ಕನ್ನಡ ಸುದ್ದಿ  /  Entertainment  /  Sandalwood News Vinod Prabhar Reaction About Darshan Thoogudeep Dhruva Sarja Issue Rsm

Vinod Prabhakar: ದರ್ಶನ್ ಅಣ್ಣನಿಗಾಗಿ ಪ್ರಪಂಚವನ್ನೇ ಎದುರು ಹಾಕಿಕೊಳ್ಳುತ್ತೇನೆ; ವಿನೋದ್ ಪ್ರಭಾಕರ್

Darshan-Dhruva Sarja Issue: ಕೆಲವು ದಿನಗಳಿಂದ‌ ನಾವು ಪ್ರಮೋಶನ್ ಕೆಲಸದಲ್ಲಿ ಬ್ಯುಸಿ‌ ಇದ್ದೆ. ವಿಚಾರ ತಿಳಿಯದೆ ನಾನು ಏನೂ ಮಾತನಾಡುವುದಿಲ್ಲ. ಆದರೆ ಒಂದು ಮಾತನ್ನು ಹೇಳಲು ಇಷ್ಟಪಡುತ್ತೇನೆ. ದರ್ಶನ್ ಅವರಿಗಾಗಿ ನಾನು ಇಡೀ ಪ್ರಪಂಚವನ್ನು ಎದುರು ಹಾಕಿಕೊಳ್ಳಲು ರೆಡಿ ಇದ್ದೇನೆ ಎಂದು ವಿನೋದ್ ಪ್ರಭಾಕರ್ ಪ್ರತಿಕ್ರಿಯಿಸಿದ್ದಾರೆ.

ದರ್ಶನ್ ಜೊತೆ ವಿನೋದ್ ಪ್ರಭಾಕರ್ (twitter/@CSDSK1)
ದರ್ಶನ್ ಜೊತೆ ವಿನೋದ್ ಪ್ರಭಾಕರ್ (twitter/@CSDSK1)

ಚಿತ್ರರಂಗದಲ್ಲಿ ಈಗ ಸ್ಟಾರ್ ವಾರ್ ಸಾಮಾನ್ಯ‌ ಎನಿಸಿಬಿಟ್ಟಿದೆ. ಯಾವುದೋ ಕಾರಣಕ್ಕೆ ನಟರ ನಟಿಯರ ನಡುವೆ ಉಂಟಾದ ಚಿಕ್ಕ ಮುನಿಸು ಹೆಮ್ಮರವಾಗಿ ಬೆಳೆಯುತ್ತದೆ. ನಟ ದರ್ಶನ್ ಹಾಗೂ ಸುದೀಪ್ ನಡುವೆ ಮನಸ್ತಾಪ ಇರುವುದು ತಿಳಿದಿರುವ ವಿಚಾರ. ಆದರೆ ಧ್ರುವ ಸರ್ಜಾ ಹಾಗೂ ದರ್ಶನ್ ನಡುವೆ ಕೂಡಾ ಮನಸ್ತಾಪ ಇರುವುದು ಇತ್ತೀಚೆಗೆ ಬಹಿರಂಗವಾಗಿದೆ.

ಇತ್ತೀಚೆಗೆ ಕರ್ನಾಟಕ ಬಂದ್ ಸಮಯದಲ್ಲಿ ದರ್ಶನ್ ವೇದಿಕೆ ಮೇಲೆ ಬಂದಾಗ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಆದರೆ ಧ್ರುವ ಒಲ್ಲದ ಮನಸ್ಸಿನಿಂದ ಎದ್ದು ನಿಂತಿದ್ದರು. ವೇದಿಕೆ ಮೇಲಿರುವವರನ್ನು ದರ್ಶನ್ ಮಾತನಾಡಿಸುವಾಗ ಧ್ರುವ ಬೇರೆಲ್ಲೋ ನೋಡುತ್ತಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇವರ ನಡುವೆ ಏನೂ ಸರಿ ಇಲ್ಲ ಎಂಬುದು ಎಲ್ಲರಿಗೂ ಗೊತ್ತಾಯ್ತು. ಧ್ರುವ ಕೂಡಾ ಇದನ್ನು ಒಪ್ಪಿಕೊಂಡಿದ್ದರು. ಇದೀಗ ನಟ ವಿನೋದ್ ಪ್ರಭಾಕರ್ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಶುಕ್ರವಾರ ವಿನೋದ್ ಪ್ರಭಾಕರ್ ಅಭಿನಯದ ಫೈಟರ್ ಸಿನಿಮಾ ರಿಲೀಸ್ ಆಗಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿನೋದ್ ಪ್ರಭಾಕರ್, ಅಭಿಮಾನಿಗಳು‌‌ ನನ್ನ ಮೊದಲ‌ ಸಿನಿಮಾದಿಂದ ಇಲ್ಲಿವರೆಗೂ ಇದೇ ಪ್ರೀತಿ ತೋರಿಸುತ್ತಾ ಬಂದಿದ್ದಾರೆ. ಅವರಿಗೆ ನಾನು ಎಂದಿಗೂ ಕೃತಜ್ಞನಾಗಿರುತ್ತೇನೆ. ಇಂದು ನನ್ನ ತಮ್ಮ ಚಿರಂಜೀವಿ ಸರ್ಜಾ ಸಿನಿಮಾ ಕೂಡಾ ಬಿಡುಗಡೆ ಆಗಿದೆ. ಆ ಸಿನಿಮಾ ಕೂಡಾ ಯಶಸ್ಸು ಕಾಣಲಿ ಎಂದರು. ಧ್ರುವ ಹಾಗೂ ದರ್ಶನ್ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿನೋದ್ ಪ್ರಭಾಕರ್, ನನಗೆ ಈ ವಿಚಾರದ ಬಗ್ಗೆ ಗೊತ್ತಿಲ್ಲ. ಕೆಲವು ದಿನಗಳಿಂದ‌ ನಾವು ಪ್ರಮೋಶನ್ ಕೆಲಸದಲ್ಲಿ ಬ್ಯುಸಿ‌ ಇದ್ದೆ. ವಿಚಾರ ತಿಳಿಯದೆ ನಾನು ಏನೂ ಮಾತನಾಡುವುದಿಲ್ಲ. ಆದರೆ ಒಂದು ಮಾತನ್ನು ಹೇಳಲು ಇಷ್ಟಪಡುತ್ತೇನೆ. ದರ್ಶನ್ ಅವರಿಗಾಗಿ ನಾನು ಇಡೀ ಪ್ರಪಂಚವನ್ನು ಎದುರು ಹಾಕಿಕೊಳ್ಳಲು ರೆಡಿ ಇದ್ದೇನೆ ಎಂದು ವಿನೋದ್ ಪ್ರಭಾಕರ್ ಪ್ರತಿಕ್ರಿಯಿಸಿದ್ದಾರೆ.

ಫೈಟರ್ ಚಿತ್ರವನ್ನು ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಿಸಿದ್ದು ನೂತನ್‌ ಉಮೇಶ್ ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಫೈಟರ್ ಚಿತ್ತದಲ್ಲಿ ಪಾವನಾ, ಲೇಖಾ ಚಂದ್ರ, ಕುರಿ ಪ್ರತಾಪ್, ಗಿರಿಜಾ ಲೋಕೇಶ್ ಹಾಗೂ ಇನ್ನಿತರರು ನಟಿಸಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