ಕನ್ನಡ ಸುದ್ದಿ  /  ಮನರಂಜನೆ  /  ಯಶ್‌ ಕೆಜಿಎಫ್‌ 3 ಹೊಸ ಅಪ್‌ಡೇಟ್‌; 2025ಕ್ಕೆ ಸಿನಿಮಾ ರಿಲೀಸ್‌, ಶೂಟಿಂಗ್‌ ಯಾವಾಗ?

ಯಶ್‌ ಕೆಜಿಎಫ್‌ 3 ಹೊಸ ಅಪ್‌ಡೇಟ್‌; 2025ಕ್ಕೆ ಸಿನಿಮಾ ರಿಲೀಸ್‌, ಶೂಟಿಂಗ್‌ ಯಾವಾಗ?

ಯಶ್‌, ಮುಂದಿನ ವರ್ಷದ ಅಂತ್ಯದ ವೇಳೆಗೆ ಕೆಜಿಎಫ್‌ 3 ನಲ್ಲಿ ಭಾಗಿಯಾಗಲಿದ್ಧಾರೆ. 2025ಕ್ಕೆ ಸಿನಿಮಾ ರಿಲೀಸ್‌ ಆಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್‌ ಆಪ್ತ ಮೂಲಗಳು ಇಂಡಿಯಾ ಟುಡೇಗೆ ವರದಿ ಮಾಡಿವೆ. ಈ ಸುದ್ದಿ ತಿಳಿಯುತ್ತಿದ್ದಂತೆ ಯಶ್‌ ಫ್ಯಾನ್‌ಗಳು ಫುಲ್‌ ಖುಷಿಯಾಗಿದ್ದಾರೆ.

 ಕೆಜಿಎಫ್‌ 3 ಬಗ್ಗೆ ಹೊಸ ಅಪ್‌ಡೇಟ್
ಕೆಜಿಎಫ್‌ 3 ಬಗ್ಗೆ ಹೊಸ ಅಪ್‌ಡೇಟ್

ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆ ಈಗಷ್ಟೇ 'ಸಲಾರ್‌' ಹೊಸ ಸಿನಿಮಾ ದಿನಾಂಕವನ್ನು ಅಧಿಕೃತವಾಗಿ ಅನೌನ್ಸ್‌ ಮಾಡಿತ್ತು. ಪ್ರಭಾಸ್‌ ಅಭಿಮಾನಿಗಳ ಜೊತೆಗೆ ಇದೀಗ ಸಂಸ್ಥೆ, ಯಶ್‌ ಫ್ಯಾನ್ಸ್‌ಗೆ ಕೂಡಾ ಗುಡ್‌ ನ್ಯೂಸ್ ಕೊಟ್ಟಿದ್ದು ರಾಕಿಂಗ್‌ ಸ್ಟಾರ್‌ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ.

ಹೊಂಬಾಳೆ ಫಿಲ್ಮ್ಸ್‌ ಆಪ್ತ ಮೂಲಗಳಿಂದ ಮಾಹಿತಿ

ಕಳೆದ ವರ್ಷ ತೆರೆ ಕಂಡ ಕೆಜಿಎಫ್‌ ಚಾಪ್ಟರ್‌ 2 ಕೊನೆಯಲ್ಲಿ ಚಿತ್ರತಂಡ ಮೂರನೇ ಭಾಗದ ಬಗ್ಗೆ ಸುಳಿವು ನೀಡಿತ್ತು. ಹಾಗಿದ್ರೆ ಯಶ್‌ ಮುಂದಿನ ಸಿನಿಮಾ ಕೆಜಿಎಫ್‌ 3 ಆಗಿರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಕೆಆರ್‌ಜಿ ಕನೆಕ್ಟ್ಸ್‌ನ ಕಾರ್ತಿಕ್‌ ಗೌಡ ಟ್ವೀಟ್‌ ಮಾಡಿ, ಕೆಜಿಎಫ್‌ 3 ಸಿನಿಮಾ ಬರಲಿದೆ, ಆದರೆ ಈಗಲೇ ಅದರ ಬಗ್ಗೆ ಪ್ಲಾನ್‌ ಇಲ್ಲ. ಒಂದು ವೇಳೆ ನಾವು ನಿರ್ಧರಿಸಿದ ಕೂಡಲೇ ಅನೌನ್ಸ್‌ ಮಾಡುವುದಾಗಿ ಹೇಳಿದ್ದರು. ಆದರೆ ಇದೀಗ ಹೊಂಬಾಳೆ ಫಿಲ್ಮ್ಸ್‌ನ ಆಪ್ತ ಮೂಲಗಳು ಕೆಜಿಎಫ್‌ ಬಗ್ಗೆ ಮಾಹಿತಿ ನೀಡಿವೆ.

