕೊಳ್ಳಲೆಂದೇ ಇತ್ತೀಚೆಗಷ್ಟೇ ಈ ಸಿನಿಮಾ ಯಶಸ್ಸಿನ ಖುಷಿಯ ಬಗ್ಗೆ ಹೇಳಿಕೊಳ್ಳುವ ಉದ್ದೇಶದಿಂದ ಇಡೀ ಚಿತ್ರತಂಡ ಒಂದೆಡೆ ಸೇರಿತ್ತು.

'ಒಂದು ಸರಳ ಪ್ರೇಮಕಥೆ' ವಿನಯ್ ರಾಜ್‌ಕುಮಾರ್‌ಗೆ ಬ್ರೇಕ್ ಕೊಟ್ಟಿದೆ. ಸಿಂಪಲ್ ಸುನಿ ಮತ್ತೊಂದು ಪ್ರೇಮಕಥೆಯನ್ನು ಪ್ರೇಕ್ಷಕರಿಗೆ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ತಿಳಿ ಹಾಸ್ಯ, ಒನ್ಲೈನರ್ ಡೈಲಾಗ್‌ಗಳು ಪ್ರೇಕ್ಷಕರಿಗೆ ಸಖತ್ ಮಜಾ ಕೊಡುತ್ತಿವೆ. ಇಂತಹ ಸುಂದರ ಪ್ರೇಮಕಥೆಗೆ ಶಕ್ತಿಯಾಗಿ ನಿಂತ ನಿರ್ಮಾಪಕ ಮೈಸೂರು ರಮೇಶ್ ಅವರಿಗೂ ಸಿನಿಮಾ ಲಾಭ ತಂದುಕೊಟ್ಟಿದೆ. ಇದೀಗ ಒಟಿಟಿಗೂ ಬೇಡಿಕೆ ಬಂದಿದ್ದು, ಇನ್ನೇನು ಶೀಘ್ರದಲ್ಲಿ ಒಟಿಟಿ ಬಿಡುಗಡೆ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.

ನಾಲ್ಕು ಭಾಷೆಗಳಿಗೆ ಡಬ್

"ಸಕ್ಸಸ್ ಒಂದೊಂದು ಟೈಮ್‌ನಲ್ಲಿ ಒಂದೊಂದು ಥರ ಡಿಫೈನ್ ಆಗುತ್ತದೆ. ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಸಕ್ಸಸ್ ಮಾಡಿದಾಗ ಅದು 75 ದಿನಕ್ಕೆ ಮಾಡಿದ್ದೆ. ಟಿವಿ ರೈಟ್ಸ್ ಜೊತೆ ಒಂದು ಪ್ರೋಗ್ರಾಂ ಕೊಡ್ತೀವಿ ಎಂದು ಕಮಿಟ್ ಆಗಿದ್ದೇವು. ಹೀಗಾಗಿ 75 ದಿನಕ್ಕೆ ಸಕ್ಸಸ್ ಸೆಲೆಬ್ರೆಟ್ ಮಾಡಿದೆವು. ಇವತ್ತಿಗೆ ಸಕ್ಸಸ್ ಅಂದರೆ ಯಾವುದಾದರೂ ಟಿವಿ ಚಾನೆಲ್ ಕರೆದು ಮಾತನಾಡಿಸಿದರೆ, ಜನ ನೋಡಕ್ಕೆ ಇಷ್ಟು ಬಂದಿದ್ದಾರೆ ಅನ್ನೋದೇ ಸಕ್ಸಸ್. ರಿರ್ಟನ್ಸ್ ಆಗಿದೆ. ಖುಷಿ ಇದೆ. ಕನ್ನಡದ ಜೊತೆ ಉಳಿದ ನಾಲ್ಕು ಭಾಷೆಗೆ ಒಂದು ಸರಳ ಪ್ರೇಮ ಕಥೆ ಸಿನಿಮಾ ಕ್ಲಿಯರ್ ಕಟ್ ಆಗಿ ಡಬ್ ಆಗಿದೆ. ಆಯಾ ಭಾಷೆಯಲ್ಲಿ ಆಯಾ ಟೈಟಲ್ನಲ್ಲೇ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂದರು ನಿರ್ದೇಶಕ ಸಿಂಪಲ್‌ ಸುನಿ.

