ಎಲ್ಲೂ ಹೋಗಲ್ಲ ನಾನು ಎಲ್ಲೂ ಹೋಗಲ್ಲ.. ಇಂತಿ ನಿಮ್ಮ ಸಿಹಿ! ಸೀತಾ ರಾಮನ ಬದುಕಿನಲ್ಲಿ ಪುಟಾಣಿ ಸಿಹಿ ಅಚ್ಚೊತ್ತಿದ ಛಾಪು ಸಣ್ಣದೇನಲ್ಲ
Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಸಿಹಿಯ ಸಾವಾಗಿದೆ. ಸಿಹಿ ದುರಂತ ಸಾವಿನ ಬಳಿಕ ವೀಕ್ಷಕ ವಲಯದಲ್ಲಿಯೂ ಕಾರ್ಮೋಡ ಆವರಿಸಿದೆ. ಮನೆಯ ಪುಟಾಣಿಯೇ ಇಲ್ಲದಂತಾಗಿದೆ ಎಂಬಷ್ಟರ ಮಟ್ಟಿಗೆ ಬೇಸರ ಹೊರಹಾಕುತ್ತಿದ್ದಾರೆ. ಈ ನಡುವೆ ಆರಂಭದಿಂದ ಪುಟಾಣಿ ಸಿಹಿಯ ವಿಶೇಷ ವಿಡಿಯೋವೊಂದನ್ನು ಜೀ ಕನ್ನಡ ಪೋಸ್ಟ್ ಮಾಡಿದೆ.
Seetha Rama Serial: ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಸೀತಾ ರಾಮ ಸೀರಿಯಲ್ ಇದೀಗ ಮುಖ್ಯ ಘಟ್ಟಕ್ಕೆ ಬಂದು ನಿಂತಿದೆ. ದುರ್ಘಟನೆಯಲ್ಲಿ ಪುಟಾಣಿ ಸಿಹಿ ಜೀವ ಚೆಲ್ಲಿದ್ದಾಳೆ. ಮತ್ತೊಂದು ಕಡೆ ಸೀತಾ ಸಹ ಶಾಕ್‌ಗೆ ಒಳಗಾದರೆ, ರಾಮ್ ದಿಕ್ಕು ತೋಚದಂತೆ ನಿಂತಿದ್ದಾನೆ. ಇತ್ತ ತನ್ನ ಹಠ ಮತ್ತು ಹಗೆ ಸಾಧಿಸಿದ ಖುಷಿಯಲ್ಲಿ ಬೀಗುತ್ತಿದ್ದಾಳೆ ಭಾರ್ಗವಿ. ಆದರೆ, ವೀಕ್ಷಕ ವಲಯದಲ್ಲಿ ಮಾತ್ರ ಸಿಹಿಯ ಸಾವನ್ನು ಅರಗಿಸಿಕೊಳ್ಳಲು ಆಗ್ತಿಲ್ಲ. ಇನ್ನು ಕೆಲವರು ಕಾಮೆಂಟ್‌ಗಳ ಮೂಲಕವೇ ತಮ್ಮ ಬೇಸರವನ್ನು ಹೊರಹಾಕುತ್ತಿದ್ದಾರೆ. ಈ ನಡುವೆ ಸಿಹಿಯ ಈ ವರೆಗಿನ ಪಯಣ ಹೇಗಿತ್ತು? ಸೀತಾ ರಾಮನ ಜೀವಕ್ಕೆ ಕೊಂಡಿಯಂತಿದ್ದ ಈ ಪುಟ್ಟ ಜೀವದ ಜರ್ನಿ ವಿಡಿಯೋವನ್ನು ಜೀ ಕನ್ನಡ ಹಂಚಿಕೊಂಡಿದೆ.
