ಕ್ಯಾನ್ಸರ್‌ ಪೀಡಿತ ಮೂತ್ರಕೋಶ ತೆಗೆದಿದ್ದಾರೆ, ನಾನೀಗ ಕ್ಯಾನ್ಸರ್‌ ಫ್ರೀ; ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಶಿವಣ್ಣನಿಂದ ಸಿಹಿ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕ್ಯಾನ್ಸರ್‌ ಪೀಡಿತ ಮೂತ್ರಕೋಶ ತೆಗೆದಿದ್ದಾರೆ, ನಾನೀಗ ಕ್ಯಾನ್ಸರ್‌ ಫ್ರೀ; ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಶಿವಣ್ಣನಿಂದ ಸಿಹಿ ಸುದ್ದಿ

ಕ್ಯಾನ್ಸರ್‌ ಪೀಡಿತ ಮೂತ್ರಕೋಶ ತೆಗೆದಿದ್ದಾರೆ, ನಾನೀಗ ಕ್ಯಾನ್ಸರ್‌ ಫ್ರೀ; ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಶಿವಣ್ಣನಿಂದ ಸಿಹಿ ಸುದ್ದಿ

Shiva Rajkumar: ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಇದೀಗ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ನಾನೀಗ ಕ್ಯಾನ್ಸರ್‌ ಫೀ ಆಗಿದ್ದೇನೆ. ಇನ್ನೇನು ಕೆಲ ತಿಂಗಳಲ್ಲಿ ಮತ್ತೇ ನಿಮ್ಮ ಮುಂದೆ ಹಳೇ ಶಿವಣ್ಣನಾಗಿ ಆಗಮಿಸಲಿದ್ದೇನೆ ಎಂದಿದ್ದಾರೆ.

ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಶಿವಣ್ಣನಿಂದ ಸಿಹಿ ಸುದ್ದಿ
ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಶಿವಣ್ಣನಿಂದ ಸಿಹಿ ಸುದ್ದಿ

Shiva Raujkumar: ಸ್ಯಾಂಡಲ್‌ವುಡ್‌ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌, ಅಮೆರಿಕಾದ ಮಿಯಾಮಿಯಲ್ಲಿ ಕ್ಯಾನ್ಸರ್‌ ಟ್ರೀಟ್‌ಮೆಂಟ್‌ಗೆ ಕಳೆದ ಕೆಲ ದಿನಗಳ ಹಿಂದೆಯೇ ಕುಟುಂಬ ಸಮೇತ ತೆರಳಿದ್ದರು. ಅದರಂತೆ, ಇತ್ತೀಚೆಗಷ್ಟೇ ಕ್ಯಾನ್ಸರ್‌ ಪೀಡಿತ ಮೂತ್ರಕೋಶದ ಆಪರೇಷನ್‌ ಯಶಸ್ವಿಯಾಗಿದ್ದು, ಸ್ವತಃ ಶಿವಣ್ಣ ದಂಪತಿ ಈ ಬಗ್ಗೆ 4 ನಿಮಿಷದ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು, ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ಇನ್ನೇನು ಆದಷ್ಟು ಬೇಗ ಮತ್ತೆ ನಿಮ್ಮ ಮುಂದೆ ಬರುವೆ ಎಂದಿದ್ದಾರೆ.

"ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ನನಗೂ ಭಯ ಆಗುತ್ತೆ. ಮಾತಾಡುವಾಗ ಎಲ್ಲಿ ಎಮೋಷನಲ್‌ ಆಗ್ತೀನೋ ಅಂತಾ. ಹೊರಡಬೇಕಾದಾಗ ನಾನು ಭಾವುಕನಾಗಿದ್ದೆ. ನನಗೂ ಅಂಥ ಒಂದು ಭಯ ಇತ್ತು. ಆದರೆ, ಭಯ ನೀಗಿಸೋಕೆ ಅಂತಾನೆ ಅಭಿಮಾನಿ ದೇವರುಗಳಿರ್ತಾರೆ. ಕೆಲವರು ಕಲಾವಿದರು ಇರ್ತಾರೆ, ಕೆಲವು ಸ್ನೇಹಿತರು, ಸಂಬಂಧಿಗಳು ಹಾಗೂ ವೈದ್ಯರು ಇರುತ್ತಾರೆ. ಬೆಂಗಳೂರಿನಲ್ಲಿ ನನಗೆ ಕಿಮೋ ಮಾಡಿದ ಡಾಕ್ಟರ್‌ಗಳು, ಶಶಿಧರ್‌, ದಿಲೀಪ್‌, ಬಿ ಕೆ ಶ್ರೀನಿವಾಸ್‌ ತುಂಬ ಚೆನ್ನಾಗಿ ನೋಡಿಕೊಂಡರು"

ಶೂಟಿಂಗ್‌ ಜತೆಗೇ ಕಿಮೋಥೆರಪಿ ನಡೆದಿತ್ತು..

