ಯುವ ಸಿನಿಮಾದ ಕುರಿತು ಅಪ್ಡೇಟ್ ನೀಡಿದ ಹೊಂಬಾಳೆ ಫಿಲ್ಮ್ಸ್; ಈ ಭಾನುವಾರದಿಂದ ಒಬ್ಬನೇ ಶಿವ, ಒಬ್ಬನೇ ಯುವ ಹವಾ
ಯುವ ರಾಜ್‌ಕುಮಾರ್ ನಟನೆಯ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾದ ಕುರಿತು ಹೊಂಬಾಳೆ ಫಿಲ್ಮ್ಸ್ ಪ್ರಮುಖ ಅಪ್‌ಡೇಟ್ ನೀಡಿದೆ. ಮಾರ್ಚ್ 2ರಂದು ಬೆಂಗಳೂರಿನಲ್ಲಿ ಒಬ್ಬನೇ ಶಿವ ಒಬ್ಬನೇ ಯುವ ಎಂಬ ಮೊದಲ ಹಾಡು ಬಿಡುಗಡೆಯಾಗಲಿದೆ.
ಬೆಂಗಳೂರು: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ಯುವ. ಇದನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವುದರಿಂದ ನಿರೀಕ್ಷೆ ತುಸು ಹೆಚ್ಚೇ ಇದೆ. ಈ ಸಿನಿಮಾದ ಕುರಿತು ಪ್ರಮುಖ ಅಪ್‌ಡೇಟ್ ಅನ್ನು ಹೊಂಬಾಳೆ ಫಿಲ್ಮ್ಸ್ ನೀಡಿದೆ. ಮಾರ್ಚ್ 2ರಂದು ಚಾಮರಾಜನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ "ಒಬ್ಬನೇ ಶಿವ ಒಬ್ಬನೇ ಯುವ" ಎಂಬ ಹಾಡು ಬಿಡುಗಡೆಯಾಗಲಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾವನ್ನು ಆನಂದ್ ರಾಮ್ ನಿರ್ದೇಶಿಸುತ್ತಿದ್ದಾರೆ. ದೊಡ್ಮನೆಯ ಕುರಿತು ಯುವ ರಾಜ್‌ಕುಮಾರ್ ಈ ಸಿನಿಮಾಕ್ಕೆ ಹೀರೋ. ಇದೀಗ ಟ್ವಿಟ್ಟರ್‌ನಲ್ಲಿ ಹೊಂಬಾಳೆ ಫಿಲ್ಮ್ಸ್ "ಮಾರ್ಚ್ 2ರಂದು ಯುವ ಸಿನಿಮಾದ ಮೊದಲ ಸಿಂಗಲ್ಸ್ ಬಿಡುಗಡೆ" ಮಾಡುವುದಾಗಿ ಪ್ರಕಟಿಸಿದೆ.
ಯುವರಾಜ್ ಕುಮಾರ್ ಕರಿಯರ್‌ನಲ್ಲಿ ಯುವ ಸಿನಿಮಾವು ಭರ್ಜರಿ ಸಿನಿಮಾವಾಗಿರುವ ನಿರೀಕ್ಷೆಯಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಯುವ ಸಿನಿಮಾದ ಪ್ರಚಾರ ಜೋರಾಗಿಯೇ ಇದೆ. ಚಾಮರಾಜನಗರದಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಯುವ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಲಾಗುತ್ತಿದೆ.
ಒಬ್ಬನೇ ಶಿವ ಒಬ್ಬನೇ ಯುವ ಎಂಬ ಮಾಸ್ ಹಾಡನನು ಚಾಮರಾಜನಗರದ ಟೆಂಪಲ್ ಗ್ರೌಂಡ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಯುವ ಸಿನಿಮಾದಲ್ಲಿ ಕಾಂತಾರ ಖ್ಯಾತಿ ನಟಿ ಸಪ್ತಮಿ ಗೌಡ ನಾಯಕಿಯಾಗಿದ್ದಾರೆ.
ಯುವ ಸಿನಿಮಾದ ಮೇಲೆ ಹೆಚ್ಚಿದ ನಿರೀಕ್ಷೆ
ದೊಡ್ಮನೆ ಕುಟುಂಬದ ಯುವ ರಾಜ್‌ಕುಮಾಆರ್ ಅವರ ಮೊದಲ ಚಿತ್ರ ಯುವ. ಇದೇ ಕಾರಣಕ್ಕೆ ಯುವ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಎಂಬ ಪ್ರಮುಖ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣ ಮಾಡಲಾಗುತ್ತಿದೆ. ಮಾರ್ಚ್ 28ರಂದು ಈ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಸಲಾರ್ ಸಿನಿಮಾಕ್ಕಾಗಿ ಯುವ ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಲಾಗಿತ್ತು.
ಯುವ ಚಿತ್ರದ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ ಎಂಬ ಸುದ್ದಿಯೂ ಇದೆ. ಕನ್ನಡದ ಪ್ರತಿಷ್ಠಿತ ಆಡಿಯೋ ಸಂಸ್ಥೆಯಲ್ಲಿ ಒಂದಾದ, ಆನಂದ್ ಆಡಿಯೋ ಯುವ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿದೆ. ವ್ಯಾಪಾರ ಎಷ್ಟು ಕೋಟಿಗೆ ಆಗಿದೆ ಎನ್ನುವುದು ಸದ್ಯಕ್ಕೆ ಗೌಪ್ಯವಾಗಿದೆ. ಮೂರು ಕೋಟಿಗೆ ಯುವ ಸಿನಿಮಾದ ಹಾಡು ಸೇಲ್ ಆಗಿದೆ ಎನ್ನಲಾಗಿದೆ.
ರಾಜಕುಮಾರ ಸೇರಿ ಹಲವು ಸೂಪರ್‌ಹಿಟ್ ಸಿನಿಮಾಗಳನ್ನು ಸ್ಯಾಂಡಲ್‌ವುಡ್‌ಗೆ ನೀಡಿದ ನಿರ್ದೇಶ ಸಂತೋಷ್ ಆನಂದ್ ರಾಮ್ ಯುವ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಯುವರತ್ನ, ರಾಘವೇಂದ್ರ ಸ್ಟೋರ್ಸ್ ಬಳಿಕ ಯುವ ಚಿತ್ರಕ್ಕೂ ಹೊಂಬಾಳೆ ಫಿಲಂಸ್ ಬಂಡವಾಳ ಹೂಡಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ , ಶ್ರೀಶಾ ಕುದುವಳ್ಳಿ ಛಾಯಾಗ್ರಹಣ ಚಿತ್ರಕ್ಕಿದೆ. ಕಾಂತಾರ ಬೆಡಗಿ ಸಪ್ತಮಿ ಗೌಡ ಯುವ ಜೊತೆಗೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ಮುಂದಿನ ತಿಂಗಳ ಅಂತ್ಯದಲ್ಲಿ ಚಿತ್ರಮಂದಿರಗಳಲ್ಲಿ ಯುವ ಸಿನಿಮಾದ ಅಬ್ಬರ ಇರಲಿದೆ.