ಕನ್ನಡ ಸುದ್ದಿ  /  ಮನರಂಜನೆ  /  ಡಿವೋರ್ಸ್‌ಗೆ ಕಾರಣವಾದ ಹಲವು ಅಂಶಗಳ ಮಾಹಿತಿ ನೀಡಿದ ಚಂದನ್‌ ಶೆಟ್ಟಿ- ನಿವೇದಿತಾ ಗೌಡ; ಆ 3 ವಿಷಯಗಳು ಹೊಂದಾಣಿಕೆಯಾಗಲಿಲ್ಲ

ಡಿವೋರ್ಸ್‌ಗೆ ಕಾರಣವಾದ ಹಲವು ಅಂಶಗಳ ಮಾಹಿತಿ ನೀಡಿದ ಚಂದನ್‌ ಶೆಟ್ಟಿ- ನಿವೇದಿತಾ ಗೌಡ; ಆ 3 ವಿಷಯಗಳು ಹೊಂದಾಣಿಕೆಯಾಗಲಿಲ್ಲ

Why Chandan Shetty Niveditha Gowda Divorced?: ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್‌ ನೀಡಲು ಕಾರಣವಾದ ಅಂಶಗಳನ್ನು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಮುಖ್ಯವಾಗಿ ಇಬ್ಬರೂ ಬೆಳೆದ ರೀತಿ, ಆಲೋಚನಾ ಶೈಲಿ, ಜೀವನಶೈಲಿಯಲ್ಲಿ ಹೊಂದಾಣಿಕೆಯಾಗದೆ ಇದ್ದದ್ದು ಡಿವೋರ್ಸ್‌ಗೆ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.

ಡಿವೋರ್ಸ್‌ಗೆ ಕಾರಣವಾದ ಹಲವು ಅಂಶಗಳ ಮಾಹಿತಿ ನೀಡಿದ ಚಂದನ್‌ ಶೆಟ್ಟಿ- ನಿವೇದಿತಾ ಗೌಡ
ಡಿವೋರ್ಸ್‌ಗೆ ಕಾರಣವಾದ ಹಲವು ಅಂಶಗಳ ಮಾಹಿತಿ ನೀಡಿದ ಚಂದನ್‌ ಶೆಟ್ಟಿ- ನಿವೇದಿತಾ ಗೌಡ

ಬೆಂಗಳೂರು: ಇತ್ತೀಚೆಗೆ ಬೆಂಗಳೂರು ಕೌಟುಂಬಿಕ ನ್ಯಾಯಾಲಯದಿಂದ ವಿವಾಹ ವಿಚ್ಚೇದನ ಪಡೆದ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಪರಸ್ಪರ ಡಿವೋರ್ಸ್‌ ನೀಡಲು ಕಾರಣವಾದ ಅಂಶಗಳನ್ನು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಮುಖ್ಯವಾಗಿ ಇಬ್ಬರೂ ಬೆಳೆದ ರೀತಿ, ಆಲೋಚನಾ ಶೈಲಿ, ಜೀವನಶೈಲಿಯಲ್ಲಿ ಹೊಂದಾಣಿಕೆಯಾಗದೆ ಇದ್ದದ್ದು ಡಿವೋರ್ಸ್‌ಗೆ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ. ಬೆಳೆದ ರೀತಿ, ಆಲೋಚನಾ ಶೈಲಿ, ಜೀವನಶೈಲಿ ಎಂಬ ಮೂರು ಅಂಶಗಳೇ ಡಿವೋರ್ಸ್‌ಗೆ ಕಾರಣವಾದ ಪ್ರಮುಖ ಅಂಶಗಳು ಎಂದು ಹೇಳಿದ್ದಾರೆ. ಈ ಪತ್ರಿಕಾಗೋಷ್ಠಿಯಲ್ಲಿ ಹಲವು ಪ್ರಶ್ನೆಗಳು ಎದುರಾಗಿದ್ದು, ಎಲ್ಲದ್ದಕ್ಕೂ ಇಬ್ಬರು ಸಾವಧಾನವಾಗಿ ಉತ್ತರಿಸಿದ್ದಾರೆ. ಇದೇ ಸಮಯದಲ್ಲಿ ಇಬ್ಬರು ಜತೆಯಾಗಿ ಮಾಡುತ್ತಿರುವ ಸಿನಿಮಾ, ಸೋಷಿಯಲ್‌ ಮೀಡಿಯಾದಲ್ಲಿ ಕೇಳಿ ಬರುತ್ತಿರುವ ವದಂತಿಗಳ ಕುರಿತಾದ ವಿಚಾರಗಳ ಕುರಿತೂ ಸ್ಪಷ್ಟನೆ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

