ಸಂಜು ವೆಡ್ಸ್ ಗೀತಾ 2 ಮತ್ತೆ ಜೂನ್ 06ಕ್ಕೆ ಮರುಬಿಡುಗಡೆ; ಹಳೆ ಸಿನಿಮಾಕ್ಕೆ ಹೊಸ ದೃಶ್ಯಗಳ ಸೇರ್ಪಡೆ
ಕನ್ನಡ ಸುದ್ದಿ  /  ಮನರಂಜನೆ  /  ಸಂಜು ವೆಡ್ಸ್ ಗೀತಾ 2 ಮತ್ತೆ ಜೂನ್ 06ಕ್ಕೆ ಮರುಬಿಡುಗಡೆ; ಹಳೆ ಸಿನಿಮಾಕ್ಕೆ ಹೊಸ ದೃಶ್ಯಗಳ ಸೇರ್ಪಡೆ

ಸಂಜು ವೆಡ್ಸ್ ಗೀತಾ 2 ಮತ್ತೆ ಜೂನ್ 06ಕ್ಕೆ ಮರುಬಿಡುಗಡೆ; ಹಳೆ ಸಿನಿಮಾಕ್ಕೆ ಹೊಸ ದೃಶ್ಯಗಳ ಸೇರ್ಪಡೆ

ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್‍ ಅಭಿನಯದ ‘ಸಂಜು ವೆಡ್ಸ್ ಗೀತಾ 2’ ಚಿತ್ರವು ಜನವರಿ 17ರಂದು ಬಿಡುಗಡೆಯಾಗಿತ್ತು. ಇದೀಗ ಚಿತ್ರವು ಹೊಸ ದೃಶ್ಯಗಳ ಸೇರ್ಪಡೆಯೊಂದಿಗೆ ಜೂನ್‍ 06ರರಂದು ಮರುಬಿಡುಗಡೆಯಾಗಿದೆ. ಈ ಬಾರಿ 20 ನಿಮಿಷಗಳ ಹೊಸ ದೃಶ್ಯಗಳನ್ನು ಸೇರಿಸಿ ಬಿಡುಗಡೆ ಮಾಡುವುದಕ್ಕೆ ನಾಗಶೇಖರ್‌ ಮುಂದಾಗಿದ್ದಾರೆ. (ವರದಿ: ಚೇತನ್‌ ನಾಡಿಗೇರ್‌)

ಸಂಜು ವೆಡ್ಸ್ ಗೀತಾ 2 ಮತ್ತೆ ಜೂನ್ 06ಕ್ಕೆ ಮರುಬಿಡುಗಡೆ; ಹಳೆ ಸಿನಿಮಾಕ್ಕೆ ಹೊಸ ದೃಶ್ಯಗಳ ಸೇರ್ಪಡೆ
ಸಂಜು ವೆಡ್ಸ್ ಗೀತಾ 2 ಮತ್ತೆ ಜೂನ್ 06ಕ್ಕೆ ಮರುಬಿಡುಗಡೆ; ಹಳೆ ಸಿನಿಮಾಕ್ಕೆ ಹೊಸ ದೃಶ್ಯಗಳ ಸೇರ್ಪಡೆ

ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್‍ ಅಭಿನಯದ ‘ಸಂಜು ವೆಡ್ಸ್ ಗೀತಾ 2’ ಚಿತ್ರವು ಜನವರಿ 17ರಂದು ಬಿಡುಗಡೆಯಾಗಿ, ಚಿತ್ರಮಂದಿರಗಳಲ್ಲಿ ಅಷ್ಟೇನೂ ಯಶಸ್ವಿಯಾಗದೆ ಮಾಯವಾಗಿತ್ತು. ಚಿತ್ರವನ್ನು ಮತ್ತೊಮ್ಮೆ ಎಡಿಟ್‍ ಮಾಡಿ, ಹೊಸದಾಗಿ ಬಿಡುಗಡೆ ಮಾಡುವುದಾಗಿ ನಿರ್ದೇಶಕ ನಾಗಶೇಖರ್‌ ಹೇಳಿದ್ದರು. ಇದೀಗ ಚಿತ್ರವು ಹೊಸ ದೃಶ್ಯಗಳ ಸೇರ್ಪಡೆಯೊಂದಿಗೆ ಜೂನ್‍ 06ರಂದು ಮರುಬಿಡುಗಡೆಯಾಗಿದೆ. ಈ ಬಾರಿ 20 ನಿಮಿಷಗಳ ಹೊಸ ದೃಶ್ಯಗಳನ್ನು ಸೇರಿಸಿ ಬಿಡುಗಡೆ ಮಾಡುವುದಕ್ಕೆ ನಾಗಶೇಖರ್‌ ಮುಂದಾಗಿದ್ದಾರೆ.

‘ಸಂಜು ವೆಡ್ಸ್ ಗೀತಾ 2’ ಚಿತ್ರವು ತಾಂತ್ರಿಕವಾಗಿ ಶ್ರೀಮಂತವಾಗಿತ್ತು. ಶ್ರೀಧರ್‌ ಸಂಭ್ರಮ್ ಸಂಗೀತ ಸಂಯೋಜನೆಯ ಹಾಡುಗಳು ಮತ್ತು ಸತ್ಯ ಹೆಗಡೆ ಅವರ ಛಾಯಗ್ರಹಣದ ಬಗ್ಗೆ ಮೆಚ್ಚುಗೆಯ ಮಾತು ಕೇಳಿಬಂದಿತ್ತು. ಆದರೆ, ಚಿತ್ರಕಥೆ ಬಹಳ ಸವಕಲಾಗಿದ್ದರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಅದರಲ್ಲೂ ರಾಗಿಣಿ ಪಾತ್ರ ಚಿತ್ರದಲ್ಲಿ ಯಾಕೆ ಬರುತ್ತದೆ? ಚಿಕ್ಕಬಳ್ಳಾಪುರದ ರೇಷ್ಮೆ ಬೆಳಗಾರರ ಸಮಸ್ಯೆಗಳೇನು? ಎಂಬ ಪ್ರಶ್ನೆಸಗಳನ್ನು ವಿಮರ್ಶಕರು ಎತ್ತಿದ್ದರು. ಹಾಗೆಯೇ ನಿರೂಪಣೆ ಜಾಳಾಗಿದೆ ಎಂಬ ಮಾತನ್ನು ಎಲ್ಲ ವಿಮರ್ಶಕರು ಗುರುತಿಸಿದ್ದರು.

