ಕನ್ನಡ ಸುದ್ದಿ  /  Entertainment  /  Sandalwood News Yuva Kannada Movie Trailer Released Yuva Rajkumar Hombale Films Glimpse Gangwar Father Sentiment Pcp

Yuva Movie Trailer: ಯುವ ಸಿನಿಮಾದ ಟ್ರೇಲರ್‌ ಬಿಡುಗಡೆ; ಕಾಲೇಜು ಲೈಫ್‌, ಗ್ಯಾಂಗ್‌ವಾರ್‌ ಜತೆಗೆ ಅಪ್ಪ ಮಗನ ಸೆಂಟಿಮೆಂಟು

ಯುವ ರಾಜ್‌ಕುಮಾರ್‌ ನಟನೆಯ ಬಹುನಿರೀಕ್ಷಿತ ಯುವ ಸಿನಿಮಾದ ಟ್ರೇಲರ್‌ ಅನ್ನು ಹೊಂಬಾಳೆ ಫಿಲ್ಮ್ಸ್‌ ಬಿಡುಗಡೆ ಮಾಡಿದೆ. ಕಾಲೇಜಿನ ಜಗಳ, ಗ್ಯಾಂಗ್‌ವಾರ್‌ ಇತ್ಯಾದಿಗಳೊಂದಿಗೆ ಒಳ್ಳೆ ಹುಡುಗನಾಗಿ "ಅಪ್ಪನಿಗೆ ತಕ್ಕ ಮಗನಾಗಿ" ಬದುಕಲು ನಾಯಕ ಮಾಡುವ ಪ್ರಯತ್ನ ಟ್ರೇಲರ್‌ನಲ್ಲಿ ಕಾಣಿಸಿದೆ.

Yuva Movie Trailer: ಯುವ ಸಿನಿಮಾದ ಟ್ರೇಲರ್‌ ಬಿಡುಗಡೆ
Yuva Movie Trailer: ಯುವ ಸಿನಿಮಾದ ಟ್ರೇಲರ್‌ ಬಿಡುಗಡೆ

ಬೆಂಗಳೂರು: ಯುವರಾಜ್‌ಕುಮಾರ್‌ ನಟನೆಯ ಬಹುನಿರೀಕ್ಷಿತ ಯುವ ಸಿನಿಮಾದ ಟ್ರೇಲರ್‌ ಅನ್ನು ಹೊಂಬಾಳೆ ಫಿಲ್ಮ್ಸ್‌ ಇದೀಗ ಬಿಡುಗಡೆ ಮಾಡಿದೆ. ತಾಂತ್ರಿಕವಾಗಿ ಮಾತ್ರವಲ್ಲದೆ ಒಂದೊಳ್ಳೆ ಸ್ಟೋರಿಯೂ ಚಿತ್ರದಲ್ಲಿರುವ ಸೂಚನೆಯನ್ನು ಟ್ರೇಲರ್‌ ನೀಡಿದೆ. ತಂದೆ ಮತ್ತು ಮಗನ ಬಾಂಧವ್ಯದ ಕಥೆಯನ್ನೂ ಈ ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಆಕ್ಷನ್‌ ಪ್ರಿಯರಿಗೆ ಭರ್ಜರಿ ಹೊಡೆದಾಟದ ದೃಶ್ಯಗಳೂ ಇರುವ ಸೂಚನೆಯಿದೆ. ಕಾಲೇಜು ಸ್ಟೋರಿ, ಕಾಲೇಜಿನ ಜಗಳಗಳು, ಹೊಡೆದಾಟಗಳೂ ಇವೆ. ಇದರೊಂದಿಗೆ ಗ್ಯಾಂಗ್‌ವಾರ್‌ನ ಚಿತ್ರಣವೂ ಇದೆ.

ಯುವ ಚಿತ್ರದ ಟ್ರೇಲರ್‌ ನೋಡಿ

ಈ ಟ್ರೇಲರ್‌ ಆರಂಭದಲ್ಲಿ ಯುವ ಅಪ್ಪನಿಗೆ ಕೆಟ್ಟ ಮಗ ಆಗಿರುವುದನ್ನು ಕಾಣಬಹುದು. ಒಳ್ಳೆಯವನಾಗ್ಲಿ ಎಂದು ಕಾಲೇಜಿಗೆ ಕಳುಹಿಸಿದರೆ ಇಲ್ಲೂ ಇದೇ ರೀತಿ ಮಾಡ್ತಿ ಎಂದು ಮಗನಿಗೆ ಬಯ್ಯುತ್ತಾ ಇರುತ್ತಾರೆ. ಕಾಲೇಜು ಗುಂಪು ಸಂಘರ್ಷಗಳು ಮಾತ್ರವಲ್ಲದೆ ಗ್ಯಾಂಗ್‌ವಾರ್‌ ವಿಷಯಗಳೂ ಇವೆ. ಕೊನೆಗೆ ಜೀವನದ ಮಹತ್ವ ಅರಿತು ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಾನೆ. ಆದರೆ, ಆ ಬದುಕು ಈತ ಅಂದುಕೊಂಡಷ್ಟು ಸುಲಭ ಇರುವಂತೆ ತೋರುತ್ತಿಲ್ಲ. ಕೊನೆಗೆ ಅಪ್ಪನ ಮಹತ್ವ ಅರಿವಾಗುತ್ತದೆ. ಇಂತಹ ಹಲವು ಅಂಶಗಳು ಟ್ರೇಲರ್‌ನಲ್ಲಿವೆ.

