Bhairathi Ranagal: ಶಿವಣ್ಣನ ಭೈರತಿ ರಣಗಲ್‌ ಎರಡನೇ ದಿನದ ಕಲೆಕ್ಷನ್‌ ರಿಪೋರ್ಟ್‌ ಬಹಿರಂಗ; ಈ ವರೆಗೂ ಈ ಸಿನಿಮಾ ಗಳಿಸಿದ್ದೆಷ್ಟು?
ಕನ್ನಡ ಸುದ್ದಿ  /  ಮನರಂಜನೆ  /  Bhairathi Ranagal: ಶಿವಣ್ಣನ ಭೈರತಿ ರಣಗಲ್‌ ಎರಡನೇ ದಿನದ ಕಲೆಕ್ಷನ್‌ ರಿಪೋರ್ಟ್‌ ಬಹಿರಂಗ; ಈ ವರೆಗೂ ಈ ಸಿನಿಮಾ ಗಳಿಸಿದ್ದೆಷ್ಟು?

Bhairathi Ranagal: ಶಿವಣ್ಣನ ಭೈರತಿ ರಣಗಲ್‌ ಎರಡನೇ ದಿನದ ಕಲೆಕ್ಷನ್‌ ರಿಪೋರ್ಟ್‌ ಬಹಿರಂಗ; ಈ ವರೆಗೂ ಈ ಸಿನಿಮಾ ಗಳಿಸಿದ್ದೆಷ್ಟು?

Bhairathi Ranagal Box Office Day 2: ನರ್ತನ್‌ ನಿರ್ದೇಶನದಲ್ಲಿ ಮೂಡಿಬಂದ ಭೈರತಿ ರಣಗಲ್‌ ಸಿನಿಮಾ, ನ. 15 ರಂದು ಬಿಡುಗಡೆ ಆಗಿದೆ. ಈಗ ಎರಡನೇ ದಿನದ ಕಲೆಕ್ಷನ್‌ ರಿಪೋರ್ಟ್ ಹೊರಬಿದ್ದಿದೆ. ಮೊದಲ ದಿನಕ್ಕಿಂತ ಗಳಿಕೆಯಲ್ಲಿ ಚೂರು ಮುಂದಡಿ ಇರಿಸಿದೆ ಈ ಸಿನಿಮಾ.

ಭೈರತಿ ರಣಗಲ್‌ ಎರಡನೇ ದಿನದ ಕಲೆಕ್ಷನ್‌ ರಿಪೋರ್ಟ್‌
ಭೈರತಿ ರಣಗಲ್‌ ಎರಡನೇ ದಿನದ ಕಲೆಕ್ಷನ್‌ ರಿಪೋರ್ಟ್‌

Bhairathi Ranagal Box office Collection Day 2: ನರ್ತನ್‌ ನಿರ್ದೇಶನದಲ್ಲಿ ಮೂಡಿಬಂದ ಭೈರತಿ ರಣಗಲ್‌ ಸಿನಿಮಾ, ಸದ್ಯ ಬಾಕ್ಸ್‌ ಆಫೀಸ್‌ನಲ್ಲಿ ಮೋಡಿ ಮಾಡುತ್ತಿದೆ. ಬಾಕ್ಸ್‌ ಆಫೀಸ್‌ ಪಂಡಿತರ ಲೆಕ್ಕಾಚಾರದ ಪ್ರಕಾರ, ಒಳ್ಳೆಯ ಗಳಿಕೆ ಮುಂದುವರಿಸಿದೆ ಎಂದೇ ಹೇಳಲಾಗುತ್ತಿದೆ. ನವೆಂಬರ್‌ 15ರಂದು ತೆರೆಕಂಡಿದ್ದ ಭೈರತಿ ರಣಗಲ್‌ ಸಿನಿಮಾ, ಈಗ ಎರಡು ದಿನಗಳ ಅವಧಿಯಲ್ಲಿ ಸಿನಿಮಾ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿದೆ. ಬೆಂಗಳೂರಿನಲ್ಲಿ ಹೌಸ್‌ಫುಲ್‌ ಪ್ರದರ್ಶನಗಳು ಮುಂದುವರಿದರೆ, ರಾಜ್ಯಾದ್ಯಂತ ಕಲೆಕ್ಷನ್‌ ವಿಚಾರದಲ್ಲಿ ಪಾಸಿಟಿವ್‌ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

