ಕನ್ನಡ ಸುದ್ದಿ  /  Entertainment  /  Sandalwood News Yuva Rajkumar S Debut Yuva Movie Audio Rights Sold For Whopping Price Kannada Film Industry Update Mnk

Yuva Rajkumar: ರಿಲೀಸ್‌ಗೂ ಮೊದಲೇ ದಾಖಲೆ ಬರೆದ ಯುವ; ಅಪ್ಪು ಉತ್ತರಾಧಿಕಾರಿಯ ಚೊಚ್ಚಲ ಚಿತ್ರದ ಹಾಡುಗಳಿಗೆ ಕೋಟಿ ಕೋಟಿಯ ಕಿರೀಟ!

ಯುವ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡುತ್ತಿರುವ ಯುವ ರಾಜ್‌ಕುಮಾರ್‌ ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಅಭಿಮಾನಿ ವಲಯದಿಂದಲೂ ಅಪ್ಪು ಉತ್ತರಾಧಿಕಾರಿ ಎಂಬ ಪಟ್ಟವನ್ನೂ ಅಲಂಕರಿಸಿದ್ದಾರೆ. ಹೀಗಿರುವಾಗಲೇ ಯುವ ಚಿತ್ರದ ಹಾಡುಗಳಿಗೆ ಕೋಟಿ ಬೆಲೆ ಕಟ್ಟಿದೆ ಆನಂದ್‌ ಆಡಿಯೋ ಸಂಸ್ಥೆ.

Yuva Rajkumar: ರಿಲೀಸ್‌ಗೂ ಮೊದಲೇ ದಾಖಲೆ ಬರೆದ ಯುವ; ಅಪ್ಪು ಉತ್ತರಾಧಿಕಾರಿಯ ಚೊಚ್ಚಲ ಚಿತ್ರಕ್ಕೆ ಕೋಟಿ ಕೋಟಿಯ ಕಿರೀಟ!
Yuva Rajkumar: ರಿಲೀಸ್‌ಗೂ ಮೊದಲೇ ದಾಖಲೆ ಬರೆದ ಯುವ; ಅಪ್ಪು ಉತ್ತರಾಧಿಕಾರಿಯ ಚೊಚ್ಚಲ ಚಿತ್ರಕ್ಕೆ ಕೋಟಿ ಕೋಟಿಯ ಕಿರೀಟ!

Yuva Audio Rights: ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಉತ್ತರಾಧಿಕಾರಿ ಯಾರು? ಈ ಪ್ರಶ್ನೆಗೆ ಉತ್ತರ ಯುವ ರಾಜ್‌ಕುಮಾರ್! ದೊಡ್ಮನೆ ಅಭಿಮಾನಿಗಳಿಂದಲೂ ಅದೇ ರೀತಿಯಲ್ಲಿ ಕರೆಸಿಕೊಳ್ಳುತ್ತಿದ್ದಾರೆ ರಾಘವೇಂದ್ರ ರಾಜ್‌ಕುಮಾರ್‌ ಅವರ ಕಿರಿಯ ಪುತ್ರ ಯುವರಾಜ್ ಕುಮಾರ್. ಇದೀಗ ಇದೇ ಯುವ ಅವರ ಮೊದಲ ಕನಸು ನನಸಾಗಲು, ಕೆಲವೇ ದಿನ ಉಳಿದಿವೆ. ಹೀಗಿರುವಾಗಲೇ ಸ್ಯಾಂಡಲ್‌ವುಡ್ ಯುವರಾಜನ ತೆಕ್ಕೆಗೆ ಈಗ ಭರ್ಜರಿ ದಾಖಲೆಯೊಂದು ಸೇರಿಕೊಂಡಿದೆ.

ಯುವ ರಾಜ್ ಕುಮಾರ್ ಅವರ ಚೊಚ್ಚಲ ಚಿತ್ರ ಯುವ. ಈಗಾಗಲೇ ಹಲವು ವಿಶೇಷತೆಗಳಿಂದಲೂ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಘೋಷಣೆ ಆದಾಗಿನಿಂದಲೂ ಸುದ್ದಿಯಲ್ಲಿರುವ ಈ ಸಿನಿಮಾ ಇತ್ತೀಚೆಗಷ್ಟೇ ಶೂಟಿಂಗ್‌ ಮುಗಿಸಿಕೊಂಡಿತ್ತು. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲೂ ಬಿಜಿಯಾಗಿರುವ ಈ ಸಿನಿಮಾ, ಈಗಾಗಲೇ ರಿಲೀಸ್‌ ದಿನಾಂಕವನ್ನೂ ಘೋಷಣೆ ಮಾಡಿದೆ. ಮಾರ್ಚ್ 28ರಿಂದ ಕರುನಾಡಿನ ಮುಂದೆ ಯುವ ಪರ್ವ ಆರಂಭವಾಗಲಿದೆ.

