ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮೇಲೆ ನಿಲ್ಲದ ಕೆಟ್ಟಪದಗಳ ಬಳಕೆ; ಗಟ್ಟಿನಿರ್ಧಾರಕ್ಕೆ ಬದ್ಧರಾದ ಅಪ್ಪು ಫ್ಯಾನ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮೇಲೆ ನಿಲ್ಲದ ಕೆಟ್ಟಪದಗಳ ಬಳಕೆ; ಗಟ್ಟಿನಿರ್ಧಾರಕ್ಕೆ ಬದ್ಧರಾದ ಅಪ್ಪು ಫ್ಯಾನ್ಸ್‌

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮೇಲೆ ನಿಲ್ಲದ ಕೆಟ್ಟಪದಗಳ ಬಳಕೆ; ಗಟ್ಟಿನಿರ್ಧಾರಕ್ಕೆ ಬದ್ಧರಾದ ಅಪ್ಪು ಫ್ಯಾನ್ಸ್‌

ಸೋಷಿಯಲ್‌ ಮೀಡಿಯಾದಲ್ಲಿ ಸ್ಯಾಂಡಲ್‌ವುಡ್‌ನ ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರನ್ನು ಕಟು ಪದಗಳಿಂದ ನಿಂದಿಸಿದ ಪೋಸ್ಟ್‌ವೊಂದು ಇದೀಗ ವೈರಲ್‌ ಆಗಿದೆ. ಈ ಪೋಸ್ಟ್‌ ನೋಡಿದ ಅಪ್ಪು ಫ್ಯಾನ್ಸ್‌ ಕೊಂಚ ಗರಂ ಆಗಿದ್ದಾರೆ. ಪೊಲೀಸ್‌ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮೇಲೆ ನಿಲ್ಲದ ಕೆಟ್ಟಪದಗಳ ಬಳಕೆ;
ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮೇಲೆ ನಿಲ್ಲದ ಕೆಟ್ಟಪದಗಳ ಬಳಕೆ; (instagram)

Ashwini Puneeth Rajkumar: ಇತ್ತೀಚಿನ ದಿನಗಳಲ್ಲಿ ಫ್ಯಾನ್ಸ್‌ ವಾರ್‌ ತೀರಾ ವಿಕೋಪಕ್ಕೆ ಹೋದ ಉದಾಹರಣೆಗಳಿವೆ. ಬೇರೆ ಬೇರೆ ಭಾಷೆಗಳಲ್ಲಿ ಅಷ್ಟೇ ಅಲ್ಲದೆ, ಕರ್ನಾಟಕದಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್‌ ಹೀರೋಗಳ ಫ್ಯಾನ್ಸ್‌ ನಡುವೆ ಆಗಾಗ ಈ ವಾರ್‌ಗಳು ನಡೆಯುತ್ತಲೇ ಇರುತ್ತವೆ. ನೇರವಾಗಿ ಸ್ಟಾರ್‌ ನಟರ ಎಂಟ್ರಿಯಾಗದಿದ್ದರೂ, ಅವರ ಅಭಿಮಾನಿಗಳೇ ಕಿಡಿ ಹೊತ್ತಿಸಿ, ಕಾಳ್ಗಿಚ್ಚಾಗಿ ಮಾಡಿದ್ದೂ ಇದೆ. ಹೀಗಿರುವಾಗಲೇ ದರ್ಶನ್‌ ಫ್ಯಾನ್ಸ್‌ ಮತ್ತೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ಮಾನಹಾನಿಗೆ ಮುಂದಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಕೆಲ ಕೆಟ್ಟಪದಗಳ ಮೂಲಕ ನಿಂದನೆ ಮಾಡಿದ ಪೋಸ್ಟ್‌ಗಳು ವೈರಲ್‌ ಆಗುತ್ತಿವೆ. ಇದನ್ನು ಕಂಡ ಅಪ್ಪು ಫ್ಯಾನ್ಸ್‌ ಗಟ್ಟಿನಿರ್ಧಾರಕ್ಕೆ ಬಂದಿದ್ದಾರೆ.

