ಕನ್ನಡ , ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿರುವ ಯಾಕೆ ಸಿನಿಮಾ ಶೀರ್ಷಿಕೆ ಅನಾವರಣ; ಪ್ರೇಮ್‌ ನಿರ್ದೇಶನದ ಸಿನಿಮಾವಿದು
ಕನ್ನಡ ಸುದ್ದಿ  /  ಮನರಂಜನೆ  /  ಕನ್ನಡ , ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿರುವ ಯಾಕೆ ಸಿನಿಮಾ ಶೀರ್ಷಿಕೆ ಅನಾವರಣ; ಪ್ರೇಮ್‌ ನಿರ್ದೇಶನದ ಸಿನಿಮಾವಿದು

ಕನ್ನಡ , ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿರುವ ಯಾಕೆ ಸಿನಿಮಾ ಶೀರ್ಷಿಕೆ ಅನಾವರಣ; ಪ್ರೇಮ್‌ ನಿರ್ದೇಶನದ ಸಿನಿಮಾವಿದು

ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿರುವ ಯಾಕೆ ಸಿನಿಮಾ ಶೀರ್ಷಿಕೆ ಅನಾವರಣ ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆಯಿತು. ಕನ್ನಡದಲ್ಲಿ ಈ ಸಿನಿಮಾಗೆ ಯಾಕೆ ಎಂದು ಹೆಸರಿಟ್ಟಿದ್ದರೆ, ತೆಲುಗಿನಲ್ಲಿ ಸಂಸ್ಥಾನಂ ಎಂದು ಹೆಸರಿಡಲಾಗಿದೆ.

ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆದ ಯಾಕೆ ಸಿನಿಮಾ ಶೀರ್ಷಿಕೆ ಅನಾವರಣ ಕಾರ್ಯಕ್ರಮದಲ್ಲಿ ಚಿತ್ರದ ಕಲಾವಿದರು
ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆದ ಯಾಕೆ ಸಿನಿಮಾ ಶೀರ್ಷಿಕೆ ಅನಾವರಣ ಕಾರ್ಯಕ್ರಮದಲ್ಲಿ ಚಿತ್ರದ ಕಲಾವಿದರು

ಇತ್ತೀಚಿಗೆ ತಯಾರಾಗುತ್ತಿರುವ ಬಹುತೇಕ ಸಿನಿಮಾಗಳು ಕನ್ನಡ ಮಾತ್ರವಲ್ಲ ಇತರ ಭಾಷೆಗಳಲ್ಲಿ ಕೂಡಾ ತಯಾರಾಗುತ್ತಿದೆ. ಕೆಲವು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತಯಾರಾದರೆ, ಇನ್ನೂ ಕೆಲವು ದ್ವಿಭಾಷೆಗಳಲ್ಲಿ ತಯಾರಾಗುತ್ತದೆ. ಅವುಗಳಲ್ಲಿ ಯಾಕೆ ಸಿನಿಮಾ ಕೂಡಾ ಒಂದು. ಈ ಸಿನಿಮಾ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲೂ ತಯಾರಾಗುತ್ತಿದೆ.

ಕನ್ನಡದಲ್ಲಿ ‌'ಯಾಕೆ' , ತೆಲುಗಿನಲ್ಲಿ 'ಸಂಸ್ಥಾನಂ' ಹೆಸರು ಫೈನಲ್

ಈ ಸಿನಿಮಾಗೆ ಕನ್ನಡದಲ್ಲಿ ಯಾಕೆ ಎನ್ನುವ ಟೈಟಲ್‌ ಇಟ್ಟಿದ್ದು, ತೆಲುಗಿನಲ್ಲಿ ಸಂಸ್ಥಾನಂ ಎಂಬ ಹೆಸರನ್ನು ಫೈನಲ್‌ ಮಾಡಲಾಗಿದೆ. ಸೀತಾ ಹರ್ಷವರ್ಧನ್ ಅವರು ಎರಡು ಭಾಷೆಗಳಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಪ್ರೇಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗಲಿರುವ ಎರಡು ಚಿತ್ರಗಳ ಶೀರ್ಷಿಕೆ ಅನಾವರಣ ಮತ್ತು ಸಿರಿ ಸಿನಿಮಾಸ್ ಎಂಬ ಹೊಸ ನಿರ್ಮಾಣ ಸಂಸ್ಥೆಯ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನಟರಾದ ಒರಟ ಪ್ರಶಾಂತ್ , ಶ್ರೀನಗರ ಕಿಟ್ಟಿ , ನಿರ್ಮಾಪಕ ಟಿಪಿ ಸಿದ್ದರಾಜು, ಕಲಾವಿದೆ ಅಂಬುಜಾ ಸೇರಿದಂತೆ ಹಲವು ಕಲಾವಿದರು ಆಗಮಿಸಿ ಶೀರ್ಷಿಕೆ ಅನಾವರಣ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.