ಇದೆಲ್ಲಕ್ಕೂ ಒಂದು ಫುಲ್‍ಸ್ಟಾಪ್ ಹಾಕಲು ನಾಗಶೇಖರ್‌ ನಿರ್ಧರಿಸಿದ್ದಾರೆ. ರಾಗಿಣಿ ಅಭಿನಯದ ಕೆಲವು ದೃಶ್ಯಗಳು ಸೇರಿದಂತೆ, ಚಿತ್ರದಲ್ಲಿ ಮಿಸ್‍ ಆಗಿದ್ದ ಕೆಲವು ಲಿಂಕ್‍ಗಳನ್ನು ಮತ್ತೆ ಚಿತ್ರದಲ್ಲಿ ಸೇರಿಸುವುದಕ್ಕೆ ಮುಂದಾಗಿದ್ದಾರೆ. ಚಿತ್ರದ ಬಹಳ ಮುಖ್ಯವಾದ 20 ನಿಮಿಷಗಳಷ್ಟು ಹೊಸ ದೃಶ್ಯಗಳನ್ನು ಸೇರಿಸಿ, ಚಿತ್ರ ಮರುಬಿಡುಗಡೆ ಮಾಡುವುದು ಅವರ ಯೋಚನೆ. ಮೊದಲು ಚಿತ್ರದ ಅವಧಿ ಎರಡು ತಾಸು 02 ನಿಮಿಷಗಳಿಷ್ಟು. ಈಗ ಚಿತ್ರದ ಅವಧಿ ಎರಡು ತಾಸು 23 ನಿಮಿಷಗಳಾಷ್ಟಗಲಿದೆಯಂತೆ.

ಸಂಜು ವೆಡ್ಸ್ ಗೀತಾ 2’ ಚಿತ್ರವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ ಬಿಡುಗಡೆಯಾಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ‘ಸಂಜು ವೆಡ್ಸ್ ಗೀತಾ 2’ ಚಿತ್ರವು ಜನವರಿ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರದ ಬಿಡುಗಡೆಗೆ ಹೈದರಾಬಾದ್‍ನ ವ್ಯಕ್ತಿಯೊಬ್ಬರು ತಡೆಯಾಜ್ಞೆ ತಂದಿದ್ದರು. ಹಾಗಾಗಿ, ಚಿತ್ರವನ್ನು ಬಿಡುಗಡೆ ಮಾಡದಿರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತಿಮವಾಗಿ ಚಿತ್ರಕ್ಕಿದ್ದ ತೆರವುಗೊಳಿಸಿ ಜನವರಿ 17ರಂದು ಬಿಡುಗಡೆ ಮಾಡಲಾಗಿತ್ತು. ಆದರೆ, ಚಿತ್ರದ ನಿರೂಪಣೆ ಜಾಳಾಗಿದ್ದರಿಂದ, ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಹೆಚ್ಚು ಸದ್ದು ಮಾಡಲಿಲ್ಲ.

‘ಸಂಜು ವೆಡ್ಸ್ ಗೀತಾ 2’ ಚಿತ್ರವನ್ನು ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ರಚಿತಾ ರಾಮ್, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಹೆಸರನ್ನು ಹೊರತುಪಡಿಸಿ 2011ರಲ್ಲಿ ಬಿಡುಗಡೆಯಾದ ‘ಸಂಜು ವೆಡ್ಸ್ ಗೀತಾ’ ಚಿತ್ರಕ್ಕೂ ‘ಸಂಜು ವೆಡ್ಸ್ ಗೀತಾ 2’ಗೂ ಯಾವುದೇ ಸಂಬಂಧವಿಲ್ಲ. ಮೊದಲ ಚಿತ್ರ ಸಂಜು ಮತ್ತು ಗೀತಾ ಎಂಬ ಯುವ ಪ್ರೇಮಿಗಳ ದುರಂತಕಥೆ ಹೇಳಿತ್ತು. ಬಾಕ್ಸ್ ಆಫೀಸ್‍ನಲ್ಲಿ ‘ಸಂಜು ವೆಡ್ಸ್ ಗೀತಾ’ ದೊಡ್ಡ ಯಶಸ್ಸು ಕಂಡಿತ್ತು. ಆ ಚಿತ್ರದ ಹಾಡುಗಳು ಈಗಲೂ ಸಾಕಷ್ಟು ಜನಪ್ರಿಯವಾಗಿವೆ. ‘ಸಂಜು ವೆಡ್ಸ್ ಗೀತಾ 2’ ಚಿತ್ರದಲ್ಲಿ ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ ಪ್ರೇಮಿಗಳ ಪ್ರೇಮಕಾವ್ಯವನ್ನು ನಾಗಶೇಖರ್ ಹೇಳಿದ್ದಾರೆ.

(ವರದಿ: ಚೇತನ್‌ ನಾಡಿಗೇರ್‌)

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in