ಕನ್ನಡ ಸುದ್ದಿ  /  Entertainment  /  Sandalwood News Yuva Box Office Collection Day 3 Yuva Rajukumar Movie Mints Total 6 Crore In India Hombale Films Pcp

Yuva: ಬಾಕ್ಸ್‌ ಆಫೀಸ್‌ನಲ್ಲಿ 3 ದಿನದಲ್ಲಿ ಯುವ ಗಳಿಕೆ ಎಷ್ಟು? ವೀಕೆಂಡ್‌ನಲ್ಲಿ ಕಲೆಕ್ಷನ್‌ ಹೆಚ್ಚಿಸಿಕೊಂಡ ಯುವ ರಾಜ್‌ಕುಮಾರ್‌ ಸಿನಿಮಾ

Yuva Box Office Collection Day 3: ದೊಡ್ಮನೆಯ ಕುಡಿ ಯುವ ರಾಜ್‌ಕುಮಾರ್‌ ನಟನೆಯ ಯುವ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷೆಯಷ್ಟು ಗಳಿಕೆ ಮಾಡುತ್ತಿಲ್ಲ. ಯುವ ಸಿನಿಮಾ ಕಳೆದ ಮೂರು ದಿನಗಳಲ್ಲಿ 6 ಕೋಟಿ ರೂಪಾಯಿ ಕಲೆಕ್ಷನ್‌ ಮಾಡುವಲ್ಲಿ ಯಶಸ್ವಿಯಾಗಿದೆ.

ಯುವ ಸಿನಿಮಾ ಬಾಕ್ಸ್‌ ಆಫೀಸ್‌ ಕಲೆಕ್ಷನ್‌- ದಿನ 3
ಯುವ ಸಿನಿಮಾ ಬಾಕ್ಸ್‌ ಆಫೀಸ್‌ ಕಲೆಕ್ಷನ್‌- ದಿನ 3

ಬೆಂಗಳೂರು: ಯುವ ರಾಜ್‌ಕುಮಾರ್‌ ನಟನೆಯ, ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಯುವ ಸಿನಿಮಾದ ಬಾಕ್ಸ್‌ ಆಫೀಸ್‌ ಗಳಿಕ ಮಂದಗತಿಯಲ್ಲಿ ಸಾಗಿದೆ. ಮೊದಲ ಎರಡು ದಿನ ತುಸು ಕಡಿಮೆ ಕಲೆಕ್ಷನ್‌ ಮಾಡಿದ್ದ ಯುವ ಸಿನಿಮಾದ ಭಾನುವಾರದ ಗಳಿಕೆ ತುಸು ಹೆಚ್ಚಿತ್ತು. ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಿರುವುದರಿಂದ ಮತ್ತು ರಾಜಕುಮಾರ್‌ ಸಿನಿಮಾ ನಿರ್ದೇಶಕರ ಆಕ್ಷನ್‌ ಕಟ್‌ ಇದ್ದ ಕಾರಣ ಯುವ ಸಿನಿಮಾದ ಕುರಿತು ನಿರೀಕ್ಷೆ ಹೆಚ್ಚೇ ಇತ್ತು. ಆದರೆ, ಫೈಟಿಂಗ್‌ ಜಾಸ್ತಿ, ಕಥೆಗೆ ಹೆಚ್ಚಿನ ಮಹತ್ವ ನೀಡದೆ ಇರುವುದು ಇತ್ಯಾದಿ ಕಾರಣಗಳಿಂದ ಯುವ ಸಿನಿಮಾದ ಕುರಿತು ನೆಗೆಟಿವ್‌ ವಿಮರ್ಶೆ ಹೆಚ್ಚಾಗಿತ್ತು. (ಓದಿ: ಯುವ ಸಿನಿಮಾ ವಿಮರ್ಶೆ)

