Mooru Kaasina Kudure OTT: ಚಿತ್ರಮಂದಿರ ಬಿಟ್ಟು, ನೇರವಾಗಿ ಒಟಿಟಿ ಮೆಟ್ಟಿಲೇರಿದ ‘ಮೂರು ಕಾಸಿನ ಕುದುರೆ’ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  Mooru Kaasina Kudure Ott: ಚಿತ್ರಮಂದಿರ ಬಿಟ್ಟು, ನೇರವಾಗಿ ಒಟಿಟಿ ಮೆಟ್ಟಿಲೇರಿದ ‘ಮೂರು ಕಾಸಿನ ಕುದುರೆ’ ಸಿನಿಮಾ

Mooru Kaasina Kudure OTT: ಚಿತ್ರಮಂದಿರ ಬಿಟ್ಟು, ನೇರವಾಗಿ ಒಟಿಟಿ ಮೆಟ್ಟಿಲೇರಿದ ‘ಮೂರು ಕಾಸಿನ ಕುದುರೆ’ ಸಿನಿಮಾ

ಕನ್ನಡದ ಮೂರು ಕಾಸಿನ ಕುದುರೆ ಸಿನಿಮಾ ಚಿತ್ರಮಂದಿರದ ಬದಲು ನೇರವಾಗಿ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ಗಿರೀಶ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಪೂರ್ಣಚಂದ್ರ ತೇಜಸ್ವಿ, ಗೋವಿಂದೇಗೌಡ, ಸನಾತನಿ ಮುಖ್ಯಭೂಮಿಕೆಯಲ್ಲಿದ್ದಾರೆ.

ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮ್‌ ಆಗುತ್ತಿದೆ ಮೂರು ಕಾಸಿನ ಕುದುರೆ ಸಿನಿಮಾ
ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮ್‌ ಆಗುತ್ತಿದೆ ಮೂರು ಕಾಸಿನ ಕುದುರೆ ಸಿನಿಮಾ

Mooru Kaasina Kudure OTT: ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಕನ್ನಡದಲ್ಲಿ ನೇರವಾಗಿ ಒಟಿಟಿಯಲ್ಲಿ ಸಿನಿಮಾಗಳು ಬಿಡುಗಡೆಯಾದ ಉದಾಹರಣೆಗಳು ಕಡಿಮೆ. ಮೊದಲು ಚಿತ್ರಮಂದಿರದಲ್ಲಿ ತೆರೆಕಂಡು, ಅದಾದ ಬಳಿಕ ಒಂದಷ್ಟು ದಿನಗಳ ಬಳಿಕ ಆ ಸಿನಿಮಾ ಒಟಿಟಿ ಅಂಗಳಕ್ಕೆ ಕಾಲಿಡುವುದು ಕಾಮನ್.‌ ಈಗ ಸ್ಯಾಂಡಲ್‌ವುಡ್‌ನ ಸಿನಿಮಾ ತಂಡವೊಂದು ಹೊರತಂದ ಚಿತ್ರ ಇದೀಗ ಸದ್ದಿಲ್ಲದೆ, ಒಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿದೆ. ಆ ಚಿತ್ರವೇ ಮೂರು ಕಾಸಿನ ಕುದುರೆ. ಈ ಸಿನಿಮಾ ಬಗ್ಗೆ ಹೇಳಿಕೊಳ್ಳುವ ಸಲುವಾಗಿ ಚಿತ್ರತಂಡ ಮಾಧ್ಯಮದ ಮುಂದೆ ಬಂದಿತ್ತು.

ಸಿನಿಮಾ ನಿರ್ಮಾಣ ಮಾಡುವುದಕ್ಕಿಂತ ಅದನ್ನು ಜನರಿಗೆ ತಲುಪಿಸುವುದು ಕಷ್ಟದ ಕೆಲಸ. ಅದೇ ರೀತಿ ಗಿರೀಶ್ ನಿರ್ದೇಶನದ ಮೂರು ಕಾಸಿನ ಕುದುರೆ ಸಿನಿಮಾ ರೆಡಿಯಾಗಿ 2 ವರ್ಷವಾದರೂ ವಿತರಕರು ಸಿಕ್ಕಿರಲಿಲ್ಲ. ಆ ಕಾರಣಕ್ಕೆ ತಮ್ಮ ಸಿನಿಮಾವನ್ನು ಅಮೆಜಾನ್‌ ಪ್ರೈಮ್‌ಗೆ ನೀಡಿದ್ದರು. ಪ್ರೈಂ ಸಂಸ್ಥೆಯಿಂದ ಚಿತ್ರವನ್ನು ಮೆಚ್ಚಿ ಚಿತ್ರತಂಡದ ಜತೆಗೆ ಕೈ ಜೋಡಿಸಿದ್ದಾರೆ.