ಹೀಗೆ ಬಿಡುಗಡೆಗೆ ಕೆಲವೇ ದಿನ ಇರುವ ಹಿನ್ನೆಲೆಯಲ್ಲಿ ಚಿತ್ರದ ಪ್ರಚಾರದ ಪ್ಲಾನ್ ಕೂಡ ಹೊಂಬಾಳೆ ಸಂಸ್ಥೆ ರೆಡಿ ಮಾಡಿಕೊಳ್ಳುತ್ತಿದೆ. ಸಿನಿಮಾದ ಮೊದಲ ಹಾಡನ್ನು ಅದ್ಧೂರಿಯಾಗಿ ರಿಲೀಸ್ ಮಾಡುವ ಆಲೋಚನೆ ಕೂಡ ಹೊಂಬಾಳೆ ಸಂಸ್ಥೆಗೆ ಇದೆ ಎನ್ನುವ ಮಾತು ಕೇಳಿ ಬರ್ತಿದೆ. ಇದೆಲ್ಲದಕ್ಕೂ ಪುಷ್ಠಿ ನೀಡುವಂತೆ ಯುವ ಚಿತ್ರದ ಆಡಿಯೋ ರೈಟ್ಸ್ ಈಗ ಮಾರಾಟವಾಗಿದೆ. ಅದು ಒಂದಲ್ಲ ಎರಡಲ್ಲ ಮೂರು ಕೋಟಿಗೆ ಎಂಬುದು ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಲೇಟೆಸ್ಟ್ ನ್ಯೂಸ್.

ಕನ್ನಡದ ಪ್ರತಿಷ್ಠಿತ ಆಡಿಯೋ ಸಂಸ್ಥೆಯಲ್ಲಿ ಒಂದಾದ, ಆನಂದ್ ಆಡಿಯೋ ಯುವ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿದೆ. ವ್ಯಾಪಾರ ಎಷ್ಟು ಕೋಟಿಗೆ ಆಗಿದೆ ಎನ್ನುವುದು ಸದ್ಯಕ್ಕೆ ಗೌಪ್ಯವಾಗಿದೆ. ಆದರೆ ಗಾಂಧಿನಗರದಲ್ಲಿ ಮಾತ್ರ ಮೂರು ಕೋಟಿಗೆ ಚಿತ್ರದ ಹಾಡುಗಳು ಬಿಕರಿಯಾಗಿವೆ ಎಂಬ ವಿಚಾರ ಓಡಾಡುತ್ತಿದೆ. ದಶಕಗಳಿಂದ ಸೂಪರ್ ಸ್ಟಾರ್ ಪಟ್ಟವನ್ನ ಅಲಂಕರಿಸಿರುವ ನಾಯಕರ ಸಿನಿಮಾದ ಹಾಡುಗಳೇ 2 ಕೋಟಿ ಗಡಿ ದಾಟುವುದು ಅಪರೂಪ. ಅಂತಹದರಲ್ಲಿ ಯುವ ರಾಜ್‌ಕುಮಾರ್ ಮೊದಲ‌ ಸಿನಿಮಾದ ಹಾಡುಗಳು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರೋದು ದಾಖಲೆಯೇ ಸರಿ.

ರಾಜಕುಮಾರ ಸೇರಿ ಹಲವು ಸೂಪರ್‌ಹಿಟ್‌ ಸಿನಿಮಾಗಳನ್ನು ಸ್ಯಾಂಡಲ್‌ವುಡ್‌ಗೆ ನೀಡಿದ ನಿರ್ದೇಶ ಸಂತೋಷ್ ಆನಂದ್‌ ರಾಮ್‌ ಯುವ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಯುವರತ್ನ, ರಾಘವೇಂದ್ರ ಸ್ಟೋರ್ಸ್‌ ಬಳಿಕ ಯುವ ಚಿತ್ರಕ್ಕೂ ಹೊಂಬಾಳೆ ಫಿಲಂಸ್‌ ಬಂಡವಾಳ ಹೂಡಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ , ಶ್ರೀಶಾ ಕುದುವಳ್ಳಿ ಛಾಯಾಗ್ರಹಣ ಚಿತ್ರಕ್ಕಿದೆ. ಕಾಂತಾರ ಬೆಡಗಿ ಸಪ್ತಮಿ ಗೌಡ ಯುವ ಜೊತೆಗೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ.

ಆನಂದ್ ಆಡಿಯೋ, ಯುವ ರಾಜ್ ಕುಮಾರ್ ಅವರ ಚೊಚ್ಚಲ ಸಿನಿಮಾದ ಯುವ ಚಿತ್ರದ ಹಾಡುಗಳನ್ನು ಖರೀಸಿದೆ. ಈ ಮೂಲಕ ಇನ್ನೇನು ಶೀಘ್ರದಲ್ಲಿ ಕರುನಾಡಿನೆಲ್ಲೆಡೆ ಯುವ ಚಿತ್ರದ ಹಾಡುಗಳ ದಿಬ್ಬಣ ಹೊರಡಲಿದೆ. ಯುವ ಪರ್ವಕ್ಕೆ ಬೆಳ್ಳಿತೆರೆ ಮಾರ್ಚ್ 28ಕ್ಕೆ ಸಾಕ್ಷಿಯಾಗಲಿದೆ.

ವರದಿ: ಮನೋಜ್ ವಿಜಯೀಂದ್ರ

IPL_Entry_Point