ಯುಗಾದಿ ವಿಶೇಷ: ಯಗಗಳ ಆದಿ ಯುಗಾದಿ ಲಿರಿಕಲ್‌ ವಿಡಿಯೋ ಬಿಡುಗಡೆ ಮಾಡಿದ ಮೈಸೂರು ಮಹಾರಾಜ ಯದುವೀರ್‌
ಕನ್ನಡ ಸುದ್ದಿ  /  ಮನರಂಜನೆ  /  ಯುಗಾದಿ ವಿಶೇಷ: ಯಗಗಳ ಆದಿ ಯುಗಾದಿ ಲಿರಿಕಲ್‌ ವಿಡಿಯೋ ಬಿಡುಗಡೆ ಮಾಡಿದ ಮೈಸೂರು ಮಹಾರಾಜ ಯದುವೀರ್‌

ಯುಗಾದಿ ವಿಶೇಷ: ಯಗಗಳ ಆದಿ ಯುಗಾದಿ ಲಿರಿಕಲ್‌ ವಿಡಿಯೋ ಬಿಡುಗಡೆ ಮಾಡಿದ ಮೈಸೂರು ಮಹಾರಾಜ ಯದುವೀರ್‌

ಕೃಷ್ಣಾವತಾರ ಸಿನಿಮಾದ ಡಾ. ವಿ. ನಾಗೇಂದ್ರಪ್ರಸಾದ್ ರಚನೆಯ ಯಗಗಳ ಆದಿ ಯುಗಾದಿ ಹಾಡಿನ ಲಿರಿಕಲ್‌ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಯುಗಾದಿ ಹಬ್ಬದ ಮಹತ್ವ ಸಾರುವ ಈ ಹಾಡಿನ ವಿಡಿಯೋವನ್ನು ಮೈಸೂರು ಮಹಾರಾಜ ಯದುವೀರ್‌ ರಿಲೀಸ್‌ ಮಾಡಿದ್ದಾರೆ.

ಯುಗಾದಿ ವಿಶೇಷ: ಯಗಗಳ ಆದಿ ಯುಗಾದಿ ಹಾಡು ಬಿಡುಗಡೆ ಮಾಡಿದ ಮೈಸೂರು ಮಹಾರಾಜ ಯದುವೀರ್‌
ಯುಗಾದಿ ವಿಶೇಷ: ಯಗಗಳ ಆದಿ ಯುಗಾದಿ ಹಾಡು ಬಿಡುಗಡೆ ಮಾಡಿದ ಮೈಸೂರು ಮಹಾರಾಜ ಯದುವೀರ್‌

ಬೆಂಗಳೂರು: ಎಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಕಾಣಿಸುತ್ತಿದೆ. ಯುಗಗಳ ಆದಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಕೃಷ್ಣಾವತರ ಸಿನಿಮಾದ ವಿಶೇಷ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಹಿರಿಯಸಾಹಿತಿ, ನಿರ್ದೇಶಕ ಡಾ.ವಿ. ನಾಗೇಂದ್ರಪ್ರಸಾದ್ ಅವರು ಒಬ್ಬ ಪರಿಸರ ಪ್ರೇಮಿಯಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಕೃಷ್ಣಾವತಾರ' ಸಿನಿಮಾದಲ್ಲಿ ಯುಗಾದಿ ಹಬ್ಬದ ಹಾಡೊಂದಿದೆ.

ಸಿರಿ ವೈ.ಎಸ್.ಆರ್. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಯುಗಾದಿ ಹಬ್ಬಕ್ಕಾಗಿ ವಿಶೇಷ ಹಾಡೊಂದನ್ನು ಡಾ.ವಿ. ನಾಗೇಂದ್ರಪ್ರಸಾದ್ ಅವರು ಬರೆದಿದ್ದಾರೆ. 'ಯಗಗಳ ಆದಿ ಯುಗಾದಿ' ಎಂಬ ಯುಗಾದಿ ಮಹತ್ವ ಸಾರುವ ಸಾಹಿತ್ಯ ಒಳಗೊಂಡ ಈ ಲಿರಿಕಲ್ ವಿಡಿಯೋ ಹಾಡನ್ನು ಮೈಸೂರು ಮಹಾರಾಜರಾದ ಯದುವೀರ್ ಒಡೆಯರ್ ಅವರು ಬಿಡುಗಡೆ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಇದು ಯುಗಾದಿ ಹಬ್ಬದ ಖಾಯಂ ಹಾಡಾಗುವಂಥ ಎಲ್ಲಾ ಲಕ್ಷಣಗಳು ಈಗಾಗಲೇ ಗೋಚರಿಸಿವೆ. ಅಷ್ಟೊಂದು ಪರಿಣಾಮಕಾರಿಯಾದ ಸಾಹಿತ್ಯ, ರಾಗಸಂಯೋಜನೆ ಈ ಹಾಡಿನಲ್ಲಿದೆ. ಮ್ಯೂಸಿಕ್ ಬಜಾರ್ ಯು ಟ್ಯೂಬ್ ಚಾನಲ್ ನಲ್ಲಿ ಈ ಹಾಡು ಬಿಡುಗಡೆಯಾಗಿದೆ.