ಕಳೆದ ವಾರವಷ್ಟೇ ಅಮೆಜಾನ್ ಪ್ರೈಂ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಮೂರು ಕಾಸಿನ ಕುದುರೆ ಚಿತ್ರಕ್ಕೆ ಇದೀಗ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇಂಥ ಉತ್ತಮ ಚಿತ್ರವನ್ನು ಚಿತ್ರಮಂದಿರದಲ್ಲಿ ರಿಲೀಸ್ ಮಾಡಿ ಎಂದೂ ನಿರ್ದೇಶಕ ಗಿರೀಶ್‌ ಅವರಿಗೆ ಸಿನಿಮಾ ವೀಕ್ಷಿಸಿದವರು ಹೇಳುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ, ನಿರ್ದೇಶಕ ಗಿರೀಶ್, "ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವನು. ಸಾಕಷ್ಟು ಸೀರಿಯಲ್, ಸಿನಿಮಾಗಳಿಗೆ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ. ನಾನು ಗಿರೀಶ್ ಗೌಡ್ರು ಜತೆಗೂಡಿ ಈ ಚಿತ್ರ ಮಾಡಿದ್ದೇವೆ ಎಂದಿದ್ದಾರೆ.

ಮೂರು ಕಾಸಿನ ಕುದುರೆ ಸಿನಿಮಾ ಕಿಡ್ನಾಪ್ ಡ್ರಾಮಾ ಜಾನರ್‌ನ ಚಿತ್ರ. 3 ಜನರ ಹಿನ್ನೆಲೆಯಲ್ಲಿ ನಡೆಯುವ ಕಥೆ. ಒಬ್ಬ ಆರ್ಟಿಸ್ಟ್, ಮತ್ತೊಬ್ಬ ಕ್ಯಾಬ್ ಡ್ರೈವರ್. ಮಿಡಲ್ ಕ್ಲಾಸ್ ನಿಂದ ಬಂದ ಈ ಯುವಕರು ತಮ್ಮ ಕನಸನ್ನು ಈಡೇರಿಸಿಕೊಳ್ಳುಲು ಹೋಗಿ ಏನೆಲ್ಲ ಎದುರಿಸುತ್ತಾರೆ? ಇಷ್ಟವಿಲ್ಲದ ಹುಡುಗನನ್ನು ಮದುವೆಯಾಗದೆ ಮನೆಬಿಟ್ಟು ಬಂದ ಯುವತಿ, ಬಳಿಕ ಈ ಮೂರೂ ಪಾತ್ರಗಳು ಒಂದೆಡೆ ಸೇರಿದ ನಂತರ ಏನಾಗುತ್ತದೆ ಎಂಬುದೇ ಈ ಚಿತ್ರದ ಕಥೆ.

ನಾಯಕ ಪೂರ್ಣಚಂದ್ರ ಮಾತನಾಡಿ, ಕಲಾವಿದನಾಗಬೇಕೆಂದು ಹೊರಟ ನಾನು ದುಡ್ಡನ್ನು ಹೊಂದಿಸಿಕೊಳ್ಳಲು ಹೇಗೆಲ್ಲ ಕಷ್ಟಪಡುತ್ತೇನೆ ಎಂದು ಚಿತ್ರದಲ್ಲಿ ಹೇಳಲಾಗಿದೆ ಎಂದರು. ನಾಯಕಿ ಸನಾತನಿ ಮಾತನಾಡಿ, ಹಿಂದೆ ಹೋಮ್ಲಿ ಪಾತ್ರಗಳನ್ನೇ ಮಾಡಿದ್ದ ನಾನು ಇದರಲ್ಲಿ ಮಾಡ್ರನ್ ಆಗಿ ಕಾಣಿಸಿಕೊಂಡುದ್ದೇನೆ ಎಂದರು. ಗೋವಿಂದೇಗೌಡ (ಜೀಜಿ) ಮಾತನಾಡಿ, ನಾನಿಲ್ಲಿ ಕ್ಯಾಬ್ ಡ್ರೈವರ್. ಇಡೀ ಸಿನಿಮಾ ನನ್ನ ಪಾತ್ರದೊಂದಿಗೆ ಮುಂದುವರಿಯುತ್ತದೆ ಎಂದರು.

ಇದೊಂದು ಸೋಷಿಯಲ್ ಡ್ರಾಮಾ ಆಗಿದ್ದು, ಈ ಸಿನಿಮಾದಲ್ಲಿ 3 ಪಾತ್ರಗಳೇ ಹೈಲೈಟ್‌. ಪೂರ್ಣಚಂದ್ರ ಮೈಸೂರು, ಸನಾತನಿ ಹಾಗೂ ಗೋವಿಂದೇಗೌಡ ಆ ಮೂರು ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಗಿರೀಶ್ ಎಸ್.ಗೌಡ್ರು ಬರೆದಿದ್ದು, ಪ್ರದೀಪ್ ಗಾಂಧಿ ಅವರ ಛಾಯಾಗ್ರಹಣ, ಆನಂದರಾಜಾ ವಿಕ್ರಮ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.