ಸಂಯುಕ್ತ ಹೊರನಾಡು ಮನೆ ಟೇರಸ್ ಮೇಲೆ ಹಕ್ಕಿಗಳ ಕಲರವ; ಹಕ್ಕಿಗೆ ಅಕ್ಕಿ ಹಾಕೋದು ಸರಿಯೇ? ಪಕ್ಷಿಪ್ರಿಯರ ಪ್ರಶ್ನೆ
ಕನ್ನಡ ನಟಿ ಸಂಯುಕ್ತ ಹೊರನಾಡು ಪ್ರಕೃತಿ ಪ್ರಿಯೆ. ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವುದು, ಪ್ರಾಣಿಗಳಿಗೆ ಆಂಬ್ಯುಲೆನ್ಸ್ ಒದಗಿಸುವುದು ಇತ್ಯಾದಿ ಕಾರ್ಯಗಳ ಮೂಲಕ ಪ್ರಕೃತಿ ಪ್ರೀತಿ ತೋರಿದ್ದಾರೆ. ಇದೀಗ ಇವರು ಟೇರಸ್ ಮೇಲೆ ಹಕ್ಕಿಗಳಿಗೆ ಅಕ್ಕಿ ಹಾಕುವ ವಿಡಿಯೋ ವೈರಲ್ ಆಗಿದೆ.
ಕನ್ನಡ ನಟಿ ಸಂಯುಕ್ತ ಹೊರನಾಡು ಪ್ರಕೃತಿ ಪ್ರಿಯೆ. ಕಳೆದ ತಿಂಗಳಷ್ಟೇ ಟೆಕೆಯಾನ್ ಎಂಬ ಸಂಸ್ಥೆ ಜತೆ 28 ತಿಂಗಳ ಸಿಂಚನ ಎಂಬ ಹೆಣ್ಣು ಹುಲಿಯನ್ನು ದತ್ತು ಪಡೆದಿದ್ದರು. ಆಗಾಗ, ಪ್ರಾಣಿ ಪಕ್ಷಿಗಳ ಜತೆ ತನ್ನ ಒಡನಾಟದ ಚಿತ್ರಗಳನ್ನು, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಪ್ರಾಣ ಅನಿಮಲ್ ಫೌಂಡೇಶನ್ ಅಡಿಯಲ್ಲಿ ಪ್ರಾಣಿಗಳ ರಕ್ಷಣೆಗೆ ಅಂಬ್ಯುಲೆನ್ಸ್ ಸೇವೆಯನ್ನೂ ಒದಗಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಕಳೆದ ತಿಂಗಳು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿ ದತ್ತು ಪಡೆದಿದ್ದರು. ಇದೀಗ ಇನ್‌ಸ್ಟಾಗ್ರಾಂನಲ್ಲಿ ಹಕ್ಕಿಗಳಿಗೆ ಅಕ್ಕಿ ಹಾಕುವ ಸುಂದರ ವಿಡಿಯೋ ಹಾಕಿದ್ದಾರೆ.
