ಹೂ ದುಂಬಿಯ ಕಥೆಯ… ಹಾಡಿಗೆ ಯೋಗರಾಜ್‌ ಭಟ್ಟರ ನಾಟಿ ಸಾಹಿತ್ಯ; ಮಜವಾಗಿದೆ ಮನದ ಕಡಲು ಚಿತ್ರದ ಮೊದಲ ಮೆಲೋಡಿ ಸಾಂಗ್‌ ಲಿರಿಕ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  ಹೂ ದುಂಬಿಯ ಕಥೆಯ… ಹಾಡಿಗೆ ಯೋಗರಾಜ್‌ ಭಟ್ಟರ ನಾಟಿ ಸಾಹಿತ್ಯ; ಮಜವಾಗಿದೆ ಮನದ ಕಡಲು ಚಿತ್ರದ ಮೊದಲ ಮೆಲೋಡಿ ಸಾಂಗ್‌ ಲಿರಿಕ್ಸ್‌

ಹೂ ದುಂಬಿಯ ಕಥೆಯ… ಹಾಡಿಗೆ ಯೋಗರಾಜ್‌ ಭಟ್ಟರ ನಾಟಿ ಸಾಹಿತ್ಯ; ಮಜವಾಗಿದೆ ಮನದ ಕಡಲು ಚಿತ್ರದ ಮೊದಲ ಮೆಲೋಡಿ ಸಾಂಗ್‌ ಲಿರಿಕ್ಸ್‌

Manada Kadalu Movie Songs: ಮನದ ಕಡಲು ಚಿತ್ರದ, ಹೂ ದುಂಬಿಯ ಕಥೆಯ.. ಎಂದು ಶುರುವಾಗುವ ಈ ಮೆಲೋಡಿ ಹಾಡು, ರೊಮ್ಯಾಂಟಿಕ್‌ ಆಗಿ ಮೂಡಿಬಂದಿದೆ. ಸುಮುಖ್‌ ಮತ್ತು ರಾಶಿಕಾ ಶೆಟ್ಟಿ ಈ ಹಾಡಿನಲ್ಲಿ ಮೈ ಚಳಿ ಬಿಟ್ಟು, ಬೋಲ್ಡ್‌ ಆಗಿಯೇ ಕಾಣಿಸಿಕೊಂಡಿದ್ದಾರೆ. ಯೋಗರಾಜ್‌ ಭಟ್‌ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ.

ಮನದ ಕಡಲು ಚಿತ್ರದ ಮೊದಲ ಹಾಡಿನ ಲಿರಿಕ್ಸ್‌
ಮನದ ಕಡಲು ಚಿತ್ರದ ಮೊದಲ ಹಾಡಿನ ಲಿರಿಕ್ಸ್‌

Ho Dumbi Song lyrics: ಯೋಗರಾಜ್‌ ಭಟ್‌ ಇದೀಗ ಹೊಸಬರ ಜತೆಗೆ ಮತ್ತೆ ಆಗಮಿಸಿದ್ದಾರೆ. ಮತ್ತೊಂದು ಉತ್ಕಟ ಪ್ರೇಮಕಥೆಯೊಂದಿಗೆ ಎಂಟ್ರಿಕೊಟ್ಟಿದ್ದಾರೆ. ಮುಂಗಾರು ಮಳೆ ಸಿನಿಮಾ ನಿರ್ಮಾಪಕ ಇ ಕೃಷ್ಣಪ್ಪ ಅವರ ಜತೆಗೆ ಸುದೀರ್ಘ 18 ವರ್ಷಗಳ ಬಳಿಕ ಮನದ ಕಡಲು ಹೆಸರಿನ ಸಿನಿಮಾ ಮಾಡಿದ್ದಾರೆ. ಇನ್ನೇನು ಫೆಬ್ರವರಿಯಲ್ಲಿ ಈ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಅದರಂತೆ, ಈಗಿನಿಂದಲೇ ಸಿನಿಮಾ ಪ್ರಚಾರಕ್ಕೂ ಅಣಿಯಾಗಿರುವ ಭಟ್ಟರು, ಇದೇ ಚಿತ್ರದ ಮೊದಲ ಹಾಡನ್ನು ಹೊರತಂದಿದ್ದಾರೆ.