"ನಮಗೆ ಇದೇ ಜೂನ್‌ 7ನೇ ದಿನಾಂಕದಂದು ಫ್ಯಾಮಿಲಿ ಕೋರ್ಟ್‌ ವಿವಾಹ ವಿಚ್ಛೇದನ ಮಂಜೂರು ಮಾಡಿದೆ. ನಾವು ಕಾನೂನಿನ ಪ್ರಕಾರವಾಗಿ ಈ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದೇವೆ. ತುಂಬಾ ಚೆನ್ನಾಗಿದ್ರಲ್ಲ, ಯಾಕೆ ದೂರಾದ್ರಿ? ಎಂಬ ಪ್ರಶ್ನೆ ಎಲ್ಲರಲ್ಲಿಯೂ ಕಾಡುತ್ತಿರಬಹುದು. ಸೋಷಿಯಲ್‌ ಮೀಡಿಯಾದಲ್ಲಿ ಈಗಾಗಲೇ ಬೇಡದ ಸುದ್ದಿಗಳನ್ನು ಸೃಷ್ಟಿ ಮಾಡಿ ಹರಿಯಬಿಡುತ್ತಿದ್ದಾರೆ. ಜನರಿಗೆ ಸತ್ಯ ಏನೆಂದು ತಿಳಿಯಲಿ ಎಂದು ಈ ಪತ್ರಿಕಾಗೋಷ್ಠಿ ಮಾಡಿದ್ದೇವೆ" ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ.

ಡಿವೋರ್ಸ್‌ಗೆ ಕಾರಣವಾದ 3 ಅಂಶ

ಕೆಲವು ವರ್ಷಗಳಿಂದ ನಾನು ಬೆಳೆದಂತಹ ರೀತಿ, ನನ್ನ ಆಲೋಚನಾ ಶೈಲಿ, ನನ್ನ ಜೀವನಶೈಲಿ ಒಂದು ರೀತಿ ಇದೆ. ನಿವೇದಿತಾ ಅವರ ಜೀವನ, ಆಲೋಚನಾ ಶೈಲಿ, ಬೆಳೆದಂತಹ ರೀತಿ ಬೇರೆ ರೀತಿಯಾಗಿದೆ. ಜೀವನ ಎಂದರೆ ಏನೆಂದು ನಾನು ಅರ್ಥ ಮಾಡಿಕೊಂಡಿರುವುದು, ನಿವೇದಿತಾ ಅವರು ಅರ್ಥ ಮಾಡಿಕೊಂಡಿರುವುದು ಬೇರೆ ಬೇರೆ ರೀತಿಯಾಗಿತ್ತು. ಅದು ಒಂದಕ್ಕೊಂದು ಒಂದು ಹೊಂದಾಣಿಕೆಯಾಗಲೇ ಇಲ್ಲ. ಜೀವನಶೈಲಿ, ಆಲೋಚನಾ ಶೈಲಿ, ಬೆಳೆದಂತಹ ರೀತಿ ಎಂಬ 3 ಅಂಶಗಳು ಡಿವೋರ್ಸ್‌ಗೆ ಪ್ರಮುಖ ಕಾರಣವಾಯಿತು ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ.