ಸೀತಾ ರಾಮ ಸ್ನೇಹ ಸೇತುವೆಯಾಗಿದ್ದ ಸಿಹಿ
ಹೆಸರು ಸಿಹಿಯಾದರೂ, ಈಕೆ ಡಯಾಬಿಟಿಕ್ ಪೇಷಂಟ್. ಸೀತಮ್ಮನ ಪುಟಾಣಿ ಕೂಸಾಗಿ ಬೆಳೆದ ಸಿಹಿಗೆ ಅಪ್ಪ ಬೇಕು ಅನ್ನೋ ಕನಸು. ಶ್ರೀರಾಮನ ಮುಂದೆ ನಿಂತು ಆ ಪುಟ್ಟ ಬಾಲೆ ಬೇಡಿಕೊಳ್ಳವುದೂ ಅದನ್ನೇ. ಹೀಗಿರುವಾಗಲೇ ದೇವರೇ ಕಳಿಸಿಕೊಟ್ಟಂತೆ, ರಾಮನ ಎಂಟ್ರಿಯಾಗುತ್ತದೆ. ದಿನಗಳೆದಂತೆ ಸೀತಾ ರಾಮನ ಸ್ನೇಹಕ್ಕೆ ಸೇತುವೆಯಾಗಿಯೂ ಈ ಸಿಹಿ ಜತೆಯಾಗುತ್ತಾಳೆ. ಮುಂದೆ ಪ್ರೀತಿಗೂ ಕೊಂಡಿಯಾಗುತ್ತಾಳೆ.
ಎಂಟನೇ ವಚನದ ಮೂಲಕ ಮಗಳಾಗಿದ್ದಳು
ಹೆಲಿಕಾಪ್ಟರ್ ಹತ್ತಬೇಕು ಅನ್ನೋ ಸಿಹಿಯ ಆಸೆಯನ್ನೂ ಈಡೇರಿಸುತ್ತಾನೆ ಫ್ರೆಂಡ್ ರಾಮ್. ಮಾತಿನ ನಡುವೆ ಸೀತಾ ರಾಮರಿಗೆ ಮದುಮಗಳು, ಮದುಮಗನ ರೀತಿ ಇದ್ದೀರಾ ಎಂದು ಹೇಳುವ ಮೂಲಕ ಸೀತಾ ರಾಮರ ನಡುವೆ ಪ್ರೀತಿ ಬೀಜವನ್ನೂ ಬಿತ್ತುತ್ತಾಳೆ ಸಿಹಿ. ಕೊನೆಗೆ ಪ್ರೀತಿ ಮೂಡಿ, ಮದುವೆ ಹಂತಕ್ಕೂ ಸಿಹಿಯಿಂದಲೇ ಬಂದು ನಿಲ್ಲುತ್ತದೆ. ದೇಸಾಯಿ ಕುಟುಂಬದ ಸೊಸೆಯಾಗುತ್ತಾಳೆ ಸೀತಾ. ನಮ್ಮಿಬ್ಬರ ಮದುವೆಗೆ ಕಾರಣರಾದ ಮುಖ್ಯವಾದ ವ್ಯಕ್ತಿ ಬೇರಾರು ಅಲ್ಲ, ಅದು ಸಿಹಿ ಎನ್ನುತ್ತಾನೆ ರಾಮ್. ಎಂಟನೇ ಸುತ್ತಿನ ವಚನದ ಹೆಸರು ಸಿಹಿ ಎಂದು ಹೇಳಿಕೊಳ್ಳುತ್ತಮ ಸೀತಾ ಜತೆ ಸಪ್ತಪದಿ ತುಳಿಯುತ್ತಾನೆ ರಾಮ್. ಫ್ರೆಂಡ್ ಆಗಿದ್ದ ರಾಮ, ಅಪ್ಪನಾಗಿ ಸಿಹಿಯ ಬಹುಕಾಲದ ಕನಸಿಗೆ ಕೈ ಹಿಡಿಯುತ್ತಾನೆ.
ಎಲ್ಲವೂ ಸುಖಾಂತ್ಯವಾಯ್ತು ಎನ್ನುವಷ್ಟರಲ್ಲಿ ಮೇಘಶ್ಯಾಮ್‌ನ ಎಂಟ್ರಿಯಾಗುತ್ತದೆ. ಸಿಹಿ ಸಲುವಾಗಿ ದೇಸಾಯಿ ಕುಟುಂಬ ಕೋರ್ಟ್ ಮೆಟ್ಟಿಲೇರುತ್ತದೆ. ಕೊನೆಗೆ ಅಧಿಕಾರ ಮತ್ತು ಮಮಕಾರದ ಯುದ್ಧದಲ್ಲಿ ಮಮಕಾರವೇ ಗೆಲ್ಲುತ್ತದೆ. ಮಗುವಿನ ಅಮ್ಮನಾಗಲು ಸೀತಾ ಮಾತ್ರ ಅರ್ಹಳು ಎಂಬ ತೀರ್ಪು ಬರುತ್ತದೆ. ಈ ಪುಟಾಣಿ ಸೀತಾ ರಾಮರಿಗೆ ಸೇರಬೇಕು ಎನ್ನುತ್ತಾರೆ ಜಡ್ಜ್. ಆದರೆ, ಭಾರ್ಗವಿಯ ಸಂಚಿಗೆ ಸಿಹಿ ಬಲಿಯಾಗುತ್ತಾಳೆ. ಎಲ್ಲೂ ಹೋಗಲ್ಲ ನಾನು ಎಲ್ಲೂ ಹೋಗಲ್ಲ ಎಂದಿದ್ದ ಸಿಹಿ, ಸೀತಾ ಮತ್ತು ರಾಮನನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾಳೆ.
