Chef Chidambara OTT: ಒಟಿಟಿಗೆ ಬರ್ತಿದ್ದಾನೆ ‘Chef ಚಿದಂಬರ’; ಯಾವ ಒಟಿಟಿ, ವೀಕ್ಷಣೆ ಯಾವಾಗಿನಿಂದ?
ಕನ್ನಡ ಸುದ್ದಿ  /  ಮನರಂಜನೆ  /  Chef Chidambara Ott: ಒಟಿಟಿಗೆ ಬರ್ತಿದ್ದಾನೆ ‘Chef ಚಿದಂಬರ’; ಯಾವ ಒಟಿಟಿ, ವೀಕ್ಷಣೆ ಯಾವಾಗಿನಿಂದ?

Chef Chidambara OTT: ಒಟಿಟಿಗೆ ಬರ್ತಿದ್ದಾನೆ ‘Chef ಚಿದಂಬರ’; ಯಾವ ಒಟಿಟಿ, ವೀಕ್ಷಣೆ ಯಾವಾಗಿನಿಂದ?

ನಟ ಅನಿರುದ್ಧ ಜತ್ಕರ್‌ ಅವರ ಚೆಫ್‌ ಚಿದಂಬರ ಸಿನಿಮಾ ಕಳೆದ ತಿಂಗಳಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಮೆಚ್ಚುಗೆ ಪಡೆದಿತ್ತು. ಇದೀಗ ಒಟಿಟಿ ಅಂಗಳಕ್ಕೆ ಆಗಮಿಸಲು ಸಜ್ಜಾಗಿದೆ. ಯಾವ ಒಟಿಟಿ, ಯಾವಾಗಿನಿಂದ ವೀಕ್ಷಣೆಗೆ ಲಭ್ಯ? ಈ ಕುರಿತ ಮಾಹಿತಿ ಇಲ್ಲಿದೆ.

Chef Chidambara OTT: ಒಟಿಟಿಗೆ ಬರ್ತಿದ್ದಾನೆ ‘Chef ಚಿದಂಬರ’; ಯಾವ ಒಟಿಟಿ, ಯಾವಾಗಿನಿಂದ ವೀಕ್ಷಣೆ? ಇಲ್ಲಿದೆ ಮಾಹಿತಿ
Chef Chidambara OTT: ಒಟಿಟಿಗೆ ಬರ್ತಿದ್ದಾನೆ ‘Chef ಚಿದಂಬರ’; ಯಾವ ಒಟಿಟಿ, ಯಾವಾಗಿನಿಂದ ವೀಕ್ಷಣೆ? ಇಲ್ಲಿದೆ ಮಾಹಿತಿ

Chef Chidambara OTT: ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಜನಪ್ರಿಯರಾಗಿರುವ ನಟ ಅನಿರುದ್ದ್ ಜತ್ಕರ್‌ (Aniruddha Jatkar) ನಾಯಕನಾಗಿ ನಟಿಸಿರುವ ಚೆಫ್‌ ಚಿದಂಬರ ಚಿತ್ರ ಜೂನ್‌ 14ರಂದು ರಾಜ್ಯಾದ್ಯಂತ ತೆರೆಗೆ ಬಂದಿತ್ತು. ರೂಪ ಡಿ.ಎನ್ ನಿರ್ಮಾಣ ಮಾಡಿದ್ದ ಈ ಸಿನಿಮಾವನ್ನು ಆನಂದರಾಜ್ ಎಂ ನಿರ್ದೇಶನ ಮಾಡಿದ್ದರು. ಕೇವಲ 29 ದಿನಗಳಲ್ಲಿ chef ಚಿದಂಬರ ಸಿನಿಮಾದ ಶೂಟಿಂಗ್‌ ಕಂಪ್ಲೀಟ್‌ ಆಗಿತ್ತು. ಇದೀಗ ಇದೇ ಸಿನಿಮಾ ಒಟಿಟಿ ಅಂಗಳಕ್ಕೂ ಆಗಮಿಸುತ್ತಿದೆ. ಹಾಗಾದರೆ, ಯಾವ ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಣೆ ಮಾಡಬಹುದು? ಇಲ್ಲಿದೆ ಮಾಹಿತಿ.

ಕಳೆದ ವರ್ಷ ಜೊತೆಜೊತೆಯಲಿ ಸೀರಿಯಲ್‌ ಜತೆಗಿನ ಒಂದಷ್ಟು ಮನಸ್ಥಾಪಗಳಿಂದ ಬೇಸತ್ತು ಆಚೆ ಬಂದಿದ್ದ ಅನಿರುದ್ಧ್‌ ಜತ್ಕರ್‌, ಅದಾದ ಬಳಿಕ ಸೂರ್ಯವಂಶ ಸೀರಿಯಲ್‌ ಸಹ ಘೋಷಣೆ ಮಾಡಿ, ನಟನೆ ಆರಂಭಿಸಿದ್ದರು. ಇದೀಗ ಉದಯ ಟಿವಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಸೀರಿಯಲ್‌ ಜತೆ ಜತೆಗೇ ಒಪ್ಪಿಕೊಂಡ ಸಿನಿಮಾ ಚೆಫ್‌ ಚಿದಂಬರ. ಕಳೆದ ತಿಂಗಳಷ್ಟೇ ತೆರೆಗೆ ಬಂದಿದ್ದ ಈ ಸಿನಿಮಾ, ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದಿತ್ತಾದರೂ, ಹೆಚ್ಚು ಕಾಲ ಚಿತ್ರಮಂದಿರದಲ್ಲಿ ನಿಲ್ಲಲಿಲ್ಲ. ಇದೀಗ ತಿಂಗಳ ಬಳಿಕ ಒಟಿಟಿ ಪ್ರವೇಶಿಸಿದೆ.

