Seetha Rama Serial: ರಾಮ - ಸೀತೆ ಕಣ್ಣಿಗೆ ಬಿದ್ದಳು ಸುಬ್ಬಿ; ಸಿಹಿ ಇಲ್ಲದ ಜಗತ್ತಿಗೆ ಸುಬ್ಬಲಕ್ಷ್ಮಿಯೇ ಆಸರೆಯಾಗ್ತಾಳಾ?
Seetha Rama Serial Today Episode: ಸೀತಾ ರಾಮ ಧಾರಾವಾಹಿಯಲ್ಲೀಗ ಸೀತಾಗಷ್ಟೇ ಅಲ್ಲದೆ ರಾಮನಿಗೂ ಸುಬ್ಬಿಯ ಮುಖದರ್ಶನವಾಗಿದೆ. ಇಷ್ಟು ದಿನ ಸೀತಾಗೆ ಮಾತ್ರ ಕಂಡಿದ್ದ ಸುಬ್ಬಿ, ಇದೀಗ ಶಾಲೆಯ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆಯೇ ಸುಬ್ಬಿಯನ್ನು ಕಂಡು ಅಕ್ಷರಶಃ ನಿಬ್ಬೆರಗಾಗಿದ್ದಾನೆ.

Seetha Rama Serial 13th Jan 2025 Episode: ಸೀತಾ ರಾಮ ಧಾರಾವಾಹಿಯಲ್ಲೀಗ ಸಿಹಿ ಸುಬ್ಬಿ ಸಮ್ಮಿಲನವಾಗಿದೆ. ಇಬ್ಬರೂ ದೋಸ್ತಿಗಳಾಗಿದ್ದಾರೆ. ಕೈ ಕೈ ಹಿಡಿದುಕೊಂಡು ಸ್ನೇಹಿತರಾಗಿದ್ದಾರೆ. ಇನ್ನೊಂದು ಕಡೆ, ಸೀತಾ ಕಣ್ಣಿಗೆ ಸುಬ್ಬಿ ಕಂಡರೂ, ರಾಮ ಆಕೆಯ ಮಾತನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ತನಗೇನಾಗಿದೆ ಅನ್ನೋ ಅರಿವೂ ಸೀತಾಗಿಲ್ಲ. ಇದು ಒಂದು ಕಡೆಯಾದರೆ, ಮಗದೊಂದು ಕಡೆ ಸಿಹಿಯದ್ದು ಪ್ರೀ ಪ್ಲಾನ್ ಮರ್ಡರ್ ಎಂದು ಸತ್ಯ ಮತ್ತು ಅಶೋಕ ಅನುಮಾನಿಸಿ, ಅದರ ತನಿಖೆಗಿಳಿದಿದ್ದಾರೆ. ಅಪಘಾತವಾದ ಸ್ಥಳದಲ್ಲಿ ಕಾಣೆಯಾದ ಸಿಸಿಟಿವಿ ದೃಶ್ಯಾವಳಿಗಳ ರಿಟ್ರಿವ್ ಮಾಡಿಸಲು ಓಡಾಡುತ್ತಿದ್ದಾರೆ.
ಸಿಹಿಯ ಸ್ಕೂಲ್ ಕಾರ್ಯಕ್ರಮ ಇರುವುದರಿಂದ, ರಾಮನ ಜತೆಗೆ ಸೀತಾ ಸಹ ಶಾಲೆಗೆ ಹೋಗಿದ್ದಾಳೆ. ಅದೇ ಸಮಯಕ್ಕೆ ಶಾಲೆ ಅಂದ್ರೆ ಹೇಗಿರುತ್ತೆ, ಅದನ್ನ ನೋಡಬೇಕು ಅನ್ನೋ ಕುತೂಹಲದಲ್ಲಿ ಅದೇ ಶಾಲೆ ಬಳಿ ಬಂದಿದ್ದಾಳೆ ಸುಬ್ಬಿ. ಆದರೆ, ಸುಬ್ಬಿಗೆ ಶಾಲೆಗೆ ಒಳಗೆ ಹೋಗಲು ಅವಕಾಶ ಸಿಕ್ಕಿಲ್ಲ.
ಇತ್ತ ದೇಸಾಯಿ ಮನೆಯಲ್ಲಿ ಭಾರ್ಗವಿ ಕೊಂಚ ಸಿಟ್ಟಿನಲ್ಲಿದ್ದಾಳೆ. ಸತ್ಯ ಮತ್ತು ಅಶೋಕ ಸಿಹಿ ಸಾವಿನ ಬೆನ್ನು ಹತ್ತಿರುವುದು ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಸಾವಿನ ಹಿಂದೆ ಭಾರ್ಗವಿ ಇದ್ದಾಳೆ ಎಂಬ ವಿಚಾರ ಗಂಡ ವಿಶ್ವನಿಗೂ ಗೊತ್ತಿಲ್ಲ. ಸತ್ಯ ಮತ್ತು ಅಶೋಕ ಮಾಡ್ತಿರೋದು ಸರಿ ಇದೆ ಎಂದಿದ್ದಾನೆ ವಿಶ್ವ. ಈ ತನಿಖೆ ಮಾಡೋದ್ರಿಂದ ಅವರಿಗೇನು ಸಿಗುತ್ತೆ? ಸತ್ತಿರುವ ಸಿಹಿ ಮತ್ತೆ ಬರ್ತಾಳಾ? ಇಲ್ಲ ತಾನೇ ಎಂದು ವಿಶ್ವನಿಗೆ ಗದರಿದ್ದಾಳೆ ಭಾರ್ಗವಿ.
