ಕನ್ನಡ ಸುದ್ದಿ  /  Entertainment  /  Sandalwood Sangeetha Sringeri Expressed Her Displeasure About The Choice Of Heroines In The Kannada Film Industry Mnk

‘ಕನ್ನಡ ಇಂಡಸ್ಟ್ರಿಯಲ್ಲಿ ಪ್ರತಿಭೆಗೆ ಕಿಮ್ಮತ್ತಿಲ್ಲ, ಕಮ್ಮಿ ಬಜೆಟ್‌ಗೆ ಯಾರು ಸಿಗ್ತಾರೋ ಅವ್ರೇ ಹೀರೋಯಿನ್‌ ಆಗ್ತಾರೆ!’ ಸಂಗೀತಾ ಶೃಂಗೇರಿ ಬೇಸರ

ಸಂಭಾವನೆ ವಿಚಾರದಲ್ಲಿ ಕನ್ನಡದ ನಟಿಯರಿಗೆ ದಶಕಗಳಿಂದಲೇ ಹಿನ್ನೆಡೆ ಆಗುತ್ತಲೇ ಬರುತ್ತಿದೆ. ಪಕ್ಕದ ತೆಲುಗು, ತಮಿಳಿನಲ್ಲಿ ಹೀಗಿಲ್ಲ. ಅಲ್ಲಿನ ನಾಯಕಿಯರು ಒಂದು ಸಿನಿಮಾಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ, ಕನ್ನಡದಲ್ಲಿ ಮಾತ್ರ ಅಂಥ ಸ್ಥಿತಿ ಇಲ್ಲ. ಈ ತಾರತಮ್ಯದ ಬಗ್ಗೆ ಬಿಗ್‌ಬಾಸ್‌ ಫೈನಲಿಸ್ಟ್‌ ಆಗಿದ್ದ ಸಂಗೀತಾ ಶಂಗೇರಿ ಬೇಸರ ಹೊರಹಾಕಿದ್ದಾರೆ.

‘ಕನ್ನಡ ಇಂಡಸ್ಟ್ರಿಯಲ್ಲಿ ಪ್ರತಿಭೆಗೆ ಕಿಮ್ಮತ್ತಿಲ್ಲ, ಕಮ್ಮಿ ಬಜೆಟ್‌ಗೆ ಯಾರು ಸಿಗ್ತಾರೋ ಅವ್ರೇ ಹೀರೋಯಿನ್‌ ಆಗ್ತಾರೆ!’ ಸಂಗೀತಾ ಶೃಂಗೇರಿ ಬೇಸರ
‘ಕನ್ನಡ ಇಂಡಸ್ಟ್ರಿಯಲ್ಲಿ ಪ್ರತಿಭೆಗೆ ಕಿಮ್ಮತ್ತಿಲ್ಲ, ಕಮ್ಮಿ ಬಜೆಟ್‌ಗೆ ಯಾರು ಸಿಗ್ತಾರೋ ಅವ್ರೇ ಹೀರೋಯಿನ್‌ ಆಗ್ತಾರೆ!’ ಸಂಗೀತಾ ಶೃಂಗೇರಿ ಬೇಸರ

Sangeetha Sringeri: ಕಿರುತೆರೆ, ಸಿನಿಮಾಗಳಲ್ಲಿ ನಟಿಸಿ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದ ನಟಿ ಸಂಗೀತಾ ಶೃಂಗೇರಿಗೆ ಪ್ರತಿ ಮನ ಮನೆಯಲ್ಲೂ ಜಾಗ ಮಾಡಿಕೊಟ್ಟಿದ್ದು ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್. ಆ ಶೋ ಮೂಲಕ ತಮ್ಮ ಖದರ್‌ ತೋರಿಸಿದ ಸಂಗೀತಾ, ಮಾತನಾಡುವ ಗುಣದಿಂದಲೇ ನಾಡಿನ ಲಕ್ಷಾಂತರ ಜನರ ಬೆಂಬಲ ಪಡೆದುಕೊಂಡಿದ್ದರು. ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ಬಿಗ್‌ ಬಾಸ್‌ ಸೀಸನ್‌ 10ರಲ್ಲಿ ಫಿನಾಲೆ ಟಿಕೆಟ್‌ ಪಡೆದ ಮೊದಲ ಸ್ಪರ್ಧಿಯೂ ಇವರೇ ಆಗಿದ್ದರು. ಇದೀಗ ಇದೇ ನಟಿ ಕನ್ನಡ ಚಿತ್ರರಂಗದಲ್ಲಿನ ನಾಯಕಿಯರ ಸ್ಥಾನಮಾನದ ಬಗ್ಗೆ ಮೌನ ಮುರಿದಿದ್ದಾರೆ ಸಂಗೀತಾ.

