Garadi Song: ಅನಿಸಬಹುದು ನಿನಗೆ ಇದು ತುಂಬಾ ಸಣ್ಣ ವಿಷಯ; ಗರಡಿಗಾಗಿ ಬಡವನ ಹೃದಯ ಬಿಚ್ಚಿಟ್ಟ ಯೋಗರಾಜ್‌ ಭಟ್‌-sandalwood news yogaraj bhat garadi film new song badavana hrudaya released v harikrishna vijay prakash film song pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Garadi Song: ಅನಿಸಬಹುದು ನಿನಗೆ ಇದು ತುಂಬಾ ಸಣ್ಣ ವಿಷಯ; ಗರಡಿಗಾಗಿ ಬಡವನ ಹೃದಯ ಬಿಚ್ಚಿಟ್ಟ ಯೋಗರಾಜ್‌ ಭಟ್‌

Garadi Song: ಅನಿಸಬಹುದು ನಿನಗೆ ಇದು ತುಂಬಾ ಸಣ್ಣ ವಿಷಯ; ಗರಡಿಗಾಗಿ ಬಡವನ ಹೃದಯ ಬಿಚ್ಚಿಟ್ಟ ಯೋಗರಾಜ್‌ ಭಟ್‌

Yogaraj Bhat Garadi Film Updates: ಯೋಗರಾಜ್‌ ಭಟ್‌ ನಿರ್ದೇಶನದ ಗರಡಿ ಸಿನಿಮಾದ ಹೊಸ ಹಾಡು ಬಿಡುಗಡೆಯಾಗಿದೆ. ಗರಡಿ ಸಿನಿಮಾದ ಈ ಹಾಡು ಮುಂಗಾರು ಮಳೆಯ ಹಾಡಿನಂತೆ ಕೇಳಲು ಹಿತವಾಗಿದ್ದು, ವಿಜಯ್‌ ಪ್ರಕಾಶ್‌ ಸುಮಧುರ ಧ್ವನಿ, ವಿ ಹರಿಕೃಷ್ಣ ಸಾಹಿತ್ಯ ಗಮನ ಸೆಳೆಯುತ್ತದೆ.

ಯೋಗರಾಜ್‌ ಭಟ್‌ ನಿರ್ದೇಶನದ ಗರಡಿ ಸಿನಿಮಾದ ಬಡವನ ಹೃದಯ ಹಾಡು ಬಿಡುಗಡೆ
ಯೋಗರಾಜ್‌ ಭಟ್‌ ನಿರ್ದೇಶನದ ಗರಡಿ ಸಿನಿಮಾದ ಬಡವನ ಹೃದಯ ಹಾಡು ಬಿಡುಗಡೆ

ಬೆಂಗಳೂರು: ಯೋಗರಾಜ್‌ ಭಟ್‌ ನಿರ್ದೇಶನದ ಗರಡಿ ಸಿನಿಮಾದ ಹೊಸ ಹಾಡು ಬಿಡುಗಡೆಯಾಗಿದೆ. ಈ ಹಾಡಿನ ಹೆಸರು ಬಡವನ ಹೃದಯ. ಅನಿಸಬಹುದು ನಿನಗೆ ಇದು ತುಂಬಾ ಸಣ್ಣ ವಿಷಯ ಎಂಬ ಈ ಸುಂದರ ಸಾಹಿತ್ಯದ ಹಾಡಿಗೆ ವಿಜಯ್‌ ಪ್ರಕಾಶ್‌ ಧ್ವನಿಯಾಗಿದ್ದಾರೆ. ವಿ ಹರಿಕೃಷ್ಣ ಅವರ ಸಂಗೀತವು ನಿಮ್ಮನ್ನು ಮತ್ತೆ ಮುಂಗಾರು ಮಳೆ ದಿನಗಳಿಗೆ ಕರೆದುಕೊಂಡು ಹೋಗಬಹುದು. ಸ್ವತಃ ಯೋಗರಾಜ್‌ ಭಟ್‌ ಬರೆದಿರುವ ಈ ಹಾಡಿನ ಕಾವ್ಯವಾಚನವನ್ನೂ ಈ ಹಿಂದೆ ಸೋಷಿಯಲ್‌ ಮೀಡಿಯಾದಲ್ಲಿ ಭಟ್ರು ಮಾಡಿದ್ದರು.

ಗರಡಿ ಬಡವನ ಹೃದಯ ಹಾಡು ಬಿಡುಗಡೆ

ನಿನ್ನೆ ಯೂಟ್ಯೂಬ್‌ನಲ್ಲಿ ಸರೆಗಮ ಕನ್ನಡ ಚಾನೆಲ್‌ನಲ್ಲಿ ಗರಡಿ ಸಿನಿಮಾದ ಬಡವನ ಹೃದಯ ಹಾಡು ಬಿಡುಗಡೆ ಮಾಡಲಾಗಿದೆ. ಇದು ಲವ್‌ ಫೈಲ್ಯೂರ್‌ ಆಗಿರುವ ನಾಯಕನ ಮನಸ್ಸಿಗೆ ಧ್ವನಿಯಾದ ಹಾಡಿನಂತೆ ಭಾಸವಾಗುತ್ತದೆ. ಲವ್‌ ಫೇಲ್‌ ಆದ ಜನರಿಗೂ ಇದು ಕನೆಕ್ಟ್‌ ಆಗಬಹುದು. ಈ ಹಾಡಿನಲ್ಲಿ ನಾಯಕ ಸೂರ್ಯ, ಹಳೆಯ ಪ್ರೀತಿಯ ನೆನಪು, ವ್ಯಥೆ, ನಾಯಕಿಯ ತುಂಟಾಟದ ನೆನಪುಗಳು ಸೇರಿದಂತೆ ಹಲವು ಅಂಶಗಳು ಕಾಣಿಸುತ್ತವೆ. ಜತೆಗೆ, ಮದನ್‌ ಅವರ ಸಿನಿಮಾಟ್ರೊಗ್ರಫಿಯೂ ಗಮನ ಸೆಳೆಯುತ್ತದೆ.

