ಜೈಲು ಟಿವಿಯಲ್ಲಿ ರಾತ್ರಿ ಹೊತ್ತು ಅಶ್ಲೀಲ ಸಿನಿಮಾ ಕೂಡ ನೋಡಬಹುದು, ಜೈಲು ಒಂದು ಬ್ರಹ್ಮಾಂಡ; ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮಾತು
ಬೆಂಗಳೂರು ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ದೊರಕುತ್ತಿರುವ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ. ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಅವರು ಈ ಹಿಂದೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಜೈಲುಗಳ ನಿಜಸ್ಥಿತಿಯ ಕುರಿತು ಸಾಕಷ್ಟು ಮಾಹಿತಿ ನೀಡಿದ್ದರು.
ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಆರೋಪಿ ನಟ ದರ್ಶನ್ ಮತ್ತು ನಟೋರಿಯಸ್ ರೌಡಿಗಳು ಸಿಗರೇಟು ಸೇದುತ ಚೇರ್‌ನಲ್ಲಿ ಕುಳಿತು ಮಾತನಾಡಿರುವ ಫೋಟೋ ವೈರಲ್ ಆಗಿದೆ. ಇದೇ ಸಮಯದಲ್ಲಿ ಜೈಲಿನಲ್ಲಿ ನೀಡುವ ರಾಜಾತಿಥ್ಯ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ಜೈಲಿನೊಳಗೆ ಹೇಗೆ ಇರುತ್ತದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಕೆಲವು ವರ್ಷಗಳ ಹಿಂದೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ರಾತ್ರಿ ಟಿವಿಯಲ್ಲಿ ಅಶ್ಲೀಲ ಸಿನಿಮಾ ನೋಡಬಹುದು
"ಜೈಲಿನಲ್ಲಿ ನೀಡುವ ಸೌಲಭ್ಯಗಳ ಕುರಿತು ಏನೂ ಹೇಳುವಂತೆ ಇಲ್ಲ. ಯಾಕೆಂದರೆ, ಸರಕಾರವೇ ಅವರಿಗೆ ಟಿವಿ ಕೊಡಬಹುದು ಎಂದು ಹೇಳಿದೆ. ಟಿವಿಯಲ್ಲಿ ಎರಡು ಬಗೆಯ ಚಾನೆಲ್‌ಗಳು ಇರುತ್ತವೆ. ಒಂದು ಡೇ ಟೈಮ್ ಚಾನೆಲ್, ಇನ್ನೊಂದು ನೈಟ್ ಟೈಮ್ ಚಾನೆಲ್. ನೈಟ್ ಚಾನೆಲ್‌ನಲ್ಲಿ ಬ್ಲೂಫಿಲ್ಮ್ ಕೂಡ ನೋಡಬಹುದು. ನಿಮಗೆ ಇಷ್ಟ ಇದ್ರೆ ಒಳಗೆ ಹೋಗಿ ನೋಡಬಹುದು. ಟಿವಿ ಆನ್ ಆಗಿರುತ್ತದೆ" ಎಂದು ಎರಡು ವರ್ಷದ ಹಿಂದೆ ಪಬ್ಲಿಕ್‌ಟಿವಿಗೆ ನೀಡಿದ ಸಂದರ್ಶನದಲ್ಲಿ ಸಂಗ್ರಾಮ್ ಸಿಂಗ್ ಹೇಳಿದ್ದರು.
"ಜೆಸಿ ನಾರಾಯಣ್‌ಗೆ ಹೇಳಿದ್ರೆ ಸಾಕು ಜೈಲಿನ ಒಳಗಿನಿಂದಲೇ ಯಾವುದೇ ಡೀಲ್ ಮಾಡ್ತಾನೆ. ನಿಮಗೆ ಯಾರಿಗಾದರೂ ಲೋವರ್ ಲೆವಲ್ ಟ್ರಾನ್ಸ್‌ಫಾರ್ ಆಗಬೇಕಿದ್ರೆ ಮಾಡಿಕೊಡ್ತಾನೆ. ಜೈಲಿನಿಂದಲೇ ಫೋನ್ ಮಾಡಿ "ಇಂತವರಿಗೆ ಅಲ್ಲಿಗೆ ಟ್ರಾನ್ಸ್‌ಫಾರ್ ಮಾಡಿ" ಅಂತ. ಜೈಲಿನ ಕುರಿತು ಇಂತಹ ವಿಚಾರಗಳ ಕುರಿತು ಯಾರೂ ಕ್ರಮಕೈಗೊಳ್ಳುತ್ತಿಲ್ಲ. ಜೈಲಿನಲ್ಲಿ ಎಲ್ಲಾ ಕೊಡ್ತಾರೆ. ಒಂದು ಚೇರ್ ಕೊಡ್ತಾರೆ, ಮಂಚ ಕೊಡ್ತಾರೆ. ತೆಲಗಿ ಕೂಡ ಅಲ್ಲಿದ್ದ. ಅವನಿಗೆ ಪ್ರತ್ಯೇಕ ಕೋಣೆ, ಮಂಚ, ಬಾಂಬೆ ಟೈಪ್ ಕಬೋರ್ಡ್ ಎಲ್ಲವೂ ದೊರಕಿತ್ತು. ಇದಕ್ಕೆಲ್ಲ ಯಾರು ಜವಾಬ್ದಾರರು? ಜೈಲು ಅಧಿಕಾರಿಗಳೇ ಕಾರಣ. ಒಳಗಡೆ ಏನೆಲ್ಲ ನಡೆಯುತ್ತದೆ ಎಂದು ಯಾರಿಗೂ ಗೊತ್ತಾಗುವುದಿಲ್ಲ. ಅದೊಂದು ಬ್ರಹ್ಮಾಂಡವೇ ಇದ್ದಂತೆ" ಎಂದು ಅವರು ಹೇಳಿದ್ದರು.