ತುಂಬಾ ವರ್ಷಗಳಿಂದ ಈ ರೀತಿ ಹೊಂದಿಕೊಂಡು ಹೋಗಲು ಪ್ರಯತ್ನ ಪಟ್ಟೆವು. ಆಗಲಿಲ್ಲ. ಪ್ರತಿದಿನವೂ ಈ ರೀತಿಯಾದ ಮನಸ್ತಾಪಗಳು ಬರುತ್ತಿದ್ದಾಗ ಎಲ್ಲೋ ಒಂದು ಕಡೆ ಅನಿಸಿತ್ತು. ನನ್ನ ಜೀವನಶೈಲಿ ಬೇರೆ ಇದೆ, ಇವರ ಜೀವನಶೈಲಿ ಬೇರೆ ಇದೆ. ಒಬ್ಬರಿಗೊಬ್ಬರು ಗೌರವ ನೀಡಲೇಬೇಕು. ಯಾಕೆಂದರೆ ನಾವೆಲ್ಲರೂ ಇಂಡಿವ್ಯೂಜುವಲ್‌ ವ್ಯಕ್ತಿಗಳು. ಈ ಭೂಮಿಯಲ್ಲಿ ನಮಗೆ ಎಷ್ಟು ಹಕ್ಕು ಇದೆಯೋ ಅಷ್ಟು ಹಕ್ಕು ಅವರಿಗೂ ಇದೆ. ಯಾರೂ ಯಾರ ಮೇಲೂ ಯಾವುದೇ ವಿಷಯದ ಕುರಿತು ಬಲವಂತ ಮಾಡಬಾರದು. ಮಾನಸಿಕವಾಗಿ ನೋವು ಅನುಭವಿಸಿಕೊಂಡು ಒಟ್ಟಿಗೆ ಇರಲು ನಮ್ಮಿಬ್ಬರಿಗೆ ಸರಿ ಬರಲಿಲ್ಲ. ಅದಕ್ಕೆ ನಾವಿಬ್ಬರು ದೂರವಾಗಲು ಬಯಸಿದೆವು ಎಂದು ಚಂದನ್‌ ಶೆಟ್ಟಿ ಮಾಹಿತಿ ನೀಡಿದ್ದಾರೆ.

ನಾವಿಬ್ಬರು ಒಮ್ಮತದಿಂದ, ಇಬ್ಬರೂ ಒಟ್ಟಾಗಿ ನಿರ್ಧರಿಸಿಕೊಂಡು, ನಾವಿಬ್ಬರೂ ಖುಷಿಯಾಗಿ ಇರಬೇಕು ಅಂದ್ರೆ ಡಿವೋರ್ಸ್‌ ಪಡೆಯಬೇಕು ಎಂದು ಒಟ್ಟಾಗಿ ತೀರ್ಮಾನ ಮಾಡಿದೆವು. ನಮ್ಮಿಬ್ಬರ ನಡುವೆ ಯಾವುದೇ ದ್ವೇಷ, ವೈಮನಸ್ಸು ಯಾವುದೂ ಇಲ್ಲ. ಅವರ ಬೆಳವಣಿಗೆ ಕುರಿತು ನನಗೆ ಖುಷಿ ಇದೆ. ನನಗೂ ಅವರು ಸಪೋರ್ಟ್‌ ನೀಡುತ್ತಾರೆ. ಇಬ್ಬರೂ ಒಟ್ಟಾಗಿ ಒಪ್ಪಿಕೊಂಡು ಈ ನಿರ್ಧಾರಕ್ಕೆ ಬಂದಿದ್ದೇವೆ. ಎರಡು ದಿನ ಯಾರ ಕಾಲ್‌ಗೂ ಸಿಗಲಿಲ್ಲ. ಮಾತನಾಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಇವಾಗ ಗಾಳಿಮಾತುಗಳು ಹೆಚ್ಚಾಗಿ, ಆ ಗಾಳಿ ಮಾತು ಎಲ್ಲರ ಮನಸ್ಸಲ್ಲಿ ಕುಳಿತುಕೊಳ್ಳುವುದು ಬೇಡವೆಂದು ಇಲ್ಲಿಗೆ ಬಂದಿದ್ದೇವೆ. ಸತ್ಯಾ ಸತ್ಯತೆ ಏನಿದೆಯೋ ಅದನ್ನು ನಿಮ್ಮ ಮುಂದೆ ಇಡಲು ಬಂದಿದ್ದೇವೆ ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ.

ಈ ಮುಂದಿನ ಸುದ್ದಿಗಳನ್ನೂ ಓದಿ

ಟಿ20 ವರ್ಲ್ಡ್‌ಕಪ್ 2024