ಕನ್ನಡ ಸುದ್ದಿ  /  ಮನರಂಜನೆ  /  Darshan Arrest: ಯಾರಿದು ಪವಿತ್ರಾ ಗೌಡ? ದರ್ಶನ್‌ ಬಂಧನ ಸಮಯದಲ್ಲಿ ಮುನ್ನೆಲೆಗೆ ಬಂತು ಚಾಲೆಂಜಿಂಗ್‌ ಸ್ಟಾರ್‌ ಗೆಳತಿ ಹೆಸರು

Darshan Arrest: ಯಾರಿದು ಪವಿತ್ರಾ ಗೌಡ? ದರ್ಶನ್‌ ಬಂಧನ ಸಮಯದಲ್ಲಿ ಮುನ್ನೆಲೆಗೆ ಬಂತು ಚಾಲೆಂಜಿಂಗ್‌ ಸ್ಟಾರ್‌ ಗೆಳತಿ ಹೆಸರು

ಬೆಂಗಳೂರಿನಲ್ಲಿ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಪವಿತ್ರಾ ಗೌಡ ಪೊಲೀಸ್‌ ವಶದಲ್ಲಿದ್ದಾರೆ. ದರ್ಶನ್‌ ಗೆಳತಿ ಪವಿತ್ರಾ ಗೌಡ ಯಾರು? ಏನಿದು ಘಟನೆ? ಇತ್ಯಾದಿ ವಿವರ ಇಲ್ಲಿದೆ.

ಯಾರಿದು ಪವಿತ್ರಾ ಗೌಡ? ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌  ಗೆಳತಿ
ಯಾರಿದು ಪವಿತ್ರಾ ಗೌಡ? ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಗೆಳತಿ (instagram\ pavithra_gowda_7 )

ಬೆಂಗಳೂರು: ಕಾಟೇರ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಮತ್ತೆ ಭರವಸೆ ಮೂಡಿಸಿದ್ದ ನಟ ದರ್ಶನ್‌ ಇದೀಗ ಮತ್ತೆ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಈ ಬಾರಿ ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಪವಿತ್ರಾ ಗೌಡರಿಗೆ ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಸ್ವಾಮಿ ಎಂಬ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಪೊಲೀಸರು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ರನ್ನು ಇಂದು ಬಂಧಿಸಿದ್ದಾರೆ. ನಟಿ ಪವಿತ್ರಾ ಗೌಡ ವಿಷಯದಲ್ಲಿ ಸಾಕಷ್ಟು ಬಾರಿ ದರ್ಶನ್‌ ಸುದ್ದಿಯಲ್ಲಿದ್ದರು. ಇದೀಗ ಈಕೆಗೆ ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿಯನ್ನೇ ಸಿನಿಮಾ ಶೈಲಿಯಲ್ಲಿ ಕೊಲೆ ಮಾಡಿದ ಆರೋಪ ದರ್ಶನ್‌ ಮೇಲಿದೆ. ಯಾರು ಪವಿತ್ರಾ ಗೌಡ? ನಟ ದರ್ಶನ್‌ಗೂ ಈಕೆಗೂ ಏನು ಸಂಬಂಧ? ಈಕೆಗೆ ಸಂಬಂಧಪಟ್ಟಂತೆ ದರ್ಶನ್‌ ಈ ಹಿಂದೆ ಸುದ್ದಿಯಲ್ಲಿದ್ದ ಘಟನೆಗಳು ಸೇರಿದಂತೆ ಅನೇಕ ವಿವರಗಳು ಇಲ್ಲಿವೆ.

ಟ್ರೆಂಡಿಂಗ್​ ಸುದ್ದಿ

ದರ್ಶನ್‌ ಬಂಧನ, ಪವಿತ್ರಾ ಗೌಡ ಪಾತ್ರವೇನು?

ಸದ್ಯ ಪೊಲೀಸರು ಬೆಂಗಳೂರಿನ ಅಪೊಲೋ ಆಸ್ಪತ್ರೆಯ ಉದ್ಯೋಗಿ ರೇಣುಕಾಸ್ವಾಮಿಯ ಕೊಲೆ ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ. ರೇಣುಕಾಸ್ವಾಮಿ ಎಂಬಾತ ದರ್ಶನ್‌ ಗೆಳತಿ ಪವಿತ್ರಾ ಗೌಡರಿಗೆ ಅಶ್ಲೀಲ ಸಂದೇಶ, ಚಿತ್ರಗಳನ್ನು ಕಳುಹಿಸಿದ್ದ ಎನ್ನಲಾಗಿದೆ. ಈ ವಿಚಾರ ದರ್ಶನ್‌ ಗಮನಕ್ಕೆ ಬಂದ ಬಳಿಕ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಶೆಡ್‌ವೊಂದರಲ್ಲಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.

