ಕೈಯಲ್ಲಿ ಪೊರಕೆ ಗನ್‌, ತಲೆಗೊಂದು ಪ್ಲಾಸ್ಟಿಕ್‌ ಚೀಲ, ಕಣ್ಣಿಗೆ ಜಾತ್ರೆ ಚಸ್ಮಾ; ಸಖತ್ತಾಗಿದೆ ಯುವ ರಾಜ್‌ಕುಮಾರ್‌ ‌ʻಎಕ್ಕʼ ಟೀಸರ್
ಕನ್ನಡ ಸುದ್ದಿ  /  ಮನರಂಜನೆ  /  ಕೈಯಲ್ಲಿ ಪೊರಕೆ ಗನ್‌, ತಲೆಗೊಂದು ಪ್ಲಾಸ್ಟಿಕ್‌ ಚೀಲ, ಕಣ್ಣಿಗೆ ಜಾತ್ರೆ ಚಸ್ಮಾ; ಸಖತ್ತಾಗಿದೆ ಯುವ ರಾಜ್‌ಕುಮಾರ್‌ ‌ʻಎಕ್ಕʼ ಟೀಸರ್

ಕೈಯಲ್ಲಿ ಪೊರಕೆ ಗನ್‌, ತಲೆಗೊಂದು ಪ್ಲಾಸ್ಟಿಕ್‌ ಚೀಲ, ಕಣ್ಣಿಗೆ ಜಾತ್ರೆ ಚಸ್ಮಾ; ಸಖತ್ತಾಗಿದೆ ಯುವ ರಾಜ್‌ಕುಮಾರ್‌ ‌ʻಎಕ್ಕʼ ಟೀಸರ್

ನಟ ಯುವ ರಾಜ್‌ಕುಮಾರ್‌ ನಾಯಕನಾಗಿ ನಟಿಸಿರುವʻಎಕ್ಕʼ ಸಿನಿಮಾದ ಮೊದಲ ಟೀಸರ್‌ ತಾತ ಡಾ. ರಾಜ್‌ಕುಮಾರ್‌ ಬರ್ತ್‌ಡೇ ದಿನವೇ (ಏ. 24) ರಿಲೀಸ್ ಆಗಿದೆ. ರೋಹಿತ್‌ ಪದಕಿ ನಿರ್ದೇಶನದ ಈ ಸಿನಿಮಾದ ಟೀಸರ್‌ನಲ್ಲಿ ಯುವ ಸಖತ್‌ ಆಗಿಯೇ ಎಂಟ್ರಿಕೊಟ್ಟಿದ್ದಾರೆ.

ಕೈಯಲ್ಲಿ ಪೊರಕೆ ಗನ್‌, ತಲೆಗೊಂದು ಪ್ಲಾಸ್ಟಿಕ್‌ ಚೀಲ, ಕಣ್ಣಿಗೆ ಜಾತ್ರೆ ಚಸ್ಮಾ; ಸಖತ್ತಾಗಿದೆ ಯುವ ರಾಜ್‌ಕುಮಾರ್‌ ‌ʻಎಕ್ಕʼ ಟೀಸರ್
ಕೈಯಲ್ಲಿ ಪೊರಕೆ ಗನ್‌, ತಲೆಗೊಂದು ಪ್ಲಾಸ್ಟಿಕ್‌ ಚೀಲ, ಕಣ್ಣಿಗೆ ಜಾತ್ರೆ ಚಸ್ಮಾ; ಸಖತ್ತಾಗಿದೆ ಯುವ ರಾಜ್‌ಕುಮಾರ್‌ ‌ʻಎಕ್ಕʼ ಟೀಸರ್

ದೊಡ್ಮನೆ ಕುಡಿ, ಡಾ. ರಾಜ್‌ಕುಮಾರ್‌ ಅವರ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್‌ ಅವರ ಕಿರಿ ಮಗ ಯುವ ರಾಜ್‌ಕುಮಾರ್‌ ಇದೀಗ ʻಎಕ್ಕʼ ಮೂಲಕ ಸದ್ದು ಆರಂಭಿಸಿದ್ದಾರೆ. ಅಂದರೆ ʻಎಕ್ಕʼ ಚಿತ್ರದ ಮೊದಲ ಟೀಸರ್‌ ಬಿಡುಗಡೆ ಆಗಿದೆ. ಎಲ್ಲ ಎಂದುಕೊಂಡಂತೆ ಆಗಿದ್ದರೆ ಏಪ್ರಿಲ್‌ 23ರ ಯುವ ರಾಜ್‌ಕುಮಾರ್‌ ಬರ್ತ್‌ಡೇ ದಿನವೇ ಈ ಟೀಸರ್‌ ಬಿಡುಗಡೆ ಆಗಬೇಕಿತ್ತು. ಆದರೆ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸಕ್ಕೆ ಸಾಕಷ್ಟು ಜನ ಅಸುನೀಗಿದ್ದರು. ಆ ಹಿನ್ನೆಲೆಯಲ್ಲಿ ಒಂದು ದಿನ ಮುಂದೂಡಿ, ಇಂದು (ಏ.14) ತಾತನ ಬರ್ತ್‌ಡೇ ದಿನವೇ ಟೀಸರ್‌ ರಿಲೀಸ್‌ ಆಗಿದೆ.