ಸೋಷಿಯಲ್‌ ಮೀಡಿಯಾವೇದಿಕೆಗೆ ಬೇಲಿ ಇಲ್ಲ ಅನ್ನೋ ಕಾರಣಕ್ಕೆ, ಅಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಅನ್ನೋ ಮನಸ್ಥಿತಿ ಎಲ್ಲರದ್ದು. ಅನಿಸಿದ್ದನ್ನು ಕಾಮೆಂಟ್‌ ಮಾಡಿ, ವಿಕೃತಿ ಮೆರೆಯುವವರೂ ಹೆಚ್ಚಿದ್ದಾರೆ. ಅದರಲ್ಲೂ ಸಿನಿಮಾ ಸ್ಟಾರ್‌ಗಳ ಅಭಿಮಾನಿಗಳ ವಲಯದಲ್ಲಿ ಇದು ಒಂದು ತೂಕ ಜಾಸ್ತಿನೇ. ದರ್ಶನ್‌ ಫ್ಯಾನ್ಸ್‌ ವರ್ಸಸ್‌ ಸುದೀಪ್‌ ಫ್ಯಾನ್ಸ್‌, ದರ್ಶನ್‌ ಫ್ಯಾನ್ಸ್‌ ವರ್ಸಸ್ ಪುನೀತ್‌‌ ರಾಜ್‌ಕುಮಾರ್‌ ಫ್ಯಾನ್ಸ್‌, ದರ್ಶನ್‌ ಫ್ಯಾನ್ಸ್‌ ವರ್ಸಸ್‌ ಧ್ರುವ ಸರ್ಜಾ ಫ್ಯಾನ್ಸ್‌.. ಹೀಗೆ ಟ್ವಿಟ್ಟರ್‌ನಲ್ಲಿ ಅಭಿಮಾನಿಗಳ ನಡುವೆ ಕಿತ್ತಾಟಗಳು ನಡೆದಿವೆ. ಈಗಲೂ ಮುಂದುವರಿದಿವೆ.

ತಮಗೆ ಬೇಡದ ನಟ, ನಟಿಯರು, ಅವರ ಕುಟುಂಬದವರನ್ನೇ ಟಾರ್ಗೆಟ್‌ ಮಾಡುವ ಕೆಲಸ ಸೋಷಿಯಲ್‌ ಮೀಡಿಯಾದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಅದರಲ್ಲೂ ಪುನೀತ್‌ ರಾಜ್‌ಕುಮಾರ್‌ ನಿಧನದ ಬಳಿಕ ಅವರ ಕುಟುಂಬವನ್ನೇ ಗುರಿಯಾಗಿಸಿಕೊಂಡು ದರ್ಶನ್‌ ಅವರ ಅಭಿಮಾನಿಗಳೆಂದು ಹೇಳಿಕೊಂಡು ನಿಂದನೆ ಮಾಡುತ್ತಿದ್ದಾರೆ. ಅದೇ ರೀತಿ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳೆಂದು ಹೇಳಿಕೊಂಡು, ದರ್ಶನ್‌ ಫ್ಯಾಮಿಲಿ ಬಗ್ಗೆ ಕಟುವಾಗಿ ಪೋಸ್ಟ್‌ ಹಾಕಲಾಗುತ್ತಿದೆ. ಈಗ ಸೋಷಿಯಲ್‌ ಮೀಡಿಯಾದಲ್ಲಿ ನಟ ದರ್ಶನ್‌ ಡಿಪಿ ಇರುವ "Fan of Dalapathy" ಎಂಬ ಹೆಸರಿನ ಎಕ್ಸ್‌ (ಟ್ವಿಟ್ಟರ್‌) ಖಾತೆಯಿಂದ ಅಸಭ್ಯ ಪೋಸ್ಟ್‌ ವೈರಲ್‌ ಆಗಿದೆ. ಕೆಟ್ಟ ಪದಗಳಿಂದಲೇ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮತ್ತು ಕಿಚ್ಚ ಸುದೀಪ್‌ ಅವರನ್ನು ನಿಂದಿಸಲಾಗಿದೆ. ಇದರ ವಿರುದ್ಧವೇ ಈಗ ಅಪ್ಪು ಫ್ಯಾನ್ಸ್‌ ಮತ್ತು ಕಿಚ್ಚನ ಅಭಿಮಾನಿಗಳು ಗರಂ ಆಗಿದ್ದಾರೆ.

ಅಷ್ಟಕ್ಕೂ ಏನಿದೆ ಪೋಸ್ಟ್‌ನಲ್ಲಿ?

"ಗಂಡ ಸತ್ತ ಮು..ಗೆ @Ashwini_PRK ಡ.. ಅಶ್ವಿನಿಗೆ ಇವಾಗ ಹ.. ಯಾರೂ ಇಲ್ಲ ಅಂತ ನಾ.. @KicchaSudeep ಲು.. ಜೊತೆ ಪಬ್ಲಿಕ್ ಜಾಗದಲ್ಲಿ ಮೈ ಕೈ ಮುಟ್ಟ್ಸಕೊಂಡು ಚ.. ತಿರಸ್ಕೋತವಳೇ" ಎಂದು "Fan of Dalapathy" ಎಕ್ಸ್‌ ಖಾತೆಯಿಂದ ಶನಿವಾರ (ಜ.25) ರಾತ್ರಿ 7:23 ಸುಮಾರಿಗೆ ಪೋಸ್ಟ್‌ ಆಗಿದೆ. ಈ ಪೋಸ್ಟ್‌ಅನ್ನು ಕೆಲವರು ರೀ ಟ್ವಿಟ್‌ ಮಾಡಿಕೊಂಡರೆ, ಇನ್ನು ಕೆಲವರು ಬೆಂಗಳೂರು ಪೊಲೀಸರಿಗೂ ಟ್ಯಾಗ್‌ ಮಾಡಿದ್ದಾರೆ. "Ice Candy Gopala" ಎಂಬ ಹೆಸರಿನ X ಬಳಕೆದಾರರು, ಪೋಸ್ಟ್‌ನ ಸ್ಕ್ರೀನ್‌ ಶಾಟ್‌ ಶೇರ್‌ ಮಾಡಿ, "ದಿನೇ ದಿನೇ ಇದು ತುಂಬಾ ವಿಷಕಾರಿಯಾಗುತ್ತಿದೆ. ಎಲ್ಲದಕ್ಕೂ ಒಂದು ಮಿತಿ ಇದೆ... @BlrCityPolice ದಯವಿಟ್ಟು ಈ ಸಮಸ್ಯೆಯನ್ನು ಪರಿಶೀಲಿಸಿ ಮತ್ತು ದಯವಿಟ್ಟು ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ !!" ಎಂದಿದ್ದಾರೆ. "ಅಪ್ಪು ಅಭಿಮಾನಿ ಸಂಘದವರು ಯಾವುದಾದರೂ ಒಂದು ಸ್ಟೇಷನ್‌ನಲ್ಲಿ ಕೇಸು ದಾಖಲಿಸಲಿ" ಎಂದು ಮತ್ತೋರ್ವ ಬಳಕೆದಾರ ಕಾಮೆಂಟ್‌ ಹಾಕಿದ್ದಾರೆ.