"ಜೋಷ್‌ನಲ್ಲಿಯೇ ಶೂಟಿಂಗ್‌ ಮಾಡಿದ್ದೆ. 45 ಇಡೀ ಸಿನಿಮಾವನ್ನು ನಾನು ಕಿಮೋಥೆರಪಿ ಮಾಡಿಕೊಂಡೇ ಕ್ಲೈಮ್ಯಾಕ್ಸ್ ಶೂಟಿಂಗ್‌ ಮಾಡಿದ್ದೆ.‌ ಅದರ ಕ್ರೆಡಿಟ್‌ ರವಿವರ್ಮಗೆ ಹೋಗಬೇಕು. ಆಪರೇಷನ್‌ ದಿನ ಹತ್ತಿರ ಬರ್ತಿದ್ದಂತೆ, ನನಗೂ ಟೆನ್ಷನ್‌ ಜಾಸ್ತಿ ಆಯ್ತು. ಆಪ್ತರು ನನ್ನ ಜೊತೆಗಿದ್ದರು. ಇನ್ನು ಗೀತಾ ಇಲ್ಲದೆ ನಾನಿಲ್ಲ. ಆಕೆಯಿಂದ ದೊಡ್ಡ ಬೆಂಬಲ ನನಗೆ ಸಿಕ್ಕಿದೆ. ಮಧು ಬಂಗಾರಪ್ಪ ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು. ನನ್ನನ್ನು ಮಗು ನೋಡಿಕೊಂಡ ಹಾಗೆ ನೋಡಿಕೊಂಡಿದ್ದಾರೆ. ಬ್ಯಾಪ್ಟಿಸ್ಟ್‌ ಆಸ್ಪತ್ರೆ, ಮಿಯಾಮಿ ಕ್ಯಾನ್ಸರ್‌ ಇನ್ಸ್‌ಟಿಟ್ಯೂಟ್‌ನಲ್ಲೂ ಇನ್ನೊಬ್ಬ ತಾಯಂದಿರು, ಆ ಥರ ನೋಡಿಕೊಂಡಿದ್ದಾರೆ"

ಕ್ಯಾನ್ಸರ್‌ ಪೀಡಿಯ ಮೂತ್ರಕೋಶ ತೆಗೆದಿದ್ದಾರೆ..

"ದೊಡ್ಡ ಆಪರೇಷನ್‌, ಎಲ್ಲರೂ ಕಿಡ್ನಿ ಕಸಿ ಮಾಡಿದ್ದಾರೆ ಅಂತೆಲ್ಲಾ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಅದೇನೂ ಅಲ್ಲ. ಸಿಂಪಲ್‌ ಕ್ಯಾನ್ಸರ್‌ಗೆ ತುತ್ತಾಗಿದ್ದ ಯೂರಿನಲ್‌ ಬ್ಲಾಡರ್‌ (ಮೂತ್ರಕೋಶ) ತೆಗೆದಿದ್ದಾರೆ. ಈಗ ಹೊಸ ಬ್ಲಾಡರ್‌ ಹಾಕಿದ್ದಾಗಿ ತಿಳಿಸಿದ್ದಾರೆ. ಇದೇ ನಡೆದಿರೋದು. ಕನ್‌ಫ್ಯೂಸ್‌ ಮಾಡಿಕೊಳ್ಳಬೇಡಿ. ಡಿಟೇಲ್‌ ಆಗಿ ಹೇಳೋಣ ಎಂದರೆ, ಎಲ್ಲರೂ ಗಾಬರಿಯಾಗುತ್ತಾರೆ. ನಿಮ್ಮ ಹಾರೈಕೆ, ಪ್ರಾರ್ಥನೆಯನ್ನು ಯಾವತ್ತೂ ಜೀವನದಲ್ಲಿ ಮರೆಯಲ್ಲ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು"

ಮಾರ್ಚ್‌ನಲ್ಲಿ ನಿಮ್ಮ ಮುಂದೆ..

"ಡಾಕ್ಟರ್‌ ಹೇಳಿದ್ದಾರೆ ಮೊದಲ ಒಂದು ತಿಂಗಳು ಸ್ಲೋ ಆಗಿ ಹೋಗಿ ಅಂತ. ಆಮೇಲೆ ಮಾರ್ಚ್‌ ತಿಂಗಳ ಬಳಿಕ ಎಂದಿನ ಹಾಗೆ ಇರಿ ಎಂದಿದ್ದಾರೆ. ನಿಮ್ಮ ಚಾಳಿ ಬಿಚ್ಚಿಕೊಳ್ಳಿ ಎಂದು ಹೇಳಿದ್ದಾರೆ. ನನ್ನ ಚಾಳಿಯನ್ನು ಮುಂದುವರಿಸ್ತೀನಿ. ಐ ವಿಲ್‌ ಬಿ ಬ್ಯಾಕ್‌. ಶಿವಣ್ಣ ಆವಾಗ ಹೇಗೆದ್ದೆನೋ, ಈಗಲೂ ಹಾಗೆ ಇದ್ದೇನೆ. ಡಾನ್ಸ್‌ನಲ್ಲಿ ಇರಬಹುದು, ಸೈಲ್‌ನಲ್ಲಿ ಇರಬಹುದು, ಫೈಟಿಂಗ್‌, ಲುಕ್‌ಅನ್ನು ಡಬಲ್‌ ಪವರ್‌ ಇರುತ್ತೆ. ನಿಮ್ಮ ಪ್ರೀತಿ ವಿಶ್ವಾಸ ಎಂದಿಗೂ ಮರೆಯಲ್ಲ. ಎಲ್ಲರಿಗೂ ಹ್ಯಾಪಿ ನ್ಯೂ ಇಯರ್‌" ಎಂದಿದ್ದಾರೆ ಶಿವರಾಜ್‌ ಕುಮಾರ್‌.

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner