ಶಿವರಾಜ್‌ಕುಮಾರ್‌ ಭೈರತಿ ರಣಗಲ್‌ ಸಿನಿಮಾ ಮೊದಲ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟು? ಸಿನಿಪಂಡಿತರ ಲೆಕ್ಕಾಚಾರ ಏನು?
ಕನ್ನಡ ಸುದ್ದಿ  /  ಮನರಂಜನೆ  /  ಶಿವರಾಜ್‌ಕುಮಾರ್‌ ಭೈರತಿ ರಣಗಲ್‌ ಸಿನಿಮಾ ಮೊದಲ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟು? ಸಿನಿಪಂಡಿತರ ಲೆಕ್ಕಾಚಾರ ಏನು?

ಶಿವರಾಜ್‌ಕುಮಾರ್‌ ಭೈರತಿ ರಣಗಲ್‌ ಸಿನಿಮಾ ಮೊದಲ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟು? ಸಿನಿಪಂಡಿತರ ಲೆಕ್ಕಾಚಾರ ಏನು?

Bhairathi Ranagal Box Office Collection Day 1: ನರ್ತನ್‌ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಭೈರತಿ ರಣಗಲ್‌ ಸಿನಿಮಾ ಬಾಕ್ಸ್‌ ಆಫೀಸ್‌ ರಿಪೋರ್ಟ್‌ ಹೊರ ಬಿದ್ದಿದೆ. Sacnilk ನೀಡಿರುವ ವರದಿ ಪ್ರಕಾರ ಭೈರತಿ ರಣಗಲ್‌ ಸಿನಿಮಾ ಮೊದಲ ದಿನ 2 ಕೋಟಿ ರೂ ಕಲೆಕ್ಷನ್‌ ಮಾಡಿದೆ.

ಶಿವರಾಜ್‌ಕುಮಾರ್‌ ಭೈರತಿ ರಣಗಲ್‌ ಸಿನಿಮಾ ಮೊದಲ ದಿನ ಬಾಕ್ಸ್‌ ಆಫೀಸ್‌ ಕಲೆಕ್ಷನ್‌
ಶಿವರಾಜ್‌ಕುಮಾರ್‌ ಭೈರತಿ ರಣಗಲ್‌ ಸಿನಿಮಾ ಮೊದಲ ದಿನ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ (PC: Geetha Pictures)

Bhairathi Ranagal Box Office Collection Day 1: ಶಿವರಾಜ್‌ಕುಮಾರ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಭೈರತಿ ರಣಗಲ್‌ ಸಿನಿಮಾ ಶುಕ್ರವಾರ ಬಿಡುಗಡೆ ಆಗಿದೆ. ಚಿತ್ರವನ್ನು ಗೀತಾ ಪಿಕ್ಚರ್ಸ್‌ ಬ್ಯಾನರ್‌ ಅಡಿ ಶಿವಣ್ಣ ಪತ್ನಿ ಗೀತಾ ನಿರ್ಮಿಸಿದ್ದು, ನರ್ತನ್‌ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಮೊದಲ ಹಾಫ್‌ನಲ್ಲೇ ಪೈಸಾ ವಸೂಲ್‌ ಆಗುವುದು ಪಕ್ಕಾ ಎಂದು ಅಭಿಮಾನಿಗಳು ಚಿತ್ರದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದರು.

Sacnilk ವರದಿ ಪ್ರಕಾರ ಸಿನಿಮಾ ಕಲೆಕ್ಷನ್‌ ಮಾಡಿರುವುದು ಎಷ್ಟು?

