ಮುಂಗಡ ಬುಕಿಂಗ್‌ನಲ್ಲಿ ಬಘೀರನ ಅಬ್ಬರ ಹೇಗಿದೆ; ಮಧ್ಯರಾತ್ರಿ ಶೋ ಇದ್ಯಾ, ಹೈದರಾಬಾದ್‌, ಚೆನ್ನೈನಲ್ಲಿ ಹೇಗಿದೆ ಪ್ರತಿಕ್ರಿಯೆ?
ಕನ್ನಡ ಸುದ್ದಿ  /  ಮನರಂಜನೆ  /  ಮುಂಗಡ ಬುಕಿಂಗ್‌ನಲ್ಲಿ ಬಘೀರನ ಅಬ್ಬರ ಹೇಗಿದೆ; ಮಧ್ಯರಾತ್ರಿ ಶೋ ಇದ್ಯಾ, ಹೈದರಾಬಾದ್‌, ಚೆನ್ನೈನಲ್ಲಿ ಹೇಗಿದೆ ಪ್ರತಿಕ್ರಿಯೆ?

ಮುಂಗಡ ಬುಕಿಂಗ್‌ನಲ್ಲಿ ಬಘೀರನ ಅಬ್ಬರ ಹೇಗಿದೆ; ಮಧ್ಯರಾತ್ರಿ ಶೋ ಇದ್ಯಾ, ಹೈದರಾಬಾದ್‌, ಚೆನ್ನೈನಲ್ಲಿ ಹೇಗಿದೆ ಪ್ರತಿಕ್ರಿಯೆ?

Bagheera: ಅಕ್ಟೋಬರ್ 31ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ 'ಬಘೀರಾ' ರಿಲೀಸ್‌ ಆಗಲಿದ್ದು, ಫ್ಯಾನ್ಸ್ ಭಾರಿ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಬುಕ್‌ಮೈ ಶೋನಲ್ಲಿ ಟಿಕೆಟ್‌ ಬುಕ್‌ ಮಾಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಮಂದಿ ಸಿನಿಮಾ ನೋಡುವ ಆಸಕ್ತಿ ಇರುವುದಾಗಿ ಪ್ರತಿಕ್ರಿಯಿಸಿದ್ದಾರೆ.

ಮುಂಗಡ ಬುಕಿಂಗ್‌ನಲ್ಲಿ ಬಘೀರನ ಅಬ್ಬರ ಹೇಗಿದೆ; ಹೈದರಾಬಾದ್‌, ಚೆನ್ನೈನಲ್ಲಿ ಹೇಗಿದೆ ಪ್ರತಿಕ್ರಿಯೆ?
ಮುಂಗಡ ಬುಕಿಂಗ್‌ನಲ್ಲಿ ಬಘೀರನ ಅಬ್ಬರ ಹೇಗಿದೆ; ಹೈದರಾಬಾದ್‌, ಚೆನ್ನೈನಲ್ಲಿ ಹೇಗಿದೆ ಪ್ರತಿಕ್ರಿಯೆ?

ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ 'ಬಘೀರಾ' ಚಿತ್ರದ ಮುಂಗಡ ಬುಕ್ಕಿಂಗ್‌ಗಳನ್ನು ಹೊಂಬಾಳೆ ಫಿಲ್ಮ್ಸ್ ಆರಂಭಿಸಿದೆ.‌ ಅಕ್ಟೋಬರ್‌ 31ರಂದು ದೀಪಾವಳಿ ಸಂಭ್ರಮದ ನಡುವೆ ಚಿತ್ರ ತೆರೆಕಾಣುತ್ತಿದ್ದು, ಅಡ್ವಾನ್ಸ್‌ ಬುಕಿಂಗ್‌ ತೆರೆಯುತ್ತಿದ್ದಂತೆ ಫ್ಯಾನ್ಸ್ ಉತ್ಸಾಹ ಮುಇಮ್ಮಡಿಯಾಗಿದೆ. ಡಾ. ಸೂರಿ ನಿರ್ದೇಶನದ ಈ ಚಿತ್ರದಲ್ಲಿ ನಟ ಶ್ರೀಮುರಳಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ತಾರಾಗಣದದಲ್ಲಿ ಪ್ರತಿಭಾವಂತ ನಟಿ ರುಕ್ಮಿಣಿ ವಸಂತ್, ಬಹುಭಾಷಾ ಸ್ಟಾರ್ ನಟ ಪ್ರಕಾಶ್ ರಾಜ್ ಮತ್ತು ಹಿರಿಯ ಕಲಾವಿದ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಆಕ್ಷನ್ ಮಿಶ್ರಿತ ನಿರೂಪಣೆಯೊಂದಿಗೆ ಜನರ ಭಾವನೆಯನ್ನು ಹಿಡಿದಿಟ್ಟಕೊಳ್ಳಲು ಹಾಸ್ಯಮಯ ದೃಶ್ಯಗಳೂ ಉಳ್ಳ ಚಿತ್ರ ಪ್ರೇಕ್ಷಕರನ್ನು ಸೆಳೆಯಲು ಸಿದ್ಧವಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹೊಂಬಾಳೆ ಫಿಲ್ಮ್ಸ್'ಬಘೀರಾ' ಚಿತ್ರದ ಬುಕ್ಕಿಂಗ್ ಆರಂಭಿಸುತ್ತಿರುವ ಬಗ್ಗೆ ಘೋಷಿಸಿದೆ. ಚಿತ್ರದ ತುಣುಕನ್ನು ತೋರಿಸುವ ಪೋಸ್ಟರ್‌ನೊಂದಿಗೆ, “ಬಘೀರನ ಗುಡುಗಿನಂಥ ಗರ್ಜನೆಯನ್ನು ಕೇಳಿಸಿಕೊಳ್ಳಲು ಸಿದ್ಧರಾಗಿರಿ. ಬುಕ್‌ ಮೈ ಶೋ ನಲ್ಲಿ ಇದೀಗ ಬುಕಿಂಗ್‌ ಆರಂಭವಾಗಿದೆ. ಅಕ್ಟೋಬರ್‌ 31ರಂದು ಚಿತ್ರವು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ,” ಎಂದು ಹೊಂಬಾಳೆ {ಫಿಲ್ಮ್ಸ್ ಹೇಳಿಕೊಂಡಿದೆ.

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ನಡುವೆ, ಅಕ್ಟೋಬರ್‌ ಮಾಸಾಂತ್ಯಕ್ಕೆ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ ಬಘೀರನ ಅಬ್ಬರ ಶುರುವಾಗಲಿದೆ. ದೀಪಾವಳಿಗೆ ಬಹು ನಿರೀಕ್ಷೆ ಹುಟ್ಟು ಹಾಕಿರುವ ಕನ್ನಡ ಸಿನಿಮಾ ಇದು. ಆರಂಭದಲ್ಲಿ ಚಿತ್ರ ಕನ್ನಡದೊಂದಿಗೆ ತೆಲುಗಿನಲ್ಲಿಯೂ ರಿಲೀಸ್ ಆಗಲಿದೆ. ಹೊಂಬಾಳೆ ಫಿಲಂಸ್‌ನ ವಿಜಯ್‌ ಕಿರಗಂದೂರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಬಘೀರಾ ಚಿತ್ರವು ದೃಶ್ಯವೈಭವಕ್ಕೆ ಸಾಕ್ಷಿಯಾಗಲಿದ್ದು, ಅನಿರೀಕ್ಷಿತ ತಿರುವುಗಳೊಂದಿಗೆ ಪ್ರೇಕ್ಷಕರನ್ನು ಕೊನೆಯವರೆಗೂ ಕಥೆಯಲ್ಲಿ ಹಿಡಿದಟ್ಟುಕೊಳ್ಳಲು ಸಿದ್ಧವಾಗಿದೆ. ಶ್ರೀ ಮುರಳಿ ಬಹುಮುಖ ಪಾತ್ರದಲ್ಲಿ ಮಿಂಚುವ ನಿರೀಕ್ಷೆಯಿದೆ. ಚಿತ್ರದಲ್ಲಿ ಪ್ರಕಾಶ್ ರಾಜ್ ಅವರ ಅನುಭವದ ಪಾತ್ರವೂ ಇರಲಿದ್ದು, ಅಭಿಮಾನಿಗಳಲ್ಲಿ‌ ಭಾರಿ ನಿರೀಕ್ಷೆ ಮೂಡಿಸಿದೆ.