ಕನ್ನಡ ಚಿತ್ರೋದ್ಯಮ ಮೊದಲಿನಂತಿಲ್ಲ. ಕೋಟಿ ಕೋಟಿ ಸುರಿದು ಕನ್ನಡ ಸಿನಿಮಾ ಮಾಡುತ್ತಾರಾದರೂ, ಆ ಸಿನಿಮಾ ನಾಯಕಿ ಮಾತ್ರ ಕನ್ನಡದವರಾಗಿರಬಾರದು! ಅದಕ್ಕೆ ಕಾರಣ; ನಾಯಕಿಗೆ ಕೊಡಬೇಕಾದ ಸಂಭಾವನೆ. ಕನ್ನಡದಲ್ಲಿಯೇ ಸಾಕಷ್ಟು ನಟಿಯರಿದ್ದರೂ, ಅವರಿಗೆ ಕಿಮ್ಮತ್ತಿಲ್ಲ ಎಂಬಂತಾಗಿದೆ. ಅವರನ್ನು ಬಿಟ್ಟು ಬೇರೆ ಬೇರೆ ಭಾಷೆಗಳಿಂದ ನಟಿಯರನ್ನು ಕರೆತಂದು ಸಿನಿಮಾ ಮಾಡುವ ಕೆಲಸ ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಲೇ ಇದೆ. ಪ್ರತಿಭೆಗಿಂತ ನಮ್ಮ ಬಜೆಟ್‌ಗೆ ಹೀರೋಯಿನ್‌ ಸಿಕ್ರಲ್ಲ ಸಾಕು ಎಂಬ ಮನಸ್ಥಿತಿ ಇಲ್ಲಿನ ಸಿನಿಮಾ ಮೇಕರ್‌ಗಳದ್ದು. ಇದೇ ನಡೆಯ ಬಗ್ಗೆ ಬಿಗ್‌ ಬಾಸ್‌ ಖ್ಯಾತಿ ಸಂಗೀತಾ ಬೇಸರ ಹೊರಹಾಕಿದ್ದಾರೆ.

ಸಂಭಾವನೆ ವಿಚಾರದಲ್ಲಿ ಕನ್ನಡದ ನಟಿಯರಿಗೆ ದಶಕಗಳಿಂದಲೇ ಹಿನ್ನೆಡೆ ಆಗುತ್ತಲೇ ಬರುತ್ತಿದೆ. ಪಕ್ಕದ ತೆಲುಗು, ತಮಿಳಿನಲ್ಲಿ ಹೀಗಿಲ್ಲ. ಅಲ್ಲಿನ ನಾಯಕಿಯರು ಒಂದು ಸಿನಿಮಾಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ, ಕನ್ನಡದಲ್ಲಿ ಮಾತ್ರ ಅಂಥ ಸ್ಥಿತಿ ಇಲ್ಲ. ನಾಯಕರಿಗೆ ಸಿಗುವ ಸಂಭಾವನೆಯ ಒಂದಷ್ಟು ಭಾಗವೂ ನಾಯಕಿಯರಿಗೆ ಸಿಗದಿರುವುದು ವಿಪರ್ಯಾಸ. ಈ ಬಗ್ಗೆ ಸಾಕಷ್ಟು ಮಂದಿ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ತೋಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಕೆಲವು ನಟಿಯರು ಕನ್ನಡ ಸಹವಾಸವೇ ಸಾಕೆಂದು ಪರಭಾಷೆಗೆ ಹಾರಿ ಅಲ್ಲಿಯೇ ಕೋಟಿ ಕೋಟಿ ಸಂಪಾದಿಸುತ್ತಿದ್ದಾರೆ.

