Kishore: ಬಾಡಿಗೆ ಜನರನ್ನು ಕರೆತಂದು ರ್‍ಯಾಲಿ ಮಾಡಿದರೆ ದೇಶದ ಗೌರವ ಹೆಚ್ಚಾಗಲ್ಲ, ಕುಸ್ತಿಪಟುಗಳ ಕಡೆಗೂ ಗಮನಹರಿಸಿ; ಕಿಶೋರ್‌ ಕಿಡಿ
ಕನ್ನಡ ಸುದ್ದಿ  /  ಮನರಂಜನೆ  /  Kishore: ಬಾಡಿಗೆ ಜನರನ್ನು ಕರೆತಂದು ರ್‍ಯಾಲಿ ಮಾಡಿದರೆ ದೇಶದ ಗೌರವ ಹೆಚ್ಚಾಗಲ್ಲ, ಕುಸ್ತಿಪಟುಗಳ ಕಡೆಗೂ ಗಮನಹರಿಸಿ; ಕಿಶೋರ್‌ ಕಿಡಿ

Kishore: ಬಾಡಿಗೆ ಜನರನ್ನು ಕರೆತಂದು ರ್‍ಯಾಲಿ ಮಾಡಿದರೆ ದೇಶದ ಗೌರವ ಹೆಚ್ಚಾಗಲ್ಲ, ಕುಸ್ತಿಪಟುಗಳ ಕಡೆಗೂ ಗಮನಹರಿಸಿ; ಕಿಶೋರ್‌ ಕಿಡಿ

ಅಂದು ನಮ್ಮ ಕುಸ್ತಿ ಪಟುಗಳು ಗೆದ್ದಾಗ ಭಾರತ ಗೆದ್ದದ್ದು ನಿಜವಾದರೆ, ಇಂದು ಅವರ ಮೇಲೆ ಅತ್ಯಾಚಾರವಾದಾಗ ಭಾರತದ ಮೇಲೆ ಅತ್ಯಾಚಾರವಾಗುತ್ತದೆ. ಇಂದು ಅವರು ಸೋತರೆ ಭಾರತ ಸೋಲುತ್ತದೆ ಎಂದು ಕುಸ್ತಿಪಟುಗಳ ಬೆಂಬಕ್ಕೆ ನಿಂತಿದ್ದಾರೆ ನಟ ಕಿಶೋರ್.

ಬಾಡಿಗೆ ಜನರನ್ನು ಕರೆತಂದು ರ್‍ಯಾಲಿ ಮಾಡಿದರೆ ದೇಶದ ಗೌರವ ಹೆಚ್ಚಾಗಲ್ಲ, ಕುಸ್ತಿಪಟುಗಳ ಕಡೆಗೂ ಗಮನ ಹರಿಸಿ; ಕಿಶೋರ್‌
ಬಾಡಿಗೆ ಜನರನ್ನು ಕರೆತಂದು ರ್‍ಯಾಲಿ ಮಾಡಿದರೆ ದೇಶದ ಗೌರವ ಹೆಚ್ಚಾಗಲ್ಲ, ಕುಸ್ತಿಪಟುಗಳ ಕಡೆಗೂ ಗಮನ ಹರಿಸಿ; ಕಿಶೋರ್‌

Kishore: ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಆರೋಪ ಹೊತ್ತಿರುವ ಭಾರತ ಕುಸ್ತಿ ಫೆಡರೇಷನ್​ (Wrestling Federation of India) ಮುಖ್ಯಸ್ಥ ಬ್ರಿಜ್​ಭೂಷಣ್​ ಸಿಂಗ್ (Brij Bhushan Sharan Singh) ಬಂಧನಕ್ಕೆ ಒತ್ತಾಯಿಸಿ ಭಾರತದ "ಚಿನ್ನ"ದಂಥ ಕುಸ್ತಿ ಕ್ರೀಡಾಪಟುಗಳು (Wrestlers Protest) ದೆಹಲಿಯ ಜಂತರ್​ಮಂತರ್​​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ ಒಂದು ತಿಂಗಳಿಂದ ಈ ಧರಣಿ ನಡೆಸುತ್ತಿರುವ ಕುಸ್ತಿಪಟುಗಳಿಗೆ ದೇಶಾದ್ಯಂತ ವ್ಯಾಪಕ ಬೆಂಬಲ ಸಿಗುತ್ತಿದೆ. ಈ ಪ್ರತಿಭಟನೆ ಬಗ್ಗೆ ಈ ವರೆಗೂ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿಲ್ಲ ಎಂಬುದು ವಿಪರ್ಯಾಸ. ಈ ನಡುವೆ, ಭಾರತಕ್ಕೆ ಚಿನ್ನ ಹೊತ್ತು ತಂದ ಈ ಯುವ ಕ್ರೀಡಾಪಟುಗಳ ಬೆನ್ನಿಗೆ ಇಡೀ ದೇಶವೇ ನಿಂತಿದೆ. ಈ ನಡುವೆ ಸಿನಿಮಾ ಕಲಾವಿದರೂ ಧ್ವನಿಗೂಡಿಸಿದ್ದಾರೆ.

