Seetha Rama Serial: ಸಿಹಿಯನ್ನು ಹೋಲುವ ಹುಡುಗಿಯನ್ನು ಹುಡುಕಿ ಹೊರಟ ರಾಮನಿಗೆ ಸಿಕ್ಕೇಬಿಟ್ಲು ಸುಬ್ಬಿ
Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯನ್ನೇ ಹೋಲುವ ಸುಬ್ಬಿಯ ಆಗಮನವಾಗಿದೆ. ಅಷ್ಟೇ ಅಲ್ಲ ಸುಬ್ಬಿಯನ್ನು ಕಣ್ತುಂಬಿಕೊಂಡ ರಾಮ, ಅಕ್ಷರಶಃ ಅಚ್ಚರಿಗೊಳಗಾಗಿದ್ದಾನೆ.

Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಹೇಗಾದರೂ ಮಾಡಿ ಸೀತಾಳನ್ನು ಮೊದಲಿನಂತೆ ಮಾಡಬೇಕು ಅನ್ನೋ ಹಠಕ್ಕೆ ಬಿದ್ದ ರಾಮ, ಸಿಹಿಯನ್ನೇ ಹೋಲುವ ಹುಡುಗಿಯ ಹುಡುಕಾಟದಲ್ಲಿದ್ದಾನೆ. ಅದಕ್ಕಾಗಿ, ಸುಳ್ಳು ಸೀರಿಯಲ್ ಆಡಿಷನ್ ಕರೆದಿದ್ದಾನೆ. ಇತ್ತ ಆಡಿಷನ್‌ಗೆ ಹೋಗೋಕೆ ಹಿಂದೇಟು ಹಾಕಿದ ಸುಬ್ಬಿಗೆ ಸಿಹಿಯೇ ಒತ್ತಾಯ ಮಾಡಿದ್ದಾಳೆ. ಮನವೊಲಿಸಿದ್ದಾಳೆ. ಸೀತಮ್ಮನ ಸಲುವಾಗಿಯಾದರೂ ಹೋಗು ಎಂದಿದ್ದಾಳೆ. ಹ್ಞೂಂ ಎಂದ ಸುಬ್ಬಿ, ಕೊನೇ ಕ್ಷಣದಲ್ಲಿ ಆಡಿಷನ್‌ಗೆ ತೆರಳಿದ್ದಾಳೆ. ಇನ್ನೇನು ಆ ಹುಡುಗಿ ಬರಲ್ಲ ಎಂದುಕೊಂಡಿದ್ದ ಶ್ರೀರಾಮ ಮತ್ತು ಅಶೋಕನಿಗೆ ಸುಬ್ಬಿಯ ಆಗಮನ ಅಚ್ಚರಿತಂದಿದೆ.
ಸುಬ್ಬಿ ಬರಲ್ಲ ಎಂದುಕೊಂಡಿದ್ದ ಶ್ರೀರಾಮ್ ಮತ್ತು ಅಶೋಕ, ಅದೇ ಸುಬ್ಬಿಯನ್ನು ನೋಡಿ ಸ್ಟನ್ ಆಗಿದ್ದಾರೆ. ಸುಬ್ಬಿಯನ್ನು ನೋಡಿದಾಗ ರಾಮನ ಕಣ್ಣಿಗೆ ತನ್ನ ಪುಟಾಣಿ ಸಿಹಿಯೇ ಕಂಡಿದ್ದಾಳೆ. ರಾಮನ ಮೊಗದಲ್ಲಿ ಬಹುದಿನಗಳ ಬಳಿಕ ನಗು ಮೂಡಿದೆ. “ಇವಳು ನೋಡೋದಕ್ಕೆ ಸೇಮ್ ಟು ಸೇಮ್ ಸಿಹಿಯಂತಿದ್ದಾಳಲ್ಲ. ಬಹುಶಃ ಆ ದೇವರೇ ನಮ್ಮ ಸೀತಾಗೋಸ್ಕರ ಇವಳನ್ನು ಕಳಿಸಿರಬಹುದು” ಎಂದು ಮನದಲ್ಲೇ ಮಾತನಾಡಿಕೊಂಡಿದ್ದಾನೆ ರಾಮ. ಇತ್ತ ಆಡಿಷನ್ ಕೊಟ್ಟೇ ಬಿಟ್ಟಿದ್ದಾಳೆ ಸುಬ್ಬಿ. ಅಲ್ಲೇ ಇದ್ದ ಸಿಹಿಯೂ ಹಿರಿ ಹಿರಿ ಹಿಗ್ಗಿದ್ದಾಳೆ.