ನಿಜ ಜೀವನದಲ್ಲೇ ಸಾಕಷ್ಟು ಘಟಿಸಿವೆ..

ಈ ನಡುವೆ ಹಿರಿಯ ಪತ್ರಕರ್ತ ಬಿ ಗಣಪತಿ ಯೂಟ್ಯೂಬ್‌ ಚಾನೆಲ್‌ಗೆ ಮಾರಿಗೋಲ್ಡ್‌ ಸಿನಿಮಾ ಬಿಡುಗಡೆ ನಿಮಿತ್ತ ನೀಡಿದ ಸಂದರ್ಶನದಲ್ಲಿ, "ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯರಿಗೆ ಸಿಗಬೇಕಾದ ಸ್ಥಾನ ಮಾನ ಸಿಗುತ್ತಿದೆಯಾ?"ಎಂಬ ಪ್ರಶ್ನೆಗೆ ಉತ್ತರ ನೀಡಿದ ಸಂಗೀತಾ, ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿನ ಏರಿಳಿತಗಳ ಬಗ್ಗೆ ವಿವರಿಸಿ ಬೇಸರ ಹೊರ ಹಾಕಿದ್ದಾರೆ. ತಮ್ಮದೇ ನಿಜ ಜೀವನದಲ್ಲಿ ನಡೆದ ಒಂದಷ್ಟು ಘಟನೆಗಳನ್ನೇ ಉದಾಹರಣೆಯಾಗಿ ತೆಗೆದುಕೊಂಡು, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕಿಯರ ಸ್ಥಿತಿಗತಿ ಬಗ್ಗೆ ಮಾತನಾಡಿದ್ದಾರೆ. ಹೀಗಿದೆ ಸಂಗೀತಾ ಪ್ರತಿಕ್ರಿಯೆ.

ಟ್ಯಾಲೆಂಟ್‌ಗೆ ಕನ್ನಡದಲ್ಲಿ ಕಿಮ್ಮತ್ತಿಲ್ಲ!

"ನನಗೆ ಯಾರಾದ್ರೂ ಸಿನಿಮಾಕ್ಕೆ ಅಪ್ರೋಚ್‌ ಮಾಡ್ತಾರೆ ಅಂದ್ರೆ, ನರೇಶನ್‌ ಮಾಡೋದಕ್ಕೂ ಮುಂಚೆ ಪೇಮೆಂಟ್‌ ಬಗ್ಗೆ ಮಾತನಾಡ್ತಾರೆ. ಪೇಮೆಂಟ್‌ ಅವರ ಬಜೆಟ್‌ನಲ್ಲಿ ಬರಲಿಲ್ಲ ಅಂದ್ರೆ, ಯಾರು ಅವರಿಗೆ ಎಲ್ಲರಿಗಿಂತ ಕಡಿಮೆ ಬಜೆಟ್‌ನಲ್ಲಿ ಸಿಗ್ತಾರೋ ಅವರನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡ್ತಾರೆ. ಇಲ್ಲಿ ಟ್ಯಾಲೆಂಟ್‌ ವಿಷ್ಯಾ ಮ್ಯಾಟರೇ ಆಗಲ್ಲ. ಇವರಿಗೆ ಟ್ಯಾಲೆಂಟ್‌ ಇದೆ ಅಂತ ಅವರನ್ನು ಆಯ್ಕೆ ಮಾಡಲ್ಲ. ಇದು ನನಗೆ ತುಂಬ ಬೇಜಾರು ಕೊಡುತ್ತೆ. ಒಬ್ಬ ಡೈರೆಕ್ಟರ್‌, ಇವರೇ ನಾಯಕಿಯಾಗಿ ಬೇಕು ಅಂತ ಯಾಕೆ ಹೇಳಲ್ಲ? ಸ್ಟೋರಿಗೆ ನ್ಯಾಯ ಸಿಗೋದು, ಇವರೇ ಬೇಕು ಎಂದು ನಿರ್ದೇಶಕರು ಪಟ್ಟು ಹಿಡಿದಾಗ. ಆಗ ಮಾತ್ರ ಪ್ರತಿಭೆಗೂ ಬೆಲೆ ಸಿಗುತ್ತೆ. ಸಿನಿಮಾ ಸಹ ಗೆಲ್ಲುತ್ತೆ" ಎಂದಿದ್ದಾರೆ.