ಇದನ್ನೂ ಓದಿ: ಏಷ್ಯಾ , ಇಂಟರ್‌ ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್‌ಗೆ ಸೇರಿದ ವಿಷ್ಣುವರ್ಧನ್‌ ಕಟೌಟ್‌ ಜಾತ್ರೆ; ವೀರಕಪುತ್ರ ಶ್ರೀನಿವಾಸ್‌

ಸಿನಿಮಾ ಮಾತ್ರವಲ್ಲದೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಬಗ್ಗೆಯೂ ಸದಾ ಒಂದಿಲ್ಲೊಂದು ಹೇಳಿಕೆ ಮೂಲಕ ಸುದ್ದಿಯಲ್ಲಿರುವ ನಟ ಕಿಶೋರ್‌, ಇದೀಗ ಕುಸ್ತಿಪಟುಗಳನ್ನು ಕೇಂದ್ರ ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಶೇರ್‌ ಮಾಡಿಕೊಂಡಿರುವ ಕಿಶೋರ್‌, ದೇಶದ ಗೌರವ ಹೆಚ್ಚಾಗುವುದು ಬೇರೆ ದೇಶದಲ್ಲೂ ನಮ್ಮ ಹಣ ಸುರಿದು ಜನರನ್ನು ಬಾಡಿಗೆಗೆ ತಂದು ಮಾಡುವ ರಾಜಕೀಯ ರ್ಯಾಲಿಯ ನಾಟಕಗಳಿಂದಲ್ಲ ಎಂದು ಕೊಂಚ ಗರಂ ಆಗಿಯೇ ಮಾತನಾಡಿದ್ದಾರೆ.

ದೇಶದ ಗೌರವ ಹೆಚ್ಚಾಗೋದು ಹೇಗೆ?

"ಅಂದು ನಮ್ಮ ಕುಸ್ತಿ ಪಟುಗಳು ಗೆದ್ದಾಗ ಭಾರತ ಗೆದ್ದದ್ದು ನಿಜವಾದರೆ, ಇಂದು ಅವರ ಮೇಲೆ ಅತ್ಯಾಚಾರವಾದಾಗ ಭಾರತದ ಮೇಲೆ ಅತ್ಯಾಚಾರವಾಗುತ್ತದೆ. ಇಂದು ಅವರು ಸೋತರೆ ಭಾರತ ಸೋಲುತ್ತದೆ. ದೇಶದ ಗೌರವ ಹೆಚ್ಚಾಗುವುದು ಬೇರೆ ದೇಶದಲ್ಲೂ ನಮ್ಮ ಹಣ ಸುರಿದು ಜನರನ್ನು ಬಾಡಿಗೆಗೆ ತಂದು ಮಾಡುವ ರಾಜಕೀಯ ರ್ಯಾಲಿಯ ನಾಟಕಗಳಿಂದಲ್ಲ. ಜೀವ ತೇಯ್ದು ಬೆವರು ಹರಿಸಿ ಈ ಪಟುಗಳು ತಂದ ಮೆಡಲ್ಲುಗಳಿಂದ" ಎಂದು ಕೇಂದ್ರ ಸರ್ಕಾರದ ನಡೆಯನ್ನು ನಟ ಕಿಶೋರ್‌ ಪ್ರಶ್ನಿಸಿದ್ದಾರೆ.

ಸಚಿನ್‌ ಮನೆ ಮುಂದೆ ಬ್ಯಾನರ್

ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ಮಾತನಾಡದ ದಿಗ್ಗಜ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್​​ ಅವರನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನಿಸಿದ್ದರು. ಮುಂಬೈನಲ್ಲಿರುವ ಸಚಿನ್ ಅವರ ನಿವಾಸದ ಹೊರಗೆ ಪೋಸ್ಟರ್​​​ವೊಂದನ್ನು ಹಾಕಲಾಗಿತ್ತು. ಮುಂಬೈ ಪೊಲೀಸರು ಶೀಘ್ರ ಕ್ರಮ ಕೈಗೊಂಡು ಪೋಸ್ಟರ್ ತೆಗೆದಿದ್ದಾರೆ.

ಬ್ಯಾನರ್‌ನಲ್ಲಿ, “ಸಚಿನ್​ ತೆಂಡೂಲ್ಕರ್​ ಅವರೇ ನೀವು ಭಾರತ ರತ್ನ, ಮಾಜಿ ಸಂಸದ ಮತ್ತು ಕ್ರಿಕೆಟ್​ನಲ್ಲಿ ದಂತಕಥೆ. ಆದರೆ ನೀವು ಕುಸ್ತಿಪಟುಗಳ ಮೇಲಿನ ಲೈಂಗಿಕ ಕಿರುಕುಳದ ಆರೋಪದ ಬಗ್ಗೆ ಏಕೆ ಮೌನವಾಗಿದ್ದೀರಿ? ತರಬೇತುದಾರರು ಮಹಿಳಾ ಕುಸ್ತಿಪಟುಗಳಿಗೆ ಮೇಲೆ ನಿಂದನೆ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಹಿಂದಿನಿಂದಲೂ ಇದೆ. ನೀವು ಧ್ವನಿಯಾಗುವ ಮೂಲಕ ಮಹಿಳಾ ಕುಸ್ತಿಪಟುಗಳ ನೆರವಿಗೆ ಬರಬಹುದು. ದಯಮಾಡಿ ಮಾತನಾಡಿ, ಅವರಿಗೆ ನ್ಯಾಯಕೊಡಿಸಿ” ಎಂದು ಬ್ಯಾನರ್​​​ನಲ್ಲಿ ಬರೆಯಲಾಗಿತ್ತು.

Whats_app_banner