ಕೋಟಿಗಳಿಗೆ ಲೆಕ್ಕವೇ ಇಲ್ಲ; ದಕ್ಷಿಣ ಭಾರತದ ಮುಂಬರುವ ಬಿಗ್ ಬಜೆಟ್ ಸಿನಿಮಾಗಳಿವು; ಕೂಲಿಯಿಂದ ಟಾಕ್ಸಿಕ್‌ವರೆಗೆ
ಕನ್ನಡ ಸುದ್ದಿ  /  ಮನರಂಜನೆ  /  ಕೋಟಿಗಳಿಗೆ ಲೆಕ್ಕವೇ ಇಲ್ಲ; ದಕ್ಷಿಣ ಭಾರತದ ಮುಂಬರುವ ಬಿಗ್ ಬಜೆಟ್ ಸಿನಿಮಾಗಳಿವು; ಕೂಲಿಯಿಂದ ಟಾಕ್ಸಿಕ್‌ವರೆಗೆ

ಕೋಟಿಗಳಿಗೆ ಲೆಕ್ಕವೇ ಇಲ್ಲ; ದಕ್ಷಿಣ ಭಾರತದ ಮುಂಬರುವ ಬಿಗ್ ಬಜೆಟ್ ಸಿನಿಮಾಗಳಿವು; ಕೂಲಿಯಿಂದ ಟಾಕ್ಸಿಕ್‌ವರೆಗೆ

ಬಾಹುಬಲಿ, ಕೆಜಿಎಫ್‌ನಂತಹ ಬಿಗ್‌ ಬಜೆಟ್ ಸಿನಿಮಾಗಳು ದಕ್ಷಿಣ ಭಾರತ ಚಿತ್ರರಂಗವನ್ನು ವಿಶ್ವವೇ ತಿರುಗಿ ನೋಡುವಂತೆ ಮಾಡಿವೆ. ಈ ಬಿಗ್‌ ಬಜೆಟ್ ಸಾಲಿನಲ್ಲಿ ಇನ್ನೂ ಹಲವು ಸಿನಿಮಾಗಳಿವೆ. ಮುಂಬರುವ ದಕ್ಷಿಣ ಭಾರತದ ಬಿಗ್‌ ಬಜೆಟ್ ಸಿನಿಮಾಗಳು ಯಾವುದು ನೋಡಿ.

ಕೋಟಿಗಳಿಗೆ ಲೆಕ್ಕವೇ ಇಲ್ಲ; ದಕ್ಷಿಣ ಭಾರತದ ಮುಂಬರುವ ಬಿಗ್ ಬಜೆಟ್ ಸಿನಿಮಾಗಳಿವು
ಕೋಟಿಗಳಿಗೆ ಲೆಕ್ಕವೇ ಇಲ್ಲ; ದಕ್ಷಿಣ ಭಾರತದ ಮುಂಬರುವ ಬಿಗ್ ಬಜೆಟ್ ಸಿನಿಮಾಗಳಿವು

ಮೊದಲೆಲ್ಲಾ ಬಿಗ್‌ ಬಜೆಟ್ ಸಿನಿಮಾಗಳು ಎಂದರೆ ಬಾಲಿವುಡ್‌, ಹಾಲಿವುಡ್‌ನತ್ತ ಗಮನ ಹೋಗುತ್ತಿತ್ತು. ಆದರೆ ನಂತರದ ದಿನಗಳಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಸಾಕಷ್ಟು ಬಿಗ್‌ ಬಜೆಟ್‌ ಸಿನಿಮಾಗಳು ನಿರ್ಮಾಣವಾದವು, ಮಾತ್ರವಲ್ಲ ಅವು ದಾಖಲೆಯನ್ನು ನಿರ್ಮಾಣ ಮಾಡಿವೆ. ಇತ್ತೀಚಿನ ದಿನಗಳಲ್ಲಿ ಸೌತ್ ಇಂಡಿಯಾದಲ್ಲಿ ತಯಾರಾಗುತ್ತಿರುವ ಪ್ಯಾನ್ ಇಂಡಿಯಾ ಬಿಗ್ ಬಜೆಟ್ ಸಿನಿಮಾಗಳು ಹಾಲಿವುಡ್‌ ಅನ್ನೂ ಮೀರಿಸುವಂತಿರುವುದು ಸುಳ್ಳಲ್ಲ.