ದುಡ್ಡಿಗೋಸ್ಕರ ಸಿನಿಮಾ ಮಾಡೋದನ್ನ ನಿಲ್ಲಿಸಿ..

"ಕನ್ನಡದಲ್ಲಿ ಹಣಕ್ಕೋಸ್ಕರ ಸಿನಿಮಾ ಮಾಡ್ತಿದ್ದಾರೆ. ಮೂವಿ ಮಾಡಬೇಕು ಅನ್ನೋ ಪ್ರೀತಿಯಿಂದ ಯಾರೂ ಸಿನಿಮಾ ಮಾಡ್ತಿಲ್ಲ. ಆ ಮನಸ್ಥಿತಿ ಹೋದರೆ, ಕನ್ನಡ ಆಡಿಯೆನ್ಸ್‌ ಚಿತ್ರಮಂದಿರಕ್ಕೆ ಬಂದರೂ ಬರಬಹುದು. ದುಡ್ಡಿಗೋಸ್ಕರ ಸಿನಿಮಾ ಮಾಡೋದನ್ನು ಬಿಟ್ಟರೆ, ಜನರನ್ನು ಸಲೀಸಾಗಿಯೇ ಚಿತ್ರಮಂದಿರಕ್ಕೆ ಕರೆತರಬಹುದು. ತಮಿಳು ಮತ್ತು ಮಲಯಾಳಂನಲ್ಲಿ ಅಲ್ಲಿನ ನೇಟಿವಿಟಿಯನ್ನು ಎತ್ತಿ ತೋರಿಸುತ್ತಾರೆ. ನಮ್ಮ ಸಿನಿಮಾಗಳಲ್ಲಿ ಆ ನೇಟಿವಿಟಿ ಕಾಣಿಸುವುದೇ ಅಪರೂಪ. ಶೃಂಗೇರಿ ಕುರಿತು ಸಿನಿಮಾ ಮಾಡಿದ್ರೆ, ಆ ಶೃಂಗೇರಿಯನ್ನು ನಮ್ಮ ಸಿನಿಮಾದಲ್ಲಿ ತೋರಿಸೋದೆ ಇಲ್ಲ. ಅದೇ ಮಲಯಾಳಂನಲ್ಲಿ ಹಾಗಲ್ಲ. ಅಲ್ಲಿನವರ ಮನೆ ಹೇಗೆ, ಅವರ ಸ್ಟೈಲ್‌ ಹೇಗೆ, ಅಲ್ಲಿನ ನೆಲ, ಜಲ ಎಲ್ಲವನ್ನೂ ತೋರಿಸ್ತಾರೆ. ನಮ್ಮಲ್ಲಿ ಅದ್ಯಾವುದೂ ಕಾಣಿಸುವುದೇ ಇಲ್ಲ" ಎಂದಿದ್ದಾರೆ ಸಿಂಹಿಣಿ ಸಂಗೀತಾ ಶೃಂಗೇರಿ.

ದಿಗಂತ್‌ ಮಂಚಾಲೆ ಮತ್ತು ಸಂಗೀತಾ ಶೃಂಗೇರಿ ನಟಿಸಿರುವ ಆಕ್ಷನ್‌ ಥ್ರಿಲ್ಲರ್‌ ಶೈಲಿಯ ಮಾರಿಗೋಲ್ಡ್‌ ಸಿನಿಮಾ ಇದೇ ವಾರ ತೆರೆಗೆ ಬರಲು ಸಜ್ಜಾಗಿದೆ. ಏಪ್ರಿಲ್‌ 5ರಂದು ಬಿಡುಗಡೆ ಆಗಲಿರುವ ಈ ಸಿನಿಮಾವನ್ನು ರಾಘವೇಂದ್ರ ಎಂ ನಾಯ್ಕ್‌ ನಿರ್ದೇಶನ ಮಾಡಿದ್ದಾರೆ. ರಘುವರ್ಧನ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

IPL_Entry_Point