ಯುವ ಸಿನಿಮಾ ಬಿಡುಗಡೆ ದಿನಾಂಕ

ದಿವಂಗತ ಡಾ. ರಾಜ್‌ಕುಮಾರ್‌ ಮೊಮ್ಮಗ ಯುವರಾಜ್‌ಕುಮಾರ್‌ ನಟನೆಯ ಯುವ ಸಿನಿಮಾವು ಇದೇ ಮಾರ್ಚ್‌ 29ರಂದು ಬಿಡುಗಡೆಯಾಗುತ್ತಿದೆ. ಮಾರ್ಚ್‌ 21 ಅಂದರೆ ಇಂದು ಟ್ರೇಲರ್‌ ರಿಲೀಸ್‌ ಆಗಿದೆ. ಇಷ್ಟೇ ಅಲ್ಲ. ಇದೇ ಮಾರ್ಚ್‌ 23ರಂದು ಹೊಸಪೇಟೆಯಲ್ಲಿ ಯುವ ಬಿಡುಗಡೆ ಪೂರ್ವ ಕಾರ್ಯಕ್ರಮ "ಯುವ ಸಂಭ್ರಮ" ನಡೆಯಲಿದೆ. ಹೊಸಪೇಟೆಯ ಪುನೀತ್‌ ರಾಜ್‌ಕುಮಾರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ಈ ಕಾರ್ಯಕ್ರಮ ಆರಂಭವಾಗಲಿದೆ.

ಯುವ ಟ್ರೇಲರ್‌ಗೆ ಫ್ಯಾನ್ಸ್‌ ಪ್ರತಿಕ್ರಿಯೆ

ಯುವ ಟ್ರೇಲರ್‌ ನೋಡಿ ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸಾಕಷ್ಟು ಜನರು ಯುವ ರಾಜ್‌ಕುಮಾರ್‌ ಅವರಲ್ಲಿ ಅಪ್ಪು ಸರ್‌ನ ನೋಡ್ತಾ ಇದ್ದೇವೆ ಎಂದು ಕಾಮೆಂಟ್‌ ಮಾಡಿದ್ದಾರೆ. "ಹೇಳೋರು ಕೇಳೋರು ಯಾರು ಇಲ್ಲ ಅಂತ ಅಂದ್ಕೊಂಡಿದ್ದೀರಾ, ಹೆಸರು ನೆನಪಾಯ್ತಾ, ಯುವ ಯುವ ಯುವ" "ಇವತ್ತು ಹೆಸರು ನಮಗೆ ಮಾತ್ರ ನೆನಪಿದೆ...ನಾಳೆ ಊರಿಗೆಲ್ಲ ನೆನಪಿರುತ್ತೆ ! ಯುವಾ ...ಅಜಾತ ಶತ್ರು" "ಖರ್ಚು ಮಾಡುವಾಗ ಬರೀ ನಮ್ಮ ಖುಷಿ ಮಾತ್ರ ಕಾಣುತ್ತೆ" "ಆಕ್ಟಿಂಗ್‌, ಡ್ಯಾನ್ಸಿಂಗ್‌, ಫೈಟಿಂಗ್‌ ಎಲ್ಲ ಗೊತ್ತಿರುವಂತಹ ಒಬ್ಬ ಯಂಗ್‌ಸ್ಟಾರ್‌ ಬಂದ" "ಅಪ್ಪ ಗುರುವೇ ಗೆದ್ದೆ ನಮ್ಮ ಕರುನಾಡ ಚಿತ್ರ ಪ್ರೀತ್ಸೋರ ಮನಸ್ನ ಕದ್ದೆ ಹ್ಯಾಟ್ ಆಫ್ ಅಣ್ಣಾವ್ರ ಬ್ಲಾಡ್ ಲೈನ್ ಗೆ" "ಇದು ದೊಡ್ಡಮನೆಯ ಹೊಸ ಅದ್ಯಾಯ ಆರಂಭ" "ಧಾರಾಕಾರವಾಗಿ ಮಳೆ ಸುರಿಸುವ ಮೋಡಗಳ ಮಧ್ಯೆ ನುಗ್ಗಿ ಬರುವ ಸಿಡಿಲಿನ ತರ ಯುವ ಗೋಚರಿಸುತ್ತಿದ್ದಾನೆ" “ಅಣ್ಣಾವ್ರ ಮೊಮ್ಮಗ ಚಿಕ್ಕಪ್ಪನ ಪ್ರೀತಿಯ ಮಗ ವಿನಯನ ಆಶೀರ್ವಾದದೊಂದಿಗೆ ಬರುತ್ತಿರುವ ಪ್ರೀತಿಯ ತಮ್ಮ ... ಯುವ ರಾಜಕುಮಾರ ಗೆ ಬರುವ ದಿನಗಳಲ್ಲಿ ಒಳ್ಳೆಯದಾಗಲಿ.... ಜೈ ಅಪ್ಪು ಬಾಸ್‌ಗೆ" ಹೀಗೆೆ ಯುವ ಯೂಟ್ಯೂಬ್‌ ಟ್ರೇಲರ್‌ಗೆ ಕಾಮೆಂಟ್‌ಗಳ ಪ್ರವಾಹವೇ ಬರುತ್ತಿದೆ.

IPL_Entry_Point