ಶಾಲೆಗೆ ಬಂದ ಸಿಹಿ- ಸುಬ್ಬಿ
ಶಾಲೆಯಿಂದ ಹೊರಹಾಕಲ್ಪಟ್ಟಿದ್ದ ಸುಬ್ಬಿಗೆ ಇನ್ನೊಂದು ಕಳ್ಳ ದಾರಿಯ ಮೂಲಕ ಶಾಲೆಯ ಒಳಗೆ ಕರೆದೊಯ್ದಿದ್ದಾಳೆ ಸಿಹಿ. ಶಾಲೆ ಒಳಾಂಗಣ ಕಂಡ ಸುಬ್ಬಿ ಅಚ್ಚರಿಗೊಂಡಿದ್ದಾಳೆ. ಶಾಲೆಯ ಕೋಣೆಯ ದಿಟ್ಟಿಸಿ ನೋಡಿದ್ದಾಳೆ. ಬೆಂಚ್ ಮೇಲೆ ಕೂತಿದ್ದಾಳೆ. ಬೋರ್ಡ್ ಮೇಲೆ ಅಮ್ಮ ಎಂದು ಬರೆದಿದ್ದಾಳೆ. ಅಲ್ಲಿಂದ ಹೊರಗಡೆ ಬಂದು, ಇಡೀ ಶಾಲೆಯನ್ನು ಇಬ್ಬರೂ ಸೇರಿ ಸುತ್ತು ಹೊಡೆದಿದ್ದಾರೆ. ಇತ್ತ ಸೀತಾ ಮತ್ತು ರಾಮ್ ಶಾಲೆ ಒಳಗೆ ಬರುತ್ತಿದ್ದಂತೆ, ಟೀಚರ್‌ವೊಬ್ಬರು ಸಿಹಿ ಇಲ್ಲದ ನೋವಿನ ಬಗ್ಗೆ ಸೀತಾ ಬಳಿ ಮಾತನಾಡಿದ್ದಾರೆ. ಅಷ್ಟಾದರೂ, ಸೀತಾಗೆ ಏನಾಗಿದೆ ಅನ್ನೋದು ಅರಿವಿಗೆ ಬಂದಿಲ್ಲ.
ರಾಮನ ಕಣ್ಣಿಗೆ ಬಿದ್ದ ಸುಬ್ಬಿ
ಸೀತಾ ರಾಮ ಧಾರಾವಾಹಿಯಲ್ಲೀಗ ಸೀತಾಗಷ್ಟೇ ಅಲ್ಲದೆ ರಾಮನಿಗೂ ಸುಬ್ಬಿಯ ಮುಖ ದರ್ಶನವಾಗಿದೆ. ಇಷ್ಟು ದಿನ ಸೀತಾಗೆ ಮಾತ್ರ ಕಂಡಿದ್ದ ಸುಬ್ಬಿ, ಇದೀಗ ಶಾಲೆಯ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆಯೇ ಸುಬ್ಬಿಯನ್ನು ಕಂಡು ಅಕ್ಷರಶಃ ರಾಮ ನಿಬ್ಬೆರಗಾಗಿದ್ದಾನೆ. ವೇದಿಕೆ ಮೇಲೆ ಹಾಡೊಂದಕ್ಕೆ ಸುಬ್ಬಿ ನೃತ್ಯ ಮಾಡುತ್ತಿದ್ದರೆ, ಸೀತಾ ಆಕೆಯನ್ನು ನೋಡಿ, ನಮ್ಮ ಸಿಹಿ ನೋಡಿ ಹೇಗೆ ಡಾನ್ಸ್ ಮಾಡ್ತಿದ್ದಾಳೆ ಎಂದು ರಾಮ್‌ಗೆ ತೋರಿಸಿದ್ದಾಳೆ. ಅಷ್ಟೊತ್ತಿಗೆ ರಾಮ್ ಸಹ ವೇದಿಕೆಯತ್ತ ನೋಡಿದ್ದಾನೆ. ಸುಬ್ಬಿಯ ಮುಖ ದರ್ಶನವಾಗಿದೆ.
ಸೀತಾ ರಾಮ ಧಾರಾವಾಹಿ ಪಾತ್ರವರ್ಗ
ನಿರ್ದೇಶಕ: ಮಧುಸೂಧನ್
ಗಗನ್ ಚಿನ್ನಪ್ಪ: ಶ್ರೀರಾಮ (ನಾಯಕ)
ವೈಷ್ಣವಿ ಗೌಡ: ಸೀತಾ (ನಾಯಕ)
ರೀತು ಸಿಂಗ್: ಸಿಹಿ (ಸೀತಾ ಮಗಳು)
ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)
ಭಾರ್ಗವಿ: ಪೂಜಾ ಲೋಕೇಶ್ (ಶ್ರೀರಾಮನ ಚಿಕ್ಕಮ್ಮ)
ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್ ದೇಸಾಯಿ (ಶ್ರೀರಾಮನ ತಾತ)
ಮೇಘನಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)
ವಿಕಾಸ್ ಕಾರ್‌ಗೋಡ್: ಲಾಯರ್ ರುದ್ರಪ್ರತಾಪ್
ಸತೀಶ್ ಚಂದ್ರ: ಚರಣ್. ಡಿ
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್ (ಶ್ರೀರಾಮನ ಚಿಕ್ಕಪ್ಪ)
ಜಯದೇವ್ ಮೋಹನ್: ಸತ್ಯಜೀತ್ (ಶ್ರೀರಾಮನ ಚಿಕ್ಕಪ್ಪ)

ವಿಭಾಗ