ವೂ ನೀಡ್ಸ್ ಟು ಟ್ವೀಟ್ ಎನಿಮೋರ್ ಎಂಬ ಕ್ಯಾಪ್ಷನ್‌ನಡಿ ಸಂಯುಕ್ತ ಹೊರನಾಡು ಈವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಬೀಟಲ್ಸ್, ಪ್ಯಾರಾಕೀಟ್, ಇನ್‌ಸ್ಟಾಫೀಡ್, ಬರ್ಡ್ಸ್ ಎಂಬ ಹ್ಯಾಷ್ ಟ್ಯಾಗ್ ನೀಡಿದ್ದಾರೆ. ತನ್ನ ಮನೆಯ (ಕಟ್ಟಡದ) ಟೇರಸ್ ಅಂಚಿನಲ್ಲಿ ಅಕ್ಕಿ ಹಾಕುತ್ತಾರೆ. ಒಂದು ಕಡೆ ಅಕ್ಕಿಯಲ್ಲಿ ಸಂಯುಕ್ತ ಎಂದು ಬರೆಯುತ್ತಾರೆ. ಇವರು ಅಕ್ಕಿ ಹಾಕಿದ ಬಳಿಕ ದೂರದಲ್ಲಿ ಪಾರಾಕೀಟ್ ಸಣ್ಣ ಗಿಣಿಗಳ ಕಲರವ ಕೇಳಿಸುತ್ತದೆ. ಒಂದೊಂದೇ ಹಕ್ಕಿಗಳು ಅಕ್ಕಿ ತಿನ್ನಲು ಓಡಿ ಬರುತ್ತವೆ. ಸ್ವಲ್ಪ ಹೊತ್ತಲ್ಲಿ ಹತ್ತಾರು, ನೂರಾರು ಹಕ್ಕಿಗಳು ಅಕ್ಕಿ ತಿನ್ನುತ್ತವೆ. ಒಂದು ಅಕ್ಕಿಯನ್ನು ಕೈಯಲ್ಲಿ ಹಿಡಿದು ಆಕಾಶಕ್ಕೆ ಹಾರಿ ಬಿಡುವ ವಿಡಿಯೋ ತುಣುಕು ಕೂಡ ಇದೆ.
ಈ ವಿಡಿಯೋಗೆ ಎಂದಿನಂತೆ ಲೈಕ್‌ಗಳ ಸುರಿಮಳೆಯಾಗಿದೆ. ಇದೇ ಸಮಯದಲ್ಲಿ ಗಿಣಿಗಳಿಗೆ ಅಕ್ಕಿ ಹಾಕಿದ ಪಾಸಿಟೀವ್ ವ್ಯಕ್ತಿತ್ವಕ್ಕೆ ಸಲಾಂ ಹೇಳಿದ್ದಾರೆ. ಇದೇ ಸಮಯದಲ್ಲಿ ಕೆಲವರು ಸ್ವಚ್ಛಂದವಾಗಿ ಹಾರುವ ಹಕ್ಕಿಗಳಿಗೆ ಅಕ್ಕಿ ಹಾಕಬೇಕೆ? ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.
ಹಕ್ಕಿಗೆ ಅಕ್ಕಿ ಹಾಕೋದು ಸರಿಯೇ?
ದೀಪಾ ದೀಪಿಕಾ ಎಂಬ ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರ ಪ್ರಕಾರ "ಪಾರಿವಾಳಗಳಿಗೆ ಗೋಪೆನಿಟ್ ಆಕರ್ಷಕವಲ್ಲ. ಅದರಿಂದ ಸಮಸ್ಯೆಯೇ ಹೆಚ್ಚು. ರೆಸಿಪರರೇಟರಿ ಸಮಸ್ಯೆಗಳು ಉಂಟಾಗುತ್ತವೆ. ಪ್ರತಿಯೊಂದು ಜೀವಿಯೂ ತಮ್ಮ ಆಹಾರ ಹುಡುಕಿಕೊಳ್ಳುವಷ್ಟು ಶಕ್ತವಾಗಿವೆ. ಹೇಗೆ ಆಹಾರ ಹುಡುಕಬೇಕು ಎಂದು ಅವುಗಳಿಗೆ ತಿಳಿದಿದೆ. ಈ ರೀತಿ ಅಕ್ಕಿ ಹಾಕಿದರೆ ಅವುಗಳು ಸೋಮಾರಿಯಾಗುತ್ತವೆ" ಎಂದು ಬರೆದಿದ್ದಾರೆ. ಇದಕ್ಕೆ ಸಂಯುಕ್ತ ಹೊರನಾಡು ಪ್ರತಿಕ್ರಿಯೆ ನೀಡಿಲ್ಲ.