ವೀಕ್ಷಕರ ಕಣ್ಣೀರು..
ಸಿಹಿ ಸಾವಿನ ಏಪಿಸೋಡ್‌ಗಳು ಪ್ರಸಾರವಾಗುತ್ತಿದ್ದಂತೆ, ವೀಕ್ಷಕ ವಲಯದಲ್ಲಿ ಬೇಸರದ ಕಾರ್ಮೋಡ್ ಆವರಿಸಿದೆ. ಅದರಂತೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮೊಳಗಿನ ಬೇಸರವನ್ನು ಹೊರಗೆಡವುತ್ತಿದ್ದಾರೆ.
- ಸಿಹಿ ಇಲ್ಲದ ಸೀತಾ ರಾಮ ನೋಡಲು ಅಸಾಧ್ಯ
- ಸಿಹಿ ಇಲ್ಲದ ಸೀತಾ ರಾಮ ಧಾರಾವಾಹಿ ನಮಗೆ ಬೇಡ ಮಿಸ್ ಯೂ ಸಿಹಿ ಪುಟ್ಟ
- ಈ ಧಾರಾವಾಹಿ ಚೆನ್ನಾಗಿ ಬರ್ತಿತ್ತು ಈಗ ಅತ್ಯಂತ ಕೆಟ್ಟದಾಗಿ ತಗೊಂಡು ಹೋದ್ರು ... ಮೊದಲು ಮುಗಿಸಿ ಬೇರೆ ಧಾರಾವಾಹಿಗೆ ಅವಕಾಶ ಮಾಡಿಕೊಡಿ
- ಒಂದು ವಾರದ TRPಗೆ ಆ ಮಗುನ ಸಾಯಿಸಿದರು. ಎಷ್ಟೊಂದು ಜನ ಆ ಸಿಹಿ ಅನ್ನೋ ಪಾತ್ರ ನೋಡಕ್ಕೆ ಈ ಧಾರಾವಾಹಿ ನೋಡುತ್ತಿದರು ಆದ್ರೆ ಇವಾಗ ಆ ಪಾತ್ರ ಇಲ್ಲ ಅಂದ್ರೆ TRP ಕಥೆ
- ಇದು ಸೀರಿಯಲ್ ಇರ್ಬೋದು, ಆದ್ರೂ ನಮ್ ಮನೆಯಲ್ಲೇ ಯಾರನ್ನೋ ಮಿಸ್ ಮಾಡ್ಕೋತೀರೋ ಫೀಲ್ ಆಗ್ತಿದೆ Miss u Sihi
- ಏಕೆ ಜೀ ಕನ್ನಡದವರೇ ಮುದ್ದಾದ ಜೀವಗಳನ್ನು ದೂರ ಮಾಡಿಬಿಟ್ಟಿದ್ದೀರಲ್ಲ
- ಸಿಹಿ ಇಲ್ಲದ ಸೀತಾ-ರಾಮ ಬರೀ ಬೋರು.
- ನೈಜತೆಗೆ ಹತ್ತಿರವಾಗಿದ್ದ ಕಥೆ ಎಂದು ಬಹಳ ಇಷ್ಟಪಟ್ಟು ನೋಡುತಿದ್ದ , ಜನಮನ ಮೆಚ್ಚಿದ ಧಾರಾವಾಹಿ ಅದ್ಯಾಕೋ ಎಲ್ಲೋ ಕಳೆದುಹೋಗುತಿದೆ...
- ಎಂಟನೇ ವಚನಕ್ಕೆ ಬೆಲೆ ಇಲ್ಲದ ಹಾಗೆ ಮಾಡಿದರು ಜೀ ಕನ್ನಡ
ವಿಭಾಗ