ಪ್ರಕಾಶ್‌ ರಾಜ್‌ ಒಳ್ಳೆಯ ನಟ ಆದರೆ, ಕೆಟ್ಟ ಹೋರಾಟಗಾರ; ವಿನೇಶ್‌ ಫೋಗಟ್‌ ಅನರ್ಹತೆ ಬೆನ್ನಲ್ಲೇ ಚೇತನ್‌ ಅಹಿಂಸಾ ‘ಸಣ್ಣತನ’ದ ಪೋಸ್ಟ್‌
ಕನ್ನಡ ಸುದ್ದಿ  /  ಮನರಂಜನೆ  /  ಪ್ರಕಾಶ್‌ ರಾಜ್‌ ಒಳ್ಳೆಯ ನಟ ಆದರೆ, ಕೆಟ್ಟ ಹೋರಾಟಗಾರ; ವಿನೇಶ್‌ ಫೋಗಟ್‌ ಅನರ್ಹತೆ ಬೆನ್ನಲ್ಲೇ ಚೇತನ್‌ ಅಹಿಂಸಾ ‘ಸಣ್ಣತನ’ದ ಪೋಸ್ಟ್‌

ಪ್ರಕಾಶ್‌ ರಾಜ್‌ ಒಳ್ಳೆಯ ನಟ ಆದರೆ, ಕೆಟ್ಟ ಹೋರಾಟಗಾರ; ವಿನೇಶ್‌ ಫೋಗಟ್‌ ಅನರ್ಹತೆ ಬೆನ್ನಲ್ಲೇ ಚೇತನ್‌ ಅಹಿಂಸಾ ‘ಸಣ್ಣತನ’ದ ಪೋಸ್ಟ್‌

ಒಲಿಂಪಿಕ್ಸ್‌ನಲ್ಲಿ ಕುಸ್ತಿಯಿಂದ ಅನರ್ಹಗೊಂಡ ಬೆನ್ನಲ್ಲೇ, ಪ್ರಧಾನಿ ಮೋದಿಯನ್ನು ಅಣಕ ಮಾಡಿದ ಪ್ರಕಾಶ್‌ ರಾಜ್‌ ಅವರಿಗೆ, ನಟ ಚೇತನ್‌ ಅಹಿಂಸಾ ಟಾಂಗ್‌ ಕೊಟ್ಟಿದ್ದಾರೆ. ಇದು ನಿಮ್ಮ ಸಣ್ಣತನ ಎಂದು ಕಾಲೆಳೆದಿದ್ದಾರೆ.

ಪ್ರಕಾಶ್‌ ರಾಜ್‌ ಒಳ್ಳೆಯ ನಟ ಆದರೆ, ಕೆಟ್ಟ ಹೋರಾಟಗಾರ; ವಿನೇಶ್‌ ಫೋಗಟ್‌ ಅನರ್ಹತೆ ಬೆನ್ನಲ್ಲೇ ಚೇತನ್‌ ಅಹಿಂಸಾ ‘ಸಣ್ಣತನ’ದ ಪೋಸ್ಟ್‌
ಪ್ರಕಾಶ್‌ ರಾಜ್‌ ಒಳ್ಳೆಯ ನಟ ಆದರೆ, ಕೆಟ್ಟ ಹೋರಾಟಗಾರ; ವಿನೇಶ್‌ ಫೋಗಟ್‌ ಅನರ್ಹತೆ ಬೆನ್ನಲ್ಲೇ ಚೇತನ್‌ ಅಹಿಂಸಾ ‘ಸಣ್ಣತನ’ದ ಪೋಸ್ಟ್‌ (Instagram)

