ಕನ್ನಡ ಸುದ್ದಿ  /  Entertainment  /  Sandalwood News Vishnuvardhan Cut Out Function Made Aisha International Book Of Record Veeraka Putra Srinivas Rsm

Vishnuvardhan: ಏಷ್ಯಾ , ಇಂಟರ್‌ ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್‌ಗೆ ಸೇರಿದ ವಿಷ್ಣುವರ್ಧನ್‌ ಕಟೌಟ್‌ ಜಾತ್ರೆ; ವೀರಕಪುತ್ರ ಶ್ರೀನಿವಾಸ್‌

ಪೊಲೀಸ್‌ ಇಲಾಖೆಯ ಪ್ರಕಾರ ಎರಡೂವರೆ ಲಕ್ಷ ಕನ್ನಡಿಗರು ಡಾ. ವಿಷ್ಣುವರ್ಧನ್‌ ಕಟೌಟ್‌ ಜಾತ್ರೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಡಾ. ವಿಷ್ಣುವರ್ಧನ್‌ ಅಭಿಮಾನಿ ವೀರಕಪುತ್ರ ಶ್ರೀನಿವಾಸ್‌ ಕೆಲವೊಂದು ಮಾಹಿತಿ ಹಂಚಿಕೊಂಡಿದ್ದಾರೆ.

ಡಾ. ವಿಷ್ಣುವರ್ಧನ್‌ ಕಟೌಟ್‌ ಜಾತ್ರೆ
ಡಾ. ವಿಷ್ಣುವರ್ಧನ್‌ ಕಟೌಟ್‌ ಜಾತ್ರೆ

ಕಳೆದ ವರ್ಷ, ಸೆಪ್ಟೆಂಬರ್‌ 18 ರಂದು ಅಭಿಮಾನಿಗಳು ಡಾ. ವಿಷ್ಣುವರ್ಧನ್‌ ಹುಟ್ಟುಹಬ್ಬವನ್ನು ಬಹಳ ವಿಭಿನ್ನವಾಗಿ ಆಚರಿಸಿದ್ದರು. ಹಾಗೇ ಅವರು ಚಿತ್ರರಂಗಕ್ಕೆ ಬಂದು 50 ವರ್ಷಗಳು ಕಳೆದ ಹಿನ್ನೆಲೆ 50 ಸೇನಾನಿಗಳು ಡಾ. ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್‌ ನೇತೃತ್ವದಲ್ಲಿ ಡಾ. ವಿಷ್ಣು ಪುಣ್ಯಭೂಮಿಯಲ್ಲಿ 51 ಬೃಹತ್‌ ಕಟೌಟ್‌ಗಳನ್ನು ಸ್ಥಾಪಿಸಿ ಕಟೌಟ್‌ ಜಾತ್ರೆ ಎಂಬ ಕಾರ್ಯಕ್ರಮ ಆಯೋಜಿಸಿದ್ದರು.

ಏಷ್ಯಾ, ಇಂಟರ್‌ ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್‌ಗೆ ಸೇರಿದ ವಿಷ್ಣುವರ್ಧನ್‌ ಕಟೌಟ್‌ ಜಾತ್ರೆ
ಏಷ್ಯಾ, ಇಂಟರ್‌ ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್‌ಗೆ ಸೇರಿದ ವಿಷ್ಣುವರ್ಧನ್‌ ಕಟೌಟ್‌ ಜಾತ್ರೆ

ಅಭಿಮಾನಿಗಳು ಸ್ಥಾಪಿಸಿದ್ದ ಕಟೌಟ್‌ಗಳಿಗೆ ಬೃಹತ್‌ ಹಾರಗಳನ್ನುಕೂಡಾ ಹಾಕಿದ್ದರು. ಇಡೀ ಕಾರ್ಯಕ್ರಮಕ್ಕೆ ಅಂದಾಜು 40 ಲಕ್ಷದಷ್ಟು ಹಣ ಖರ್ಚಾಗಿತ್ತು. ಪೊಲೀಸ್‌ ಇಲಾಖೆಯ ಪ್ರಕಾರ ಎರಡೂವರೆ ಲಕ್ಷ ಕನ್ನಡಿಗರು ಈ ಕಟೌಟ್‌ ಜಾತ್ರೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಡಾ. ವಿಷ್ಣುವರ್ಧನ್‌ ಅಭಿಮಾನಿ ವೀರಕಪುತ್ರ ಶ್ರೀನಿವಾಸ್‌ ಕೆಲವೊಂದು ಮಾಹಿತಿ ಹಂಚಿಕೊಂಡಿದ್ದಾರೆ.

