ಮಾಯಾವಿ ಹಾಡಿನ ಮೂಲಕ ಮಾಯಾಲೋಕವನ್ನೇ ಸೃಷ್ಟಿಸಿದ ಸಂಜಿತ್‌ ಹೆಗ್ಡೆ, ಸೋನು ನಿಗಮ್; ಇಲ್ಲಿದೆ ಹಾಡಿನ ಲಿರಿಕ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  ಮಾಯಾವಿ ಹಾಡಿನ ಮೂಲಕ ಮಾಯಾಲೋಕವನ್ನೇ ಸೃಷ್ಟಿಸಿದ ಸಂಜಿತ್‌ ಹೆಗ್ಡೆ, ಸೋನು ನಿಗಮ್; ಇಲ್ಲಿದೆ ಹಾಡಿನ ಲಿರಿಕ್ಸ್‌

ಮಾಯಾವಿ ಹಾಡಿನ ಮೂಲಕ ಮಾಯಾಲೋಕವನ್ನೇ ಸೃಷ್ಟಿಸಿದ ಸಂಜಿತ್‌ ಹೆಗ್ಡೆ, ಸೋನು ನಿಗಮ್; ಇಲ್ಲಿದೆ ಹಾಡಿನ ಲಿರಿಕ್ಸ್‌

ಸಂಜಿತ್ ಹೆಗ್ಡೆ ಹಾಗೂ ಸೋನು ನಿಗಮ್ ಹಾಡಿದ ಮಾಯಾವಿ ಸಾಂಗ್ ಎಲ್ಲರ ಬಾಯಲ್ಲೂ ಗುನುಗುತ್ತಿದೆ. ಯಾರ ಸ್ಟೇಟಸ್ ನೋಡಿದ್ರೂ ಅವರ ಹಾಡೇ ಕಣ್ಣಿಗೆ ಬೀಳುತ್ತಿದೆ. ಇನ್ನು ಕೆಲವರು ಹಾಡಿನ ಸಾಲುಗಳನ್ನು ಹುಡುಕುವುದರಲ್ಲಿ ಬ್ಯುಸಿ ಆಗಿದ್ದಾರೆ.

ಸಂಜಿತ್ ಹೆಗಡೆ, ಸೋನು ನಿಗಮ್
ಸಂಜಿತ್ ಹೆಗಡೆ, ಸೋನು ನಿಗಮ್

ಸಂಜಿತ್ ಹೆಗ್ಡೆ ಹಾಗೂ ಸೋನು ನಿಗಮ್ ಈ ಇಬ್ಬರ ಕಂಠದಲ್ಲಿ ಮೆಲೋಡಿ ಹಾಡುಗಳನ್ನು ಕೇಳುವುದೆಂದರೆ ಸಂಗೀತ ಪ್ರಿಯರಿಗೆ ಎಲ್ಲಿಲ್ಲದ ಖುಷಿ. ಆದರೆ ಇದೀಗ ಅವರಿಬ್ಬರೂ ಒಟ್ಟಿಗೆ ಹಾಡೊಂದನ್ನು ಹಾಡಿದ್ದಾರೆ ನೋಡಿ. ಸಂಜಿತ್ ಹೆಗ್ಡೆ ಹಾಗೂ ಸೋನು ನಿಗಮ್ ಹಾಡಿದ ಮಾಯಾವಿ ಸಾಂಗ್ ಎಲ್ಲರ ಬಾಯಲ್ಲೂ ಗುನುಗುತ್ತಿದೆ. ಯಾರ ಸ್ಟೇಟಸ್ ನೋಡಿದ್ರೂ ಅವರ ಹಾಡೇ ಕಣ್ಣಿಗೆ ಬೀಳುತ್ತಿದೆ. ಇನ್ನು ಕೆಲವರು ಹಾಡಿನ ಸಾಲುಗಳನ್ನು ಹುಡುಕುವುದರಲ್ಲಿ ಬ್ಯುಸಿ ಆಗಿದ್ದಾರೆ. ನಾವಿಲ್ಲಿ ಹಾಡಿನ ಎಲ್ಲ ಸಾಲುಗಳನ್ನೂ ನೀಡಿದ್ದೇವೆ.

