ಕನ್ನಡಪರ ಹೋರಾಟಗಾರರಿಗೆ ಅವಮಾನ, ಭೂಮಿಗೆ ಬಂದ ಭಗವಂತ ಧಾರಾವಾಹಿ ವಿರುದ್ಧ ಭುಗಿಲೆದ್ದ ಆಕ್ರೋಶ; ಕ್ಷಮೆ ಕೇಳಿದ ನಿರ್ದೇಶಕ, ನಾಯಕ
ಕನ್ನಡ ಸುದ್ದಿ  /  ಮನರಂಜನೆ  /  ಕನ್ನಡಪರ ಹೋರಾಟಗಾರರಿಗೆ ಅವಮಾನ, ಭೂಮಿಗೆ ಬಂದ ಭಗವಂತ ಧಾರಾವಾಹಿ ವಿರುದ್ಧ ಭುಗಿಲೆದ್ದ ಆಕ್ರೋಶ; ಕ್ಷಮೆ ಕೇಳಿದ ನಿರ್ದೇಶಕ, ನಾಯಕ

ಕನ್ನಡಪರ ಹೋರಾಟಗಾರರಿಗೆ ಅವಮಾನ, ಭೂಮಿಗೆ ಬಂದ ಭಗವಂತ ಧಾರಾವಾಹಿ ವಿರುದ್ಧ ಭುಗಿಲೆದ್ದ ಆಕ್ರೋಶ; ಕ್ಷಮೆ ಕೇಳಿದ ನಿರ್ದೇಶಕ, ನಾಯಕ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭೂಮಿಗೆ ಬಂದ ಭಗವಂತ ಧಾರಾವಾಹಿ ಜನಮನ್ನಣೆ ಗಳಿಸಿತ್ತು. ಆದರೆ ನಿನ್ನೆ (ನ.8) ಪ್ರಸಾರವಾದ ಸಂಚಿಕೆಯಲ್ಲಿ ಕನ್ನಡಪರ ಹೋರಾಟಗಾರರಿಗೆ ಅವಮಾನ ಮಾಡಲಾಗಿದೆ, ಕನ್ನಡಪರ ಹೋರಾಟಗಾರರನ್ನು ಗೂಂಡಗಳ ರೀತಿ ಬಿಂಬಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕನ್ನಡಪರ ಹೋರಾಟಗಾರರಿಗೆ ಅವಮಾನ, ಭೂಮಿಗೆ ಬಂದ ಭಗವಂತ ಧಾರಾವಾಹಿ ವಿರುದ್ಧ ಭುಗಿಲೆದ್ದ ಆಕ್ರೋಶ
ಕನ್ನಡಪರ ಹೋರಾಟಗಾರರಿಗೆ ಅವಮಾನ, ಭೂಮಿಗೆ ಬಂದ ಭಗವಂತ ಧಾರಾವಾಹಿ ವಿರುದ್ಧ ಭುಗಿಲೆದ್ದ ಆಕ್ರೋಶ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೆಲವು ಪ್ರಸಿದ್ಧ ಧಾರವಾಹಿಗಳಲ್ಲಿ ಭೂಮಿಗೆ ಬಂದ ಭಗವಂತ ಧಾರಾವಾಹಿ ಕೂಡ ಒಂದು. ಕೌಟುಂಬಿಕ ಹಿನ್ನೆಲೆಯುಳ್ಳ ಈ ಧಾರಾವಾಹಿ ಕಳೆದ ಐದಾರು ತಿಂಗಳಿಂದ ಜನಮನ್ನಣೆ ಗಳಿಸಿತ್ತು, ಉತ್ತಮ ಟಿಆರ್‌ಪಿ ಕೂಡ ಪಡೆದಿತ್ತು. ಇದೀಗ ಈ ಧಾರಾವಾಹಿ ವಿವಾದವೊಂದರಲ್ಲಿ ಸಿಲುಕಿದೆ. ಅದಕ್ಕೆ ಕಾರಣ ನಿನ್ನೆ (ನ.8) ಪ್ರಸಾರವಾದ ಸಂಚಿಕೆ.

