Kannada OTT: ಒಟಿಟಿಯಲ್ಲಿ `ತಾಯಿ ಕಸ್ತೂರ್ ಗಾಂಧಿ’ ಸಿನಿಮಾ ಈ ವಾರ ಬಿಡುಗಡೆ; ಬರಗೂರು ರಾಮಚಂದ್ರಪ್ಪ ನಿರ್ದೇಶನದ ಚಿತ್ರವಿದು
ಕನ್ನಡ ಸುದ್ದಿ  /  ಮನರಂಜನೆ  /  Kannada Ott: ಒಟಿಟಿಯಲ್ಲಿ `ತಾಯಿ ಕಸ್ತೂರ್ ಗಾಂಧಿ’ ಸಿನಿಮಾ ಈ ವಾರ ಬಿಡುಗಡೆ; ಬರಗೂರು ರಾಮಚಂದ್ರಪ್ಪ ನಿರ್ದೇಶನದ ಚಿತ್ರವಿದು

Kannada OTT: ಒಟಿಟಿಯಲ್ಲಿ `ತಾಯಿ ಕಸ್ತೂರ್ ಗಾಂಧಿ’ ಸಿನಿಮಾ ಈ ವಾರ ಬಿಡುಗಡೆ; ಬರಗೂರು ರಾಮಚಂದ್ರಪ್ಪ ನಿರ್ದೇಶನದ ಚಿತ್ರವಿದು

Kastur Gandhi Kannada Movie OTT: ಅಮೆಜಾನ್‌ ಪ್ರೈಮ್‌ ವಿಡಿಯೋ ಒಟಿಟಿಯಲ್ಲಿ ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ ಜನಮಿತ್ರ ಮೂವೀಸ್ ನಿರ್ಮಾಣದ `ತಾಯಿ ಕಸ್ತೂರ್ ಗಾಂಧಿ’ ಕನ್ನಡ ಚಿತ್ರವು ಮಾರ್ಚ್ 28ರಂದು ಬಿಡುಗಡೆಯಾಗಲಿದೆ. ಕಸ್ತೂರ್ ಬಾ ಪಾತ್ರದಲ್ಲಿ ಹರಿಪ್ರಿಯ ಮತ್ತು ಗಾಂಧಿಯಾಗಿ ಕಿಶೋರ್ ಅಭಿನಯಿಸಿದ್ದಾರೆ.

Kannada OTT: ಒಟಿಟಿಯಲ್ಲಿ `ತಾಯಿ ಕಸ್ತೂರ್ ಗಾಂಧಿ’ ಸಿನಿಮಾ ಈ ವಾರ ಬಿಡುಗಡೆ
Kannada OTT: ಒಟಿಟಿಯಲ್ಲಿ `ತಾಯಿ ಕಸ್ತೂರ್ ಗಾಂಧಿ’ ಸಿನಿಮಾ ಈ ವಾರ ಬಿಡುಗಡೆ

Kastur Gandhi Kannada Movie OTT: ಕಸ್ತೂರಬಾ ಗಾಂಧಿ ಕುರಿತಾದ ಸಿನಿಮಾವೊಂದು ಸದ್ಯದಲ್ಲಿಯೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ ಜನಮಿತ್ರ ಮೂವೀಸ್ ನಿರ್ಮಾಣದ `ತಾಯಿ ಕಸ್ತೂರ್ ಗಾಂಧಿ’ ಮಾರ್ಚ್ 28ರಂದು ಅಮೇಜಾನ್ ಪ್ರೈಮ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.ಬರಗೂರರ ಕಾದಂಬರಿಯನ್ನು ಆಧರಿಸಿ ಈ ಚಿತ್ರವು ನಿರ್ಮಾಣಗೊಂಡಿದೆ.

ಕಸ್ತೂರಬಾ ಗಾಂಧಿ ಅವರನ್ನೇ ಕೇಂದ್ರವಾಗಿಟ್ಟುಕೊಂಡು ನಿರ್ಮಾಣವಾದ ಮೊದಲ ಚಿತ್ರವೆಂಬ ಹೆಗ್ಗಳಿಕೆಗೂ `ತಾಯಿ ಕಸ್ತೂರ್ ಗಾಂಧಿ’ ಪಾತ್ರವಾಗಿದೆ. ಕಸ್ತೂರ್ ಬಾ ಅವರ ಬದುಕಿನ ಕೆಲವು ಪ್ರಮುಖ ಘಟನೆಗಳ ಮೂಲಕ ಆದರ್ಶ ಮತ್ತು ಕಟುವಾಸ್ತವಗಳ ಕಥನವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಚಿತ್ರತಂಡ ತಿಳಿಸಿದೆ.