ಏನಿದು ಸಿನಿಮಾ?

ಮುಗ್ಧ ಬಾಣಸಿಗ ಚಿದಂಬರ ಹೇಗೆ ಕೊಲೆಯ ಸುಳಿಗೆ ಸಿಲುಕುತ್ತಾನೆ ಅದರಿಂದ ಹೇಗೆ ಆಚೆ ಬರ್ತಾನೆ ಎಂಬುದನ್ನು ಹೇಳಿದ್ದಾರೆ ನಿರ್ದೇಶಕರು. ಅಡುಗೆ ಮಾಡಿ ಬಡಿಸುವಲ್ಲಿ ಸಿದ್ಧಹಸ್ತನಾಗಿರುವ ಚಿದಂಬರನ ಮನೆಯಲ್ಲಿಯೇ ಒಂದು ಸಾವು ಘಟಿಸುತ್ತದೆ. ಆ ಸಾವಿನ ಪ್ರಕರಣದ ಬೆನ್ನು ಹತ್ತಿ ಪೊಲೀಸರೂ, ಚಿದಂಬರನ ಮನೆ ಬಾಗಿಲು ಬಡಿಯುತ್ತಾರೆ. ಆತನ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತ, ಇನ್ನೊಂದು ಸಾವಿನ ಸುಳಿಗೆ ತನ್ನದಲ್ಲದ ತಪ್ಪಿಗೆ ಸಿಲುಕುತ್ತಾನೆ. ಇದೆಲ್ಲದರಿಂದ ಚಿದಂಬರ ಹೇಗೆ ಹೊರ ಬರ್ತಾನೆ ಎಂಬುದೇ ಸಿನಿಮಾ ಕಥೆ.

ಯಾವ ಒಟಿಟಿಗೆ ಚಿದಂಬರನ ಆಗಮನ...

ಇದೀಗ ಚಿತ್ರಮಂದಿರದಲ್ಲಿ ನೋಡುಗರಿಂದ ಮೆಚ್ಚುಗೆ ಪಡೆದ ಚೆಫ್‌ ಚಿದಂಬರ ಸಿನಿಮಾ, ಅಮೆಜಾನ್‌ ಪ್ರೈಮ್‌ ಒಟಿಟಿಯಲ್ಲಿ ಜುಲೈ 24ರಿಂದ ಸ್ಟ್ರೀಮಿಂಗ್‌ ಆಗಲಿದೆ. ಸದ್ಯ ಅಮೆರಿಕಾ ಮತ್ತು ಯುಕೆ ಸೇರಿ ಹಲವೆಡೆ ಅಮೆಜಾನ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದ್ದು, ಮುಂದಿನ ಇನ್ನೆರಡು ದಿನಗಳ ಬಳಿಕ ಭಾರತದ ಒಟಿಟಿ ವೀಕ್ಷಕರಿಗೂ ಲಭ್ಯವಾಗಲಿದೆ.

ಡಾರ್ಕ್‌ ಕಾಮಿಡಿ ಶೈಲಿಯ ಸಿನಿಮಾ

ಡಾರ್ಕ್‌ ಕಾಮಿಡಿ ಶೈಲಿಯಲ್ಲಿ ಮೂಡಿಬಂದಿದ್ದ ಚೆಫ್‌ ಚಿದಂಬರ ಸಿನಿಮಾದಲ್ಲಿ ಶೀರ್ಷಿಕೆ ರೋಲ್‌ ಪ್ಲೇ ಮಾಡಿದ್ದಾರೆ ನಟ ಅನಿರುದ್ಧ ಜತ್ಕರ್. ಕೊಲೆಯ ಮೂಲಕ ಆರಂಭವಾಗುವ ಈ ಸಿನಿಮಾದಲ್ಲಿ ಹಾಸ್ಯದ ಹೊನಲನು ಹರಿಸುವ ಕೆಲಸ ಮಾಡಿದ್ದಾರೆ ನಿರ್ದೇಶಕ ಆನಂದ್‌ರಾಜ್.‌ ಚಿತ್ರದಲ್ಲಿ ನಿಧಿ ಸುಬ್ಬಯ್ಯ, ರಚೆಲ್‌ ಡೇವಿಡ್‌, ಶರತ್‌ ಲೋಹಿತಾಶ್ವ, ಸಿದ್ಲಿಂಗು ಶ್ರೀಧರ್‌, ಶಿವಮಣಿ ಸೇರಿ ಇನ್ನು ಹಲವರು ನಟಿಸಿದ್ದಾರೆ.

ಚಿತ್ರಕ್ಕೆ ನಿರ್ದೇಶಕ ಆನಂದ್‌ರಾಜ್‌ ಕಥೆ ಬರೆದಿದ್ದು ಗಣೇಶ್ ಪರಶುರಾಮ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಉದಯಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ಆಶಿಕ್ ಹುಸಗುಳ್ಳಿ ಡಿಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ ನೃತ್ಯ ನಿರ್ದೇಶನ 'Chef ಚಿದಂಬರ' ಸಿನಿಮಾಗಿದೆ.

Whats_app_banner