ಕನ್ನಡ ಸುದ್ದಿ  /  Entertainment  /  Sandalwood News Yuva Rajkumar Starrer Yuva Movie Released Yuva Movie Review Yuva Movie Public Review And Ratings Mnk

Yuva Movie Review: ಅಪ್ಪು ಉತ್ತರಾಧಿಕಾರಿ ಸಿಕ್ಕೇ ಬಿಟ್ರು! ದೊಡ್ಮನೆ ಕುಡಿಯ ‘ಯುವ’ ಸಿನಿಮಾ ನೋಡಿದ ಪ್ರೇಕ್ಷಕ ಏನಂದ?

ಯುವ ರಾಜ್‌ಕುಮಾರ್‌ ನಟನೆಯ ಚೊಚ್ಚಲ ಸಿನಿಮಾ ಯುವ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಚಿತ್ರದ ಪ್ರೀಮಿಯರ್‌ ಶೋನಲ್ಲಿ ಸಿನಿಮಾ ನೋಡಿದ ಪ್ರೇಕ್ಷಕ, ಅಪ್ಪು ಅವರನ್ನೇ ನೋಡಿದಂಗಾಯ್ತು ಎನ್ನುತ್ತಿದ್ದಾರೆ. ಹೀಗಿದೆ ಪಬ್ಲಿಕ್‌ ರಿವ್ಯೂವ್.‌

Yuva Movie Review: ಅಪ್ಪು ಉತ್ತರಾಧಿಕಾರಿ ಸಿಕ್ಕೇ ಬಿಟ್ರು! ದೊಡ್ಮನೆ ಕುಡಿಯ ‘ಯುವ’ ಸಿನಿಮಾ ನೋಡಿದ ಪ್ರೇಕ್ಷಕ ಏನಂದ?
Yuva Movie Review: ಅಪ್ಪು ಉತ್ತರಾಧಿಕಾರಿ ಸಿಕ್ಕೇ ಬಿಟ್ರು! ದೊಡ್ಮನೆ ಕುಡಿಯ ‘ಯುವ’ ಸಿನಿಮಾ ನೋಡಿದ ಪ್ರೇಕ್ಷಕ ಏನಂದ?

Yuva Movie Public Review: ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನ, ಹೊಂಬಾಳೆ ಫಿಲಂಸ್‌ ನಿರ್ಮಾಣದ ಯುವ ಸಿನಿಮಾ ಇಂದು (ಮಾ. 29) ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಡಾ. ರಾಜ್‌ಕುಮಾರ್‌ ಕುಟುಂಬದ ಮೂರನೇ ತಲೆಮಾರಿನ ಕುಡಿ, ರಾಘವೇಂದ್ರ ರಾಜಕುಮಾರ್‌ ಕಿರಿಯ ಪುತ್ರ ಯುವ ರಾಜ್‌ಕುಮಾರ್‌ ಬೆಳ್ಳಿಪರದೆ ಮೇಲೆ ಮಿನುಗಿದ್ದಾರೆ. ಒಂದಷ್ಟು ನಿರೀಕ್ಷೆಗಳ ಭಾರವನ್ನು ಹೊತ್ತು ಆಗಮಿಸಿದ್ದ ಯುವ ರಾಜ್‌ಕುಮಾರ್‌, ಚೊಚ್ಚಲ ಚಿತ್ರದಲ್ಲಿ ಭರವಸೆ ಮೂಡಿಸಿದ್ದಾರೆ.

ಜೂನಿಯರ್‌ ಅಪ್ಪು ಎಂದೇ ಅಭಿಮಾನಿಗಳಿಂದ ಕರೆಸಿಕೊಂಡಿರುವ ಯುವ, ಆ ಪಟ್ಟವನ್ನು ಅಷ್ಟೇ ಜವಾಬ್ದಾರಿಯಿಂದ ನಿಭಾಯಿಸಿಕೊಂಡು ಹೋಗುವ ಭರವಸೆಯನ್ನೂ ಸಿನಿಮಾ ಮೂಲಕ ನೀಡಿದ್ದಾರೆ. ಟ್ರೇಲರ್‌ ಮೂಲಕ ಸದ್ದು ಮಾಡಿ, ಮೈನವಿರೇಳಿಸುವ ಆಕ್ಷನ್‌, ಡಾನ್ಸ್‌ನಲ್ಲೂ ಮೋಡಿ ಮಾಡಿದ್ದ ಯುವ, ಚಿತ್ರದ ಫಸ್ಟ್‌ ಡೇ ಫಸ್ಟ್‌ ಶೋನ ರಿವ್ಯೂವ್‌ ಹೊರಬಿದ್ದಿದೆ. ಸಿನಿಮಾ ನೋಡಿದ ಜನ, ಅಪ್ಪು ಉತ್ತರಾಧಿಕಾರಿ ಸಿಕ್ಕೇ ಬಿಟ್ರು ಅನ್ನೋ ಖುಷಿಯಲ್ಲಿದ್ದಾರೆ.