ಆಡಿಷನ್‌ನಲ್ಲಿಯೂ ಡೈರೆಕ್ಟರ್ ಹೇಳಿದಂತೆ ನಟನೆ ಮಾಡಿ ತೋರಿಸಿದ್ದಾಳೆ ಸುಬ್ಬಿ. ನೀನು ಸೆಲೆಕ್ಟ್ ಆಗಿದ್ದೀಯಾ ಅಂತ ಹೇಳಿದ್ದೇ ತಡ ಕುಣಿದು ಕುಪ್ಪಳಿಸಿದ್ದಾಳೆ. ಇತ್ತ ಶ್ರೀರಾಮ ತುಂಬ ಎಗ್ಸೈಟ್ ಆಗಿದ್ದಾನೆ. ಖುಷಿಯಲ್ಲಿ ತೇಲುತ್ತಿದ್ದಾನೆ. ನೇರವಾಗಿ ಹಣ್ಣುಗಳನ್ನು ಹಿಡಿದು ಸುಬ್ಬಿಯ ಮನೆಗೆ ಬಂದಿದ್ದಾನೆ ಶ್ರೀರಾಮ ಮತ್ತು ಅಶೋಕ. ಇದೇ ವೇಳೆ ಸುಬ್ಬಿಯ ಮನೆಯಲ್ಲಿ ಧಾರಾವಾಹಿ ಶೂಟಿಂಗ್ ಯಾವಾಗಿನಿಂದ ಎಂದಾಗ, ಇದು ಸೀರಿಯಲ್ ಆಕ್ಟಿಂಗ್ ಅಲ್ಲ. ನಮ್ಮ ಮನೆಯಲ್ಲಿ ಆಕ್ಟ್ ಮಾಡಬೇಕು ಎಂದಿದ್ದಾನೆ. ಅಲ್ಲಿಗೆ ಎಲ್ಲರೂ ಕೊಂಚ ಶಾಕ್ ಆಗಿದ್ದಾರೆ.
“ನನ್ನ ಮಗಳು ನನ್ನ ಜೊತೆ ಇಲ್ಲ. ಅವಳ ಜಾಗಕ್ಕೆ, ಅವಳ ಥರದ ಒಂದು ಮಗುವನ್ನು ಹುಡುಕ್ತಿದ್ದೆ. ಸುಬ್ಬಿ ನೋಡೋಕೆ ಸೇಮ್ ನನ್ನ ಮಗಳ ರೀತಿಯೇ ಇದ್ದಾಳೆ. ದಯವಿಟ್ಟು ಸುಬ್ಬಿಯನ್ನು ನಮ್ಮ ಜೊತೆ ಕಳಿಸಿಕೊಡಿ” ಎಂದು ಬೇಡಿದ್ದಾನೆ ರಾಮ್. ರಾಮನ ಬೇಡಿಕೆಗೆ ಸುಬ್ಬಿ ಕಡೆಯವ್ರು ಬೇಡ ಎಂದಿದ್ದಾರೆ. ರಾಮ ಮತ್ತು ಅಶೋಕ ಇಬ್ಬರೂ ಅವರ ಮನವೊಲಿಸುವ ಪ್ರಯತ್ನ ಪಟ್ಟಿದ್ದಾರೆ. ಸುಬ್ಬಿ ಸಹ ನಾನು ಬರಲ್ಲ ಎಂದೇ ಹೇಳಿದ್ದಾಳೆ. ಬೇಸರದಲ್ಲಿಯೇ ರಾಮ ಅಲ್ಲಿಂದ ಹೊರನಡೆದಿದ್ದಾನೆ. ಇದು ಗುರುವಾರದ ಸಂಚಿಕೆ. ಶುಕ್ರವಾರದ ಸಂಚಿಕೆಯಲ್ಲಿ ಏನಾಗಬಹುದು? ಸಿಹಿಯೇ ಸುಬ್ಬಿಯ ಮನವೊಲಿಸುತ್ತಾಳಾ? ಮತ್ತೆ ಸಿಹಿಯಾಗಿ ಸೀತಮ್ಮನ ಮಡಿಲು ಸೇರ್ತಾಳಾ ಸುಬ್ಬಿ? ಮುಂದಿನ ಸೀತಾ ರಾಮ ಸೀರಿಯಲ್ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.
ಸೀತಾ ರಾಮ ಧಾರಾವಾಹಿ ಪಾತ್ರವರ್ಗ
ನಿರ್ದೇಶಕ: ಮಧುಸೂಧನ್
ಗಗನ್ ಚಿನ್ನಪ್ಪ: ಶ್ರೀರಾಮ (ನಾಯಕ)
ವೈಷ್ಣವಿ ಗೌಡ: ಸೀತಾ (ನಾಯಕ)
ರೀತು ಸಿಂಗ್: ಸಿಹಿ (ಸೀತಾ ಮಗಳು)
ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)
ಭಾರ್ಗವಿ: ಪೂಜಾ ಲೋಕೇಶ್ (ಶ್ರೀರಾಮನ ಚಿಕ್ಕಮ್ಮ)
ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್ ದೇಸಾಯಿ (ಶ್ರೀರಾಮನ ತಾತ)
ಮೇಘನಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)
ವಿಕಾಸ್ ಕಾರ್‌ಗೋಡ್: ಲಾಯರ್ ರುದ್ರಪ್ರತಾಪ್
ಸತೀಶ್ ಚಂದ್ರ: ಚರಣ್. ಡಿ
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್ (ಶ್ರೀರಾಮನ ಚಿಕ್ಕಪ್ಪ)
ಜಯದೇವ್ ಮೋಹನ್: ಸತ್ಯಜೀತ್ (ಶ್ರೀರಾಮನ ಚಿಕ್ಕಪ್ಪ)

ವಿಭಾಗ