ಬಡವನ ಹೃದಯ ಹಾಡು ಕೇಳಿ

ಬಡವನ ಹೃದಯ ಹಾಡಿನ ಲಿರಿಕ್ಸ್‌

ಅನಿಸಬಹುದು ನಿನಗೆ ಇದು ತುಂಬಾ ಸಣ್ಣ ವಿಷಯ , ಅರಿಯದೇನೆ ನಾನು ಆಗಿರುವೆ ನಿನ್ನ ಇನಿಯ, ಬೇರೆ ಯಾರೇ ನಿಂತರು ನಿನ್ನಯ ಬಾಜು, ಒಡೆದೆ ಹೋಗಬಹುದು ನನ್ನ ಬದುಕಿನ ಗಾಜು, ದಯವಮಾಡಿ ಉರಿಸಬೇಡ ಇದು ಬಡವನ ಹೃದಯ, ಈ ಬಡವನ ಹೃದಯ ಎಂಬ ಹಾಡಿನ ಲಿರಿಕ್ಸ್‌ ಮತ್ತು ಯೋಗರಾಜ್‌ ಭಟ್‌ ಅವರ ಕಾವ್ಯವಚನ ಈ ಮುಂದಿದೆ ನೋಡಿ.

ಏನೇ ಬರಲಿ ರಟ್ಟೆ ತಟ್ಟು- ಟೈಟಲ್‌ ಟ್ರ್ಯಾಕ್‌

ಕೆಲವು ದಿನಗಳ ಹಿಂದೆ ಗರಡಿ ಸಿನಿಮಾದ ಟೈಟಲ್‌ ಟ್ರ್ಯಾಕ್‌ ಬಿಡುಗಡೆ ಮಾಡಲಾಗಿತ್ತು. ಗರಡಿ ಸಿನಿಮಾದ ಈ ಟೈಟಲ್‌ ಟ್ರ್ಯಾಕ್‌ "ಏನೇ ಬರಲಿ ರಟ್ಟೆ ತಟ್ಟು ತೊಡೆಯ ತಟ್ಟು ಹಾಕು ಪಟ್ಟು" ಎಂದು ಆರಂಭವಾಗುತ್ತದೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆಯ ಈ ಹಾಡಿನ ಸಾಹಿತ್ಯದ ಜತೆಗೆ ಮ್ಯೂಸಿಕ್‌ ಕೂಡ ಮಾಸ್‌ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಇದೆ. ಈ ಟೈಟಲ್‌ ಟ್ರ್ಯಾಕ್‌ನಲ್ಲಿ ಕಲಾವಿದರ ದಂಡೇ ಇದ್ದು, ನಾಯಕ ಸೂರ್ಯನ ಗತ್ತು ಕೂಡ ಇಷ್ಟವಾಗುತ್ತದೆ. ಡಿ ಡಿ ಡಿ ಡಿ ಗರಡಿ ಹಾಡು ಮೋಡಿ ಮಾಡುವಂತೆ ಇದ್ದು, ಹಾಡಿನ ದೃಶ್ಯವೈಭವ ಕೂಡ ಇಷ್ಟವಾಗುತ್ತದೆ. ಹಿರಿಯ ನಟ ಬಿಸಿ ಪಾಟೀಲ್‌ ಈ ಟೈಟಲ್‌ ಟ್ರ್ಯಾಕ್‌ನಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ.

ಹೊಡಿರೆಲೆ ಹಲಗಿ ಹಾಡು

ಯೋಗರಾಜ್‌ ಭಟ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ಗರಡಿ ಸಿನಿಮಾದ ಮೊದಲ ಹಾಡು ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿತ್ತು. ಆ ಹಾಡಿನಲ್ಲಿ ಕೊಂಚ ಗ್ಲಾಮರಸ್‌ ಅವತಾರದಲ್ಲಿಯೇ ಸೊಂಟ ಬಳುಕಿಸಿದ್ದಾರೆ ನಿಶ್ವಿಕಾ. ಕೌರವ ಪ್ರೊಡಕ್ಷನ್ ಹೌಸ್ ಬ್ಯಾನರ್‌ನಲ್ಲಿ ವನಜಾ ಪಾಟೀಲ್ ನಿರ್ಮಿಸಿರುವ, ಗರಡಿ ಚಿತ್ರದ ಮೊದಲ ಹಾಡು ಹೊಡಿರೆಲೆ ಹಲಗಿ.. ಲಿರಿಕಲ್ ವಿಡಿಯೋ ಇತ್ತೀಚಿಗೆ ಬಿಡುಗಡೆಯಾಯಿತು. ವಿ. ಹರಿಕೃಷ್ಣ ಸಂಗೀತ ನೀಡಿರುವ, ಯೋಗರಾಜ್ ಭಟ್ ಅವರೇ ಸಾಹಿತ್ಯ ಬರೆದಿರುವ ಈ ಹಾಡನ್ನು ಉತ್ತರ ಕರ್ನಾಟಕದ ಪ್ರತಿಭೆ ಮೇಘನಾ ಹಳಿಯಾಳ್ ಹಾಡಿದ್ದಾರೆ.