ಮಾಯಾಬಜಾರ್ ಫಿಲಂಸ್ ಬ್ಯಾನರ್ ಅಡಿ ಗುರುಪ್ರಸಾದ್ ಕೆ. ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶುಭ ರಕ್ಷಾ, ತ್ರಿವೇಣಿ ರಾಜ್ ಚಿತ್ರದ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಕೃಷ್ಣಾವತಾರ ಸಿನಿಮಾದಲ್ಲಿ ವಿಶ್ವನಾಥ್, ಮಾನಸಿ ಸುಧೀರ್, ರಘು ರಾಮನಕೊಪ್ಪ, ಪ್ರಕಾಶ್ ತುಮ್ಮಿನಾಡ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ರಾಜ ಶಿವಶಂಕರ್ ಅವರು ಕ್ಯಾಮೆರಾ ವರ್ಕ್ ಮಾಡಿದ್ದು, ಎಬಿಎಂ ಸಂಗೀತ ಸಂಯೋಜನೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮೈಸೂರು ಮಹಾರಾಜ ಯದುವೀರ್‌ ಅವರು ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ಎಲ್ಲರಿಗೂ ತಾಯಿ ಚಾಮುಂಡೇಶ್ವರಿಯ ಅನುಗ್ರಹ ದೊರಕಲಿ ಎಂದು ಹಾರೈಸಿದ್ದಾರೆ.

ಯುಗಾದಿ ಹಾಡುಗಳು

ಯುಗಾದಿ ಹಬ್ಬ ಎಂದಾಕ್ಷಣ ಹಲವು ಹಾಡುಗಳು ನೆನಪಿಗೆ ಬರಬಹುದು. ಯುಗಾದಿ ಸಂಭ್ರಮ ಹೆಚ್ಚಿಸುವ ಹಲವು ಹಾಡುಗಳು ಕನ್ನಡದಲ್ಲಿವೆ. ಬಾಳಿನ ಕಹಿ-ಸಿಹಿ ನೆನಪಿಸುವ ಈ ಹಬ್ಬವು ಹಳೆಬೇರು ಹೊಸ ಚಿಗುರಿನ ಈ ಸಮಯದಲ್ಲಿ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಎಂಬ ಹಾಡು ಮಾತ್ರವಲ್ಲದೆ ಹಲವು ಕನ್ನಡ ಚಿತ್ರಗಳನ್ನು ಕೇಳಬಹುದು.ಜೇನಿನ ಗೂಡು ನಾವೆಲ್ಲ ಬೇರೆಯಾದರೆ ಜೇನಿಲ್ಲ ಎಂಬ ಹಾಡು ಕೂಡ ಇದನ್ನೇ ಹೇಳುತ್ತದೆ. ಎಲ್ಲೆಲ್ಲೂ ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ ಎಂಬ ಹಾಡಿನಲ್ಲೂ ಯುಗಾದಿಯದ್ದೇ ಸಡಗರ. ದೂರದ ಬೆಟ್ಟ ಚಿತ್ರದಲ್ಲಿ ಪ್ರೀತಿನೇ ಆ ದ್ರಾವ್ಯ ತಂದ ಆಸ್ತಿ ನಮ್ಮ ಪಾಲಿಗೆ ಎಂಬ ಹಾಡಿನ ಹಿನ್ನೆಲೆಯಲ್ಲೂ ಯುಗಾದಿ ಹಬ್ಬದ ಸಡಗರವಿದೆ. ಕನ್ನಡದಲ್ಲಿ ಯುಗಾದಿ ಚಿತ್ರಗೀತೆಗಳನ್ನು ಕೇಳಲು ಬಯಸುವವರು ಇಲ್ಲಿ ಕ್ಲಿಕ್‌ ಮಾಡಿ.

Whats_app_banner