Toxic Movie: ಯಶ್ ಜತೆ ಕೆಲಸ ಮಾಡಿದ್ದು ಖುಷಿ ತಂದಿದೆ, ಟಾಕ್ಸಿಕ್ ಸಿನಿಮಾದ ಬಗ್ಗೆ ಹಾಲಿವುಡ್‌ನ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಮನದ ಮಾತು
Yash Toxic Movie: ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ ಸಿನಿಮಾಕ್ಕೆ ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಸಾಹಸ ನಿರ್ದೇಶನವಿದೆ. ಇವರು ಟಾಕ್ಸಿಕ್ ಸಿನಿಮಾದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಟಾಕ್ಸಿಕ್ಸ್ ಶೂಟಿಂಗ್ ಮುಗಿಸಿ ಮತ್ತೆ ಹಾಲಿವುಡ್‌ಗೆ ವಾಪಸ್ಸಾಗಿದ್ದಾರೆ.

Yash Toxic Movie: ಕನ್ನಡದ ಚಿತ್ರಕ್ಕೆ ಮೊದಲ ಬಾರಿಗೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ ಫೈಟ್ ಕಂಪೋಸ್ ಮಾಡಿದ್ದಾರೆ. ರಾಕಿಭಾಯ್ ಟಾಕ್ಸಿಕ್ ಸಿನಿಮಾದ ಆಕ್ಷನ್ ಸೀಕ್ಷೇನ್ಸ್ ಡೈರೆಕ್ಷನ್ ಮಾಡಿ ತಾಯ್ನಾಡಿಗೆ ಜೆಜೆ ಪೆರ್ರಿ ವಾಪಸ್ಸಾಗಿದ್ದಾರೆ. ಜೆಜೆ ಪೆರ್ರಿ ಹಾಲಿವುಡ್ ಸೂಪರ್‌ಸ್ಟಾರ್ ಸ್ಟಂಟ್ ಮಾಸ್ಟರ್ ಆಗಿ ಖ್ಯಾತಿ ಪಡೆದಿದ್ದಾರೆ. ಟಾಕ್ಸಿಕ್ ಚಿತ್ರಕ್ಕಾಗಿ ಭಾರತಕ್ಕೆ ಜೆಜೆ ಪೆರ್ರಿ ಆಗಮಿಸಿದ್ದರು. ಇದೀಗ ಟಾಕ್ಸಿಕ್ಸ್ ಶೂಟಿಂಗ್ ಮುಗಿಸಿ ಮತ್ತೆ ಹಾಲಿವುಡ್‌ಗೆ ವಾಪಸ್ಸಾಗಿದ್ದಾರೆ. ಈ ಸಂದರ್ಭದಲ್ಲಿ ಯಶ್ ಜತೆ ಕೆಲಸ ಮಾಡಿದ್ದು ಖುಷಿ ತಂದಿದೆ ಎಂದು ಹಾಲಿವುಡ್‌ನ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಹೇಳಿದ್ದಾರೆ.
ಹಾಲಿವುಡ್‌ನ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಅವರು ಸೋಷಿಯಲ್ ಮೀಡಿಯಾದಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ. "ಇದು ಒಂದು ಬ್ಯಾಂಗರ್! ನನ್ನ ಸ್ನೇಹಿತ ಯಶ್ ಅವರೊಂದಿಗೆ ಟಾಕ್ಸಿಕ್ ಸಿನಿಮಾದಲ್ಲಿ ಕೆಲಸ ಮಾಡಿರುವುದು ಖುಷಿ ತಂದಿದೆ. ನಾನು ಭಾರತದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ. ಯುರೋಪಿನಾದ್ಯಂತ ನನ್ನ ಅನೇಕ ಆತ್ಮೀಯ ಸ್ನೇಹಿತರೊಂದಿಗೆ ಕೆಲಸ ಮಾಡಲು ಸಾಧ್ಯವಾಯಿತು. ಎಲ್ಲರೂ ಇದನ್ನು ನೋಡಲು ಕಾಯಲು ಸಾಧ್ಯವಿಲ್ಲ. ಇದು ಅದ್ಭುತವಾಗಿದೆ. ಈ ಸಿನಿಮಾದ ಸಾಹಸ ನಿರ್ದೇಶನ ಮಾಡಿದ್ದಕ್ಕೆ ತುಂಬಾ ಹೆಮ್ಮೆಪಡುತ್ತೇವೆ" ಎಂದು ಜೆಜೆ ಪೆರ್ರಿ ಮನದ ಮಾತನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಯಶ್ ಕೆಜಿಎಫ್ ಫ್ರಾಂಚೈಸಿಯಡಿ ಪೆರ್ರಿ ಅವರ ಪೋಸ್ಟ್‌ಗೆ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. "ಗೆಳೆಯ, ನಿಮ್ಮ ಜತೆ ಕೆಲಸ ಮಾಡಿದ್ದು ಉತ್ತಮ ಅನುಭವವಾಗಿದೆ. ರಾ ಪವರ್" ಎಂದು ಯಶ್ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಲು ಟಾಕ್ಸಿಕ್ ಸಜ್ಜಾಗಿದೆ. ಇದು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ರೂಪುಗೊಳ್ಳುತ್ತಿದೆ. ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಪರಿಕಲ್ಪನೆ, ಬರವಣಿಗೆ ಮತ್ತು ಚಿತ್ರೀಕರಣಗೊಂಡ ಮೊದಲ ದೊಡ್ಡ ಪ್ರಮಾಣದ ಭಾರತೀಯ ಚಲನಚಿತ್ರವಾಗಿದೆ. ಈ ಚಿತ್ರವನ್ನು ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಬಹು ಭಾರತೀಯ ಮತ್ತು ಅಂತರರಾಷ್ಟ್ರೀಯ ಭಾಷೆಗಳಲ್ಲಿ ಡಬ್ ಮಾಡಲಾಗುತ್ತದೆ.
ಈ ಮಹತ್ವಾಕಾಂಕ್ಷೆಯ ಯೋಜನೆಯ ಚುಕ್ಕಾಣಿ ಹಿಡಿದವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಚಲನಚಿತ್ರ ನಿರ್ಮಾಪಕಿ ಗೀತು ಮೋಹನ್ ದಾಸ್. ಭಾವನಾತ್ಮಕ ಕಥೆಗಳ ಸಿನಿಮಾಗಳಿಗೆ ಖ್ಯಾತಿ ಪಡೆದಿರುವ ಗೀತು ಮೋಹನ್ ದಾಸ್ ಸನ್‌ಡಾನ್ಸ್ ಚಲನಚಿತ್ರೋತ್ಸವದಲ್ಲಿ ರಾಷ್ಟ್ರೀಯ ಪ್ರಶಸ್ತಿ ಮತ್ತು ಜಾಗತಿಕ ಚಲನಚಿತ್ರ ನಿರ್ಮಾಣ ಪ್ರಶಸ್ತಿಯಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಟಾಕ್ಸಿಕ್ ಸಿನಿಮಾದಲ್ಲಿ ತಮ್ಮ ಕಲಾತ್ಮಕ ದೃಷ್ಟಿಯನ್ನು ಹೈ-ಆಕ್ಟೇನ್ ಆಕ್ಷನ್ ಜತೆಗೆ ಸಂಯೋಜಿಸುತ್ತಿದ್ದಾರೆ.