ಬಾಹುಬಲಿ, ಕೆಜಿಎಫ್‌ನಂತಹ ಬಹು ಬಜೆಟ್‌ನ ಸಿನಿಮಾಗಳು ಸಾಕಷ್ಟು ಯಶಸ್ಸು ಗಳಿಸಿವೆ. ಹಾಗಂತ ಎಲ್ಲಾ ಬಿಗ್ ಬಜೆಟ್ ಸಿನಿಮಾಗಳು ಸೂಪರ್ ಹಿಟ್ ಆಗಿವೆ ಅಂತಲ್ಲ. ಸಾಕಷ್ಟು ಹಣ ಸುರಿದು ಮಾಡಿರುವ ಸಿನಿಮಾಗಳು ತೋಪೆದ್ದು ಹೋಗಿದ್ದು ಇದೆ. ಹಾಗಂತ ದಕ್ಷಿಣ ಭಾರತ ಸಿನಿರಂಗದಲ್ಲಿ ಬಿಗ್‌ ಬಜೆಟ್ ಸಿನಿಮಾಗಳ ನಿರ್ಮಾಣ ನಿಂತಿಲ್ಲ. ಮುಂಬರುವ ಕೆಲವು ಬಿಗ್ ಬಜೆಟ್ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕೂಲಿ

ಸೂಪರ್‌ ಸ್ಟಾರ್ ರಜನಿಕಾಂತ್ ನಟನೆಯ ಕೂಲಿ ಸಿನಿಮಾಕ್ಕೆ ಲೋಕೇಶ್ ಕನಕರಾಜ್ ನಿರ್ದೇಶನವಿದೆ. ಉಪೇಂದ್ರ, ಅಕ್ಕಿನೇನಿ ನಾಗಾರ್ಜುನ್‌, ರಚಿತಾ ರಾಮ್‌, ಶೃತಿ ಹಾಸನ್‌ ಸೇರಿದಂತೆ ದಕ್ಷಿಣ ಭಾರತದ ಹಲವು ಸ್ಟಾರ್ ನಟ–ನಟಿಯರು ಈ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಸನ್ ಪಿಕ್ಚರ್ಸ್ ಈ ಚಿತ್ರದ ನಿರ್ಮಾಣದ ಹೊಣೆ ಹೊತ್ತಿದೆ. ಸುಮಾರು 400 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಮುಂದಿನ ಆಗಸ್ಟ್ 14ಕ್ಕೆ ನಿರ್ಮಾಣವಾಗಲಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಅಮಿರ್ ಖಾನ್ ಕೂಡ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕಣ್ಣಪ್ಪ

ಫ್ಯಾಂಟಸಿ ಕಥೆ ಹೊಂದಿರುವ ತೆಲುಗಿನ ಕಣ್ಣಪ್ಪ ಚಿತ್ರದಲ್ಲಿ ವಿಷ್ಣು ಮಂಚು ನಾಯಕನಾಗಿ ನಟಿಸಿದ್ದಾರೆ. ಮುಕೇಶ್ ಕುಮಾರ್‌ ಸಿಂಗ್ ನಿರ್ದೇಶನದ ಈ ಸಿನಿಮಾದ ಹೊಣೆ ಹೊತ್ತಿದ್ದಾರೆ ಮೋಹನ್‌ ಬಾಬು. ಮೋಹನ್‌ ಬಾಬು, ಆರ್. ಶರತ್‌ ಕುಮಾರ್‌, ಅರ್ಪಿತ್ ರಾಂಕಾ, ದೇವರಾಜ್‌, ಮುಕೇಶ್ ರಿಷಿ, ಬ್ರಹ್ಮಾನಂದಂ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ಮೋಹನ್‌ಲಾಲ್‌, ಪ್ರಭಾಸ್‌, ಅಕ್ಷಯ್‌ ಕುಮಾರ್‌, ಕಾಜಲ್ ಅಗರ್‌ವಾಲ್‌ ಅತಿಥಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮೂಲಕ ಅಕ್ಷಯ್‌ ಕುಮಾರ್ ಮೊದಲ ಬಾರಿಗೆ ತೆಲುಗು ಚಿತ್ರವೊಂದರಲ್ಲಿ ಕಾಣಿಸುತ್ತಿದ್ದಾರೆ. ಈ ಸಿನಿಮಾ ಜೂನ್ 25ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದು 200 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ.

AA26* A6

ಕಾಲಿವುಡ್‌ನ ಖ್ಯಾತ ನಿರ್ದೇಶಕ, ಟಾಲಿವುಡ್‌ನ ಖ್ಯಾತ ನಟ ಅಲ್ಲು ಅರ್ಜುನ್ ಕಾಂಬಿನೇಷನ್‌ನ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಪುಷ್ಪ ಬಳಿಕ ಅಲ್ಲು ಅರ್ಜುನ್ ನಟಿಸುತ್ತಿರುವ ಬಿಗ್ ಬಜೆಟ್ ಸಿನಿಮಾ ಇದಾಗಿದೆ. ಈ ಚಿತ್ರವು ಸುಮಾರು 700 ರಿಂದ 800 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತದೆ. ಇದೊಂದು ಸೈನ್ಸ್ ಫಿಕ್ಷನ್ ಸಿನಿಮಾವಾಗಿದೆ. ಇದು ಅಲ್ಲು ಅರ್ಜುನ್ ನಟನೆಯ 22ನೇ ಹಾಗೂ ಅಟ್ಲಿ ನಿರ್ದೇಶನದ 6ನೇ ಸಿನಿಮಾವಾಗಿದೆ. ಈ ಸಿನಿಮಾವನ್ನು ಸನ್‌ ಪಿಕ್ಚರ್ಸ್ ನಿರ್ಮಾಣ ಮಾಡಲಿದೆ.