ಭಾರಿ ಯಶಸ್ಸು ಕಂಡಿರುವ ಹೊಂಬಾಳೆ ಫಿಲ್ಮ್ಸ್, ಮುಂದೆ ‘ಕಾಂತಾರ: ಅಧ್ಯಾಯ 1’, ‘ಸಾಲಾರ್: ಭಾಗ 2 - ಶೌರ್ಯಾಂಗ ಪರ್ವಂ’ ಸೇರಿದಂತೆ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಹಲವು ಚಲನಚಿತ್ರಗಳನ್ನು ಹರತರಲು ಸಜ್ಜಾಗುತ್ತಿದೆ. 'ಬಘೀರಾ' ಅಂತಹ ನಿರೀಕ್ಷಿತ ಚಿತ್ರಗಳಲ್ಲಿ ಒಂದು.

ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್

ದೀಪಾವಳಿ ಹಬ್ಬದ ಆರಂಭದ ದಿನವಾದ ಅಕ್ಟೋಬರ್ 31ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಎರಡು ಭಾಷೆಗಳಲ್ಲಿ 'ಬಘೀರಾ' ರಿಲೀಸ್‌ ಆಗಲಿದ್ದು, ಫ್ಯಾನ್ಸ್ ನಿರೀಕ್ಷೆಯನ್ನು ಅಲ್ಲಗಳೆಯುವಂತಿಲ್ಲ. ಬುಕ್‌ಮೈ ಶೋನಲ್ಲಿ ಟಿಕೆಟ್‌ ಬುಕ್‌ ಮಾಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಮಂದಿ ಸಿನಿಮಾ ನೋಡುವ ಆಸಕ್ತಿ ಇರುವುದಾಗಿ ಪ್ರತಿಕ್ರಿಯಿಸಿದ್ದಾರೆ. ನಾಳೆಯಷ್ಟರಲ್ಲೇ ಚಿತ್ರವು ಥಿಯೇಟರ್‌ಗಳಿಗೆ ಅಪ್ಪಳಿಸಲಿದ್ದು, ಜನರ ಪ್ರತಿಕ್ರಿಯೆ ನೋಡಬೇಕಿದೆ.‌

ಹೇಗಿದೆ ಪ್ರತಿಕ್ರಿಯೆ?

ಸಿನಿಮಾ ಹೈದರಾಬಾದ್‌ನಲ್ಲಿ ತೆಲುಗು ಭಾಷೆಯಲ್ಲೇ ಬಿಡುಗಡೆಯಾಗುತ್ತಿದ್ದು, ರಿಲೀಸ್‌ ದಿನವೇ ನಗರದ ವಿವಿಧ ಚಿತ್ರಮಂದಿರಗಳಲ್ಲಿ 200ಕ್ಕೂ ಅಧಿಕ ಶೋಗಳು ಇರಲಿವೆ. ಅಭಿಮಾನಿಗಳು ಆಸಕ್ತಿಯಂದ ಟಿಕೆಟ್‌ ಬುಕ್‌ ಮಾಡುತ್ತಿದ್ದಾರೆ. ಅಮೀರ್‌ಪೇಟ್‌, ಗಚ್ಚಿಬೌಲಿ, ಉಪ್ಪಳ, ಲುಲು ಮಾಲ್‌, ಸಿನಿಪೊಲಿಸ್‌, ಕುಕ್ಕಟ್‌ಪಲ್ಲಿ, ಸಿಕಂದ್ರಾಬಾದ್‌ ಸೇರಿದಂತೆ ವಿವಿಧೆಡೆ ರಾತ್ರಿ ಶೋಗಳೂ ಇವೆ. ಅತ್ತ ಚೆನ್ನೈನಲ್ಲಿ ಚಿತ್ರವು ಕನ್ನಡದಲ್ಲಿ ಮಾತ್ರವೇ ತೆರೆಕಾಣುತ್ತಿದ್ದು, 4 ಶೋಗಳು ಇರಲಿವೆ.

Whats_app_banner