ಹೂ ದುಂಬಿಯ ಕಥೆಯ.. ಎಂದು ಶುರುವಾಗುವ ಈ ಮೆಲೋಡಿ ಹಾಡು, ಅಷ್ಟೇ ರೊಮ್ಯಾಂಟಿಕ್‌ ಆಗಿ ಮೂಡಿಬಂದಿದೆ. ಸುಮುಖ್‌ ಮತ್ತು ರಾಶಿಕಾ ಶೆಟ್ಟಿ ಈ ಹಾಡಿನಲ್ಲಿ ಮೈ ಚಳಿ ಬಿಟ್ಟು, ಬೋಲ್ಡ್‌ ಆಗಿಯೇ ಕಾಣಿಸಿಕೊಂಡಿದ್ದಾರೆ. ಹೊಸ ಕಲಾವಿದರಾದರೂ, ಚೆಂದವಾಗಿ ತೆರೆಮೇಲೆ ಈ ಜೋಡಿ ನಲಿದಿದೆ. ಲಿಪ್‌ಲಾಕ್‌ ದೃಶ್ಯಗಳಲ್ಲೂ ಕಂಡಿದ್ದಾರೆ. ಈ ಹಾಡಿಗೆ ಯೋಗರಾಜ್‌ ಭಟ್‌ ಸಾಹಿತ್ಯ ಬರೆದಿದ್ದು, ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸಂಜಿತ್‌ ಹೆಗ್ಡೆ ಹಾಡಿಗೆ ಧ್ವನಿ ನೀಡಿದ್ದಾರೆ. ಹೀಗಿದೆ ಈ ಹಾಡಿನ ಸಾಹಿತ್ಯ.

ಹೂ ದುಂಬಿಯ ಕಥೆಯ ಹಾಡಿನ ಸಾಹಿತ್ಯ ಹೀಗಿದೆ…

ಹೂ ದುಂಬಿಯ ಕಥೆಯ..

ಬರೆದವನಾರೂ ಸಿಗಬಹುದೇ..

ಈ ಸುಂದರ ಗಳಿಗೆ

ಎಂದಿಗೂ ಹೀಗೆ ಇರಬಹುದೇ

ಚುಂಬಿಸುವೆ ಕನ್ನಡಿಯನು

ಕ್ಷಣಕೆ ನೂರು ಸಲ

ಹಂಗಿಸುವೆ ನನ್ನೇ ನಾನು

ಹಂಬಲಗಳ ಹೂ ಬನದಲಿ..

ಕಂಡೆ ಹೊಂಬಿಸಿಲಾ..

ಬಂದಿರುವುದು ಎದೆಗೆ ಜೇನು

ಹೂ ದುಂಬಿಯ ಕಥೆಯ..

ಬರೆದವನಾರೂ ಸಿಗಬಹುದೇ..

ಈ ಸುಂದರ ಗಳಿಗೆ

ಎಂದಿಗೂ ಹೀಗೆ ಇರಬಹುದೇ

ಕಾಯುವುದು ಹಾಗೂ ಬೇಯುವುದು

ನೀ ಬಂದು ಬೇಗ ನಿಲಿಸಿಬಿಡು

ಹಿಂಜರಿಕೆ ನಿಂಗೂ ಇರಬಹುದು

ನಿಂತ ಕಡೆ ನನ್ನ ನೆನೆದು ಬಿಡು

ನೀ ಸೂಸುವ ಸೌಗಂಧವ

ನನ್ನುಸಿರಿಗೆ ಕಳಿಸಿಕೊಡು

ವ್ಯಾಮೋಹದ ವ್ಯತ್ಯಯ

ತಿಳಿದವಳಾಗಿ ನಗಬಹುದೇ

ನೀ ಕಂಡರೆ ಸಾಕು

ಜೀವವೂ ಮರಳಿ ಬರಬಹುದೇ

ನೆನಪುಗಳ ಹೊದ್ದು ಮಲಗಿರುವೆ

ಬಯಕೆಗಳ ಕದ್ದು ಬೆಳೆಸಿರುವೆ

ಭರವಸೆಯ ಕಾಲು ಹಿಡಿದಿರುವೆ

ಭಾವನೆಗೆ ಕೈಯ ಮುಗಿದಿರುವೆ

ಮನಮೋಹಕ, ತುಸು ಮಾನಕ

ಕಲ್ಪನೆಗಳ ನಿಂಗಿಲ್ಲವೆ

ಈ ಚಂದ್ರನ ಕಾಂತಿ,

ಕಡು ಬಿಸಿಲಂತೆ ಸುಡಬಹುದೇ

ಏಕಾಂತದ ಏಟು

ತಿನದವನೊಬ್ಬ ಇರಬಹುದೇ

ಜೂಂ ಬರ ಬರ ಜೂಂ ಬರ ಬರ ದುಂಬಿ ಆಗುವೇನಾ

ನನ್ನೊಲವಿನ ಹೂವು ನೀನು

ತಂಪೆರಚುವ ಇಂಚರಗಳ ಹಾಗೆ ಹಾಡುವೆನಾ..

ನಂಗೇನಿದೆ ಕೆಲಸ ಇನ್ನೂ..

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner