Yuva OTT: ಅಂದುಕೊಂಡಿದ್ದಕ್ಕಿಂತ ಮುಂಚಿತವಾಗಿ ಒಟಿಟಿಗೆ ಬಂತು ‘ಯುವ’; ಆದ್ರೆ, ಈ ಕಂಡಿಷನ್ ನಿಮ್ಮ ಗಮನದಲ್ಲಿರಲಿ
ಕನ್ನಡ ಸುದ್ದಿ  /  ಮನರಂಜನೆ  /  Yuva Ott: ಅಂದುಕೊಂಡಿದ್ದಕ್ಕಿಂತ ಮುಂಚಿತವಾಗಿ ಒಟಿಟಿಗೆ ಬಂತು ‘ಯುವ’; ಆದ್ರೆ, ಈ ಕಂಡಿಷನ್ ನಿಮ್ಮ ಗಮನದಲ್ಲಿರಲಿ

Yuva OTT: ಅಂದುಕೊಂಡಿದ್ದಕ್ಕಿಂತ ಮುಂಚಿತವಾಗಿ ಒಟಿಟಿಗೆ ಬಂತು ‘ಯುವ’; ಆದ್ರೆ, ಈ ಕಂಡಿಷನ್ ನಿಮ್ಮ ಗಮನದಲ್ಲಿರಲಿ

ಚಿತ್ರಮಂದಿರಗಳಲ್ಲಿ ಸದ್ದು ಮಾಡಿದ್ದ ಯುವ ರಾಜ್‌ಕುಮಾರ್‌ ನಟನೆಯ ಚೊಚ್ಚಲ ಯುವ ಸಿನಿಮಾ ಈಗ ಒಟಿಟಿ ಅಂಗಳ ಪ್ರವೇಶಿಸಿದೆ. ಹಾಗಾದರೆ, ಯಾವ ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ? ಹೀಗಿದೆ ಮಾಹಿತಿ.

Yuva OTT: ಅಂದುಕೊಂಡಿದ್ದಕ್ಕಿಂತ ಮುಂಚಿತವಾಗಿ ಒಟಿಟಿಗೆ ಬಂತು ‘ಯುವ’; ಆದ್ರೆ, ಈ ಕಂಡಿಷನ್ ನಿಮ್ಮ ಗಮನದಲ್ಲಿರಲಿ
Yuva OTT: ಅಂದುಕೊಂಡಿದ್ದಕ್ಕಿಂತ ಮುಂಚಿತವಾಗಿ ಒಟಿಟಿಗೆ ಬಂತು ‘ಯುವ’; ಆದ್ರೆ, ಈ ಕಂಡಿಷನ್ ನಿಮ್ಮ ಗಮನದಲ್ಲಿರಲಿ

Yuva OTT: ಡಾ. ರಾಜ್‌ಕುಮಾರ್‌ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್‌ ಕಿರಿ ಮಗ ಯುವ ರಾಜ್‌ಕುಮಾರ್‌ ನಟನೆಯ ಚೊಚ್ಚಲ ಸಿನಿಮಾ ಯುವ ಚಿತ್ರಮಂದಿರಗಳಲ್ಲಿ ಸದ್ದು ಮುಂದುವರಿದಿದೆ. ಕಳೆದ ತಿಂಗಳ 29ರಂದು ಸಿಲ್ವರ್‌ ಸ್ಕ್ರೀನ್‌ ಮೇಲೆ ರಾರಾಜಿಸಿದ್ದ ಯುವ ರಾಜ್‌ಕುಮಾರ್‌, ಅವರ ಅಪಾರ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ. ನಿರೀಕ್ಷೆಗೂ ಮೀರಿ ಸಿನಿಮಾವನ್ನು ಫ್ಯಾನ್ಸ್‌ ಎತ್ತಿ ಹಿಡಿದಿದ್ದರು. ಅಪ್ಪು ಉತ್ತರಾಧಿಕಾರಿ ಎಂದೇ ಬಿಂಬಿಸಿಕೊಂಡಿರುವ ಯುವ, ಚಿಕ್ಕಪ್ಪನಂತೆ ಡಾನ್ಸ್‌ ಮತ್ತು ಆಕ್ಷನ್‌ ಸೀನ್‌ಗಳಲ್ಲೂ ಗತ್ತು ಪ್ರದರ್ಶಿಸಿದ್ದರು. ಈಗ ಇದೇ ಸಿನಿಮಾ ಒಟಿಟಿ ಕಡೆ ಆಗಮಿಸಿದೆ.

