Kishore: ಅಯೋಧ್ಯೆ ರಾಮನಿಗೂ, ನಮ್ಮೂರ ಕೊಂಪೆಯ ಮಾರಿಗೂ ಎಲ್ಲಿಯ ಸಂಬಂಧ? ಧರ್ಮದ ವ್ಯವಸ್ಥಿತ ರಾಜಕಾರಣದ ಬಗ್ಗೆ ಕಿಶೋರ್ ಕಿಡಿ
ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಿರುಸಿನ ತಯಾರಿ ನಡೆಯುತ್ತಿದ್ದರೆ, ಇಡೀ ದೇಶ ಆ ಕ್ಷಣಕ್ಕೆ ಕಾಯುತ್ತಿದೆ. ಹೀಗಿರುವಾಗಲೇ ಇದೇ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಮತ್ತು ಧರ್ಮದ ರಾಜಕಾರಣದ ಬಗ್ಗೆ ಕಿಶೋರ್ ಕೇಂದ್ರವನ್ನು ಮತ್ತೆ ಟೀಕಿಸಿದ್ದಾರೆ ಕಿಶೋರ್.
Kishore on Ram Mandhir: ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಅಭಿಪ್ರಾಯಗಳ ಮೂಲಕವೇ ಸದಾ ಮುನ್ನೆಲೆಯಲ್ಲಿರುತ್ತಾರೆ ಬಹುಭಾಷಾ ನಟ ಕಿಶೋರ್. ಪ್ರಸ್ತುತ ಘಟನಾವಳಿಗಳ ಬಗ್ಗೆ, ಕೇಂದ್ರ ಸರ್ಕಾರದ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ ಈ ನಟ. ಇದೀಗ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರದ ಬಗ್ಗೆಯೂ ಸುದೀರ್ಘ ಬರಹವೊಂದನ್ನು ಪ್ರಕಟಿಸಿದ್ದಾರೆ.
ರಾಮ ಮಂದಿರ ಉದ್ಘಾಟನೆಗೆ ಇನ್ನೇನು ದಿನಗಣನೆ ಆರಂಭವಾಗಿದೆ. 2024ರ ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮನ ಬೃಹತ್ ಮಂದಿರ ಲೋಕಾರ್ಪಣೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬಿರುಸಿನ ತಯಾರಿ ನಡೆಯುತ್ತಿದ್ದರೆ, ಇಡೀ ದೇಶ ಆ ಕ್ಷಣಕ್ಕೆ ಕಾಯುತ್ತಿದೆ. ಹೀಗಿರುವಾಗಲೇ ಇದೇ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಮತ್ತು ಧರ್ಮದ ರಾಜಕಾರಣದ ಬಗ್ಗೆ ಕಿಶೋರ್ ಕೇಂದ್ರವನ್ನು ಮತ್ತೆ ಟೀಕಿಸಿದ್ದಾರೆ ಕಿಶೋರ್.
ಬ್ರಾಹ್ಮಣನೆಂದು ಸುಳ್ಳು ಹೇಳಿ ವೇದ ಕಲಿತು, ಬ್ರಾಹ್ಮಣ ಕನ್ನೆಯನ್ನು ಮದುವೆಯಾಗಿ ಮಕ್ಕಳು ಪಡೆದು ಇವರ ವರ್ಣಾಶ್ರಮವನ್ನು ಮೀರಿದ ‘ಘೋರ ಅಪರಾಧ’ಕ್ಕೆ ಮಾರಿ ಕೊಟ್ಟ ಅದೇ ಶಿಕ್ಷೆ ಈಗ ರಾಮನನ್ನೂ ರಾಮನ ಮಂದಿರವನ್ನೂ ಬಳಸಿ ಕೊಡುತ್ತಾರೆಯೇ?? ಶೂದ್ರರೂ ದಲಿತರೂ ಮೇಲೇರುವ ಪ್ರಯತ್ನ ಮಾಡಿದರೆ.. ಇಲ್ಲವೇ ‘ಉತ್ತಮ’ರ ‘ಜಾತಿ ಕೆಡಿಸುವ’ ಪ್ರಯತ್ನ ಮಾಡಿದರೆ, ಮಾರಿಯಂತೆಯೇ ಶೂದ್ರನನ್ನೂ ಅವನ ಮಕ್ಕಳನ್ನೂ ಸುಟ್ಟು ಹಾಕುತ್ತಾರೆಯೇ?? ಎಂದು ಪ್ರಶ್ನೆ ಮಾಡಿದ್ದಾರೆ.
ರಾಮ್ ಮಂದಿರದ ಬಗ್ಗೆ ಕಿಶೋರ್ ಹೇಳಿದ್ದೇನು?
ಮಾರಮ್ಮನ ಜಾತ್ರೆಯೂ ರಾಮ ಮಂದಿರವೂ
ಅಯೋಧ್ಯೆಯ ರಾಮನಿಗೂ ನಮ್ಮೂರ ಕೊಂಪೆಯ ಮಾರಿಗೂ ಎತ್ತಣಿಂದೆತ್ತಣ ನಂಟು?
