Ritu Singh: ಸೀತಾ ರಾಮ ಧಾರಾವಾಹಿಯ ಸಿಹಿ ಪಾತ್ರಧಾರಿ ರಿತು ಸಿಂಗ್ ಎಷ್ಟು ದಿನ ಸ್ಕೂಲ್‌ಗೆ ಹೋಗ್ತಾರೆ? ಇಲ್ಲಿದೆ ಪುಟ್ಟ ಪೋರಿಯ ಉತ್ತರ
ಕನ್ನಡ ಸುದ್ದಿ  /  ಮನರಂಜನೆ  /  Ritu Singh: ಸೀತಾ ರಾಮ ಧಾರಾವಾಹಿಯ ಸಿಹಿ ಪಾತ್ರಧಾರಿ ರಿತು ಸಿಂಗ್ ಎಷ್ಟು ದಿನ ಸ್ಕೂಲ್‌ಗೆ ಹೋಗ್ತಾರೆ? ಇಲ್ಲಿದೆ ಪುಟ್ಟ ಪೋರಿಯ ಉತ್ತರ

Ritu Singh: ಸೀತಾ ರಾಮ ಧಾರಾವಾಹಿಯ ಸಿಹಿ ಪಾತ್ರಧಾರಿ ರಿತು ಸಿಂಗ್ ಎಷ್ಟು ದಿನ ಸ್ಕೂಲ್‌ಗೆ ಹೋಗ್ತಾರೆ? ಇಲ್ಲಿದೆ ಪುಟ್ಟ ಪೋರಿಯ ಉತ್ತರ

ಸೀತಾ ರಾಮ ಧಾರಾವಾಹಿಯಲ್ಲಿ ಅಭಿನಯಿಸಿ ಎಲ್ಲರ ಮನಗೆದ್ದ ಸಿಹಿ ಎಂಬ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ರಿತು ಸಿಂಗ್‌ ತಿಂಗಳಲ್ಲಿ ಎಷ್ಟು ದಿನ ಶಾಲೆಗೆ ಹೋಗ್ತಾರೆ ಗೊತ್ತಾ? ರಿತು ಸಿಂಗ್ ಹೇಳಿದ್ದೇನು ನೋಡಿ.

ಸೀತಾ ರಾಮ ಧಾರಾವಾಹಿಯ ಸಿಹಿ ಪಾತ್ರಧಾರಿ ರಿತು ಸಿಂಗ್ ಎಷ್ಟು ದಿನ ಸ್ಕೂಲ್‌ಗೆ ಹೋಗ್ತಾರೆ
ಸೀತಾ ರಾಮ ಧಾರಾವಾಹಿಯ ಸಿಹಿ ಪಾತ್ರಧಾರಿ ರಿತು ಸಿಂಗ್ ಎಷ್ಟು ದಿನ ಸ್ಕೂಲ್‌ಗೆ ಹೋಗ್ತಾರೆ

ಸೀತಾ ರಾಮ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ರಿತು ಸಿಂಗ್‌ ಸಿಹಿ ಪಾತ್ರದಲ್ಲಿ ಸಾಕಷ್ಟು ಜನರ ಮನ ಗೆದ್ದಿದ್ದಾರೆ. ಸಿಹಿ ಅಭಿನಯ ಮೆಚ್ಚಿಕೊಂಡು ಹುಟ್ಟಿದರೆ ನನಗೂ ಇದೇ ರೀತಿ ಮಗು ಬೇಕು ಎಂದು ಬಯಸಿದವರು ಹಲವರಿದ್ದಾರೆ. ಸಿಹಿ ಪಾತ್ರದಲ್ಲಿ ಅಭಿನಯಿಸುತ್ತಾ ಇಷ್ಟು ಚಿಕ್ಕವರಿರುವಾಗಲೇ ರಿತು ಹೇಗೆ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನವನ್ನು ನಿಭಾಯಿಸುತ್ತಾರೆ? ಎಂದು ಹಲವರಿಗೆ ಅನುಮಾನ ಇರಬಹುದು. ಸೀರಿಯಲ್ ಶೂಟಿಂಗ್‌ ಇರುವಾಗ ಹೇಗೆ ರಿತು ಸಿಂಗ್‌ ಶಾಲೆಗೆ ಹೋಗುತ್ತಾರೆ ಎಂಬುದನ್ನು ಯುಟ್ಯೂಬ್‌ ಚಾನೆಲ್‌ ಒಂದರಲ್ಲಿ ಹೇಳಿದ್ದಾರೆ. ಆ ಪ್ರಕಾರ ಅವರು ಹದಿನೈದು ದಿನ ಮಾತ್ರ ಶಾಲೆಗೆ ಹೋಗುತ್ತಾರಂತೆ.