ಲೈಫ್ ಕೋಚ್ ನಿವೇದಿತಾ ಎಂಬವರು ಕೂಡ ಇದೇ ಅರ್ಥದ ಕಾಮೆಂಟ್ ಹಾಕಿದ್ದಾರೆ. "ಹಕ್ಕಿಗಳನ್ನು ನೋಡಲು ಖುಷಿಯಾಗುತ್ತದೆ. ಆದರೆ, ಹಕ್ಕಿಗಳಿಗೆ ಆಹಾರ ಹಾಕಿದರೆ ಅವು ಆಹಾರ ಹುಡುಕುವುದನ್ನು ನಿಲ್ಲಿಸುತ್ತವೆ ಎಂದು ಎಲ್ಲೋ ಕೇಳಿದ್ದೇನೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಕಾಮೆಂಟ್‌ಗೂ ದೀಪ ದೇವಿಕಾ ಪ್ರತಿಕ್ರಿಯೆ ನೀಡಿದ್ದಾರೆ. "ನೀವು ಹೇಳುವುದು ಸರಿ, ಒಮ್ಮೆ ಅವುಗಳಿಗೆ ಸುಲಭವಾಗಿ ಆಹಾರ ದೊರಕುತ್ತದೆ ಎಂದು ಗೊತ್ತಾದರೆ, ಅವು ಆಹಾರ ಹುಡುಕುವುದನ್ನು ನಿಲ್ಲಿಸುತ್ತವೆ. ನಮ್ಮ ಉಚಿತ ಅಕ್ಕಿಯ ರೀತಿ" ಎಂದು ಪ್ರತಿಕ್ರಿಯೆ ಮಾಡಿದ್ದಾರೆ.
ಕೊಂಚ ಹಾಕಿದರೆ ತಪ್ಪೇನಿಲ್ಲ
ಇವರ ಪ್ರತಿಕ್ರಿಯೆಗಳಿಗೆ ವರ್ಲ್ಡ್ ಆಫ್ ರಕ್ಷಿತ್ ನೀಡಿರುವ ಉತ್ತರ ಆಸಕ್ತಿದಾಯಕವಾಗಿದೆ. "ನಿಮ್ಮ ಕಾಳಜಿಗೆ ಧನ್ಯವಾದಗಳು. ನೈಸರ್ಗಿಕ ವರ್ತನೆಗಳಿಗೆ ಗೊಂದಲ ಮಾಡಬಾರದು ಎನ್ನುವ ಕಾಳಜಿ ಅರ್ಥವಾಗುತ್ತದೆ. ಆದರೆ, ಇದರ ಇನ್ನೊಂದು ಮುಖವನ್ನೂ ನೋಡಬೇಕು. ಬೆಂಗಳೂರು ಕೇಂದ್ರದಂತಹ ಕಡೆ ನಗರೀಕರಣ ವ್ಯಾಪಕವಾಗುತ್ತಿದೆ. ಪಾರಾಕೀಟ್ಸ್‌ನಂತಹ ನೈಸರ್ಗಿಕ ಆಹಾರಗಳು ದೊರಕುತ್ತಿಲ್ಲ. ಹುಳು ಹುಪ್ಪಟೆಗಳು ದೊರಕುತ್ತಿಲ್ಲ. ಅಭಿವೃದ್ಧಿಗಾಗಿ ಮರ ಕಡಿಯುವುದು ಇತ್ಯಾದಿಗಳು ಇದಕ್ಕೆ ಕಾರಣ" ಎಂದು ಅವರ ಹೇಳಿದ್ದಾರೆ. "ಇಂತಹ ಪಕ್ಷಿಗಳಿಗೆ ದಿನಕ್ಕೆ ಕೊಂಚ ಪ್ರಮಾಣದಲ್ಲಿ ಆಹಾರ ನೀಡುವುದು ತಪ್ಪಲ್ಲ. ಅಂದರೆ,ಅವುಗಳು ಆಹಾರ ಹುಡುಕಾಟವನ್ನೂ ಮುಂದುವರೆಸಬೇಕು, ಈ ಸಮಯದಲ್ಲಿ ಕೊಂಚ ಆಹಾರ ನೀಡಿದರೆ ತಪ್ಪಾಗದು" ಎಂದಿದ್ದಾರೆ. ಈ ಕಾಮೆಂಟ್‌ಗೆ ಪ್ರತಿಕ್ರಿಯೆ ಬಂದಿಲ್ಲ.