ಯುವ ಬಾಕ್ಸ್‌ ಆಫೀಸ್‌ ವರದಿ

ಸಚ್‌ನಿಲ್ಕ್‌.ಕಾಂ ವರದಿ ಪ್ರಕಾರ ಯುವ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ಎರಡು ದಿನ ಉತ್ತಮವಾಗಿ ಗಳಿಕೆ ಮಾಡಿದೆ. ಭಾರತದಲ್ಲಿ ಒಟ್ಟು 3.80 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಮೂರನೇ ದಿನವೂ ಯುವ ಸಿನಿಮಾದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಗಮರ್ನಾಹವಾಗಿ ಏರಿಕೆ ಕಂಡಿದೆ. ಭಾನುವಾರ ಅಂದರೆ ಯುವ ಸಿನಿಮಾ ರಿಲೀಸ್‌ ಆದ ಮೂರನೇ ದಿನ 2.2 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಶನಿವಾರದ 1.7 ಕೋಟಿ ಗಳಿಕೆಗೆ ಹೋಲಿಸಿದರೆ ಶೇಕಡ 29.41ರಷ್ಟು ಕಲೆಕ್ಷನ್‌ ಹೆಚ್ಚಿಸಿಕೊಂಡಿದೆ. ಮೊದಲ ದಿನ ಯುವ ಸಿನಿಮಾ 2.1 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಯುವ ಸಿನಿಮಾವು ಸರಳ ಕಥೆ ಹೊಂದಿದೆ. ಮಂಗಳೂರು ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದುವ ಯುವ, ಅಲ್ಲಿ ಹಾಸ್ಟೇಲ್‌ ಮತ್ತು ಲೋಕಲ್‌ ಹುಡುಗರ ನಡುವಿನ ಜಗಳ ಇಂಟರ್‌ವೆಲ್‌ ತನಕ ಇರುತ್ತದೆ. ಬಳಿಕ ಬೆಂಗಳೂರಿನಲ್ಲಿ ಡೆಲಿವರಿ ಬಾಯ್‌ ಆಗುತ್ತಾನೆ. ಜತೆಗೆ ಕುಸ್ತಿ ಕಥೆಯೂ ಇದೆ. ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಅಪ್ಪು ಅಭಿಮಾನಿಗಳ ಬೆಂಬಲದಿಂದ ಒಳ್ಳೆಯ ಪ್ರಚಾರವೂ ದೊರಕಿತ್ತು.

ಹೊಂಬಾಳೆ ಫಿಲ್ಮ್ಸ್‌ನ ವಿಜಯ್‌ ಕಿರಗಂದೂರ್‌ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಕೆಜಿಎಫ್‌, ಕಾಂತಾರ, ರಾಜಕುಮಾರ, ಮಾಸ್ಟರ್‌ಪೀಸ್‌, ಸಲಾರ್‌ನಂತಹ ಹಲವು ಸಿನಿಮಾಗಳನ್ನು ಹೊಂಬಾಳೆ ಫಿಲ್ಮ್ಸ್‌ ನೀಡಿದೆ. ಇದು ಕೂಡ ಯುವ ಸಿನಿಮಾ ನಿರೀಕ್ಷೆ ಹೆಚ್ಚಲು ಕಾರಣವಾಗಿತ್ತು. ಆದರೆ, ಯುವನ ಮೊದಲ ಸಿನಿಮಾ ಸಾಕಷ್ಟು ಪ್ರೇಕ್ಷಕರ ನಿರೀಕ್ಷೆ ಮುಟ್ಟುವಲ್ಲಿ ವಿಫಲವಾಗಿತ್ತು. ರಾಜ್‌ಕುಮಾರ್‌ ಕುಟುಂಬದ ಎರಡು ತಲೆಮಾರು ಯಶಸ್ಸು ಪಡೆದಿವೆ. ಮೂರನೇ ತಲೆಮಾರಿಗೆ ಅಂದುಕೊಂಡಷ್ಟು ಯಶಸ್ಸು ದೊರಕಿಲ್ಲ. ಇದೇ ಕಾರಣಕ್ಕೆ ಅಭಿಮಾನಿಗಳು ಯುವನ ಮೇಲೆ ಭರವಸೆ ಇಟ್ಟಿದ್ದರು. ಮೊದಲ ಸಿನಿಮಾದಲ್ಲಿ ಸಿನಿಪ್ರಿಯರಲ್ಲಿ ತುಸು ಭರವಸೆ ಹುಟ್ಟಿಸುವಲ್ಲಿ ಯುವ ಯಶಸ್ವಿಯಾಗಿದ್ದಾನೆ.

 

IPL_Entry_Point