ಕನ್ನಡ ಸುದ್ದಿ  /  Entertainment  /  Sandalwood News Yajamana Movie Fame Kannada Actress Tanya Hope About Her Big Lips Amar Movie Heroin Tanya News Mnk

ಎಲ್ಲರಿಗೂ ನನ್ನ ದಪ್ಪ ತುಟಿ ಮೇಲೆಯೇ ಕಣ್ಣು; ತುಟಿ ವಿಚಾರದ ಕಾಮೆಂಟ್ಸ್‌ಗೆ ತಾನ್ಯಾ ಹೋಪ್‌ ಬೇಸರ

ತನ್ನ ದಪ್ಪ ತುಟಿಗಳ ಬಗ್ಗೆ ಎದುರಾಗುತ್ತಿದ್ದ ಪ್ರಶ್ನೆಗಳಿಗೆ ನಟಿ ತಾನ್ಯಾ ಹೋಪ್‌ ಉತ್ತರ ನೀಡಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದೀರಾ ಎಂಬ ನೆಟ್ಟಿಗರ ಕಾಮೆಂಟ್‌ಗಳಿಗೆ ಸಂದರ್ಶನದಲ್ಲಿ ಹೇಳಿಕೊಂಡು ಬೇಸರ ಹೊರಹಾಕಿದ್ದಾರೆ.

ಎಲ್ಲರಿಗೂ ನನ್ನ ದಪ್ಪ ತುಟಿ ಮೇಲೆಯೇ ಕಣ್ಣು; ತುಟಿ ವಿಚಾರದ ಕಾಮೆಂಟ್ಸ್‌ಗೆ ತಾನ್ಯಾ ಹೋಪ್‌ ಬೇಸರ
ಎಲ್ಲರಿಗೂ ನನ್ನ ದಪ್ಪ ತುಟಿ ಮೇಲೆಯೇ ಕಣ್ಣು; ತುಟಿ ವಿಚಾರದ ಕಾಮೆಂಟ್ಸ್‌ಗೆ ತಾನ್ಯಾ ಹೋಪ್‌ ಬೇಸರ

Tanya Hope: ನಟಿ ತಾನ್ಯಾ ಹೋಪ್‌ ಕನ್ನಡದ ನಟಿ. ಮೂಲತಃ ಬೆಂಗಳೂರಿನವರೇ. ಆದರೆ, ಸಿನಿಮಾ ವೃತ್ತಿ ಜೀವನ ಆರಂಭವಾಗಿದ್ದು ಮಾತ್ರ ಟಾಲಿವುಡ್‌ ಅಂಗಳದಿಂದ. 2016ರಲ್ಲಿ ಅಪ್ಪಟ್ಲೋ ಒಕ್ಕಡುನದೆವುಡಾ ಚಿತ್ರದ ಮೂಲಕ ತೆಲುಗು ಸಿನಿಮಾರಂಗದಲ್ಲಿ ಖಾತೆ ತೆರೆದರು. ಅದಾದ ಬಳಿಕ ಬ್ಯಾಕ್‌ ಟು ಬ್ಯಾಕ್‌ ಹಲವು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡರು. ಆದರೆ, ಈ ವರೆಗೂ ನಿರೀಕ್ಷಿತ ಗೆಲುವು ಮಾತ್ರ ದಕ್ಕಿಲ್ಲ. ಹಾಗಂತ ಸಿನಿಮಾ ಅವಕಾಶಗಳಿಗೇನು ಅವರಿಗೆ ಕೊರತೆಯಿಲ್ಲ.

2019ರಲ್ಲಿ ಯಜಮಾನ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ತಾನ್ಯಾ ಹೋಪ್‌, ಅದಾದ ಬಳಿಕ ಉದ್ಘರ್ಷ, ಅಮರ್‌, ಖಾಕಿ ಚಿತ್ರಗಳಲ್ಲಿ ನಟಿಸಿ ಕನ್ನಡಿಗರಿಗೂ ಹತ್ತಿರವಾದರು. ಇದೀಗ ತಮಿಳಿನ ಸಾಲು ಸಾಲು ಸಿನಿಮಾಗಳಲ್ಲಿ ತಾನ್ಯಾ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಕನ್ನಡದ ನಿರ್ದೇಶಕ ಪ್ರಶಾಂತ್‌ ರಾಜ್‌ ನಿರ್ದೇಶನದ ತಮಿಳಿನ ಕಿಕ್‌ ಚಿತ್ರದಲ್ಲಿ ತಾನ್ಯಾ ನಾಯಕಿಯಾಗಿ ನಟಿಸಿದ್ದಾರೆ. ಮೊನ್ನೆ ಶುಕ್ರವಾರವಷ್ಟೇ (ಸೆ. 1) ಈ ಸಿನಿಮಾ ಬಿಡುಗಡೆಯಾಗಿದೆ.

