Rachana Rai: ದರ್ಶನ್ ́'ಡೆವಿಲ್ʼ ಸಿನಿಮಾದ ನಾಯಕಿ ರಚನಾ ರೈ ಬಹುಮುಖ ಪ್ರತಿಭೆ; ಪುತ್ತೂರಿನ ಟೀಚರ್ ಮಗಳ ಪರಿಚಯ
Rachana Rai: ತುಳುವಿನ ಸರ್ಕಸ್ ಸಿನಿಮಾದಲ್ಲಿ ನಾಯಕಿಯಾಗಿದ್ದ ರಚನಾ ರೈ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮುಂದಿನ ಚಿತ್ರ "Devil: The Hero' ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಈಕೆ ಕೇವಲ ನಟಿಯಲ್ಲ. ಬರಹ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಇರುವ ಪ್ರತಿಭಾನ್ವಿತೆ.

Rachana Rai: ಕರ್ನಾಟಕದ ಕರಾವಳಿ ಜಿಲ್ಲೆಗಳಿಂದ ಕನ್ನಡ, ಹಿಂದಿ ಸಿನಿಮಾ ರಂಗಕ್ಕೆ ಆಗಮಿಸಿ ಸಾಕಷ್ಟು ಜನರು ಯಶಸ್ಸು ಪಡೆದಿದ್ದಾರೆ. ತುಳುವಿನ ಸರ್ಕಸ್ ಸಿನಿಮಾದಲ್ಲಿ ನಾಯಕಿಯಾಗಿದ್ದ ರಚನಾ ರೈ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮುಂದಿನ ಚಿತ್ರ "Devil: The Hero' ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಈಕೆ ಕೇವಲ ನಟಿಯಲ್ಲ. ಬರಹ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಇರುವ ಪ್ರತಿಭಾನ್ವಿತೆ. ಸದ್ಯ ಡೆವಿಲ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ದರ್ಶನ್ ಜತೆಗೆ ನಾಯಕಿಯಾಗಿ ಈಕೆ ಶೂಟಿಂಗ್‌ನಲ್ಲಿದ್ದಾರೆ. ಮಿಲನಾ ಪ್ರಕಾಶ್ ನಿರ್ದೇಶನದ ಈ ಸಿನಿಮಾದಲ್ಲಿ ಅವಕಾಶ ಪಡೆಯುವ ಮೂಲಕ ಈಕೆ ಗಮನ ಸೆಳೆದಿದ್ದಾರೆ.
ಪುತ್ತೂರಿನ ಟೀಚರ್ ಮಗಳು
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಂಬೆಟ್ಟಿನಲ್ಲಿ ವಾಸವಾಗಿರುವ ರಚನಾ ರೈ ಟೀಚರ್ ಮಗಳು. ಹೌದು, ಇವರ ತಾಯಿ ಹೆಸರು ಗಂಗಾ ರೈ. ಪುತ್ತೂರಿನ ಹಾರಾಡಿ ಶಾಲೆಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ರಚನಾ ರೈ ಓದಿದ್ದು ಪತ್ರಿಕೋದ್ಯಮ
ಕನ್ನಡ ಡೆವಿಲ್ ಸಿನಿಮಾದ ನಟಿ ರಚನಾ ರೈ ಓದಿದ್ದು ಪತ್ರಿಕೋದ್ಯಮ. ಪುತ್ತೂರಿನ ನಗರದಲ್ಲಿರುವ ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ಇದಕ್ಕೂ ಮೊದಲು ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿ ತನಕ ಉಜಿರೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ (ಎಸ್‌ಡಿಎಂ ಉಜಿರೆ) ಶಿಕ್ಷಣ ಪಡೆದಿದ್ದಾರೆ.
ಬಹುಮುಖ ಪ್ರತಿಭೆ
ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದಿರುವ ಈಕೆಗೆ ಬರವಣಿಗೆ ಇಷ್ಟ. ಪತ್ರಿಕೋದ್ಯಮದ ಬರವಣಿಗೆ ಮಾತ್ರವಲ್ಲ. ಈಕೆ ಓ ಮೈ ಡಾಗ್ ಎಂಬ ಪುಸ್ತಕ ಬರೆದಿದ್ದಾರೆ. ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಡ್ಯಾನ್ಸರ್ ಆಗಿಯೂ ಗಮನ ಸೆಳೆದಿದ್ದಾರೆ. ಇದರೊಂದಿಗೆ ಇವರು ಬ್ಯಾಡ್ಮಿಂಟನ್ ಆಟಗಾರ್ತಿಯೂ ಹೌದು.
ಚಿತ್ರರಂಗ ಪ್ರವೇಶ
ಕೋಸ್ಟಲ್‌ವುಡ್ ಮೂಲಕ ಇವರು ಚಿತ್ರರಂಗಕ್ಕೆ ಪ್ರವೇಶ ನೀಡಿದ್ದರು. ಅಂದರೆ, ತುಳು ಚಿತ್ರ ಸರ್ಕಸ್‌ನಲ್ಲಿ ನಟಿಸಿದ್ದರು. ಈ ಸಿನಿಮಾ ಸೂಪರ್‌ಹಿಟ್ ಆಗಿತ್ತು. ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಜತೆ ಇವರು ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ಅರವಿಂದ್ ಬೋಳಾರ್, ಭೋಝರಾಜ್ ವಾಮಂಜೂರ್, ಉಮೇಶ್ ಮಿಜಾರ್ ಮುಂತಾದ ತುಳು ಹಾಸ್ಯ ಕಲಾವಿದರ ದಂಡೇ ಇದೆ. ಈ ತುಳು ಸಿನಿಮಾದ ಯಶಸ್ಸಿನ ಬಳಿಕ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾದಲ್ಲಿ ಅವಕಾಶ ಪಡೆದಿದ್ದಾರೆ.
ಡೆವಿಲ್ ಸಿನಿಮಾದ ಶೂಟಿಂಗ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಡೆವಿಲ್ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈಗಾಗಲೇ ಮೈಸೂರಿನಲ್ಲಿ ಕೆಲವು ದಿನಗಳ ಶೂಟಿಂಗ್ ನಡೆದಿದೆ. ಇನ್ನು ಮುಂದಿನ ಶೂಟಿಂಗ್ ಉತ್ತರ ಪ್ರದೇಶದಲ್ಲಿ ನಡೆಯಲಿದೆ. ಈ ಸಿನಿಮಾದಲ್ಲಿ ದರ್ಶನ್, ರಚನಾ ರೈ, ಮಹೇಶ್ ಮಂಜ್ರೇಕರ್, ಜಿಶು ಸೇನ್‌ಗುಪ್ತಾ, ಮುಖೇಶ್ ರಿಷಿ, ಫರ್ದೀನ್ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