ಮಾತಲ್ಲೇ ಮಿಂಚು ತಂದ ನನ್ನೋಳು ಈ ಮಾಯಾವಿ

ಚಂದ್ರನ್ನೇ ಜುಮ್ಕಿ ಮಾಡಿ ಇಟ್ಕೊಂಡಿದ್ಲು ಹಾಯಾಗಿ

ಮುದ್ದಾದ ಕಣ್ಣಿಗೊಂದು

ಪುಟ್ಟ ಆ ಕೆನ್ನೊಗೊಂದು ನಕ್ಷತ್ರ ತಂದು ಕೊಡಲೇನು ಮಾಯಾವಿ

ಮಾಯಾವಿ ಮಿನುಗು ನೀನು

ಮುಂಜಾನೆ ಬಿಸಿಲು ನೀನು

ಸಾಲದಿರೋ ಹಾಡು ನೀನು

ಬೇಕೆನಿಸೋ ಸಂಜೆ ನೀನು

ಎಧೆಯ ಧ್ವನಿಗೆ

ಬೆಳಕು ನೀನೆ

ನೀನಾದೆ ನೀನಾದೆ

ಯಾರಿರದ ರಸ್ತೆಯಲ್ಲಿ

ಸಂತೈಸೋ ಅವಳೇ ಗಾಳಿ

ಸಾಗರದ ಬಾನಿನಲ್ಲಿ

ಕಂಗೊಳಿಸೋ ಅವಳೆ ನೀಲಿ

ಸಮಯಾ ನೀ ನಿಂಥದೇ

ಅವಳ ಅಂಗಯ್ಯಲ್ಲೇ

ನಾನೂನು ಶರಣಾದೆ

ಅವಳ ಗುಂಗಿನಲ್ಲೇ

ಸೋತೆ ಹೋದೆ ಸೋತೆ ಹೋದೆ. ಸೋ…ತೇ ಹೋದೆ

ನೀ ಮೊದಲಾ ಕೊನೆಯಾ ಆಸೆ

ನನ್ನ ಎದೆಗೆ ಹಿಡಿಸೋ ಭಾಷೆ

ಅನುರಾಗದಲಿ ಕೊನೆಬೀದಿಯಲಿ

ನನಗೂ ನಿನಗೂ.. ಮನೆ ಮಾಡಿರುವೆ

ಓಳಗೆ ಬರಲು ತಡ ಇನ್ನೇಕೆ?

ಕಿಟಕೀಲೆ ನಾ… ಕಾದೆ

ಯಾರೋ ನಾ ಯಾರೋ ಕನಸಲ್ಲಿ ಯಾರೂ ಇರದಾಗಾ

ನನ್ನವಳ ಮನಸಲ್ಲಿ ನನಗೇ ಬೇಕಿತ್ತು ಜಾಗ

ಈ ಹೃದಯ ಮೌನ ಆಗುವಾಗ

ಮಾತು ಹೇಗೇ ಆಡಲಿ

ಹುಡುಗೀ ಹೋದೆ ಎಲ್ಲೋ ಧೂರಿ

ನೀನೇ ಸಿಕ್ಕ ಶಾಯರಿ

ಸೋತೆ ಹೋದೆ ಸೋತೆ ಹೋದೆ.. ಸೋ…ತೆ ಹೋದೆ

ನೀ ಮೊದಲಾ ಕೊನೆಯಾ ಆಸೆ

ನನ್ನ ಎದೆಗೆ ಹಿಡಿಯೋ ಭಾಷೆ

ಆಡಿಯೋ ಕ್ರೆಡಿಟ್ಸ್‌

ಗಾಯಕರು: ಸೋನು ನಿಗಮ್, ಸಂಜಿತ್ ಹೆಗ್ಡೆ

ಸಂಯೋಜನೆ: ಸಂಜಿತ್ ಹೆಗ್ಡೆ

ಸಾಹಿತ್ಯ: ನಾಗಾರ್ಜುನ್ ಶರ್ಮಾ

ನಿರ್ಮಾಣ: ಗೌತಮ್ ಹೆಬ್ಬಾರ್, ಸನ್ನಿ ಎಂ.ಆರ್., ಸಂಜಿತ್ ಹೆಗಡೆ

ಗಿಟಾರ್: ರಘುರಾಮನ್ ರಾಮಸುಬ್ರಮಣಿಯನ್

ತಾಳವಾದ್ಯಗಳು: ಕಾರ್ತಿಕ್ ವಂಶಿ

ನವೆಂಬರ್ 6 ರಂದು ಈ ಸಾಂಗ್ ಬಿಡುಗಡೆಯಾಗಿದೆ. ಇದುವರೆಗೆ 471857 ಜನ ವೀಕ್ಷಿಸಿದ್ದಾರೆ.

Whats_app_banner