ಬದುಕಿನ ದ್ವಂದ್ವಗಳನ್ನು ಎದುರಿಸುತ್ತಲೇ ಅದನ್ನು ಮೀರುವ ವ್ಯಕ್ತಿತ್ವಗಳಾಗಿ ಕಸ್ತೂರ್ ಬಾ ಮತ್ತು ಗಾಂಧಿಜಿಯವರನ್ನು ಚಿತ್ರಿಸಲಾಗಿದೆ. ಕಸ್ತೂರ್ ಬಾ ಅವರು ತಾಯಿ, ಪತ್ನಿ ಮತ್ತು ಹೋರಾಟಗಾರ್ತಿಯಾಗಿ ಬದುಕನ್ನು ನಿಭಾಯಿಸಿದ ಚರಿತೆಯನ್ನು ಈ ಚಿತ್ರವು ಅನಾವರಣಗೊಳಿಸುತ್ತದೆ. ಇದು ಏಕಕಾಲಕ್ಕೆ ಕಸ್ತೂರ್ ಬಾ ಮತ್ತು ಗಾಂಧಿಜಿ - ಇಬ್ಬರ ವ್ಯಕ್ತಿತ್ವವನ್ನು ಒಳಗೊಂಡ ಚಿತ್ರವಾಗಿದೆ.

`ತಾಯಿ ಕಸ್ತೂರ್ ಗಾಂಧಿ’ ಚಿತ್ರವು ಕೆಲವು ವಿದೇಶಿ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಗಾಗಿದ್ದು ಲಾಸ್ ಏಂಜಲೀಸ್ ಚಿತ್ರೋತ್ಸವದಲ್ಲಿ ಉತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಸುರೇಶ್ ಅರಸು ಅವರಿಗೆ ಉತ್ತಮ ಸಂಕಲನಕಾರ ಪ್ರಶಸ್ತಿಯೂ ಬಂದಿದೆ.

ಕಸ್ತೂರ್ ಬಾ ಮತ್ತು ಗಾಂಧಿಜಿಯವರ ಬಾಲ್ಯ, ಯೌವನ ಮತ್ತು ಮುಪ್ಪಿನ ಹಂತಗಳು ಈ ಚಿತ್ರದಲ್ಲಿವೆ. ಕಸ್ತೂರ್ ಬಾ ಪಾತ್ರದಲ್ಲಿ ಹರಿಪ್ರಿಯ ಮತ್ತು ಗಾಂಧಿಯಾಗಿ ಕಿಶೋರ್ ಅಭಿನಯಿಸಿದ್ದಾರೆ; ಶ್ರೀನಾಥ್ ಅವರು ಅಂಬೇಡ್ಕರ್ ಪಾತ್ರದಲ್ಲಿದ್ದಾರೆ. ಮಾಸ್ಟರ್ ಆಕಾಂಕ್ಷ್ ಬರಗೂರು, ಸುಂದರರಾಜು, ಪ್ರಮೀಳಾ ಜೋಷಾಯ್, ರಾಘವ್, ಸುಂದರರಾಜ ಅರಸು, ರೇಖಾ, ವೆಂಕಟರಾಜು, ವತ್ಸಲಾ ಮೋಹನ್, ಕುಮಾರಿ ಸ್ಪಂದನ ಮುಂತಾದವರು ತಾರಾಗಣದಲ್ಲಿದ್ದಾರೆ.

ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಮತ್ತು ಮೈತ್ರಿಬರಗೂರು ಕಲಾ ನಿರ್ದೇಶನ ಮಾಡಿರುವ ಈ ಚಿತ್ರದ ನಿರ್ಮಾಪಕರು ಗೀತಾ ಬಿ.ಜಿ. ಬರಗೂರರು ಚಿತ್ರಕತೆ, ಸಂಭಾಷಣೆ ಗೀತರಚನೆ ಜೊತೆಗೆ ನಿರ್ದೇಶಿಸಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner