ವಿದ್ಯಾಪತಿ ಸಿನಿಮಾ ಟ್ವಿಟರ್ ವಿಮರ್ಶೆ: ಪಕ್ಕಾ ಪೈಸಾ ವಸೂಲ್, ಮಿಸ್ ಮಾಡ್ಡೆ ನೋಡಿ, ಹೀಗಂದ್ರು ಸಿನಿಮಾ ನೋಡಿದವರು
Vidyapati Twitter Review: ಡಾಲಿ ಧನಂಜಯ್ ನಿರ್ಮಾಣದ ನಾಗಭೂಷಣ್ ಹಾಗೂ ಮಲೈಕಾ ವಸುಪಾಲ್ ನಾಯಕ, ನಾಯಕಿಯಾಗಿ ನಟಿಸಿರುವ ವಿದ್ಯಾಪತಿ ಸಿನಿಮಾ ಇಂದು (ಏಪ್ರಿಲ್ 10) ಬಿಡುಗಡೆಯಾಗಿದೆ. ಈ ಸಿನಿಮಾ ನೋಡಿದ ಮಂದಿ ಪಕ್ಕಾ ಪೈ ವಸೂಲ್ ಎಂದಿದ್ದಾರೆ. ಇದರ ಟ್ವಿಟರ್ ರಿವ್ಯೂ ಹೀಗಿದೆ.

Vidyapati Twitter Review: ಡಾಲಿ ಧನಂಜಯ್ ನಿರ್ಮಾಣದ ವಿದ್ಯಾಪತಿ ಸಿನಿಮಾ ಟೀಸರ್ ಹಾಗೂ ಟ್ರೈಲರ್ ಮೂಲಕ ಸಾಕಷ್ಟು ಸದ್ದು ಮಾಡಿತ್ತು. ಅಲ್ಲದೇ ಇದೊಂದು ಪಕ್ಕಾ ಮನೋರಂಜನಾತ್ಮಕ ಸಿನಿಮಾ ಎಂಬುದನ್ನು ಟ್ರೈಲರ್ ನೋಡಿಯೇ ಊಹಿಸಬಹುದಿತ್ತು. ನಾಗಭೂಷಣ್ ನಟಿಸಿದ್ದು ಕೆಲವೇ ಚಿತ್ರಗಳಾದರೂ ಅವರು ತಮ್ಮದೇ ಅಭಿಮಾನಿ ಬಳಗ ಹೊಂದಿದ್ದಾರೆ. ವಿದ್ಯಾಪತಿ ಸಿನಿಮಾ ಇಂದು (ಏಪ್ರಿಲ್ 10) ತೆರೆ ಕಂಡಿದ್ದು, ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದಾರೆ. ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗುವ ಹೊತ್ತಿಗೆ ಮನೆಮಂದಿಯೆಲ್ಲಾ ಥಿಯೇಟರ್‌ಗೆ ಹೋಗಿ ನೋಡಬಹುದಾದ ಸಿನಿಮಾ ಎಂದು ಸಿನಿ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ವಿದ್ಯಾಪತಿಗೆ ನಾಯಕಿಯಾಗಿ ಮಲೈಕಾ ಟಿ ವಸುಪಾಲ್ ನಟಿಸಿದ್ದಾರೆ. ಈ ಚಿತ್ರಕ್ಕೆ ಚಿತ್ರಕ್ಕೆ ಇಶಾಂ ಹಾಗೂ ಹಸೀಂ ಖಾನ್ ನಿರ್ದೇಶನ ಮಾಡಿದ್ದಾರೆ. ಕಥೆ ಬರೆದು, ಸಂಕಲನವನ್ನೂ ಅವರೇ ಮಾಡುತ್ತಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸುಜಿತ್ ವೆಂಕಟರಾಮಯ್ಯ ಸಾಹಿತ್ಯ ಬರೆದಿದ್ದಾರೆ. ಡಾಲಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಧನಂಜಯ ನಿರ್ಮಾಣ ಮಾಡಿದ್ದಾರೆ. ಹಾಗಾದರೆ ವಿದ್ಯಾಪತಿ ಸಿನಿಮಾ ನೋಡಿದವರು ಟ್ವಿಟರ್‌ನಲ್ಲಿ ಯಾವ ರೀತಿ ರಿವ್ಯೂ ಕೊಟ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.
ವಿದ್ಯಾಪತಿ ಟ್ವಿಟರ್ ರಿವ್ಯೂ
ಈಗಷ್ಟೇ ವಿದ್ಯಾಪತಿ ಸಿನಿಮಾ ನೋಡಿದೆ. ನಾಗಭೂಷಣ್ ಆ್ಯಕ್ಟಿಂಗ್ ಸೂಪರ್, ಇಶಾಂ ಹಾಗೂ ಹಸೀಂ ಅವರ ನಿರ್ದೇಶನ ಅದ್ಭುತವಾಗಿದೆ. ಕನ್ನಡ ಚಿತ್ರರಂಗಕ್ಕೆ ಇದೊಂದು ಉತ್ತಮ ಚಿತ್ರವಾಗಲಿದೆ. ನಾಗಭೂಷಣ್ ಅವರನ್ನು ಫ್ಯಾಮಿಲಿ ಸ್ಟಾರ್ ಎಂದು ಕರೆಯಬಹುದು. ಇವರು ಕಟೆಂಟ್ ಆಯ್ಕೆಯ ವಿಚಾರದಲ್ಲಿ ಅನಂತ್‌ನಾಗ್, ರಮೇಶ್ ಅರವಿಂದ್ ಸ್ಥಾನಕ್ಕೆ ಬರುತ್ತಾರೆ ಎಂದು ನವೀನ್ ದ್ವಾರಕನಾಥ್ ಬರೆದುಕೊಂಡಿದ್ದಾರೆ.
ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಸಿನಿಮಾ. ಮಕ್ಕಳ ಜೊತೆ ಸೇರಿ ನೋಡಬಹುದು. ಪ್ರತಿಯೊಬ್ಬರು ಚೆನ್ನಾಗಿ ನಟಿಸಿದ್ದಾರೆ. ಹತ್ತಿರದ ಚಿತ್ರಮಂದಿರಗಳಲ್ಲಿ ನೋಡಿ ಎಂದು ಬರೆದುಕೊಂಡಿದ್ದಾರೆ.
ಚಿತ್ರದ ದ್ವಿತಿಯಾರ್ಧ ಹಾಸ್ಯಮಯವಾಗಿದ್ರೂ ನಿಧಾನಕ್ಕೆ ಭಾವನಾತ್ಮಕ ಅಂಶಗಳತ್ತ ಜಾರುತ್ತದೆ. ಒಟ್ಟಾರೆಯಾಗಿ ಈ ಸಿನಿಮಾ ಚೆನ್ನಾಗಿದೆ. ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಇಂತಹ ಸಿನಿಮಾವನ್ನು ಬೆಂಬಲಿಸಿದ್ದಕ್ಕೆ ಡಾಲಿ ಧನಂಜಯ್ ಅವರಿಗೆ ಧನ್ಯವಾದ ಎಂದು ಟ್ವಿಟರ್‌ನಲ್ಲಿ ಸಿನಿ ಪ್ರೇಕ್ಷರೊಬ್ಬರು ಬರೆದುಕೊಂಡಿದ್ದಾರೆ.
ವಿದ್ಯಾಪತಿ ಮಕ್ಕಳು ಹಾಗೂ ಕುಟುಂಬ ಸಮೇತ ನೋಡಬಹುದಾದ ಸಿನಿಮಾ. ಖಂಡಿತ ಮನೆಮಂದಿಯೆಲ್ಲಾ ಥಿಯೇಟರ್‌ಗೆ ಹೋಗಿ ಎಂಜಾಯ್ ಮಾಡಬಹುದು. ಜೋಕ್, ಕರಾಟೆ ಎಲ್ಲಾ ಅಂಶಗಳನ್ನು ಹೊಂದಿರುವ ಕೌಟುಂಬಿಕ ಹಾಸ್ಯಮಯ ಚಿತ್ರವಿದು. ಪೋಷಕ ಪಾತ್ರಗಳು ಕೂಡ ಸಿನಿಮಾದ ಹೈಲೈಟ್ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
ಈ ಬೇಸಿಗೆಗೆ ಪಕ್ಕಾ ಮನೋರಂಜನೆ ನೀಡುವ ಸಿನಿಮಾ. ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
ಪಕ್ಕಾ ಪೈಸಾ ವಸೂಲ್ ಸಿನಿಮಾ, ಮಿಸ್ ಮಾಡದೇ ಸಿನಿಮಾ ನೋಡಿ ಎಂದು ಪ್ರಿಮಿಯರ್ ಷೋ ವೀಕ್ಷಿಸಿದವರೊಬ್ಬರು ಬರೆದುಕೊಂಡಿದ್ದಾರೆ.
ಕಾಮಿಡಿ, ಎಂಟರ್‌ಟೈನರ್ ಸಿನಿಮಾಕ್ಕಾಗಿ ಎದುರು ನೋಡುತ್ತಿರುವವರಿಗೆ ವಿದ್ಯಾಪತಿ ಫುಲ್ ಮೀಲ್ಸ್ ಬಡಿಸೋದು ಖಂಡಿತ. ಮಕ್ಕಳು ಹಾಗೂ ಕುಟುಂಬ ಸಮೇತರಾಗಿ ನೋಡಲು ಒಂದೊಳ್ಳೆ ಸಿನಿಮಾಕ್ಕಾಗಿ ಎದುರು ನೋಡುತ್ತಿದ್ದರೆ ಈ ಸಿನಿಮಾವನ್ನು ನೀವು ನೋಡಲು ಹೋಗಬಹುದು. ಟ್ವಿಟರ್ ರಿವ್ಯೂ ಪ್ರಕಾರ ನೋಡುವುದಾದರೆ ಖಂಡಿತ ಇದೊಂದು ಪೈಸಾ ವಸೂಲ್ ಸಿನಿಮಾ. ಮನರಂಜನೆಗೆ ಖಂಡಿತ ಕೊರತೆ ಇರಲ್ಲ.