ಸೀತಾ ರಾಮ ಧಾರಾವಾಹಿ ಹಾಗೂ ಕೆಲ ದಿನ ಅಮೃತಧಾರೆ ಧಾರಾಹಿಯಲ್ಲೂ ಅವರು ಅಭಿನಯಿಸಿದ್ದರು. ಇನ್ನು ಡಾನ್ಸ್‌ ಕರ್ನಾಟಕ ಡಾನ್ಸ್‌ ರಿಯಾಲಿಟಿ ಶೋದಲ್ಲೂ ಕೂಡ ರಿತು ಭಾಗವಹಿಸಿದ್ದಾರೆ. ಈ ಕಾರಣ ಹೆಚ್ಚಿನ ದಿನ ಅವರು ಶೂಟಿಂಗ್‌ಗಾಗಿ ಮೀಸಲಿಡಬೇಕಾಗುತ್ತದೆ ಎಂದಿದ್ದಾರೆ. ಇದರ ನಡುವೆ ಕೆಲವು ಯುಟ್ಯೂಬ್‌ ಚಾನೆಲ್‌ಗಳಿಗೆ ಸಂದರ್ಶನಕ್ಕೂ ಪುಟಾಣಿ ಸಿಹಿ ತಮ್ಮ ಸಮಯವನ್ನು ಮೀಸಲಿಡುತ್ತಾರಂತೆ.

ಸೀರಿಯಲ್ ಪ್ರಿಯರಂತೂ ಸೀತಾ ರಾಮ ಧಾರಾವಾಹಿಯನ್ನು ನೋಡಲು ಕಾಯುತ್ತಿರುತ್ತಾರೆ. ಅದರಲ್ಲೂ ಸಿಹಿ ಪಾತ್ರವನ್ನು ಎಲ್ಲರೂ ಇಷ್ಟಪಡುತ್ತಾರೆ. ಈ ಐದು ವರ್ಷದ ಬಾಲಕಿ, ಬಾಲನಟಿಯಾಗಿ ಸಾಧನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಭರವಸೆಯನ್ನು ಹೊಂದಿದ್ದಾರೆ. ಇನ್ನು ನಿಮಗೆ ಶಾಲೆ ಇಷ್ಟವಾಗುತ್ತಾ ಅಥವಾ ಶೂಟಿಂಗ್ ಇಷ್ಟವಾಗುತ್ತಾ ಎಂದು ಪ್ರಶ್ನೆ ಮಾಡಿದಾಗ ನನಗೆ ಸ್ಕೂಲ್ ಇಷ್ಟವಾಗುತ್ತೆ ಎಂದು ರಿತು ಉತ್ತರ ನೀಡಿದ್ದಾರೆ.

ಇನ್ನು ಅವರು ತಾವು ಇಷ್ಟು ಚಿಕ್ಕ ವಯಸ್ಸಿನಲ್ಲಿ ಸ್ಟಾರ್‌ ಆಗಿದ್ದರ ಬಗ್ಗೆ ಖುಷಿಪಟ್ಟಿದ್ದಾರೆ. ನಾನು ಹೊರಗಡೆ ಹೋದಾಗೆಲ್ಲ ಎಲ್ಲರೂ ನನ್ನ ಪರಿಚಯ ಮಾಡಿಕೊಳ್ಳುತ್ತಾರೆ. ನೀನು ಸಿಹಿ ಅಲ್ವಾ? ಎಂದು ಕೇಳುತ್ತಾರೆ. ಸೀತಾ ಹಾಗೂ ರಾಮ್‌ನಾ ಕೇಳ್ದೆ ಅಂತ ಹೇಳು ಎಂದು ಕೇಳುತ್ತಾರೆ. ಆಗ ನಾನು ಓಕೆ ಎಂದು ಹೇಳ್ತೀನಿ. ಅದಾದ್ಮೇಲೆ ಅವರು ನನ್ನ ಜೊತೆ ಸೆಲ್ಪಿ ಬೇಕು ಎಂದು ಹೇಳುತ್ತಾರೆ. ನಾನು ಸೆಲ್ಫಿ ಕೊಡ್ತೀನಿ ಎಂದು ಹೇಳಿದ್ದಾರೆ.

Whats_app_banner