ನಿನ್ನೆಯ ಸಂಚಿಕೆಯಲ್ಲಿ ಕನ್ನಡಪರ ಹೋರಾಟಗಾರರು ಕನ್ನಡದ ಬೋರ್ಡ್‌ ಹಾಕಿಲ್ಲ ಎಂಬ ಕಾರಣಕ್ಕೆ ಟೈಲರ್‌ ಒಬ್ಬನಿಗೆ ನಿಂದಿಸುವ ದೃಶ್ಯವಿತ್ತು. ಈ ದೃಶ್ಯಗಳ ಪ್ರೋಮೊ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ನಂತರ ಹಲವರು ಕೋಪಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯದ ಬಗ್ಗೆ ಸಾಕಷ್ಟು ಆಕ್ರೋಶ, ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ ಕನ್ನಡಿಗರು. ಅದಕ್ಕೆ ಮುಖ್ಯ ಕಾರಣ ಇದರಲ್ಲಿ ಕನ್ನಡಪರ ಹೋರಾಟಗಾರರನ್ನು ಗೂಂಡಗಳಂತೆ ಬಿಂಬಿಸಲಾಗಿದೆ ಎಂಬುದು.

ಈ ಬಗ್ಗೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಭೂಮಿಗೆ ಬಂದ ಭಗವಂತ ಧಾರಾವಾಹಿ ಪ್ರಸಾರವಾಗುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಆರ್‌ ಕಾರ್ಪೆಂಟರ್‌ ಎನ್ನುವ ಫೇಸ್‌ಬುಕ್‌ ಬಳಕೆದಾರರೊಬ್ಬರು ʼಕನ್ನಡ ಹೋರಾಟಗಾರರನ್ನು ಅವಮಾನಿಸುವ ಭಗವಂತ ಭೂಮಿಗೆ ಬರೋದೇ ಬೇಡ. ಕನ್ನಡಕ್ಕಿಂತ ಮಿಗಿಲಾದ ಭಗವಂತನಿಲ್ಲ...

ಕೂಡಲೇ ಕನ್ನಡಿಗರ ಕ್ಷಮೆ ಕೇಳಿʼ ಎಂದು ಭೂಮಿಗೆ ಬಂದ ಭಗವಂತ ಧಾರಾವಾಹಿ ಪೋಸ್ಟರ್‌ ಹಂಚಿಕೊಳ್ಳುವ ಮೂಲಕ ಛೀಮಾರಿ ಹಾಕಿದ್ದಾರೆ.

ಇವರ ಪೋಸ್ಟ್‌ಗೆ ಹಲವರು ಕಾಮೆಂಟ್‌ ಮಾಡುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೆಲವರು ಧಾರಾವಾಹಿ ಪರ ಮಾತನಾಡಿದರೆ ಕೆಲವರು ಕನ್ನಡ ಹೋರಾಟಗಾರರ ವಿರುದ್ಧವೂ ಮಾತನಾಡಿರುವುದನ್ನು ಇವರ ಕಾಮೆಂಟ್‌ನಲ್ಲಿ ಕಾಣಬಹುದಾಗಿದೆ.

ವಿಆರ್‌ ಕಾರ್ಪೆಂಟರ್‌ ಅವರು ಬಿಆರ್‌ ಭಾಸ್ಕರ್‌ ಪ್ರಸಾದ್‌ ಎನ್ನುವವರು ಮಾಡಿದ ʼಏನ್‌ ತಪ್ಪಾಗಿದೆʼ ಎಂಬ ಕಾಮೆಂಟ್‌ಗೆ ಈ ರೀತಿ ಉತ್ತರಿಸಿದ್ದಾರೆ.