Chetan Ahimsa on Prakash Raj: ತೂಕದಲ್ಲಿ ಏರಿಳಿತವಾದ ಹಿನ್ನೆಲೆಯಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನಕ್ಕೆ ಮುತ್ತಿಡುವ ವಿನೇಶ್ ಫೋಗಟ್‌ ಕನಸು ನುಚ್ಚು ನೂರಾಗಿದೆ. ಒಲಿಂಪಿಕ್ಸ್‌ ಇತಿಹಾಸದಲ್ಲಿಯೇ ಕುಸ್ತಿಯಲ್ಲಿ ಫೈನಲ್‌ ಪ್ರವೇಶ ಪಡೆದ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆ ವಿನೇಶ್ ಪಾಲಿಗಿದೆ. ಇಡೀ ದೇಶ ಈ ಸುದ್ದಿ ಕೇಳಿ ಸಂಭ್ರಮಿಸುತ್ತಿದ್ದಂತೆ, ಕೊನೇ ಕ್ಷಣದ ಹೈಡ್ರಾಮಾ ಮಾತ್ರ 140 ಕೋಟಿ ಭಾರತೀಯರನ್ನು ನಿರಾಸೆಗೆ ದೂಡಿತು. ತೂಕದಲ್ಲಿ ಗ್ರಾಂ ಲೆಕ್ಕದಲ್ಲಿ ಹೆಚ್ಚಾಗಿದ್ದೇ ತಡ, ಫೈನಲ್‌ನಿಂದಲೇ ಆಚೆ ಬಿದ್ದರು ವಿನೇಶ್.

ವಿನೇಶ್ ಹೀಗೆ ಫೈನಲ್‌ನಿಂದ ಹೊರಬೀಳುತ್ತಿದ್ದಂತೆ, ಕುಸ್ತಿಗೂ ವಿದಾಯ ಘೋಷಣೆ ಮಾಡಿದ್ದಾರೆ. ಇತ್ತ ಅವರ ಪರವಾಗಿ ಎಷ್ಟೋ ಮಂದಿ ಭಾರತೀಯರು ಸೋಷಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹರಿಯಾಣ ಸರ್ಕಾರ ದೊಡ್ಡ ಪ್ರಮಾಣದ ಬಹುಮಾನವನ್ನೇ ಘೋಷಿಸಿದೆ. ಸಿನಿಮಾ ಸೆಲೆಬ್ರಿಟಿಗಳು, ಕ್ರೀಡಾವಲಯದ ದಿಗ್ಗಜರೂ ಈ ದಿಟ್ಟೆಗೆ ಬೆಂಬಲ ಸೂಚಿಸಿದ್ದಾರೆ. ಪ್ರಕಾಶ್‌ ರಾಜ್‌ ಸಹ ಮೋದಿಯ ಕಾಲೆಳೆದು, ವಿನೇಶ್ ಬೆನ್ನು ತಟ್ಟಿದ್ದಾರೆ. ಪ್ರಕಾಶ್‌ ರಾಜ್‌ ಪೋಸ್ಟ್‌ಗೆ ಚೇತನ್‌ ಅಹಿಂಸಾ ಕೌಂಟರ್‌ ಕೊಟ್ಟಿದ್ದಾರೆ.

ಪ್ರಕಾಶ್‌ ರಾಜ್‌ ಪೋಸ್ಟ್‌ನಲ್ಲೇನಿದೆ..