ನಟ ದರ್ಶನ್ ಜೈಲಿನೊಳಗೆ ಅಧ್ಯಾತ್ಮ ಪುಸ್ತಕ ಓದುತ್ತಿದ್ದಾರೆ. ಒಂಟಿಯಾಗಿ ಇರುತ್ತಾರೆ. ಯಾರೊಂದಿಗೂ ಮಾತನಾಡುತ್ತಿಲ್ಲ ಎಂದುಕೊಳ್ಳುವವರಿಗೆ ಅಚ್ಚರಿಯಾಗುವಂತೆ ಜೈಲಿನಲ್ಲಿ ನಟೋರಿಯಸ್ ರೌಡಿಗಳ ಜತೆ ಕುಳಿತು ಮಾತನಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಇದೇ ಸಮಯದಲ್ಲಿ ಬೇರೆ ರೌಡಿಗಳ ಜತೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿರುವ ಫೋಟೋ ಕೂಡ ವೈರಲ್ ಆಗಿತ್ತು. ಇದೇ ಸಮಯದಲ್ಲಿ ಜೈಲಿನ ಕುರಿತು ಈ ಹಿಂದೆ ಸಂಗ್ರಾಮ್ ಸಿಂಗ್ ಹೇಳಿದ ಮಾತನ್ನು ಸಾಕಷ್ಟು ಜನರು ನೆನಪಿಸಿಕೊಂಡಿದ್ದಾರೆ.
"ಜೈಲಿನಲ್ಲಿ ಎಲ್ಲಾ ಕೊಡ್ತಾರೆ. ಒಂದು ಚೇರ್ ಕೊಡ್ತಾರೆ, ಮಂಚ ಕೊಡ್ತಾರೆ. ತೆಲಗಿ ಕೂಡ ಅಲ್ಲಿದ್ದ. ಅವನಿಗೆ ಪ್ರತ್ಯೇಕ ಕೋಣೆ, ಮಂಚ, ಬಾಂಬೆ ಟೈಪ್ ಕಬೋರ್ಡ್ ಎಲ್ಲವೂ ದೊರಕಿತ್ತು. ಇದಕ್ಕೆಲ್ಲ ಯಾರು ಜವಾಬ್ದಾರರು? ಜೈಲು ಅಧಿಕಾರಿಗಳೇ ಕಾರಣ. ಒಳಗಡೆ ಏನೆಲ್ಲ ನಡೆಯುತ್ತದೆ ಎಂದು ಯಾರಿಗೂ ಗೊತ್ತಾಗುವುದಿಲ್ಲ. ಅದೊಂದು ಬ್ರಹ್ಮಾಂಡವೇ ಇದ್ದಂತೆ. ಜೈಲಿನಲ್ಲಿದ್ದಾಗ ಮುತ್ತಪ್ಪ ರೈ ಅಲ್ಲಿ ಒಂದು ಟ್ಯಾಂಕ್ ಮಾಡಿದ್ದ. ಅಲ್ಲಿ ಬಾತುಕೋಳಿ ಎಲ್ಲಾ ಸಾಕ್ತಾ ಇದ್ದ. ನಿಮಗೆ ಯಾವ ಬಗೆಯ ಲಿಕ್ಕರ್ ಬೇಕು? ಅದು ಜೈಲಿನೊಳಗೆ ಎಂಟರ್ ಆಗುತ್ತದೆ. ರೂಪ ಅವರು ಜೈಲಿಗೆ ಬಂದಾಗ ಎಡಿಜಿ ಮೇಲೆ ಕಂಪ್ಲೆಂಟ್ ಮಾಡಿದ್ರು. ಆದರೂ ಯಾರೂ ಏನೂ ಕ್ರಮ ಕೈಗೊಂಡಿಲ್ಲ" ಎಂದು ಸಂಗ್ರಾಮ್ ಸಿಂಗ್ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದರು.
ಒಟ್ಟಾರೆ ಹಣವಿದ್ದರೆ ಜೈಲಿನೊಳಗೆ ಹೇಗೆ ಬೇಕಾದರೂ ಬದುಕಬಹುದು ಎಂಬ ಸಂಗತಿಯ ಕುರಿತು ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಜೈಲಿನಲ್ಲಿ ಹಣವಿದ್ದವರಿಗೆ ಒಂದು ಕಾನೂನು, ಬಡವರಿಗೆ ಇನ್ನೊಂದು ಕಾನೂನು ಇರುವ ಕುರಿತು ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಆಕ್ರೋಶವ್ಯಕ್ತವಾಗಿದೆ.
ವಿಭಾಗ