ಇಂದಿಗೂ ಹಸಿರಾಗಿದೆ ಹಳ್ಳಿಮೇಷ್ಟ್ರು ಚಿತ್ರದ ಸಂಕ್ರಾಂತಿ ಬಂತು ರತ್ತೊ ರತ್ತೊ ಹಾಡು; ಇಲ್ಲಿದೆ ಹಂಸಲೇಖ ಬರೆದ ಸಾಹಿತ್ಯ
ಕನ್ನಡ ಸುದ್ದಿ  /  ಮನರಂಜನೆ  /  ಇಂದಿಗೂ ಹಸಿರಾಗಿದೆ ಹಳ್ಳಿಮೇಷ್ಟ್ರು ಚಿತ್ರದ ಸಂಕ್ರಾಂತಿ ಬಂತು ರತ್ತೊ ರತ್ತೊ ಹಾಡು; ಇಲ್ಲಿದೆ ಹಂಸಲೇಖ ಬರೆದ ಸಾಹಿತ್ಯ

ಇಂದಿಗೂ ಹಸಿರಾಗಿದೆ ಹಳ್ಳಿಮೇಷ್ಟ್ರು ಚಿತ್ರದ ಸಂಕ್ರಾಂತಿ ಬಂತು ರತ್ತೊ ರತ್ತೊ ಹಾಡು; ಇಲ್ಲಿದೆ ಹಂಸಲೇಖ ಬರೆದ ಸಾಹಿತ್ಯ

Sankranthi 2025: ಸಂಕ್ರಾಂತಿ ಬಂತು ರತ್ತೊ ರತ್ತೊ.. ಮನಸಲ್ಲಿ ಮನಸೋ ಬಿತ್ತೊ ಬಿತ್ತೊ.. ಎಳ್ಳು ಬೆಲ್ಲ ಬೀರಾಯಿತು, ಕೊಟ್ಟು ತಗೊ ಮಾತಾಯಿತೊ.. ಮುತ್ತಾಯಿತೊ ಮತ್ತಾಯಿತೊ.. ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳು.. ಸಂಕ್ರಾಂತಿ ಹಬ್ಬದ ನಿಮಿತ್ತ ಹೀಗಿದೆ ಹಳ್ಳಿಮೇಷ್ಟ್ರು ಚಿತ್ರದ ಈ ಹಾಡಿನ ಸಾಹಿತ್ಯ.

ಸಂಕ್ರಾಂತಿ ಬಂತು ರತ್ತೊ ರತ್ತೊ ಹಾಡು
ಸಂಕ್ರಾಂತಿ ಬಂತು ರತ್ತೊ ರತ್ತೊ ಹಾಡು

Sankranthi Banthu Song: 1992ರಲ್ಲಿ ಅಂದರೆ ಬರೋಬ್ಬರಿ 33 ವರ್ಷಗಳ ಹಿಂದೆ ತೆರೆಕಂಡಿತ್ತು ಹಳ್ಳಿಮೇಷ್ಟ್ರು ಸಿನಿಮಾ. ಆ ಚಿತ್ರದ ಎವರ್‌ಗ್ರೀನ್‌ ಹಾಡುಗಳಲ್ಲಿ "ಸಂಕ್ರಾಂತಿ ಬಂತು ರತ್ತೊ ರತ್ತೊ" ಸಹ ಒಂದು. ಹಂಸಲೇಖ ಸಂಗೀತ ನೀಡಿ, ಹಾಡಿಗೆ ಸಾಹಿತ್ಯವನ್ನೂ ಬರೆದಿದ್ದಾರೆ. ಮೋಹನ್‌ ಮಂಜು ನಿರ್ದೇಶನದ ಈ ಸಿನಿಮಾದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌, ಬಿಂದಿಯಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇದೀಗ ಇದೇ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಸಂಕ್ರಾಂತಿ ಹಾಡಿನ ಸಾಹಿತ್ಯ ಇಲ್ಲಿದೆ.

ಸಂಕ್ರಾಂತಿ ಬಂತು ರತ್ತೊ ರತ್ತೊ

ಮನಸಲ್ಲಿ ಮನಸೋ ಬಿತ್ತೊ ಬಿತ್ತೊ

----

ಜುಂ ಜುಂ ಜುಂ ಜುಂ ಜುಂ ಜುಂ

ಜುಂಜುಂಜುಂ

---

ಸಂಕ್ರಾಂತಿ ಬಂತು ರತ್ತೊ ರತ್ತೊ

ಮನಸಲ್ಲಿ ಮನಸೋ ಬಿತ್ತೊ ಬಿತ್ತೊ

ಎಳ್ಳು ಬೆಲ್ಲ ಬೀರಾಯಿತು, ಕೊಟ್ಟು ತಗೊ ಮಾತಾಯಿತೊ

ಮುತ್ತಾಯಿತೊ ಮತ್ತಾಯಿತೊ..

ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳು

----

ಜುಂ ಜುಂ ಜುಂ ಜುಜುಂ ಜುಂ

ಜುಂಜುಂಜುಂ

--

ಸಂಕ್ರಾಂತಿ ಬಂತು ರತ್ತೊ ರತ್ತೊ

ಮನಸಲ್ಲಿ ಮನಸೋ ಬಿತ್ತೊ ಬಿತ್ತೊ

ಎಳ್ಳು ಬೆಲ್ಲ ಬೀರಾಯಿತು ಕೊಟ್ಟು ತಗೊ ಮಾತಾಯಿತೊ

ಮುತ್ತಾಯಿತೊ ಮತ್ತಾಯಿತೊ

ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳು

--

ಜುಂ ಜುಂ ಜುಂ ಜುಜುಂ ಜುಂ

ಜುಂಜುಂಜುಂ

--

ಜುಂ ಜುಂ ಜುಂ ಜುಜುಂ ಜುಂ

ಜುಂಜುಂಜುಂ

---

ಹದಿನಾರು ದಾಟಿದ ಎಳೆ ಮೈಯಿ ಕೇಳಿದ

ಚಲುವಾ ಚಲುವಾ ನೀನೇನಾ

---

ದಿನಾ ರಾತ್ರಿ ಕಾಡಿದ ಕುಡಿ ಮೀಸೆ ಕೂಗಿದಾ

ಚಲುವೆ ಚಲುವೆ ನೀನೆನಾ

--

ಕಣ್ಣಿಗಿಟ್ಟ ಕಪ್ಪು ಕಾಡಿಗೆ

ಮೂಗಿಗಿಟ್ಟ ಕೆಂಪು ಮೂಗುತಿ

ನಡೆಸಿದ ಹುಡುಕಾಟ ನಿನಗೇ...

---

ಅತ್ತಾ ಇತ್ತಾ ಆಡೊ ಮನಸು

ಚಿತ್ತ ಭಂಗಾ ಮಾಡೊ ಕನಸು

ನಡೆಸಿದ ಪರದಾಟ ನಾನಗೇ....

---

ಮಾರಾಜಾ.. ನನ್ನ ಜೊತೆಗಾರಾ

ಮಾರಾಣಿ.. ನನ್ನ ಜೊತೆಗಾತಿ

--

ಸುಗ್ಗಿ ಕಾಲದಂತೆ

ಸುಗ್ಗಿ ಹಾಡಿನಂತೆ

--

ನೀ ಬಂದೆ

ನೀ ಬಂದೆ

ನನ್ನ ಬಾಳಿಗೆ......

--

ಸಂಕ್ರಾಂತಿ ಬಂತು ರತ್ತೊ ರತ್ತೊ

ಮನಸಲ್ಲಿ ಮನಸೋ ಬಿತ್ತೊ ಬಿತ್ತೊ

ಎಳ್ಳು ಬೆಲ್ಲ ತೀರಾಯಿತು

ಕೊಟ್ಟು ತಗೊ ಮಾತಾಯಿತೊ

--

ಮುತ್ತಾಯಿತೊ

ಮತ್ತಾಯಿತೊ

ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳು

--

ಜುಂ ಜುಂ ಜುಂ ಜುಜುಂ ಜುಂ

ಜುಂಜುಂಜುಂ

--

ಚಿತ್ತಾರ ಹಾಕುತಾ ರಂಗೋಲಿ ಹಾಕಿದೆ

ಪ್ರೀತಿಯ ಸುಗ್ಗಿಯ ಕಣದಲ್ಲಿ

--

ಸುವ್ವಾಲಿ ಹಾಡುತಾ ಕೋಲಾಟ ಸಾಗಿದೆ

ಪ್ರೀತಿಯ ರಾಶಿಯ ಎದುರಲ್ಲಿ

--

ಹೋ ಪುಟ್ಟ ಬಾಯ ಕೆಂಪು ಕುಂಚದ

ತಿದ್ದಿ ತೀಡೋ ಮುದ್ದು ಚಿತ್ರದ

ಸೊಗಸಿಗೆ ಮನಸೋತೆ ಮರುಳೇ...

--

ಹೋ.. ಗಾಳಿಗಿಷ್ಟು ಜಾಗವಿಲ್ಲದೆ

ಅಪ್ಪಿಕೊಳ್ಳೋ ಹಳ್ಳಿ ಗಂಡಿಗೆ

ಗಡುಸಿಗೆ ಬೆರಗಾದೆ ಮರುಳಾ..

--

ಮಾರಾಣಿ.. ನನ್ನ ಜೊತೆಗಾತಿ

ಮಾರಾಜಾ.. ನನ್ನ ಜೊತೆಗಾರಾ

--

ಸುಗ್ಗಿ ಕಾಲದಂತೆ

ಸುಗ್ಗಿ ಹಾಡಿನಂತೆ

--

ನೀ ಬಂದೆ

ನೀ ಬಂದೆ

ನನ್ನ ಬಾಳಿಗೆ......

---

ಸಂಕ್ರಾಂತಿ ಬಂತು ರತ್ತೊ ರತ್ತೊ

ಮನಸಲ್ಲಿ ಮನಸೋ ಬಿತ್ತೊ ಬಿತ್ತೊ

ಎಳ್ಳು ಬೆಲ್ಲ ಬೀರಾಯಿತು

ಕೊಟ್ಟು ತಗೊ ಮಾತಾಯಿತೊ

ಮುತ್ತಾಯಿತೊ

ಮತ್ತಾಯಿತೊ

ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳು

--

ಜುಂ ಜುಂ ಜುಂ ಜುಜುಂ ಜುಂ

ಜುಂಜುಂಜುಂ

Whats_app_banner