ಸೋಷಿಯಲ್‌ ಮೀಡಿಯಾದಲ್ಲಿ ವಿನೇಶ್‌ ಫೋಗಟ್‌ ಕುಸ್ತಿ ಫೈನಲ್‌ನಿಂದ ಅನರ್ಹಗೊಳ್ಳುತ್ತಿದ್ದಂತೆ, ಬಹುಭಾಷಾ ನಟ ಪ್ರಕಾಶ್‌ ರಾಜ್‌ ಸೋಷಿಯಲ್‌ ಮೀಡಿಯಾದಲ್ಲಿ ಮೋದಿಯನ್ನು ಅಣಕ ಮಾಡುವಂಥ ಕಾರ್ಟೂನ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ. ಆ ಕಾರ್ಟೂನ್‌ನಲ್ಲಿ ತೂಕದ ಮಷಿನ್‌ ಮೇಲೆ ವಿನೇಶ್‌ ಫೋಗಾಟ್‌ ನಿಂತಿದ್ದಾರೆ. ಹಿಂಬದಿಯಿಂದ ಕೈಯಲ್ಲಿ ಕಮಲದ ಹೂವು ಹಿಡಿದ ಪ್ರಧಾನಿ ಮೋದಿಯ ಕಾಲು ಆ ತೂಕದ ಮಷಿನ್‌ ಮೇಲಿದೆ. ಅಲ್ಲಿಗೆ ವಿನೇಶ್‌ ತೂಕದಲ್ಲಿ ಏರಿಕೆಯಾಗಿದೆ.. ಎಂಬರ್ಥದ ಪೋಸ್ಟ್‌ಅನ್ನು ಪ್ರಕಾಶ್‌ ರಾಜ್‌ ಶೇರ್‌ ಮಾಡುತ್ತಿದ್ದಂತೆ, ವ್ಯಾಪಕ ಟೀಕೆಗಳೂ ಕೇಳಿಬಂದಿವೆ. ಪರ ವಿರೋಧ ಚರ್ಚೆ ಶುರುವಾಗಿದೆ. ಇದಕ್ಕೆ ಚೇತನ್‌ ಅಹಿಂಸಾ ತಮ್ಮದೇ ಶೈಲಿಯಲ್ಲಿ ಅವರ ವಿರುದ್ಧ ಚಾಟಿ ಬೀಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುವ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ, ಇದೀಗ ಒಲಿಂಪಿಕ್ಸ್‌ನಲ್ಲಿ ಅನರ್ಹತೆ ಪಡೆದು, ಕುಸ್ತಿಗೇ ಗುಡ್‌ ಬೈ ಹೇಳಿದ ವಿನೇಶ್‌ ಫೋಗಾಟ್‌ ಬಗ್ಗೆ ಮತ್ತು ಪ್ರಧಾನಿ ಮೋದಿಯ ಬಗ್ಗೆ ಚೇತನ್‌ ಮಾತನಾಡಿದ್ದಾರೆ. ಪ್ರಕಾಶ್‌ ರಾಜ್‌ ಮಾಡಿದ ಟೀಕೆಗೂ ಉತ್ತರ ನೀಡಿದ್ದಾರೆ. "ಪ್ರಕಾಶ್‌ ರಾಜ್‌ ಅವರೇ, ಈ ರೀತಿ ಪೋಸ್ಟ್‌ ನಿಮ್ಮ ಸಣ್ಣತನ ತೋರಿಸುತ್ತದೆ" ಎಂದು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ಚೇತನ್‌.