2024ಕ್ಕೆ ಶೂಟಿಂಗ್‌ ಶುರು

''ಯಶ್‌ ಅಭಿನಯದ 'ಕೆಜಿಎಫ್‌ 3' ಸಿನಿಮಾ ಅಪ್‌ಡೇಟ್‌ ಬಗ್ಗೆ ಕಾಯುತ್ತಿದ್ದವರಿಗೆ ಗುಡ್‌ ನ್ಯೂಸ್.‌ ಯಶ್‌ ಈಗ 19ನೇ ಸಿನಿಮಾದಲ್ಲಿ ಬ್ಯುಸಿ ಇದ್ದು ಶೀಘ್ರದಲ್ಲೇ ಹೊಸ ಸಿನಿಮಾ ಅನೌನ್ಸ್‌ ಮಾಡಲಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆ, ಅಂದರೆ ಮುಂದಿನ ವರ್ಷದ ಅಂತ್ಯದ ವೇಳೆಗೆ ಕೆಜಿಎಫ್‌ 3 ನಲ್ಲಿ ಭಾಗಿಯಾಗಲಿದ್ಧಾರೆ. 2025ಕ್ಕೆ ಸಿನಿಮಾ ರಿಲೀಸ್‌ ಆಗಲಿದೆ'' ಎಂದು ಹೊಂಬಾಳೆ ಫಿಲ್ಮ್ಸ್‌ ಆಪ್ತ ಮೂಲಗಳು ಇಂಡಿಯಾ ಟುಡೇಗೆ ವರದಿ ಮಾಡಿವೆ. ಈ ಸುದ್ದಿ ತಿಳಿಯುತ್ತಿದ್ದಂತೆ ಯಶ್‌ ಫ್ಯಾನ್‌ಗಳು ಫುಲ್‌ ಖುಷಿಯಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

2025ಕ್ಕೆ ಕೆಜಿಎಫ್‌ 3 ರಿಲೀಸ್

ಸಲಾರ್‌ ಸಿನಿಮಾ ಡಿಸೆಂಬರ್‌ 22ಕ್ಕೆ ರಿಲೀಸ್‌ ಆಗಲಿದೆ. ಈ ಸಿನಿಮಾ ಮುಗಿಯುತ್ತಿದ್ದಂತೆ ನಿರ್ದೇಶಕ ಪ್ರಶಾಂತ್‌ ನೀಲ್‌, ಜ್ಯೂನಿಯರ್‌ ಎನ್‌ಟಿಆರ್‌ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಸಿನಿಮಾ ಆರಂಭವಾಗಿ ಮುಂದಿನ ವರ್ಷ ಅಂತ್ಯದ ವೇಳೆಗೆ ಮುಗಿಯುತ್ತದೆ. ಅಷ್ಟರಲ್ಲಿ ಯಶ್‌ 19ನೇ ಸಿನಿಮಾ ಕೂಡಾ ಕಂಪ್ಲೀಟ್‌ ಆಗಿರುತ್ತದೆ. ನಂತರ ಯಶ್‌ ಹಾಗೂ ಪ್ರಶಾಂತ್‌ ನೀಲ್‌ ಒಂದಾಗಬಹುದು ಎಂದು ಫ್ಯಾನ್ಸ್‌ ಕೂಡಾ ಲೆಕ್ಕಾಚಾರ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಈ ಸುದ್ದಿಯಿಂದ ಫ್ಯಾನ್ಸ್‌ ಎಕ್ಸೈಟ್‌ ಆಗಿದ್ದು ಕೆಜಿಎಫ್‌ 3 ಬಗ್ಗೆ ಹೊಸ್‌ ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ.‌

19ನೇ ಸಿನಿಮಾದಲ್ಲಿ ಯಶ್‌ ಬ್ಯುಸಿ

ಯಶ್‌ ಸದ್ಯಕ್ಕೆ 19ನೇ ಸಿನಿಮಾಗೆ ಓಡಾಡುತ್ತಿದ್ಧಾರೆ. ಇತ್ತೀಚೆಗೆ ಲಂಡನ್‌ಗೆ ತೆರಳಿದ್ದ ಅವರು ಹಾಲಿವುಡ್‌ ಫೈಟ್‌ ಕೊರಿಯೋಗ್ರಾಫರ್‌ ಭೇಟಿ ಮಾಡಿದ್ದರು. ಅಕ್ಟೋಬರ್‌ನಲ್ಲಿ ಯಶ್‌ ಮುಂದಿನ ಸಿನಿಮಾ ಅಪ್‌ಡೇಟ್‌ ನೀಡಲಿದ್ದಾರೆ ಎಂದು ತಮಿಳು ಸಿನಿ ವಿಮರ್ಶಕ ಮನೋಬಾಲ ವಿಜಯ ಬಾಲನ್‌ ತಮ್ಮ ಅಧಿಕೃತ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.