1 ನಿಮಿಷ 9 ಸೆಕೆಂಡ್‌ ಇರುವ ʻಎಕ್ಕʼ ಟೀಸರ್‌ ಸಖತ್‌ ಕಲರ್‌ಫುಲ್‌ ಆಗಿದೆ. ಹೊಸ ಅವತಾರದಲ್ಲಿ ಯುವರಾಜ್‌ ಕುಮಾರ್‌ ಎಂಟ್ರಿ ಕೊಟ್ಟಿದ್ದಾರೆ. ಮಗು-ಮೃಗ ಅಂತಾ ಮಸ್ತ್‌ ಡೈಲಾಗ್‌ ಹೊಡೆಯುತ್ತಾ ಕೈಯಲ್ಲಿ ಪೊರಕೆ ಹಿಡಿದು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೊಂದ್ ವಿಷ್ಯ.. ಇದು ಇಲ್ಲಿಗೆ ನಿಲ್ಲೋದಿಲ್ಲ ಅಂತಾ ದೊಡ್ಡದಾಗಿ ಏನೋ ಸೂಚನೆ ಕೊಟ್ಟಿದ್ದಾರೆ.

ನಮ್ಮ ಮನೆಯಲ್ಲಿ ಹೇಳೋರು ನಿನ್ನೊಳಗೆ ಮಗುನೂ ಇದೆ, ಮೃಗಾನೂ ಇದೆ ಎಂದು. ಮಗು ಥರ ಇದ್ಬಿಟ್ಟರೆ, ಬದುಕನ್ನ ಆಟಾಡ್ತಾ ಕಳೀಬಹುದು. ಅದೇ ಮೃಗಾನಾ ಸಾಕ್ದೆ ಅಂತ ಅನ್ಕೋ.. ಅದೇ ಆಟ ಆಡ್ಸೋಕೆ ಶುರು ಮಾಡುತ್ತೆ. ನಿನ್ನನ್ನೇ ನುಂಗಿ ಬಿಡುತ್ತೆ. ಇನ್ನೊಂದು ವಿಷ್ಯ.. ಇದು ಇಲ್ಲಿಗೆ ನಿಲ್ಲಲ್ಲ ಎಂದು ಪೊರಕೆಯಲ್ಲಿ ಗನ್‌ ಸಿಕ್ಕಿಸಿಕೊಂಡು, ತುಂಬಿದ ಥಿಯೇಟರ್‌ಗೆ ವಿಚಿತ್ರ ಗೆಟಪ್‌ನಲ್ಲಿ ಬಂದು ಗುಂಡು ಹಾರಿಸುವ ದೃಶ್ಯ ಟೀಸರ್‌ನಲ್ಲಿದೆ.

ಯುವ ಆಕ್ಟಿಂಗ್‌, ರೋಹಿತ್‌ ಪದಕಿ ಟೇಕಿಂಗ್‌, ಚರಣ್‌ ರಾಜ್‌ ಮ್ಯೂಸಿಕ್‌ ಕಿಕ್‌ ಟೀಸರ್‌ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಯುವ ಟೈಟಲ್‌ ಟ್ರ್ಯಾಕ್‌ ಚಿಂದಿ ಉಡಾಯಿಸಿದ್ದು, ಈಗ ಟೀಸರ್‌ ಸಹ ಅದೇ ರೀತಿ ಸಖತ್‌ ಆಗಿದೆ ಎನ್ನುತ್ತಿದ್ದಾರೆ ಫ್ಯಾನ್ಸ್‌. ರೋಹಿತ್ ಪದಕಿ ನಿರ್ದೇಶನದ ಈ ಚಿತ್ರದಲ್ಲಿ ಯುವರಾಜ್‌ಕುಮಾರ್ ನಾಯಕನಾಗಿ, ಸಂಪದ ಹಾಗೂ ಸಂಜನಾ ಆನಂದ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ಇನ್ನೂ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿದ್ದಾರೆ.

ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ನೀಡಿದರೆ, ಸತ್ಯ ಹೆಗಡೆ ಛಾಯಾಗ್ರಹಣ ಮತ್ತು ದೀಪು ಎಸ್‍ ಕುಮಾರ್ ಸಂಕಲನವಿದೆ. ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾವ್ ಕೆಆರ್‌ಜಿ ಸ್ಟುಡಿಯೋಸ್, ಜಯಣ್ಣ ಹಾಗೂ ಭೋಗೇಂದ್ರ ಅವರ ಜಯಣ್ಣ ಫಿಲ್ಮ್ಸ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿವೆ. ಚಿತ್ರದ ಶೂಟಿಂಗ್‌ ಭರದಿಂದ ಸಾಗುತ್ತಿದ್ದು, ಜೂನ್ 6 ರಂದು ಎಕ್ಕ ಸಿನಿಮಾ ರಿಲೀಸ್‌ ಆಗಲಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.