ಹೊಂಬಾಳೆಯಿಂದ ಯುವ ಲಾಂಚ್‌

ಸ್ಯಾಂಡಲ್‌ವುಡ್‌ನಲ್ಲಿ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌, ಯುವ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇದೇ ಹೊಂಬಾಳೆ ಫಿಲಂಸ್‌ಗೆ ರಾಜಕುಮಾರ್‌, ಯುವರತ್ನ, ರಾಘವೇಂದ್ರ ಸ್ಟೋರ್ಸ್‌ ಸಿನಿಮಾಗಳನ್ನು ಮಾಡಿಕೊಟ್ಟಿದ್ದ ಸಂತೋಷ್‌, ಯುವ ರಾಜ್‌ಕುಮಾರ್‌ ಅವರನ್ನೂ ಇದೀಗ ಅದೇ ಹೊಂಬಾಳೆ ಮೂಲಕ ಲಾಂಚ್‌ ಮಾಡಿದ್ದಾರೆ. ಆ ಮಟ್ಟದ ಹೈಪ್‌ ಜತೆಗೆ ಬಂದ ಯುವ ಚಿತ್ರದ ಅಬ್ಬರವೂ ಇದೀಗ ಶುರುವಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕ ಆಂಗ್ರಿ ಯಂಗ್‌ ಮ್ಯಾನ್‌ ಎಂದು ಪಟ್ಟ ನೀಡುತ್ತಿದ್ದಾರೆ. ಪ್ರಬುದ್ಧತೆಯ ನಟನೆ ಎಂದೂ ಕೊಂಡಾಡುತ್ತಿದ್ದಾರೆ.

ಪಬ್ಲಿಕ್‌ ಕಡೆಯಿಂದ ಸಿಕ್ತು ಪಾಸಿಟಿವ್‌ ವಿಮರ್ಶೆ

- ಮೊದಲ ಸಿನಿಮಾ ಅಂತ ಅನಿಸೋದೇ ಇಲ್ಲ ಎನ್ನುವ ಪ್ರೇಕ್ಷಕ, ಇದು ಯುವ ಅವರ ಮೊದಲ ಸಿನಿಮಾ ಅಂತ ಅನಿಸೋದೆ ಇಲ್ಲ. ಅಷ್ಟೊಂದು ಪ್ರಬುದ್ಧತೆಯ ನಟನೆ ಅವರಿಂದ ಸಂದಾಯವಾಗಿದೆ. ಇಂಡಸ್ಟ್ರಿಗೆ ಅಮಿತಾಬ್‌ ಬಚ್ಚನ್‌ ರೀತಿ ಆಂಗ್ರಿ ಯಂಗ್‌ ಮ್ಯಾನ್‌ ಸಿಕ್ಕಿದ್ದಾರೆ.

- ತಂದೆ ಮಗನ ಸೆಂಟಿಮೆಂಟಿನ ಸಿನಿಮಾ ಸಖತ್ತಾಗಿದೆ. ಓವರ್‌ ಆಲ್‌ ಆಗಿ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಎಮೋಷನ್‌ ಆಗಿ ಎಲ್ಲರಿಗೂ ಕಾಡುತ್ತೆ. ಅಪ್ಪು ಅವರನ್ನು ಅವರ ಮುಖದಲ್ಲೂ ಕಾಣಬಹುದು. ಇಂಡಸ್ಟ್ರಿಗೆ ಒಳ್ಳೆಯ ಹೀರೋ ಸಿಕ್ಕಿದ್ದಾರೆ. ಪುನೀತ್‌ ಅವರ ಶ್ಯಾಡೋ ಕಾಣುತ್ತದೆ. ಒಳ್ಳೆಯ ಫ್ಯಾಮಿಲಿ ಎಂಟರ್‌ಟ್ರೇನರ್‌.

- ಯುವ ಅವರ ನಟನೆಯ ಜತೆಗೆ ಅವರ ಗಾಂಭೀರ್ಯತೆಯೂ ಸಿನಿಮಾದ ಹೈಲೈಟ್.‌ ಅಪ್ಪ ಮಗನ ಸೆಂಟಿಮೆಂಟ್‌ ಸಿನಿಮಾದಲ್ಲಿ ಎಲ್ಲರಿಗೂ ಇಷ್ಟವಾಗುತ್ತೆ. ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿಬಂದಿದೆ. ಪಟಾಕಿ ಯಾರದ್ದೇ ಆದ್ರೂ ಹಚ್ಚೋವ್ರು ನಾವಿರಬೇಕು ಡೈಲಾಗ್‌ ಸಖತ್ತಾಗಿದೆ.

- ಬರೀ ನಟನೆಯಷ್ಟೇ ಅಲ್ಲ, ಚಿತ್ರದ ಛಾಯಾಗ್ರಹಣ, ಮ್ಯೂಸಿಕ್‌, ಸಂಭಾಷಣೆಗಳಿಗೂ ಪೂರ್ಣಾಂಕ ಸಲ್ಲಬೇಕು. ಸ್ಟ್ರಾಟಜಿಕಲ್‌ ಆಗಿ ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದಾರೆ.

-ಇಂದಿನ ಯುವ ಜನತೆಗೆ ಏನು ಬೇಕೋ ಅದೇ ವಿಷಯವನ್ನು ಆಯ್ದುಕೊಂಡು ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ಸಿನಿಮಾ ಶುರುವಾದಾಗ, ಇದೇನಿದು ಫೈಟ್‌ ಇದೆ ಅನ್ಸುತ್ತೆ. ಬರ್ತಾ ಬರ್ತಾ ಕಥೆ ತೆರೆದುಕೊಳ್ಳುತ್ತೆ. ಇತ್ತೀಚಿನ ದಿನಗಳಲ್ಲಿ ಬರೀ ಹೊಡೆದಾಟ ಬಡಿದಾಟಗಳ ಸಿನಿಮಾಗಳೇ ಹೆಚ್ಚು. ಅದರಲ್ಲಿ, ಫ್ಯಾಮಿಲಿ ಕುಳಿತು ನೋಡೋ ಸಿನಿಮಾ ಇದು.

ಬೆಳ್ಳು ಕಬಾಬ್‌ ಚಂದ್ರು ಏನಂದ್ರು?

ಸಿನಿಮಾ ತುಂಬ ಚೆನ್ನಾಗಿದೆ. ಫ್ಯಾಮಿಲಿ ಕರ್ಕೊಂಡು ಬರ್ತಾ ಇರಬೇಕು, ನೋಡ್ತಾ ಇರಬೇಕು. ತುಂಬ ಚೆನ್ನಾಗಿದೆ. ಯುವ ಅವರ ಮೊದಲ ಮೂವಿ ಅಂತ ಅನಿಸಲ್ಲ. ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಒನ್ ಮೋರ್‌ ಒನ್‌ ಮೋರ್‌. ಒಟ್ಟಾರೆಯಾಗಿ ಒಂದು ಕುಟುಂಬ ಕುಳಿತು ನೋಡುವ ಸಿನಿಮಾ. ಹೊಸ ಹೀರೋ ಅಲ್ಲ. ಹಳೇ ಹೀರೋ. ಅವ್ರು ಬಂದಿರೋದು ಎಲ್ಲಿಂದ ಗೊತ್ತಲ್ಲ? ಫೈಟ್‌ ನೋಡುತ್ತಿದ್ದರೆ ಬಾಸ್‌ ನೆನಪಾಗುತ್ತಿದೆ ಎಂದಿದ್ದಾರೆ ಬೆಳ್ಳುಳ್ಳಿ ಕಬಾಬ್‌ ಖ್ಯಾತಿಯ ಚಂದ್ರು.