ಕನ್ನಡ ಸುದ್ದಿ  /  ಮನರಂಜನೆ  /  Max Movie: ಗೌರಿ ಗಣೇಶ ಹಬ್ಬದಂದು ಮ್ಯಾಕ್ಸ್‌ ಸಿನಿಮಾ ರಿಲೀಸ್‌? ಕಿಚ್ಚ ಸುದೀಪ್‌ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆ

Max Movie: ಗೌರಿ ಗಣೇಶ ಹಬ್ಬದಂದು ಮ್ಯಾಕ್ಸ್‌ ಸಿನಿಮಾ ರಿಲೀಸ್‌? ಕಿಚ್ಚ ಸುದೀಪ್‌ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆ

Kiccha Sudeep Max Movie Release Date: ಮ್ಯಾಕ್ಸ್‌ ಸಿನಿಮಾವು ಸ್ವಾತಂತ್ರ್ಯ ದಿನ ಕಳೆದ ಕೆಲವು ವಾರಗಳ ಬಳಿಕ ರಿಲೀಸ್‌ ಆಗಲಿದೆ. ಬಹುಶಃ ಸೆಪ್ಟೆಂಬರ್‌ ಮೊದಲ ವಾರ ಅಂದರೆ ಗೌರಿ ಗಣೇಶ ಹಬ್ಬದಂದು ಬಿಡುಗಡೆಯಾಗುವ ಸೂಚನೆ ದೊರಕಿದೆ.

Max Movie: ಗೌರಿ ಗಣೇಶ ಹಬ್ಬದಂದು ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ರಿಲೀಸ್‌?
Max Movie: ಗೌರಿ ಗಣೇಶ ಹಬ್ಬದಂದು ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ರಿಲೀಸ್‌?

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಮುಂಬರುವ ತಿಂಗಳುಗಳಲ್ಲಿ ಸ್ಟಾರ್‌ ನಟರ ಹಲವು ಸಿನಿಮಾಗಳು ರಿಲೀಸ್‌ ಆಗಲು ಅಭಿಮಾನಿಗಳು ಕಾಯುತ್ತಿದ್ದಾರೆ. ಶಿವರಾಜ್‌ ಕುಮಾರ್‌ ಸಿನಿಮಾಗಳ ಜತೆ ಕಿಚ್ಚ ಸುದೀಪ್‌ನ ಸಿನಿಮಾದ ಬಿಡುಗಡೆಗೆ ಜನರು ಕಾತರದಿಂದ ಕಾಯುತ್ತಿದ್ದಾರೆ. ವಿಕ್ರಾಂತ ರೋಣದ ಬಳಿಕ ಕಿಚ್ಚ ಸುದೀಪ್‌ ಸಿನಿಮಾ ರಿಲೀಸ್‌ ಆಗಿಲ್ಲ. ಹೀಗಾಗಿ, ಮ್ಯಾಕ್ಸ್‌ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಇದೇ ಸಮಯದಲ್ಲಿ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದ್ದು, ಆ ಸಿನಿಮಾದ ಮೇಲೂ ಅಭಿಮಾನಿಗಳು ನಿರೀಕ್ಷೆ ಇಟ್ಟಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ರಿಷಬ್‌ ಶೆಟ್ಟಿಯ ಕಾಂತಾರ ಚಾಪ್ಟರ್‌ 1 ಬಿಡುಗಡೆಗೆ ದೇಶ-ವಿದೇಶದ ಸಿನಿಮಾ ಪ್ರೇಮಿಗಳು ಕಾಯುತ್ತಿದ್ದಾರೆ.

ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾದ ಕುರಿತು ಕಳೆದ ಒಂದು ವರ್ಷದಿಂದಲೇ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಶೀಘ್ರದಲ್ಲಿ ಬಿಡುಗಡೆಯಾಗುವ ಕನ್ನಡ ಸಿನಿಮಾಗಳ ಲಿಸ್ಟ್‌ನಲ್ಲಿ ಮ್ಯಾಕ್ಸ್‌ ಸಿನಿಮಾವನ್ನು ಇಡಬಹುದಾಗಿದೆ.

ಜುಲೈ 16ರಂದು ಮ್ಯಾಕ್ಸ್‌ ಅಪ್‌ಡೇಟ್‌

ಸೋಷಿಯಲ್‌ ಮೀಡಿಯಾದಲ್ಲಿ ಕಿಚ್ಚನ ಅಭಿಮಾನಿಗಳು ಮ್ಯಾಕ್ಸ್‌ ಕುರಿತು ಚರ್ಚೆ ಆರಂಭಿಸಿದ್ದಾರೆ. ಇದೇ ಸಮಯದಲ್ಲಿ ಜುಲೈ 16ರಂದು ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾದ ಕುರಿತು ಪ್ರಮುಖ ಅಪ್‌ಡೇಟ್‌ ದೊರಕುವ ಸೂಚನೆ ದೊರಕಿದೆ. ಜುಲೈ 16ರಂದು ಮ್ಯಾಕ್ಸ್‌ ಹಾಡು ಬಿಡುಗಡೆಯಾಗಲಿದೆ ಎಂದು ಈ ಹಿಂದೆ ಚಿತ್ರತಂಡದ ಮೂಲಗಳು ಹಿಂಟ್‌ ನೀಡಿದ್ದವು. ಆದರೆ, ಇದೀಗ ಬಲ್ಲ ಮೂಲಗಳ ಪ್ರಕಾರ ಅಂದು ಬಿಡುಗಡೆಯಾಗುವುದು ಸಾಂಗ್‌ ಅಲ್ಲ, ಟೀಸರ್‌ ಎನ್ನುವ ಮಾಹಿತಿ ದೊರಕಿದೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡದೆ ಇದ್ದರೂ ಕಿಚ್ಚನ ಅಭಿಮಾನಿಗಳು ಟೀಸರ್‌ ನೋಡಲು ರೆಡಿಯಾಗುವುದು ಉತ್ತಮ.