ರೇಣುಕಾಸ್ವಾಮಿಯನ್ನು ಒಂದು ವಾರಗಳ ಕಾಲ ಚಿತ್ರದುರ್ಗ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ, ರಾಘವೇಂದ್ರ ಟ್ರ್ಯಾಕ್‌ ಮಾಡಿದ್ದರು. ಬಳಿಕ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಇದಾದ ಬಳಿಕ ಆರ್ ಆರ್ ನಗರದ ವಾಹನ ಸೀಜ್‌ ಮಾಡಿ ಇರುವ ಶೆಡ್‌ನಲ್ಲಿ ಹಲ್ಲೆ ನಡೆಸಿದ್ದಾರೆ. ರೇಣುಕಾಸ್ವಾಮಿ ಸ್ಥಳದಲ್ಲಿಯೇ ಮೃತಪಟ್ಟಿದ್ದ ಎಂದು ವರದಿಗಳು ತಿಳಿಸಿವೆ. ಬಳಿಕ ಶವವನ್ನು ಮೋರಿಗೆ ಎಸೆಯಲಾಗಿತ್ತು. ದರ್ಶನ್‌ ಕೂಡ ರೇಣುಕಾಸ್ವಾಮಿ ತಲೆಗೆ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್‌ ಬಂಧನವಾಗಿದೆ. ಪವಿತ್ರಾ ಗೌಡರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ವಿವರ ಪೊಲೀಸ್‌ ತನಿಖೆಯಿಂದ ತಿಳಿದುಬರಲಿದೆ.

ಯಾರಿದು ಪವಿತ್ರಾ ಗೌಡ?

ಪವಿತ್ರಾ ಗೌಡ ಅವರು ಸ್ಯಾಂಡಲ್‌ವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರೀತಿ ಕಿತಾಬು ಇವರ ಜನಪ್ರಿಯ ಸಿನಿಮಾ. ಬತಾಸ್‌, ಛತ್ರಿಗಳು ಸಾರ್‌ ಛತ್ರಿಗಳು ಚಿತ್ರದಲ್ಲಿ ನಟಿಸಿದ್ದಾರೆ. ಆದರೆ, ಇವರು ದರ್ಶನ್‌ ಜತೆಗಿನ ಸಂಬಂಧದ ವಿಷಯದಲ್ಲಿ ಹೆಚ್ಚು ಸುದ್ದಿಯಲ್ಲಿದ್ದರು. ಕಾಟೇರ ಯಶಸ್ಸಿನ ಸಂದರ್ಭದಲ್ಲಿ "ನನ್ನ ದರ್ಶನ್‌ ಸಂಬಂಧಕ್ಕೆ 10 ವರ್ಷಗಳು" ಎಂದು ಪೋಸ್ಟ್‌ ಮಾಡಿದ್ದರು. ಈ ವಿಷಯಕ್ಕೆ ಸಂಬಂಧಪಟ್ಟಂತೆ ದರ್ಶನ್‌ ಪತ್ನಿ ವಿಜಯ ಲಕ್ಷ್ಮಿ ಮತ್ತು ಪವಿತ್ರಾ ಗೌಡ ನಡುವೆ ಜಗಳವೂ ಆಗಿದೆ.

ಸಿನಿಮಾ ಕಾರ್ಯಕ್ರಮವೊಂದರಲ್ಲಿ ಕಾಮನ್‌ ಫ್ರೆಂಡ್‌ವೊಬ್ಬರ ನೆರವಿನಿಂದ ದರ್ಶನ್‌ ಮತ್ತು ಪವಿತ್ರಾ ಗೌಡ ಪರಿಚಯವಾಗಿತ್ತು ಎಂದು ಹೇಳಲಾಗಿದೆ. ಹಿಂದೊಮ್ಮೆ ಪವಿತ್ರಾ ಗೌಡ ದರ್ಶನ್‌ ತಾಯಿ ಮತ್ತು ಸಹೋದರಿ ಜತೆಗಿನ ಚಿತ್ರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದು ಟೀಕೆಗೆ ಒಳಗಾಗಿತ್ತು. ದರ್ಶನ್‌ ಶೂಟಿಂಗ್‌ ಸೆಟ್‌ನಲ್ಲೂ ಪವಿತ್ರಾ ಗೌಡ ಆಗಾಗ ಕಾಣಿಸುತ್ತಿದ್ದರು. ಮೈಸೂರಿನ ಹೋಟೆಲ್‌ ಗಲಾಟೆ ವಿಷಯದಲ್ಲೂ ಪವಿತ್ರಾ ಗೌಡ ಹೆಸರು ಕೇಳಿಬಂದಿತ್ತು. ಇತ್ತೀಚೆಗೆ ಪವಿತ್ರಾ ಗೌಡ ಮತ್ತು ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಸೋಷಿಯಲ್‌ ಮೀಡಿಯಾದಲ್ಲಿ ಬಹಿರಂಗವಾಗಿ ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿದ್ದರು.

ಟಿ20 ವರ್ಲ್ಡ್‌ಕಪ್ 2024