ಇದು ಫ್ಯಾಮಿಲಿ ಸಿನಿಮಾ

ತುಂಬಾ ಖುಷಿಯಾಗುತ್ತಿದೆ. 25 ದಿನ ನಮ್ಮ ಸಿನಿಮಾ ಕಂಪ್ಲೀಟ್ ಆಗಿದೆ. ಫ್ಯಾಮಿಲಿ ಎಂಟರ್ಟೈನರ್. ಕ್ಲೀನ್ ಕಾಮಿಡಿ, ಇಡೀ ಫ್ಯಾಮಿಲಿ ಕುಳಿತುಕೊಂಡು ನೋಡುವ ಚಿತ್ರ. ಜನರಿಂದ ತುಂಬಾ ಒಳ್ಳೆ ಪ್ರತಿಕ್ರಿಯೆ ಬಂದಿದೆ. ಜನರು ನನ್ನ ನಟನೆ, ಸಿನಿಮಾ, ನಿರ್ದೇಶಕ, ಮ್ಯೂಸಿಕ್ ಹಾಗೂ ಟೆಕ್ನಿಷಿಯನ್ಸ್ ಕೆಲಸವನ್ನೂ ಮೆಚ್ಚಿಕೊಂಡಿದ್ದಾರೆ. ಇಡೀ ಫ್ಯಾಮಿಲಿ ಚಿತ್ರವನ್ನು ಎಂಜಾಯ್ ಮಾಡಿರುವುದು ದೊಡ್ಡ ಸಕ್ಸಸ್ ಎಂಬುದು ಚಿತ್ರದ ನಾಯಕ ವಿನಯ್‌ ರಾಜ್‌ಕುಮಾರ್‌ ಮಾತು.

ಸಂಗೀತ ನಿರ್ದೇಶಕ ವೀರ್ ಸಮರ್ಥ್ ಮಾತನಾಡಿ, 15 ವರ್ಷದ ಕೆರಿಯರ್ ನಲ್ಲಿ ಹಿಟ್ ಸಿನಿಮಾ ನೋಡುತ್ತಿದ್ದೇನೆ. ಹಾಡುಗಳನ್ನು ತುಂಬಾ ಜನ ಮೆಚ್ಚುಕೊಂಡಿದ್ದಾರೆ‌. ಈ ಚಿತ್ರ ಮಾಡುವಾಗ ಇಷ್ಟು ದೊಡ್ಟಮಟ್ಟದ ಪ್ರತಿಕ್ರಿಯೆ ಸಿಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ನನಗೆ ಎಲ್ಲಾ ಕಡೆಯಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ ಎಂದು ಭಾವುಕರಾದರು.

ಸುನಿ ಅವರ ನಿರೂಪಣೆ ಶೈಲಿ, ಕಾಮಿಡಿ ಟೈಮ್, ಎಮೋಷನ್, ನಾಯಕ ವಿನಯ್, ನಾಯಕಿಯರಾದ ಸ್ವಾತಿಷ್ಠಾ, ಮಲ್ಲಿಕಾ ಅಮೋಘ ಅಭಿನಯ, ವೀರ್ ಸಮರ್ಥ್ ಅವರ ಟ್ಯೂನ್ ಸಿನಿರಸಿಕರು ಸಖತ್ ಇಷ್ಟಪಟ್ಟಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದ ತಾರಾಬಳಗ ಚಿತ್ರದಲ್ಲಿದೆ. ಆದಿ ಅವರ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಹಾಗೂ ಕಾರ್ತಿಕ್ ಅವರ ಕ್ಯಾಮರಾ ಶ್ರಮವಿದೆ.