ಸಂತಾನಂ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ತಾನ್ಯಾ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ತಾನ್ಯಾ ಅವರಿಗೆ ಹಲವು ಪ್ರಶ್ನೆಗಳು ಎದುರಾಗಿವೆ. ಆ ಪೈಕಿ ದಪ್ಪ ತುಟಿಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಶೇರ್‌ ಮಾಡಿದಾಗ, ನೀವು ನಿಮ್ಮ ತುಟಿಗೆ ಸರ್ಜರಿ ಮಾಡಿಸಿದ್ದೀರಾ ಎಂಬ ಪ್ರಶ್ನೆಗಳೇ ತಾನ್ಯಾ ಅವರಿಗೆ ಬರುತ್ತವೆ. ಇದು ಅವರಿಗೆ ಆಗಾಗ ಕೋಪ ತರಿಸಿದ್ದೂ ಉಂಟು. ಈ ಬಗ್ಗೆ ಅವರೇ ಮಾತನಾಡಿದ್ದಾರೆ.

ಹುಟ್ಟಿನಿಂದಲೇ ನನ್ನ ತುಟಿಗಳು ಇರುವುದೇ ಹೀಗೆ

ಇಲ್ಲಿಯವರೆಗೂ ನೀವು ಎದುರಿಸಿದ ಕಷ್ಟದ ಕ್ಷಣ ಯಾವುದು? ಎಂದು ಸಂದರ್ಶನದಲ್ಲಿ ಪ್ರಶ್ನೆ ಎದುರಾಗಿದೆ. ಅದಕ್ಕೆ ಉತ್ತರಿಸಿದ ತಾನ್ಯಾ, "ನಿಮ್ಮ ತುಟಿಗಳು ಇಷ್ಟು ದೊಡ್ಡದಾಗಿದ್ದು ಹೇಗೆ? ನೀವು ನಿಮ್ಮ ತುಟಿಗೆ ಸರ್ಜರಿ ಮಾಡಿಸಿಕೊಂಡಿದ್ದೀರಾ? ಅಥವಾ ನೀವು ಯಾವುದಾದರೂ ಕಾಸ್ಮೆಟಿಕ್‌ ಬಳಸುತ್ತೀರಾ? ಎಂಬ ಸಾಕಷ್ಟು ಪ್ರಶ್ನೆಗಳನ್ನು ನಾನು ಎದುರಿಸಿದ್ದೇನೆ. ಆದರೆ ನಿಜ ಹೇಳಬೇಕೆಂದರೆ, ನಾನು ಯಾವುದೇ ರೀತಿಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿಲ್ಲ. ನನ್ನ ತುಟಿಗಳೇ ಹೀಗೆ. ಹುಟ್ಟಿದಿಂದಲೂ ನನ್ನ ತುಟಿಗಳು ಇರುವುದೇ ಹೀಗಿವೆ. ಇದಕ್ಕಾಗಿ ನಾನು ವಿಶೇಷ ಶಸ್ತ್ರಚಿಕಿತ್ಸೆ ಅಥವಾ ಚುಚ್ಚುಮದ್ದಿನ ಮೊರೆಹೋಗಿಲ್ಲ.

ಪದೇಪದೆ ಕೇಳಿ ತಾಳ್ಮೆ ಪರೀಕ್ಷೆ ಮಾಡಬೇಡಿ..

ಆದರೂ ಎಲ್ಲರಿಗೂ ನನ್ನ ತುಟಿಯ ಮೇಲೆಯೇ ಕಣ್ಣು. ಭಾರತೀಯರ ತುಟಿಗಳು ಇರುವುದೇ ಹೀಗೆ. ನನ್ನ ತಾಯಿ ಮತ್ತು ಅಜ್ಜಿ ಕೂಡ ಈ ರೀತಿಯ ದೊಡ್ಡ ತುಟಿಗಳನೇ ಹೊಂದಿದ್ದಾರೆ. ಹಾಗಾಗಿ ಇದನ್ನು ದೊಡ್ಡ ವಿಚಾರ ಮಾಡಬೇಡಿ. ಈ ಪ್ರಶ್ನೆಯನ್ನು ಪದೇ ಪದೇ ಕೇಳುವುದರಿಂದ ನನಗೆ ಕೋಪವೂ ಬರುತ್ತದೆ. ಪದೇಪದೆ ಇದೇ ವಿಚಾರವನ್ನು ಕೇಳಿ ತಾಳ್ಮೆ ಪರೀಕ್ಷೆ ಮಾಡಲೂ ಬೇಡಿ" ಎಂದು ತಾನ್ಯಾ ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡುವವರಿಗೆ ಹೇಳಿಕೊಂಡಿದ್ದಾರೆ. ಇನ್ನು ಇತ್ತೀಚೆಗಷ್ಟೇ ಕನ್ನಡದ ಕಬ್ಜ ಚಿತ್ರದಲ್ಲಿ ಐಟಂ ಹಾಡೊಂದಕ್ಕೆ ತಾನ್ಯಾ ಹೆಜ್ಜೆ ಹಾಕಿದ್ದರು. ಅದಾದ ಬಳಿಕ ಬೇರಾವ ಕನ್ನಡದ ಸಿನಿಮಾದಲ್ಲಿ ಅವರು ನಟಿಸುತ್ತಿಲ್ಲ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