ʼಕನ್ನಡ ಹೋರಾಟಗಾರರು ಮಸಿ ಬಳಿಯುವ ಗೂಂಡಾಗಳು ಅನ್ನೋ ಥರ ಬಿಂಬಿಸಿದ್ದಾರೆ. ಅಲ್ಲದೆ ಹೋರಾಟಗಾರರಿಗೆ ಕನ್ನಡದಲ್ಲಿ‌ ಎಷ್ಟು ಅಕ್ಷರಗಳಿವೆ, ವ್ಯಂಜನ ಅಂದರೇನು? ಜ್ಞಾನಪೀಠ ಪಡೆದ ಸಾಹಿತಿಗಳ ಹೆಸರು ಕೂಡಾ ಗೊತ್ತಿಲ್ಲ ಅನ್ನೋ ಥರ ಚಿತ್ರಿಸಿದ್ದಾರೆ. ಈಗೇನೋ ನಿರ್ದೇಶಕ ಕ್ಷಮೆ ಕೇಳಿದ್ದಾರಂತೆ. ಹುಡುಕಿದೆ ಸಿಗ್ತಿಲ್ಲʼ ಎಂದು ಬರೆದಿದ್ದಾರೆ.

ಇದಕ್ಕೆ ಪ್ರತಿಯಾಗಿ ಭಾಸ್ಕರ್‌ ಪ್ರಸಾದ್‌ ಅವರು ʼTV9ನವರು ನಡೆಸಿದ್ದ ಸಮಿಕ್ಷೆಯ ನಕಲು ಇದು. ಆ ಸಮೀಕ್ಷೆಯಲ್ಲಿ ಕರ್ನಾಟಕದ ಎಲ್ಲ ಕನ್ನಡಪರ ಹೋರಾಟಗಾರರನ್ನು ಲೈವ್ ಆಗಿ ಕನ್ನಡದ ವರ್ಣಮಾಲೆಯನ್ನು ಪೂರ್ತಿಯಾಗಿ ಹೇಳಲು ಕೇಳಿದ್ದರು. ಆದರೇ, ಯಾರೋಬ್ಬರೂ ಕನ್ನಡ ವರ್ಣಮಾಲೆಯನ್ನು ಪೂರ್ತಿಯಾಗಿ ಹೇಳಲೇ ಇಲ್ಲ. ಇದು ಕಾಮಿಡಿ ಕಾರ್ಯಕ್ರಮ ಆಗಿರಲಿಲ್ಲ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆಸಿದ ಕಾರ್ಯಕ್ರಮ ಆಗಿತ್ತುʼ ಎಂದು ಕಾಮೆಂಟಿಸಿದ್ದಾರೆ.

ಕೆಲವರು ನಿರ್ದೇಶಕರು ಕ್ಷಮೆ ಕೇಳಬೇಕು ಎಂದು ಕಾಮೆಂಟ್‌ ಮಾಡಿದ್ದರೆ, ಇನ್ನೂ ಕೆಲವರು ಕ್ಷಮೆ ಕೇಳಿದ್ದಾರೆ ಎಂದು ಕಾಮೆಂಟ್‌ ಮೂಲಕ ತಿಳಿಸಿದ್ದಾರೆ.

ಕ್ಷಮೆ ಕೇಳಿದ ನಿರ್ದೇಶಕ, ನಾಯಕ

ಧಾರಾವಾಹಿಯ ಈ ದೃಶ್ಯದ ಬಗ್ಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್‌ ಹಾಗೂ ನಾಯಕ ನವೀನ್‌ ಕೃಷ್ಣ ಕ್ಷಮೆ ಕೇಳುವ ಮೂಲಕ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣ ಕೆಲವು ಗಂಟೆಗಳ ಹಿಂದೆ ಫೇಸ್‌ಬುಕ್‌ ಪೋಸ್ಟ್‌ ಹಾಕಿದ್ದು ʼಇದೀಗ ಜೀ ಕನ್ನಡ ಭೂಮಿಗೆ ಬಂದ ಭಗವಂತ ಧಾರಾವಾಹಿ ನಿರ್ದೇಶಕರ ಬಳಿ ಮಾತನಾಡಿದೆ. ಆಗಿರೋ ತಪ್ಪಿಗೆ ಕನ್ನಡಪರ ಹೋರಾಟಗಾರರಿಗೆ ಕ್ಷಮೆ ಕೇಳಿ ಆ ದೃಶ್ಯವನ್ನು ತೆಗೆಯಲು ಒಪ್ಪಿಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

Whats_app_banner