ಸಿನಿಮಾ ಮೊದಲ ದಿನ ಬಾಕ್ಸ್‌ ಆಫೀಸಿನಲ್ಲಿ ಎಷ್ಟು ಕಲೆಕ್ಷನ್‌ ಮಾಡಬಹುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪ್ರಮುಖ ವೆಬ್‌ಸೈಟ್‌ Sacnilk ನೀಡಿರುವ ವರದಿ ಪ್ರಕಾರ, ಭೈರತಿ ರಣಗಲ್‌ ಮೊದಲ ದಿನ ಒಟ್ಟು 2 ಕೋಟಿ ರೂ ಸಂಗ್ರಹ ಮಾಡಿದೆ. ಆದರೆ ಕೆಲವು ಸ್ಯಾಂಡಲ್‌ವುಡ್‌ ಸಿನಿ ವಿಮರ್ಶಕರು, ಸಿನಿಮಾ ಏನಿಲ್ಲವೆಂದರೂ ಭೈರತಿ ರಣಗಲ್‌ ಸಿನಿಮಾ ಮೊದಲ ದಿನ 5 ಕೋಟಿ ರೂ ಕಲೆಕ್ಷನ್‌ ಮಾಡಿದೆ ಎನ್ನುತ್ತಿದ್ದಾರೆ. ಶಿವರಾಜ್‌ಕುಮಾರ್‌ ಅಭಿನಯದ ಘೋಸ್ಟ್‌, ವೇದ ಸಿನಿಮಾಗಳಿಗಿಂತಲೂ ಭೈರತಿ ರಣಗಲ್‌ ಹೆಚ್ಚು ಕಲೆಕ್ಷನ್‌ ಮಾಡಿದೆ ಎನ್ನಲಾಗುತ್ತಿದೆ. ಘೋಸ್ಟ್‌ ಸಿನಿಮಾ ಮೊದಲ ದಿನ 4 ಕೋಟಿ ಕಲೆಕ್ಷನ್‌ ಮಾಡಿದ್ದರೆ, ವೇದ ಸಿನಿಮಾ 2.75 ಕೋಟಿ ಕಲೆಕ್ಷನ್‌ ಮಾಡಿತ್ತು.

ಮೊದಲ ದಿನ 46.75% ಆಕ್ಯುಪೆನ್ಸಿ ಗಳಿಸಿದ್ದ ಸಿನಿಮಾ

ರಾಜ್ಯದ ಥಿಯೇಟರ್‌ಗಳಲ್ಲಿ ಬೆಳಗಿನ ಶೋ 30.13%, ಮಧ್ಯಾಹ್ನದ ಶೋ 38.89%, ಸಂಜೆ ಶೋ 39.58%, ನೈಟ್‌ ಶೋ 71.90% ಸೇರಿ ಮೊದಲ ದಿನ ಭೈರತಿ ರಣಗಲ್‌ ಸಿನಿಮಾ ಮೊದಲ ದಿನ ಒಟ್ಟು 45.13% ಆಕ್ಯುಪೆನ್ಸಿ ಪಡೆದಿತ್ತು. ಇನ್ನು ಮೈಸೂರಿನಲ್ಲಿ ಮೊದಲ ದಿನ 65.50%, ತುಮಕೂರಿನಲ್ಲಿ 63.00%, ರಾಯಚೂರಿನಲ್ಲಿ 57.75%, , ಶಿವಮೊಗ್ಗದಲ್ಲಿ 48.00%, ಬೆಂಗಳೂರಿನಲ್ಲಿ 46.75% ಆಕ್ಯುಪೆನ್ಸಿ ಇತ್ತು. ಶನಿವಾರ, ಭಾನುವಾರ ವೀಕೆಂಡ್‌ಗಳಲ್ಲಿ ಸಿನಿಮಾ ಎಷ್ಟು ಕಲೆಕ್ಷನ್‌ ಮಾಡಲಿದೆ ಕಾದು ನೋಡಬೇಕು.

ಗೀತಾ ಶಿವರಾಜ್‌ಕುಮಾರ್‌ ನಿರ್ಮಾಣದ ಸಿನಿಮಾ

ಭೈರತಿ ರಣಗಲ್‌ ಚಿತ್ರವನ್ನು ಗೀತಾ ಪಿಕ್ಚರ್ಸ್‌ ಬ್ಯಾನರ್‌ ಅಡಿ ಶಿವಣ್ಣ ಪತ್ನಿ ಗೀತಾ ಶಿವರಾಜ್‌ಕುಮಾರ್‌ ನಿರ್ಮಾಣ ಮಾಡಿದ್ದಾರೆ. ಮಫ್ತಿ ಚಿತ್ರವನ್ನು ನಿರ್ದೇಶಿಸಿದ್ದ ನರ್ತನ್‌, ಈ ಚಿತ್ರಕ್ಕೂ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ರವಿ ಬಸ್ರೂರ್‌ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಶಿವರಾಜ್‌ಕುಮಾರ್‌, ಶ್ರೀಮುರಳಿ, ರುಕ್ಮಿಣಿ ವಸಂತ್‌, ರಾಹುಲ್‌ ಬೋಸ್‌, ನಾನಾ ಪಾಟೇಕರ್‌, ಯೋಗಿಬಾಬು, ಛಾಯಾಸಿಂಗ್‌, ದೇವರಾಜ್‌, ವಸಿಷ್ಠ ಸಿಂಹ ಹಾಗೂ ಇನ್ನಿತರರು ನಟಿಸಿದ್ದಾರೆ.

Whats_app_banner