ಪ್ರಕಾಶ್‌ ರಾಜ್‌ಗೆ ಸಣ್ಣತನದ ಪಾಠ ಮಾಡಿದ ಚೇತನ್‌ ಅಹಿಂಸಾ

ಪ್ರಕಾಶ್ ರೈ ಒಳ್ಳೆಯ ನಟ, ಆದರೆ ಕೆಟ್ಟ ಹೋರಾಟಗಾರ ಎಂದಿರುವ ಚೇತನ್‌ ಅಹಿಂಸಾ, "ವಿನೇಶ್ ಫೋಗಾಟ್ ಅನರ್ಹತೆಗೆ ಪ್ರಧಾನಿ ಮೋದಿ ಕಾರಣ ಎಂದು ಪ್ರಕಾಶ್ ರೈ ಪೋಸ್ಟ್ ಸಜೆಸ್ಟ್ ಮಾಡುತ್ತೆ. ಇದು ಸಣ್ಣತನ. ಭಾರತದ ಎಲ್ಲಾ ಲಾಭಗಳಿಗೆ ಮೋದಿಯನ್ನು ಕುರುಡಾಗಿ ಹೊಗಳುವವರು ಹೇಗೆ ಅಜ್ಞಾನಿಗಳೋ, ಹಾಗೆಯೇ ಭಾರತದ ಎಲ್ಲಾ ಸಮಸ್ಯೆಗಳನ್ನು ಮೋದಿಯ ಮೇಲೆ ದೂಷಿಸುವ ರಾಯ್ ಅವರಂತಹವರೂ ಅಜ್ಞಾನಿಗಳಾಗಿದ್ದಾರೆ. ಪ್ರಕಾಶ್ ರೈ ಒಳ್ಳೆಯ ನಟ, ಆದರೆ ಕೆಟ್ಟ ಹೋರಾಟಗಾರ" ಎಂದು ನಟ ಚೇತನ್ ಅಹಿಂಸಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪ್ರಕಾಶ್‌ ರಾಜ್‌ಗೆ ಕೌಂಟರ್‌ ಕೊಟ್ಟಿದ್ದಾರೆ.

ನಟ ಕಿಶೋರ್‌ ಅವರಿಂದಲೂ ಬಂದಿತ್ತು ಪೋಸ್ಟ್‌

ವಿನೇಶ್‌ ಫೋಗಟ್‌ ಕುಸ್ತಿಯಲ್ಲಿ ಫೈನಲ್‌ ಪ್ರವೇಶಿಸುತ್ತಿದ್ದಂತೆ ಬಹುಭಾಷಾ ನಟ ಕಿಶೋರ್‌ ಸಹ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. "ಇತಿಹಾಸವನ್ನು ಮರೆತವರಿಂದ ಇತಿಹಾಸ ಸೃಷ್ಟಿ ಸಾಧ್ಯವಿಲ್ಲ. - ಡಾ. ಬಿ.ಆರ್. ಅಂಬೇಡ್ಕರ್. ವಿನೇಶ್ ನಿಮಗೆ ಸಲಾಂ. ಇಲ್ಲಿಯ ಅಮಾನವೀಯ ವ್ಯವಸ್ಥೆ ನಿಮ್ಮನ್ನು ದೆಹಲಿಯ ಬೀದಿಗಳಲ್ಲಿ ಎಳೆದಾಡಿದ್ದರಿಂದ ಹಿಡಿದು ಒಲಿಂಪಿಕ್ ಪದಕದವರೆಗೆ, ಅಷ್ಟು ಕಹಿ ಅನುಭವಗಳ ನಂತರವೂ ನೀವು ಮಾಡಿರುವ ಈ ಸಾಧನೆ ಅಭೂತಪೂರ್ವ. ಆದರೆ ಇಂದು ಸಂಭ್ರಮಿಸುವ ಅಥವಾ ಹೆಮ್ಮೆ ಪಡುವ ನೈತಿಕ ಹಕ್ಕನ್ನು ನಾವು ಭಾರತೀಯರು ಕಳೆದುಕೊಂಡಿದ್ದೇವೆ. ನಾವು ನಿಮ್ಮೊಂದಿಗೆ ನಿಲ್ಲುವ ಅಗತ್ಯವಿದ್ದಾಗ ನಿಮ್ಮನ್ನು ಸೋಲಿಸಿ ನಿಮಗೆ ಲೈಂಗಿಕ ಕಿರುಕುಳ ಕೊಟ್ಟವರ ಜೊತೆ ನಿಂತಿದ್ದೆವು. ಧಿಕ್ಕಾರವಿರಲಿ ಮೋದಿ, ಬ್ರಿಜ್‌ಭೂಷಣ್, ** ನೆಕ್ಕುವ ಗೋದೀ ಮಾಧ್ಯಮಕ್ಕೆ ಮತ್ತು ಆ ವಿಕೃತ ಮನಸ್ಥಿತಿಯ ಸಮಾಜಕ್ಕೆ" ಎಂದಿದ್ದರು.

Whats_app_banner