ಕನ್ನಡದಲ್ಲಿ ಮತ್ತು ಪರಭಾಷೆಗಳಲ್ಲಿ ನಿರ್ಮಾಣ ಕೆಲಸದಲ್ಲಿ ಬಿಜಿಯಾಗಿರುವ ಹೊಂಬಾಳೆ ಫಿಲಂಸ್‌ ಸಂಸ್ಥೆ, ಬ್ಯಾಕ್‌ ಟು ಬ್ಯಾಕ್‌ ಹಿಟ್‌ ನೀಡುತ್ತ ಬಂದಿದೆ. ಅದರಂತೆ, ಯುವ ಸಿನಿಮಾವನ್ನೂ ಅದ್ಧೂರಿಯಾಗಿ ನಿರ್ಮಾಣ ಮಾಡಿದೆ. ಬಾಕ್ಸ್‌ ಆಫೀಸ್‌ನಲ್ಲಿ ಡಿಸೇಂಟ್‌ ಗಳಿಕೆ ಕಂಡು, ವಿಮರ್ಶೆ ವಿಚಾರವಾಗಿಯೂ ಎಲ್ಲರ ಮನಗೆದ್ದಿತ್ತು ಯುವ ಸಿನಿಮಾ. ಹೀಗಿರುವ ಯುವ ಸಿನಿಮಾದ ಒಟಿಟಿ ಬಿಡುಗಡೆ ಯಾವಾಗ? ಎಂಬ ಪ್ರಶ್ನೆ ಎಲ್ಲರಿಗೂ ಇತ್ತು. ಅದರಂತೆ ಈಗ ಅದಕ್ಕೆ ಉತ್ತರ ಸಿಕ್ಕಿದೆ. ಸದ್ದಿಲ್ಲದೇ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ.

ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಕಮರ್ಷಿಯಲ್‌ ಆಂಗಲ್‌ನಲ್ಲಿ ಯುಥ್‌ ಕಥೆಯನ್ನು ನೋಡುಗರಿಗೆ ಅರ್ಪಿಸಿದ್ದಾರೆ. ಚಿತ್ರಮಂದಿರದಲ್ಲಿ ಸದ್ದು ಮಾಡುತ್ತ, ಘಟಾನುಘಟಿ ಸಿನಿಮಾಗಳ ನಡುವೆ ನಾಲ್ಕನೇ ವಾರದಲ್ಲಿಯೂ ಈ ಸಿನಿಮಾ ಓಟಕ್ಕಿಳಿದಿದೆ. ಕಾಲೇಜು, ಜೀವನ, ಬದುಕು, ಬವಣೆ, ಸಂಬಂಧ, ಪ್ರೀತಿ, ದೋಸ್ತಿ ಹೀಗೆ ಒಂದಷ್ಟು ಅಂಶಗಳನ್ನು ಪೋಣಿಸಿ ಯುವ ಸಿನಿಮಾ ಹೆಣೆದಿರುವ ನಿರ್ದೇಶಕರು, ಮಾಸ್‌ ಅಂಶಗಳಿಗಷ್ಟೇ ಸೀಮಿತ ಮಾಡದೇ ಕ್ಲಾಸ್‌ ವಿಚಾರಗಳನ್ನೂ ಪ್ರೇಕ್ಷಕರ ಮುಂದಿಟ್ಟಿದ್ದರು. ಅಪ್ಪ ಮಗನ ಬಾಂಧವ್ಯವೂ ಚಿತ್ರದ ಹೈಲೈಟ್‌ ಆಗಿತ್ತು.

ಸದ್ದಿಲ್ಲದೇ ಒಟಿಟಿಗೆ ಪ್ರವೇಶ

ಥಿಯೇಟರ್‌ಗಳಲ್ಲಿ ರಿಲೀಸ್‌ ಆಗಿ ತಿಂಗಳ ಬಳಿಕ ಒಟಿಟಿಯಲ್ಲಿ ಚಿತ್ರಗಳು ಸ್ಟ್ರೀಮಿಂಗ್‌ ಆರಂಭಿಸುವುದು ಸಹಜ. ಅದಕ್ಕೂ ಮುನ್ನ ಸಾಕಷ್ಟು ಸಿನಿಮಾಗಳು ಒಟಿಟಿ ಅಂಗಳಕ್ಕೆ ಬಂದ ಉದಾಹರಣೆಗಳೂ ಇವೆ. ಈಗ ಯುವ ಸಿನಿಮಾ ಸಹ ಸದ್ದಿಲ್ಲದೇ ಒಟಿಟಿ ಪ್ರವೇಶಿಸಿದೆ. ಬಿಡುಗಡೆಯಾದ 22 ದಿನಕ್ಕೆ ಒಟಿಟಿಗೆ ಬಂದಿದೆ ಯುವ ಚಿತ್ರ.

ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್‌ ಶುರು

ಯುವ ಚಿತ್ರದ ಒಟಿಟಿ ಹಕ್ಕುಗಳನ್ನು ಅಮೆಜಾನ್‌ ಪ್ರೈಂ ಪಡೆದುಕೊಂಡಿದೆ. ಅದರಂತೆ ಶುಕ್ರವಾರದಿಂದಲೇ ಅಮೆಜಾನ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಿದೆ. ಆದರೆ, ಈ ಸಿನಿಮಾ ಸದ್ಯ ಎಲ್ಲರಿಗೂ ವೀಕ್ಷಣೆಗೆ ಲಭ್ಯವಿಲ್ಲ. ಬದಲಿಗೆ ಪ್ರೈಂನಲ್ಲೂ ಹಣ ಪಾವತಿಸಿ ಸಿನಿಮಾ ನೋಡಬೇಕಿದೆ. ನೂರು, ಇನ್ನೂರಲ್ಲ ಬರೋಬ್ಬರಿ 349 ರೂಪಾಯಿ ನೀಡಿ ಸಿನಿಮಾ ವೀಕ್ಷಿಸಬಹುದಾಗಿದೆ. ಈ ಮೊದಲು ಮೇ ಎರಡನೇ ಅಥವಾ ಮೂರನೇ ವಾರದಲ್ಲಿ ಈ ಸಿನಿಮಾ ಸ್ಟ್ರೀಮಿಂಗ್‌ ಆಗಲಿದೆ ಎನ್ನಲಾಗಿತ್ತು.

ಯಾವ ಚಾನೆಲ್‌ನಲ್ಲಿ ಸಿನಿಮಾ ಪ್ರಸಾರ

ಅಮೆಜಾನ್‌ ಪ್ರೈಂ ಡಿಜಿಟಲ್ ಸ್ಟ್ರೀಮಿಂಗ್‌ ರೈಟ್ಸ್‌ ಪಡೆದರೆ, ಕಿರುತೆರೆಯಲ್ಲಿ ಸ್ಟಾರ್‌ ಸುವರ್ಣ ಚಾನೆಲ್‌ ಯುವ ಸಿನಿಮಾದ ಸ್ಯಾಟಲೈಟ್‌ ಹಕ್ಕುಗಳನ್ನು ಬಹುಕೋಟಿ ಹಣ ಪಾವತಿಸಿ ಖರೀದಿಸಿದೆ. ಒಟಿಟಿಯಲ್ಲಿ ಚಿತ್ರ ಸ್ಟ್ರೀಮ್‌ ಆದ ಬಳಿಕವೇ ಟಿವಿಯಲ್ಲಿ ಯುವನ ಹವಾ ಶುರುವಾಗಲಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ಮೂಡಿಬಂದ ಈ ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದರೆ, ಶ್ರೀಶಾ ಕುದುವಳ್ಳಿ ಅವರ ಛಾಯಾಗ್ರಹಣವಿದೆ. ಕಾಂತಾರ ಸಿನಿಮಾ ಖ್ಯಾತಿ ಸಪ್ತಮಿ ಗೌಡ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ.

ತಾತನ ಜನ್ಮ ದಿನಕ್ಕೆ ಯುವ ಮುಂದಿನ ಸಿನಿಮಾ

ಇನ್ನು ಏಪ್ರಿಲ್‌ 24ರಂದು ಡಾ. ರಾಜ್‌ಕುಮಾರ್‌ ಅವರ ಜಯಂತಿ. ಈ ನಿಮಿತ್ತ ಯುವ ರಾಜ್‌ಕುಮಾರ್‌ ಅವರ ಹೊಸ ಸಿನಿಮಾ ಘೋಷಣೆ ಸಾಧ್ಯತೆ ಇದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

Whats_app_banner