ಜನ ನಾಯಗನ್

ದಳಪತಿ ವಿಜಯ್ ಸಿನಿ ಜೀವನದ ಕೊನೆ ಚಿತ್ರ ಇದಾಗಿದೆ ಎಂದು ಹೇಳಲಾಗುತ್ತಿದೆ. ತಮಿಳಿನ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಇದಾಗಿದೆ. ಎಚ್. ವಿನೂತ್ ನಿರ್ದೇಶನದ ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ ಹಣ ಹೂಡಿಕೆ ಮಾಡುತ್ತಿದೆ. ವಿಜಯ್ ಜೊತೆ ಕರಾವಳಿ ಬೆಡಗಿ ಪೂಜಾ ಹೆಗ್ಡೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಬಾಬಿ ಡಿಯೋಲ್‌, ಗೌತಮ್ ವಾಸುದೇವ ಮೆನನ್, ಪ್ರಕಾಶ್ ರಾಜ್‌, ನರೇನ್‌, ಪ್ರಿಯಾಮಣಿ, ವರಲಕ್ಷ್ಮೀ ಶರತ್ ಕುಮಾರ್ ಮೊದಲಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಜೆಟ್ 300 ಕೋಟಿ ಎಂದು ಹೇಳಲಾಗುತ್ತಿದೆ. ಈ ಸಿನಿಮಾ 2026ರ ಜನವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಟಾಕ್ಸಿಕ್

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಕನ್ನಡ ಮುಂದಿನ ಬಿಗ್ ಬಜೆಟ್ ಸಿನಿಮಾ. ಗ್ಯಾಂಗ್‌ಸ್ಟರ್‌ಗಳ ಕಥೆ ಹೊಂದಿರುವ ಈ ಚಿತ್ರಕ್ಕೆ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರದಲ್ಲಿ ಯಶ್ ಜೊತೆ ನಯನತಾರಾ, ಹುಮಾ ಖುರೇಶಿ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಅಚ್ಚುತ್‌ ಕುಮಾರ್, ಅಕ್ಷಯ್ ಒಬೆರಾಯ್‌ ಮೊದಲಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಕೆವಿಎನ್‌ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್‌ ಪ್ರೊಡಕ್ಷನ್ ಅಡಿಯಲ್ಲಿ ಯಶ್ ಹಾಗೂ ವೆಂಕಟ್ ಕೆ. ನಾರಾಯಣ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಬಜೆಟ್ ಸುಮಾರು 200 ಕೋಟಿ. ಈ ಚಿತ್ರವು 2026ರ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದೆ.

ಎಸ್‌ಎಸ್‌ಎಂಬಿ 29

ಮಹೇಶ್ ಬಾಬು ಹಾಗೂ ಎಸ್‌ಎಸ್‌ ರಾಜಮೌಳಿ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಹೊಸ ಸಿನಿಮಾಕ್ಕೆ ಇನ್ನೂ ಹೆಸರು ಅಂತಿಮವಾಗಿಲ್ಲ. ಆರ್‌ಆರ್‌ಆರ್‌ನಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟ ರಾಜಮೌಳಿ ಈಗ ಮಹೇಶ್‌ಬಾಬುಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರವು ಸುಮಾರು 1000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ಪ್ರಿಯಾಂಕ ಚೋಪ್ರಾ ನಟಿಸುತ್ತಿದ್ದಾರೆ. ಇದು 2027 ರಲ್ಲಿ ಬಿಡುಗಡೆಯಾಗಲಿದೆ.

ವಿಶ್ವಂಭರ

ತೆಲುಗಿನ ಫ್ಯಾಂಟಸಿ ಆ್ಯಕ್ಷನ್ ಸಿನಿಮಾ ಇದಾಗಿದ್ದು, ಮಿಲ್ಲಿಡಿ ವಶಿಷ್ಠ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿರಂಜೀವಿ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ತ್ರಿಷಾ ಕೃಷ್ಣನ್‌, ಕುನಾಲ್ ಕಪೂರ್‌, ಆಶಿಕಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು 200 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.