ರಾಮನ ಮಂದಿರದ ಅಕ್ಷತೆ ಕಾಳಿಗೆ ಮಾರಮ್ಮನ ಗುಡಿಯಲ್ಲಿ ಪೂಜೆಯೇ??
ನಮ್ಮ ಹಳ್ಳಿಯಲ್ಲಿ ನಡೆದ ಈ ಸೋಜಿಗ ಕಾಕತಾಳೀಯವಂತೂ ಅಲ್ಲ ..
ಇದು ಧರ್ಮದ ವ್ಯವಸ್ಥಿತ ರಾಜಕೀಕರಣದ ಸಾಕ್ಷಿಯೇ??
ಈ ಸಾಕ್ಷಿಯ ದರ್ಶನವು ನಿಜವಾಗಿ ದೈವೇಚ್ಛೆಯೇ ಸರಿ..
ಅಂದು ಮಾರಿಯನ್ನೂ ಮಾರಿಯ ಜಾತ್ರೆಯನ್ನೂ ಬಳಸಿ ನಡೆದ ರಾಜಕೀಯ ಇಂದು ರಾಮನನ್ನೂ ರಾಮನ ಮಂದಿರವನ್ನೂ ಬಳಸಿ ನಡೆಯುತ್ತಿದೆಯೇ?
ಬ್ರಾಹ್ಮಣನೆಂದು ಸುಳ್ಳು ಹೇಳಿ ವೇದ ಕಲಿತು, ಬ್ರಾಹ್ಮಣ ಕನ್ನೆಯನ್ನು ಮದುವೆಯಾಗಿ ಮಕ್ಕಳು ಪಡೆದು ಇವರ ವರ್ಣಾಶ್ರಮವನ್ನು ಮೀರಿದ ‘ಘೋರ ಅಪರಾಧ’ಕ್ಕೆ
ಮಾರಿ ಕೊಟ್ಟ ಅದೇ ಶಿಕ್ಷೆ ಈಗ ರಾಮನನ್ನೂ ರಾಮನ ಮಂದಿರವನ್ನೂ ಬಳಸಿ ಕೊಡುತ್ತಾರೆಯೇ?? .
ಶೂದ್ರರೂ ದಲಿತರೂ ಮೇಲೇರುವ ಪ್ರಯತ್ನ ಮಾಡಿದರೆ.. ಇಲ್ಲವೇ ‘ಉತ್ತಮ’ರ ‘ಜಾತಿ ಕೆಡಿಸುವ’ ಪ್ರಯತ್ನ ಮಾಡಿದರೆ, ಮಾರಿಯಂತೆಯೇ ಶೂದ್ರನನ್ನೂ ಅವನ ಮಕ್ಕಳನ್ನೂ ಸುಟ್ಟು ಹಾಕುತ್ತಾರೆಯೇ??
ಮಾರಿಯ ಜಾತ್ರೆಯಲ್ಲಿ ಶೂದ್ರನೇ ತನ್ನದೇ ಸೂಚಕವಾದ ಕೋಣವನ್ನೂ ತನ್ನ ಮಕ್ಕಳ ಸೂಚಕವಾದ ಆಡು ಕುರಿಗಳನ್ನೂ ತಾನು ಮಾಡಿದ ‘ಘೋರ ಪಾಪಕ್ಕೆ’ ತನ್ನ ಕೈಯಲ್ಲೇ ಕಡಿದುಕೊಂಡು ಪ್ರಾಯಶ್ಚಿತ್ತ ಮಾಡಿಕೊಳ್ಳುವ ಹಾಗೆ..
ದಲಿತ ಶೂದ್ರರ ಮತ್ತು ದಲಿತ ಶೂದ್ರರ ಮಕ್ಕಳ ತಲೆಯನ್ನೂ ದಲಿತ ಶೂದ್ರರ ಕೈಯಲ್ಲೇ ಕಡಿಸುತ್ತಾರೆಯೇ??
ಶತಶತಮಾನಗಳು ಅದನ್ನೇ ಸಂಭ್ರಮಿಸುತ್ತಾ, ಜಾತ್ರೆ ಮಾಡುತ್ತಾ ಇವರ ಸಮಾಜದಲ್ಲಿ ನಮ್ಮ ಜಾಗವನ್ನು ನಮಗೆ ನೆನಪಿಸುವ ಹಾಗೆ ..
ನಮ್ಮ ‘ಪಾಪ’ವನ್ನು ನಾವೇ ಒಪ್ಪಿಕೊಳ್ಳುವ ಹಾಗೆ..
ಅದನ್ನೇ ಸಂಭ್ರಮಿಸುತ್ತಾ , ತಮ್ಮನ್ನು ಒಳಗೆ ಸೇರಿಸಿಕೊಳ್ಳದ ಮಂದಿರದ ಹೆಸರಲ್ಲಿ ದಲಿತರೂ ಶೂದ್ರರೂ ಶತಶತಮಾನಗಳು ಓಟು ಒತ್ತಿ ಇವರನ್ನು ಅಧಿಕಾರಕ್ಕೆ ತರುತ್ತಲೇ ಇರುತ್ತೇವೆಯೇ???