ನೋವು ಅನುಭವಿಸಿದ ನಂತರ ಅದ್ಭುತ ಜೋಡಿ ಸಿಕ್ಕಿದೆ ಎಂದರೆ ಏಕೆ ಬಿಡಬೇಕು; ಪವಿತ್ರಾ ಲೋಕೇಶ್‌ ನರೇಶ್‌ ವಿಜಯ್‌ ಕೃಷ್ಣ

''ಡಾ. ವಿಷ್ಣುವರ್ಧನ್‌ ಕಟೌಟ್‌ ಜಾತ್ರೆಯನ್ನು ಏಷ್ಯಾ ಬುಕ್‌ ಆಫ್‌ ರೆಕಾರ್ಡ್ ಮತ್ತು ಇಂಟರ್‌ ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲಿಸಲು ಮನವಿ ಸಲ್ಲಿಸಲಾಗಿತ್ತು. ಆ ಸಂಸ್ಥೆಗಳು ನಮ್ಮ ದಾಖಲೆ ಸಂಬಂಧ ಅನೇಕ ಹಂತದ ಪರೀಕ್ಷೆಗಳನ್ನು ನಡೆಸಿದರಲ್ಲದೆ, ಖುದ್ದಾಗಿ ಸ್ಥಳ ಪರಿಶೀಲನೆಯನ್ನು ಕೂಡಾ ಮಾಡಿದ್ದರು. ಇದೀಗ ಆ ಎಲ್ಲಾ ಹಂತದ ಪರೀಕ್ಷೆಗಳೂ ಮುಗಿದಿದ್ದು, ಈ ಕಟೌಟ್ ಜಾತ್ರೆಯು ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ ಮತ್ತು ಇಂಟರ್‌ ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲೆಯಾಗಿದೆ. ಆ ಎರಡೂ ದಾಖಲೆಗಳ ಸರ್ಟಿಫಿಕೇಟ್‌ ಮತ್ತು ಪದಕಗಳು ನಮಗೆ ದೊರೆತಿವೆ.''

ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌
ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌

ಟಾಲಿವುಡ್‌ ಜೋಡಿ ಒಂದಾಗಲು ಡೇಟ್‌ ಫಿಕ್ಸ್‌;ಇದೇ ತಿಂಗಳು ಹೈದರಾಬಾದ್‌ನಲ್ಲಿ ವರುಣ್‌ ತೇಜ್‌ ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ

''ತೆರೆ ಮುಂದೆ ತೆರೆ ಹಿಂದೆ ನುಡಿದಂತೆ ನಡೆದ ಮೇರು ನಟನ ಹೆಸರಿನಲ್ಲಿ ಇಂತದ್ದೊಂದು ದಾಖಲೆಯನ್ನು ಅವರಿಲ್ಲದ ಸಮಯದಲ್ಲಿ ಸ್ಥಾಪಿಸಲು ಸಾಧ್ಯವಾಗಿದ್ದಕ್ಕೆ ನಿಜಕ್ಕೂ ಹೆಮ್ಮೆ ಪಡುತ್ತೇವೆ. ಈ ದಾಖಲೆ ಡಾ. ವಿಷ್ಣುವರ್ಧನ್‌ ನಮ್ಮನ್ನು ಅಗಲಿ 13 ವರ್ಷಗಳ ನಂತರವೂ ಅವರ ನೆನಪನ್ನು ಹಸಿರಾಗಿಡುವ ಕೆಲಸವನ್ನು ಅವರ ಅಭಿಮಾನಿಗಳು ನಿರಂತರವಾಗಿ ಮಾಡುತ್ತಿರುವುದರ ದ್ಯೋತಕವಾಗಿದೆ.''

ಅವಿವಾ ಬಿದ್ದಪ್ಪ ಜೊತೆ ಚಳಿ ಚಳಿ ಡ್ಯೂಯೆಟ್‌ ಹಾಡಿದ ಯಂಗ್‌ ರೆಬೆಲ್‌ ಸ್ಟಾರ್‌; ಅಂಬರೀಶ್‌ ಸಿನಿಮಾ ಹಾಡುಗಳ ರೀಕ್ರಿಯೇಟ್

''ಈ ಕಟೌಟ್‌ ಜಾತ್ರೆಗೆ ಬೆನ್ನೆಲುಬಾಗಿ ನಿಂತ ಎಲ್ಲಾ ಸೇನಾನಿಗಳಿಗೆ, ಯೋಜನೆಯನ್ನು ಯಶಸ್ವಿಗೊಳಿಸಿದ ಆನಂದ್‌ ರಾಜ್‌, ಕಟೌಟ್‌ ವಿನ್ಯಾಸ ಮಾಡಿದ ರಾಜು ವಿಷ್ಣು ಮತ್ತು ಈ ಸಂಸ್ಥೆಗಳ ಜೊತೆ ಸಂವಹನ ನಡೆಸಿ ಕೆಲಸ ಸುಲಭವಾಗಿ ಆಗುವಂತೆ ಮಾಡಿದ ಜನಾರ್ಧನ್‌ ರಾವ್‌ ಅವರಿಗೆ ಧನ್ಯವಾಗಳು'' ಎಂದು ವೀರಕಪುತ್ರ ಶ್ರೀನಿವಾಸ್‌, ಕಟೌಟ್‌ ಸ್ಥಾಪನೆಗೆ ಕಷ್ಟಪಟ್ಟ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದ್ದಾರೆ.

IPL_Entry_Point