2017ರಲ್ಲಿ ನರ್ತನ್‌ ನಿರ್ದೇಶನದಲ್ಲಿ ಮಫ್ತಿ ಸಿನಿಮಾ ತೆರೆಗೆ ಬಂದಿತ್ತು. ಶಿವರಾಜ್‌ಕುಮಾರ್‌ ಜತೆಗೆ ಶ್ರೀಮುರಳಿ ಕಾಣಿಸಿಕೊಂಡಿದ್ದ ಈ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಅದಾದ ಬಳಿಕ ಅದೇ ಚಿತ್ರದ ಭೈರತಿ ರಣಗಲ್‌ ಪಾತ್ರ ದೊಡ್ಡ ಟ್ರೆಂಡ್‌ ಆಗಿತ್ತು. ಈಗ ಅದೇ ಹೆಸರನ್ನೇ ಆಧರಿಸಿ, ಪ್ರೀಕ್ವೆಲ್‌ ಮಾಡಿದ್ದಾರೆ ನರ್ತನ್.‌ ಈ ಚಿತ್ರವನ್ನು ಗೀತಾ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ಗೀತಾ ಶಿವರಾಜ್‌ಕುಮಾರ್‌ ನಿರ್ಮಿಸಿದ್ದಾರೆ. ಭೈರತಿಯಾಗಿ ಶಿವಣ್ಣ ಲುಂಗಿಯಲ್ಲಿ ಮತ್ತೆ ಎದುರಾಗಿದ್ದಾರೆ. ಹೀಗಿರುವಾಗಲೇ ಈ ಸಿನಿಮಾದ ಎರಡನೇ ದಿನದ ಗಳಿಕೆ ರಿಪೋರ್ಟ್‌ ಹೇಗಿದೆ?

ಎರಡನೇ ದಿನದ ಕಲೆಕ್ಷನ್‌ ಎಷ್ಟು?

ಸಿನಿಮಾಗಳ ಬಾಕ್ಸ್‌ ಆಫೀಸ್‌ ಲೆಕ್ಕಾಚಾರದ ಬಗ್ಗೆ ಮಾಹಿತಿ ನೀಡುವ sacnilk ವೆಬ್‌ಸೈಟ್‌ ಪ್ರಕಾರ, ಭೈರತಿ ರಣಗಲ್‌ ಸಿನಿಮಾ, ಮೊದಲ ದಿನ (ನವೆಂಬರ್‌ 15) 2.10 ಕೋಟಿ ಗಳಿಕೆ ಕಂಡಿತ್ತು. ಅದೇ ರೀತಿ ಎರಡನೇ ದಿನವಾದ ಶನಿವಾರ 2.30 ಕೋಟಿ ಗಳಿಕೆ ಕಂಡಿದೆ. ಇನ್ನು ಇತ್ತ ವಿತರಕರ ವಲಯದ ಲೆಕ್ಕಾಚಾರದ ಪ್ರಕಾರ, ಎರಡು ದಿನಗಳ ಅವಧಿಯಲ್ಲಿ 7 ಕೋಟಿ ವರೆಗೂ ಕಲೆಕ್ಷನ್‌ ಆಗಿದೆ ಎಂದೇ ಹೇಳಲಾಗುತ್ತಿದೆ. ಈ ನಡುವೆ ಇಂದು (ನ. 17) ಮತ್ತು ಸೋಮವಾರ ಸರ್ಕಾರಿ ರಜೆ ಇರುವ ಕಾರಣ, ಕಲೆಕ್ಷನ್‌ ವಿಚಾರದಲ್ಲಿ ಒಂದು ಹೆಜ್ಜೆ ಮುಂದಡಿ ಇರಲಿದೆ ಭೈರತಿ ರಣಗಲ್.‌

ಭೈರತಿ ರಣಗಲ್‌ ಸಿನಿಮಾದ ಬಜೆಟ್‌ ಎಷ್ಟು?

ಭೈರತಿ ರಣಗಲ್‌ ಸಿನಿಮಾವನ್ನು ಗೀತಾ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಅದ್ಧೂರಿಯಾಗಿ ಮೂಡಿಬಂದ ಈ ಸಿನಿಮಾವನ್ನು, 18 ಕೋಟಿ ಬಜೆಟ್‌ನಲ್ಲಿ ಅಷ್ಟೇ ರಿಚ್ ಆಗಿಯೇ ತೆರೆಗೆ ತಂದಿದ್ದಾರೆ ನಿರ್ಮಾಪಕರು. ನವೀನ್‌ ಕುಮಾರ್‌ ಛಾಯಾಗ್ರಹಣ, ರವಿ ಬಸ್ರೂರ್‌ ಸಂಗೀತ ಈ ಚಿತ್ರಕ್ಕಿದೆ. ಆಕಾಶ್‌ ಹಿರೇಮಠ ಸಂಕಲನ ಈ ಚಿತ್ರಕ್ಕಿದೆ.

ಪಾತ್ರವರ್ಗ ಹೇಗಿದೆ

ಭೈರತಿ ರಣಗಲ್‌ ಸಿನಿಮಾದಲ್ಲಿ ಶಿವ ರಾಜ್‌ಕುಮಾರ್, ರಾಹುಲ್ ಬೋಸ್, ರುಕ್ಮಿಣಿ ವಸಂತ್, ಅವಿನಾಶ್, ಶರತ್ ಲೋಹಿತಾಶ್ವ, ದೇವರಾಜ್, ಛಾಯಾ ಸಿಂಗ್, ಅಚ್ಯುತ್ ಕುಮಾರ್, ಶಬೀರ್ ಕಲ್ಲರಕ್ಕಲ್, ಮಧು ಗುರುಸ್ವಾಮಿ, ವತ್ಸನ್ ಚಕ್ರವರ್ತಿ, ಬಾಬು ಹಿರಣ್ಣಯ್ಯ ಸೇರಿ ಇನ್ನೂ ಹಲವರು ನಟಿಸಿದ್ದಾರೆ.

Whats_app_banner