ಸೀತಾ ಹರ್ಷವರ್ಧನ್‌ ನಿರ್ಮಾಣದ ಸಿನಿಮಾ

ನಿರ್ಮಾಪಕಿ ಸೀತಾ ಹರ್ಷವರ್ಧನ್ ಮಾತನಾಡಿ, ನಾನು ಕನ್ನಡದ ಹಲವು ಸಿನಿಮಾ ಮತ್ತು ಧಾರಾವಾಹಿಯಲ್ಲಿ ನಟಿಸಿದ್ದೇನೆ. ಜೊತೆಗೆ ತೆಲುಗು ಧಾರಾವಾಹಿಗಳಲ್ಲಿ ಸಹ ನಟಿಸಿದ್ದೇನೆ. ಒಮ್ಮೆ ನಿರ್ದೇಶಕ ಪ್ರೇಮ್ ಅವರು ಹೇಳಿದ ಕಥೆ ನನಗೆ ಇಷ್ಟವಾಯಿತು. ಹೀಗಾಗಿ ನಿರ್ಮಾಣಕ್ಕೆ ಮುಂದಾಗಿದ್ದೇವೆ. ನವೆಂಬರ್‌ನಲ್ಲಿ ನಮ್ನ ಹೊಸ ಸಿನಿಮಾ ಚಿತ್ರೀಕರಣ ಆರಂಭವಾಗಲಿದ್ದು ಮುಂದಿನ ವರ್ಷ ಏಪ್ರಿಲ್‌ನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ಲ್ಯಾನ್‌ ಮಾಡಲಾಗಿದೆ. ನಮ್ಮ ಪ್ರಯತ್ನಕ್ಕೆ ಅಮೆಜಾನ್ ಮತ್ತು ಹೈದರಾಬಾದಿನ ಖುಷಿ ಸಿನಿಮಾ ಸಂಸ್ಥೆ ಜೊತೆಗೂಡಿದೆ. ಇದರಿಂದಾಗಿ ಚಿತ್ರ ನಿರ್ಮಾಣಕ್ಕೆ ಮತ್ತಷ್ಟು ಬಲ ಬಂದಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುವ ಆಸೆ ನಮ್ಮದು ಎಂದು ಅವರು ಹೇಳಿದರು.

ನವೆಂಬರ್‌ನಲ್ಲಿ ಚಿತ್ರೀಕರಣ ಆರಂಭ

ನಿರ್ದೇಶಕ ಪ್ರೇಮ್ ಮಾತನಾಡಿ, ಇದು ಕನ್ನಡದಲ್ಲಿ ನನ್ನ ಮೊದಲ ಚಿತ್ರ‌ ಒಳ್ಳೆಯ ಕಂಟೆಂಟ್ ಇದೆ. ನವೆಂಬರ್ ಮಧ್ಯಭಾಗದಿಂದ ಚಿತ್ರೀಕರಣ ಆರಂಭಿಸುತ್ತಿದ್ದೇವೆ. ಎಲ್ಲರಿಗೂ ಇಷ್ಟವಾಗುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ ಎಂದು ಮಾಹಿತಿ ನೀಡಿದರು. ಚಿತ್ರದ ಬಗ್ಗೆ ಮಾಹಿತಿ ನೀಡಿದ ಖುಷಿ ಸಿನಿಮಾ ಸಂಸ್ಥೆಯ ಪಾಲುದಾರರು ಹೊಸ ಹೊಸ ಕಂಟೆಂಟ್‌ಗಳು ಬಂದರೆ, ಆ ಚಿತ್ರ ನಿರ್ಮಾಣ ಮಾಡಲು ನಮ್ಮ ಸಂಸ್ಥೆ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು‌.

Whats_app_banner