ಟ್ರೆಂಡಿಂಗ್​ ಸುದ್ದಿ

ಆಗಸ್ಟ್‌ 15ರಂದು ಬಿಡುಗಡೆಯಾಗದು ಮ್ಯಾಕ್ಸ್‌

ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾವು ಇದೇ ಆಗಸ್ಟ್‌ 15ರಂದು ಬಿಡುಗಡೆಯಾಗುವ ಸೂಚನೆ ಇತ್ತು. ಆದರೆ, ಈ ದಿನಾಂಕದಂದು ಇನ್ನೂ ಕೆಲವು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ವಿಶೇಷವಾಗಿ ಕಿಚ್ಚ ಸುದೀಪ್‌ಗೆ ಆತ್ಮೀಯರಾದವರ ಸಿನಿಮಾ ಬಿಡುಗಡೆಯಾಗುತ್ತಿದೆ. ಕೆಆರ್‌ಜಿ ಸ್ಟುಡಿಯೋ ನಿರ್ಮಾಣದ ಪೌಡರ್‌ ಎಂಬ ಸಿನಿಮಾ ರಿಲೀಸ್‌ ಆಗುತ್ತಿದೆ. ಧನ್ಯ ರಾಮ್‌ ಕುಮಾರ್‌, ಶರ್ಮಿಲಾ ಮಾಂಡ್ರೆ, ದಿಗಂತ್‌, ರಂಗಾಯಣ ರಘು, ಅಚ್ಯುತ್‌ ಕುಮಾರ್‌ ಮುಂತಾದವರು ಪೌಡರ್‌ ಸಿನಿಮಾದಲ್ಲಿ ನಟಿಸಿದ್ದಾರೆ. ಇದಲ್ಲದೆ ಇಂದ್ರಜಿತ್‌ ಲಂಕೇಶ್‌ ಮಗನ ಗೌರಿ ಸಿನಿಮಾವೂ ಆಗಸ್ಟ್‌ 15ರಂದು ಬಿಡುಗಡೆಯಾಗುತ್ತಿದೆ. ಸುದೀಪ್‌ ಮತ್ತು ಇಂದ್ರಜಿತ್‌ ಲಂಕೇಶ್‌ ಅವರು ಬಾಲ್ಯ ಸ್ನೇಹಿತರು. ಹೀಗಾಗಿ, ಆಗಸ್ಟ್‌ 15ರಂದು ಮ್ಯಾಕ್ಸ್‌ ಬಿಡುಗಡೆಯಾಗದು.

ಸದ್ಯ ನಮಗೆ ಮೂಲಗಳಿಂದ ದೊರಕಿರುವ ಮಾಹಿತಿ ಪ್ರಕಾರ ಮ್ಯಾಕ್ಸ್‌ ಸಿನಿಮಾವು ಸ್ವಾತಂತ್ರ್ಯ ದಿನ ಕಳೆದ ಕೆಲವು ವಾರಗಳ ಬಳಿಕ ರಿಲೀಸ್‌ ಆಗಲಿದೆ. ಬಹುಶಃ ಸೆಪ್ಟೆಂಬರ್‌ ಮೊದಲ ವಾರ ಬಿಡುಗಡೆಯಾಗಲಿದೆ. ಕಿಚ್ಚ ಸುದೀಪ್‌ ಹುಟ್ಟುಹಬ್ಬ ಇರುವುದು ಸೆಪ್ಟೆಂಬರ್‌ 2ರಂದು. ಅಂದು ಸೋಮವಾರವಾಗಿರುವ ಕಾರಣ ಬಿಡುಗಡೆಯ ದಿನವಲ್ಲ. ಆ ವಾರದಲ್ಲಿ ಶುಕ್ರವಾರ ಬರುವುದು ಸೆಪ್ಟೆಂಬರ್‌ 6ರಂದು. ಅದು ಕಿಚ್ಚನ ಮ್ಯಾಕ್ಸ್‌ ಸಿನಿಮಾ ಬಿಡುಗಡೆಗೆ ಪ್ರಶಸ್ತ್ಯ ದಿನದಂತೆ ಕಾಣಿಸುತ್ತದೆ. ಏಕೆಂದರೆ, ಸೆಪ್ಟೆಂಬರ್‌ 6ರಂದು ಗೌರಿ ಹಬ್ಬವಿದೆ. ಅದರ ಮರುದಿನ ಗಣೇಶ ಹಬ್ಬವಿದೆ. ಚೌತಿಗೆ ಮ್ಯಾಕ್ಸ್‌ ಬರುವುದು ಪಕ್ಕ ಎನ್ನಲಾಗುತ್ತದೆ. ಈ ಕುರಿತು ಜುಲೈ 16ರಂದು ಚಿತ್ರತಂಡ ಅಧಿಕೃತವಾಗಿ ಅಪ್‌ಡೇಟ್‌ ನೀಡುವುದೇ? ಕಾದು ನೋಡಬೇಕಿದೆ.