ಅವರು ಮಾಡಿದ್ದಾರೆ ಅಂತ ಇವ್ರು..

ಸೋಷಿಯಲ್‌ ಮೀಡಿಯಾದಲ್ಲಿ ಕಿಡಿ ಹೊತ್ತಿಕೊಳ್ಳುವ ಅವಶ್ಯಕತೆಯಿಲ್ಲ. ಅಲ್ಲಿ ಸದಾ ಹೊಗೆಯಾಡುತ್ತಲೇ ಇರುತ್ತದೆ. ಈ ಹಿಂದೆ ಪುನೀತ್‌ ರಾಜ್‌ಕುಮಾರ್‌ ಫ್ಯಾನ್ಸ್‌ ಎಂದು ಹೇಳಿಕೊಂಡಿದ್ದ ಕೆಲವರು, ದರ್ಶನ್‌ ಮತ್ತವರ ಫ್ಯಾಮಿಲಿಯನ್ನು ಟ್ರೋಲ್‌ ಮಾಡಿದ್ದರು. ದರ್ಶನ್‌, ವಿಜಯಲಕ್ಷ್ಮೀ ಮತ್ತು ಮಗ ವಿನೀಶ್‌ ಅವರ ಫೋಟೋ ಹಾಕಿ ಭಾವಪೂರ್ಣ ಶ್ರದ್ಧಾಂಜಲಿ ಎಂದೂ ಪೋಸ್ಟ್‌ ಹಾಕಲಾಗಿತ್ತು. ಪವಿತ್ರಾ ಗೌಡ ಅವರ ಹೆಸರನ್ನೂ ಎಳೆದು ತಂದು ನಿಂದಿಸುವ ಕೆಲಸವೂ ಆಗಿತ್ತು. ಈಗ ಮತ್ತೆ ದರ್ಶನ್‌ ಮತ್ತು ಪುನೀತ್ ಅಭಿಮಾನಿಗಳ ನಡುವೆ ಡಿಜಿಟಲ್‌ ವಾರ್‌ ನಡೆಯುತ್ತಿದೆ. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮತ್ತು ಕಿಚ್ಚ ಸುದೀಪ್‌ ಬಗ್ಗೆ ಕಟು ಪದಗಳನ್ನು ಬಳಕೆ ಮಾಡಿದ ಪೋಸ್ಟ್‌ಗಳು ವೈರಲ್‌ ಆಗಿವೆ.

ಪ್ರತಿಕ್ರಿಯೆ ನೀಡದ ದೊಡ್ಮನೆ ಸೊಸೆ..

ಸೋಷಿಯಲ್‌ ಮೀಡಿಯಾದಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ವಿರುದ್ಧ ಇದೇ ಮೊದಲ ಸಲ ಈ ರೀತಿಯ ನಿಂದನೆ ಆಗಿಲ್ಲ. ಈ ಹಿಂದೆ ಸಾಕಷ್ಟು ಸಲ ಕೆಟ್ಟ ಪದಗಳಿಂದ ಅವರನ್ನು ನಿಂದಿಸಲಾಗಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಗಜಪಡೆ ಹೆಸರಿನ ಟ್ವಿಟರ್‌ ಖಾತೆಯಿಂದ ಕೆಟ್ಟ ಪದಗಳ ಪೋಸ್ಟ್‌ ವೈರಲ್‌ ಆಗಿತ್ತು. ಆವತ್ತೂ ಸಹ ಏನನ್ನೂ ಮಾತನಾಡದೆ, ಮೌನಕ್ಕೆ ಜಾರಿದ್ದರು ಅಶ್ವಿನಿ ಪುನೀತ್. ಇದೀಗ ಮತ್ತೆ ಅಂಥದ್ದೇ‌ ಪೋಸ್ಟ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.  

 

 

 

 

 

 

Whats_app_banner